September 17, 2026
Mumbai News Kannada
ಮುಂಬಯಿ

ಚಿಣ್ಣರ ಬಿಂಬ ನೆರೂಲ್ ಶಿಬಿರದ   ಕನ್ನಡ ಕಲಿಕೆ ಹಾಗೂ ಇತರ ಚಟುವಟಿಕೆಗಳು ಪ್ರಾರಂಭ





.    

ಚಿಣ್ಣರ ಬಿಂಬದಲ್ಲಿ ಮಕ್ಕಳಿಗೆ ಸೂಕ್ತ ಅವಕಾಶ: ತಾರಾ ಕೆ ಶೆಟ್ಟಿ 

  ನವಿ ಮುಂಬಯಿ:ಚಿಣ್ಣರ ಬಿಂಬ ನೆರೂಲ್ ಶಿಬಿರದ 2026-2027ನೇ ವರ್ಷದ ಕನ್ನಡ ಕಲಿಕೆ ಹಾಗೂ ಇತರ ಚಟುವಟಿಕೆಗಳ ಜೂ14 ರವಿವಾರದಂದು  ಚಿಣ್ಣರ ವಂದೇ ಮಾತರಂ ಹಾಡಿನೊಂದಿಗೆ ಪ್ರಾರಂಭಗೊಂಡಿತು                                                                                 ಬ್ರಾಮರಿ  ನೆರುಲ್ ಶಿಬಿರದ ಪ್ರಮುಖೆ ಹಾಗೂ ಬಂಟರ ಸಂಘ ಮುಂಬೈಯ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕೋಶಾಧಿಕಾರಿಯಾದ  ತಾರಾ ಕೆ ಶೆಟ್ಟಿಯವರು ಹಾಗೂ ಶಿಬಿರದ ಪದಾಧಿಕಾರಿಗಳು ಸೇರಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಮಾಜಿ ಶಿಬಿರ ಮುಖ್ಯಸ್ಥೆ  ಭವ್ಯ ಪೂಜಾರಿಯವರು  ಅತಿಥಿಯನ್ನು ಪರಿಚಯ ಮಾಡಿದರು.ಅನಂತರ ಚಿಣ್ಣರು ಅತಿಥಿಗಳಿಗೆ ಶಾಲು ಹೊದಿಸಿ ಗೌರವಿಸಿದರು.

    ತಾರಾ ಕೆ ಶೆಟ್ಟಿ  ಚಿಣ್ಣರನ್ನು ಉದ್ದೇಶಿಸಿ ಮಾತನಾಡುತ್ತ, ನನ್ನ ಮಗಳು ಚಿಣ್ಣರ ಬಿಂಬದಲ್ಲಿ ಇದ್ದು, ತುಂಬ ಅವಕಾಶಗಳನ್ನು ಪಡೆದು ಒಳ್ಳೆಯ ಮಟ್ಟಕ್ಕೆ ಬೆಳೆದಿದ್ದಾಳೆ, ಮಕ್ಕಳಿಗೆ ಬಾಲ್ಯದಲ್ಲಿ ಸಂಸ್ಕೃತಿ ಸಂಸ್ಕಾರದ ಅರಿವನ್ನು ಮೂಡಿಸಿದಾಗ. ಮಕ್ಕಳು ಪ್ರಭುದ್ಧತೆಗೆ ಬಂದಾಗ ಸಂಸ್ಕಾರವಂತರಾಗಿ ತಿಳಿಯಲು ಸಾಧ್ಯವಾಗುತ್ತದೆ ಈ ಶಿಬಿರದಲ್ಲಿ

 ಇನ್ನು ಹೆಚ್ಚು  ಚಿನ್ನರು  ಬರಲಿ ಎಂದು ಶುಭ ಹಾರೈಸಿದರು.

 ಅನಂತರ ಕನ್ನಡ ಶಿಕ್ಷಕಿ  ಮೋಹಿನಿ ಪೂಜಾರಿ ಅವರು ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸಿದರು, ಕನ್ನಡ ವರ್ಣಮಾಲೆ ಬರೆದರು. ಸಾಂಸ್ಕೃತಿಕ ಮುಖ್ಯಸ್ಥೆ  ದಿವ್ಯ ರಾವ್ ಅವರು ಧನ್ಯವಾದ ಹೇಳಿದರು.

ಕಾರ್ಯಕ್ರಮದಲ್ಲಿ ನೆರೂಲ್ ಶಿಬಿರದ ಪದಾಧಿಕಾರಿಗಳಾದ ನಾಗರಾಜ್ ದೇವಾಡಿಗ,  ಸುಕುಮಾರಿ ಶೆಟ್ಟಿ,  ಗಾಯತ್ರಿ ಪಿ ಶೆಟ್ಟಿ, ಭಜನೆ ಶಿಕ್ಷಕಿ  ಕ್ಷಮಾ ತಾಮನಕರ್, ಸ್ವಯಂ ಸೇವಕರು ಹಾಗೂ ಪಾಲಕರು ಉಪಸ್ಥಿತರಿದ್ದರು.

ಕೊನೆಯಲ್ಲಿ ಮಕ್ಕಳಿಗೆ ಹಾಗೂ ಪಾಲಕರಿಗೆ ಸಿಹಿ ಹಂಚಿ ಜನಗಣಮನ ಹಾಡಿ ತರಗತಿಯನ್ನು  ಮುಗಿಸಲಾಯಿತು.



Related posts

ಮುಂಬೈ ಹೋಟೆಲ್​ ಉದ್ಯಮಿ ಜಯ್​ಶೆಟ್ಟಿ ಕೊಲೆ ಪ್ರಕರಣ : ಗ್ಯಾಂಗ್ ಸ್ಟರ್ ಛೋಟಾ ರಾಜನ್ ಗೆ ಜಾಮೀನು

Mumbai News Desk

ಶ್ರೀ ರಜಕ ಸಂಘ ಮುಂಬಯಿ ಇದರ ಮಹಿಳಾ ವಿಭಾಗ ದಿಂದ ವಿಶ್ವ ಮಹಿಳಾ ದಿನಾಚರಣೆ

Mumbai News Desk

ಸಯನ್ ಗೋಕುಲ ಶ್ರೀ ಕೃಷ್ಣ ಮಂದಿರಕ್ಕೆ ನಾಡೋಜ ಜಿ ಶಂಕರ್ ಭೇಟಿ.

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬೈ, ಡೊಂಬಿವಲಿ ಸ್ಥಳೀಯ ಸಮಿತಿಯಿಂದ ವಿಜೃಂಭಣೆಯ ಗುರುಪೂರ್ಣಿಮಾ ಆಚರಣೆ

Mumbai News Desk

ಮಲಾಡ್ ಕನ್ನಡ ಸಂಘದ ವತಿಯಿಂದ ಯಕ್ಷಗಾನ ತಾಳಮದ್ದಳೆ ಸುಧನ್ವ ಮೋಕ್ಷ

Mumbai News Desk

ಜ್ಞಾನ ವಿಕಾಸ ಮಂಡಲದ ಮೆಹತಾ ಕಾಲೇಜಿನ ರಜತ ಮಹೋತ್ಸವ ಸಮಾರೋಪ ಸಮಾರಂಭ

Mumbai News Desk