31.5 C
Mumbai
June 13, 2026
Mumbai News Kannada
ತುಳುನಾಡು

ಮೂಲ್ಕಿ : ಅಪ್ಪೆ ಬೇರ್ ದ ತುಳುನಾಡ್ ಕಾರ್ಯಕ್ರಮದ ಯಶಸ್ಸು ತುಳುನಾಡಿನ ಮಾತೃಮೂಲ ಸಂಸ್ಕೃತಿಯ ಪುನರ್ಜಾಗೃತಿಯ ಸಂಕೇತ – ಡಾ. ಹರಿಶ್ಚಂದ್ರ ಸಾಲ್ಯಾನ್





ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಯಶಸ್ವಿಯಾಗಿ ನಡೆದ “ಅಪ್ಪೆ ಬೇರ್ ದ ತುಳುನಾಡ್ – ರಾಷ್ಟ್ರೀಯ ತುಳು ವಿಚಾರಗೋಷ್ಠಿ” ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾದ ಕಾರ್ಯಕರ್ತರು ಹಾಗೂ ಸಂಘಟಕರಿಗೆ ಅಭಿನಂದನೆ ಸಲ್ಲಿಸುವ ಸಮಾರಂಭವು ಮುಲ್ಕಿ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಶನಿವಾರ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿ ಡಾ.ಹರೀಶ್ಚಂದ್ರ ಸಾಲ್ಯಾನ್ ಅವರು, “ಅಪ್ಪೆ ಬೇರ್ ದ ತುಳುನಾಡ್ ಕಾರ್ಯಕ್ರಮದ ಯಶಸ್ಸು ಮುಲ್ಕಿಯ ಗಡಿಯನ್ನು ದಾಟಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪಂದನೆ ಪಡೆಯುವಂತಾಗಿದೆ. ಇದು ಕೇವಲ ಒಂದು ಕಾರ್ಯಕ್ರಮದ ಯಶಸ್ಸಲ್ಲ, ತುಳುನಾಡಿನ ಮಾತೃಮೂಲ ಸಂಸ್ಕೃತಿ, ಜೀವನಮೌಲ್ಯಗಳು ಹಾಗೂ ಪರಂಪರೆಯ ಪುನರ್ಜಾಗೃತಿಯ ಸಂಕೇತವಾಗಿದೆ” ಎಂದರು.
ಮುಂದುವರಿದು ಮಾತನಾಡಿದ ಅವರು “ನಾವೆಲ್ಲರೂ ಮತ್ತಷ್ಟು ಜಾಗೃತರಾಗಿ ತುಳುನಾಡಿನ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಉಳಿಸಬೇಕಾಗಿದೆ. ಮಾತೃಮೂಲ ಪದ್ಧತಿಯ ಮೌಲ್ಯಗಳನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಪೂರ್ವಜರು ಕಟ್ಟಿಕೊಟ್ಟ ಪ್ರಾಚೀನ ಕುಟುಂಬ ವ್ಯವಸ್ಥೆ, ಸಾಮಾಜಿಕ ಸಂಬಂಧಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವುದು ಯುವ ಪೀಳಿಗೆಯ ಜವಾಬ್ದಾರಿಯಾಗಿದೆ” ಎಂದು ಅಭಿಪ್ರಾಯಪಟ್ಟರು.
ತುಳುವರ್ಲ್ಡ್ ಇಂಟರ್ನ್ಯಾಷನಲ್ಲ ಸ್ಥಾಪಕ ಡಾ.ರಾಜೇಶ್ ಆಳ್ವ ಮಾತನಾಡಿ ಕಾರ್ಯಕ್ರಮವು ತುಳುನಾಡಿನ ಮಾತೃಮೂಲ ಸಂಸ್ಕೃತಿಯ ಕುರಿತಾಗಿ ಜನರಲ್ಲಿ ಹೊಸ ಚಿಂತನೆ ಮತ್ತು ಜಾಗೃತಿಯನ್ನು ಮೂಡಿಸಿದೆ ಹಾಗೂ ಕಾರ್ಯಕ್ರಮ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದ ಅಪ್ಪೆಬೇರು ತುಳುನಾಡಿನ ಪ್ರಧಾನ ಸಂಚಾಲಕ ಸುನಿಲ್ ಆಳ್ವ ಹಾಗೂ ಅವರ ತಂಡದ ಸಹಯೋಗ, ಸಹಕಾರವನ್ನು ಶ್ಲಾಘಿಸಿ ಧನ್ಯವಾದ ಅರ್ಪಿಸಿದರು.



Related posts

ಭಯ-ಭಕ್ತಿಯ ರೋಮಾಂಚನ: ಕಣ್ಮನ ಸೆಳೆದ ಕಾಪುವಿನ ಇತಿಹಾಸ ಪ್ರಸಿದ್ಧ ಪಿಲಿಕೋಲ

Mumbai News Desk

ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕಿ ಮತ್ತು ನಟಿ ರೂಪ ಐಯ್ಯರ್ : ನವದುರ್ಗಾ ಲೇಖನ ಯಜ್ಞ ಸಂಕಲ್ಪ

Mumbai News Desk

ಮುದ್ರಾಡಿ ಪ್ರೌಢಶಾಲೆ: ಉತ್ತಮ ಶ್ರೇಣಿ ಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಗೌರವ , ನಿವೃತ್ತ ಮುಖ್ಯ ಶಿಕ್ಷಕಿಗೆ ಸಮ್ಮಾನ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಟರ್ ಟ್ರಸ್ಟ್ ಮಂಗಳೂರು: ಸಾಂಪ್ರದಾಯಿಕ ಶೈಲಿಯಲ್ಲಿ ನಡೆದ ಆಟಿಡೊಂಜಿ ದಿನ.

Mumbai News Desk

ಧಾಖಲೆಯೊಂದಿಗೆ ತಿರುವೈಲು ಕಂಬಳ ಸಂಪನ್ನ: ಮುಂಬೈಯ ಪುರೋಹಿತರಾದ ಪ್ರವೀಣ್ ಭಟ್ ಅವರಿಗೆ ಸನ್ಮಾನ

Mumbai News Desk

ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕ: 2027ರ ಫೆಬ್ರವರಿ 18 ರಿಂದ 28ರ ವರೆಗೆ ದಿನಾಂಕ ನಿಗದಿ; ಸಮಿತಿ ಕಚೇರಿ ಉದ್ಘಾಟನೆ

Mumbai News Desk