29 C
Mumbai
July 28, 2026
Mumbai News Kannada
ಪ್ರಕಟಣೆ

ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನದಲ್ಲಿ ಜುಲೈ 29ರಂದು ಗುರು ಪೂರ್ಣಿಮಾ ಮಹೋತ್ಸವ ಹಾಗೂ ನೂತನ ಪೀಠ ಉದ್ಘಾಟನೆ







ಘಾಟ್ ಕೋಪರ್ ಪಶ್ಚಿಮ ಅಸಲ್ಪ , ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನದಲ್ಲಿ ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಆಷಾಢ ಮಾಸ ಶುಕ್ಲ ಪಕ್ಷದ ಶುಭ ದಿನವಾದ 2026ರ ಜುಲೈ 29ರಂದು (ಬುಧವಾರ) ಗುರು ಪೂರ್ಣಿಮಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರಲಿದೆ. ಶ್ರೀ ದೇವಿ ದರ್ಶನದ ಆಶಯದಂತೆ ಶ್ರೀ ನಿತ್ಯಾನಂದ ಗುರುಗಳ ವಿಗ್ರಹದ ಎತ್ತರವನ್ನು ಹೆಚ್ಚಿಸಲು ನಿರ್ಮಿಸಲಾಗಿರುವ ನೂತನ ಅಮೃತಶಿಲೆಯ (Marble) ಪೀಠದ ಉದ್ಘಾಟನೆಯು ಈ ಪವಿತ್ರ ದಿನದಂದು ಜರುಗಲಿದ್ದು, ಇದರೊಂದಿಗೆ ಕಲಶ ಪೂಜೆ, ರಂಗಪೂಜೆ ಹಾಗೂ ಅನ್ನದಾನ ಕಾರ್ಯಕ್ರಮಗಳು ನಡೆಯಲಿವೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ನಿತ್ಯಾನಂದ ಗುರುಗಳ ನೂತನ ಅಮೃತಶಿಲೆಯ ಪೀಠ ಹಾಗೂ ಅನ್ನದಾನ ಸೇವೆಯನ್ನು ಶ್ರೀ ಸತೀಶ್ ಕುಶಲ ಶೆಟ್ಟಿ ಮತ್ತು ಶ್ರೀಮತಿ ಶೋಭಾ ಕುಶಲ ಶೆಟ್ಟಿ ದಂಪತಿಗಳು ನೆರವೇರಿಸಿಕೊಡಲಿದ್ದಾರೆ. ಹಾಗೆಯೇ ಶ್ರೀ ಗುರುಗಳ ಮಂಟಪ ಸೇವೆಯನ್ನು ಶ್ರೀಮತಿ ಜಲಜಾ ಆರ್. ಪೂಜಾರಿ ವಹಿಸಿಕೊಂಡಿದ್ದಾರೆ. ಸೇವಾದಾರರ ಕೊಡುಗೆಯಾಗಿ ಶ್ರೀ ಸತೀಶ್ ಕುಶಲ ಶೆಟ್ಟಿ ಅವರಿಂದ 5 ಅಟ್ಟಿಗೆ ಮಲ್ಲಿಗೆ ಸೇವೆ ಮತ್ತು ಸಂಪೂರ್ಣ ಹೂವಿನ ಅಲಂಕಾರ ಸೇವೆ, ಶ್ರೀಮತಿ ಸುಶೀಲಾ ವಾಸು ಪೂಜಾರಿ ಅವರಿಂದ ಸಂಪೂರ್ಣ ಹಣ್ಣಿನ ಸೇವೆ ಹಾಗೂ ಶ್ರೀ ಡಿ. ಎಂ. ಕೋಟ್ಯಾನ್ ಅವರಿಂದ ಪಾದುಕಾ ಸೇವೆ ಸಮರ್ಪಣೆಯಾಗಲಿದೆ. ಇದರ ಹೊರತಾಗಿ ಹೂವು, ಹಣ್ಣು, ಪ್ರಸಾದ ಹಾಗೂ ರಂಗಪೂಜೆಯ ಇತರ ವೆಚ್ಚಗಳನ್ನು ಭಕ್ತಾದಿಗಳು ಹಂಚಿಕೊಳ್ಳಲು ಆಡಳಿತ ಮಂಡಳಿ ವಿನಂತಿಸಿದೆ.
ಕಾರ್ಯಕ್ರಮದ ವೇಳಾಪಟ್ಟಿ:
ಬೆಳಿಗ್ಗೆ 10:00 ಗಂಟೆಗೆ ನವಕಲಶ ಅಭಿಷೇಕದೊಂದಿಗೆ ಪೂಜಾ ವಿಧಿವಿಧಾನಗಳು ಆರಂಭವಾಗಲಿದ್ದು, ಸಾಯಂಕಾಲ 6:00 ಗಂಟೆಗೆ ಭಜನೆ ನಡೆಯಲಿದೆ. ತದನಂತರ ರಂಗಪೂಜೆ, ಗುರುಪೂಜೆ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ಜರುಗಲಿದೆ. ಈ ಪವಿತ್ರ ಹಾಗೂ ಮಂಗಳಕರ ಸಮಾರಂಭದಲ್ಲಿ ಸರ್ವ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ನಿತ್ಯಾನಂದ ಗುರುಗಳ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕಾಗಿ ಕೋರಲಾಗಿದೆ.



Related posts

ಫೆಬ್ರವರಿ 1ರಂದು ಜಗಜ್ಯೋತಿ ಕಲಾವೃಂದದ 39ನೇ ವಾರ್ಷಿಕೋತ್ಸವ: ಸಾಮೂಹಿಕ ನೃತ್ಯ ಸ್ಪರ್ಧೆಗೆ ಆಹ್ವಾನ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದ ಸಮಾಜದ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ :

Mumbai News Desk

ಗೋರೆವಾಂವ್ ಪೂರ್ವದ  ಶ್ರೀ ಸದ್ಗುರುನಿತ್ಯಾನಂದ ಆಶ್ರಮ. ಜು10ರಂದು  ಗುರು ಪೂರ್ಣಿಮೆ.

Mumbai News Desk

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ : ಆಗಸ್ಟ್ 2ಕ್ಕೆ ಆಟಿದ ಬೂತಾರಾದನೆ, ಸಾಕ್ಷ ಚಿತ್ರ ಬಿಡುಗಡೆ ಮತ್ತು ವಿಚಾರಗೋಷ್ಠಿ

Mumbai News Desk

ಜೂ.1ರಂದು ಮುಂಬಯಿಯ ಉದ್ಯಮಿ ಸುರೇಶ್ ಕಾಂಚನ್ ನೇತೃತ್ವದಲ್ಲಿ ಹುಟ್ಟೂರು ಉಪ್ಪಿನಕುದ್ರು ಶಾಲೆಯಲ್ಲಿ ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ, ಆರ್ಥಿಕ ನೆರವು ಕಾರ್ಯಕ್ರಮ.

Mumbai News Desk

ವಸಾಯಿ ಶ್ರೀ ಮಣಿಕಂಠ ಸೇವಾ ಸಮಿತಿ: ಡಿ. 9 ರಂದು 24ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ

Mumbai News Desk