31 C
Mumbai
September 18, 2026
Mumbai News Kannada
ಪ್ರಕಟಣೆ

ಆಗಸ್ಟ್ 2: ಬಿಲ್ಲವರ ಅಸೋಸಿಯೇಷನ್ ಮಲಾಡ್ ಸ್ಥಳೀಯ ಕಚೇರಿಯ ವತಿಯಿಂದ ‘ಆಟಿದ ಒಂಜಿ ಕೂಟ’





ಮುಂಬೈ:
ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಮಲಾಡ್ ಸ್ಥಳೀಯ ಕಚೇರಿಯ ವತಿಯಿಂದ ‘ಆಟಿದ ಒಂಜಿ ಕೂಟ’ ಕಾರ್ಯಕ್ರಮವು ಮುಂಬರುವ ಆಗಸ್ಟ್ 2, ಭಾನುವಾರದಂದು ಮಲಾಡ್ ಈಸ್ಟ್‌ನ ದಫ್ತರಿ ರೋಡ್‌ನಲ್ಲಿರುವ ಬ್ರಿಡ್ಜ್‌ವಾಸಿ ಬಿಲ್ಡಿಂಗ್‌ನ ಸ್ಥಳೀಯ ಕಚೇರಿಯಲ್ಲಿ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 11:00 ರಿಂದ 11:30 ರವರೆಗೆ ಭಜನೆ, 11:30 ರಿಂದ 12:00 ರವರೆಗೆ ಮಹಾಮಂಗಳಾರತಿ ಹಾಗೂ 12:00 ರಿಂದ 12:15 ರವರೆಗೆ ಶಾಂತಿ ಪ್ರಾರ್ಥನೆ ನಡೆಯಲಿದ್ದು, ತದನಂತರ ಸಭಾ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ.
ಈ ಕಾರ್ಯಕ್ರಮಕ್ಕೆ ಸಮಸ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಬಿಲ್ಲವರ ಅಸೋಸಿಯೇಷನ್ ಮುಂಬೈನ ಗೌರವಾಧ್ಯಕ್ಷ ಎಲ್.ವಿ. ಅಮೀನ್, ಅಧ್ಯಕ್ಷ ಹರೀಶ್ ಜಿ. ಅಮೀನ್, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್, ಗೌರವ ಪ್ರಧಾನ ಕೋಶಾಧಿಕಾರಿ ರವಿ ಎಸ್. ಸನಿಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಲಾ ಕೆ. ಕೋಟ್ಯಾನ್ ಹಾಗೂ ಮಲಾಡ್ ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಸುರೇಂದ್ರ ಪೂಜಾರಿ, ಕಾರ್ಯಾಧ್ಯಕ್ಷ ವಿಶ್ವನಾಥ್ ಎಮ್. ಪೂಜಾರಿ, ಉಪಕಾರ್ಯಾಧ್ಯಕ್ಷರುಗಳಾದ ರಘುನಾಥ್ ಪೂಜಾರಿ, ತುಳಸಿದಾಸ್ ಅಮೀನ್, ಕಾರ್ಯದರ್ಶಿ ಮಧುಸೂದನ್ ಪಾಲನ್, ಜೊತೆ ಕಾರ್ಯದರ್ಶಿ ಮಮತಾ ಆರ್. ಪೂಜಾರಿ, ಕೋಶಾಧಿಕಾರಿ ನಾರಾಯಣ್ ಜತನ್, ಜೊತೆ ಕೋಶಾಧಿಕಾರಿ ದಿನೇಶ್ ಸುವರ್ಣ, ಸಮಿತಿಯ ಉಸ್ತುವಾರಿ ಶಂಕರ್ ಡಿ. ಪೂಜಾರಿ ಮತ್ತು ಕೇಂದ್ರ ಕಮಿಟಿ ಪ್ರತಿನಿಧಿ ಹರೀಶ್ ಕೊಕ್ಕರ್ಣೆ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದ್ದಾರೆ.



Related posts

ಡೊಂಬಿವಲಿ: ಸೆ. 6ರಂದು ಮುದ್ದು ಮಕ್ಕಳ ‘ರಾಧಾ–ಕೃಷ್ಣ’ ಫ್ಯಾನ್ಸಿ ಡ್ರೆಸ್ ಸ್ಪರ್ಧೆ

Mumbai News Desk

ಆದೂರು ಶ್ರೀ ಭಗವತಿ ಕ್ಷೇತ್ರದಲ್ಲಿ ಜ. 19 ರಿಂದ 24ರ ತನಕ 351 ವರ್ಷದ ಬಳಿಕ ಪೆರುಂಕಳಿಯಾಟ್ಟ ಮಹೋತ್ಸವ

Mumbai News Desk

ಶ್ರೀ ಮಹಾಕಾಳಿ ಮಂದಿರ ಜೋಗೇಶ್ವರಿ ಪೂರ್ವ, ಇಂದು ಶ್ರೀ ಶನಿ ಗ್ರಂಥ ಪಾರಾಯಣ.

Mumbai News Desk

ಗೋರೆಗಾಂವ್ ಸಹಕಾರ್ ವಾಡಿ  ಶ್ರೀ ಸದ್ಗುರು ನಿತ್ಯಾನಂದ ಆಶ್ರಮ . ಜ. 25 ರಂದು 59ನೇ ವಾರ್ಷಿಕ ಮಹೋತ್ಸವ, ಗುರು ಮೂರ್ತಿ ಅಭಿಷೇಕ 

Mumbai News Desk

ಬಿಲ್ಲವರ ಎಸೋಸಿಯೇಷನ್ ಮುಂಬಯಿ – ಸೆ. 28ಕ್ಕೆ ವಿದ್ಯಾರ್ಥಿಗಳ ದತ್ತು ಸ್ವೀಕಾರ, ಪ್ರತಿಭಾ ಪುರಸ್ಕಾರ ಹಾಗೂ ನೂತನ ವೆಬ್ಸೈಟ್ ಲೋಕಾರ್ಪಣೆ

Mumbai News Desk

ತುಳು ಸಂಘ ಬೋರಿವಲಿ ವತಿಯಿಂದ ನ. 16ರಂದು ಸ್ವಚ್ಛತಾ ಅಭಿಯಾನ

Mumbai News Desk