30 C
Mumbai
October 6, 2026
Mumbai News Kannada
ಪ್ರಕಟಣೆ

ವಿದ್ಯಾವಿಹಾರ್ ಪಶ್ಚಿಮದ ಗಾಂವ್‌ದೇವಿಯ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನ : ಜುಲೈ 11ರಂದು ಶ್ರೀ ರಾಮ ಕಥಾ ಹೃದಯಂ ಸರಣಿ ತಾಳಮದ್ದಳೆ, ಸಮ್ಮಾನ.



ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ಮತ್ತು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಜಂಟಿ  ಆಯೋಜನೆಯಲ್ಲಿ  ಪ್ರಭು ರಾಮಚಂದ್ರ ದೇವರ ಅವತಾರದ ಆರಂಭದಿಂದ ಶ್ರೀ ದೇವರ ನಿರ್ಯಾಣದವರೆಗಿನ “ಸಂಪೂರ್ಣ ಶ್ರೀ ರಾಮ ಚರಿತ್ರೆ – ಶ್ರೀ ರಾಮ ಕಥಾ ಹೃದಯಂ’ ಪುಣ್ಯಪ್ರದ ಇಪ್ಪತ್ನಾಲ್ಕು ಕಂತುಗಳ ಸರಣಿ ತಾಳಮದ್ದಳೆ ಕಾರ್ಯಕ್ರಮದ ಹನ್ನೊಂದನೇ ಪ್ರಸ್ತುತಿಃ ‘ಚೂಡಾಮಣಿ ಲಂಕಾದಹನ
ಮತ್ತು ಸಮ್ಮಾನ ಕಾರ್ಯಕ್ರಮವು ಜುಲೈ 11ರಂದು ಅಪರಾಹ್ನ 2.30ರಿಂದ ವಿದ್ಯಾವಿಹಾರ್ ಪಶ್ಚಿಮದ ಗಾಂವ್‌ದೇವಿಯ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.
 ಹರಿದಾಸ ಭಟ್ ಪೆರ್ಣಂಕಿಲ ಅವರ ಶುಭಾಶೀರ್ವಾದದೊಂದಿಗೆ, ಶ್ರೀ ಅಂಬಿಕಾ ಆದಿನಾಥೇಶ್ವರ ದೇವಸ್ಥಾನ ವಿದ್ಯಾವಿಹಾರ್ ಇದರ ಆಡಳಿತ ಮೂಕ್ತೇಸರರಾದ  ಹರಿದಾಸ ಗೋಪಾಲ್ ಶೆಟ್ಟಿ ಅವರ ಸಂಪೂರ್ಣ ಸಹಕಾರದೊಂದಿಗೆ ನಡೆಯಲಿರುವ ಸಮಾರಂಭದಲ್ಲಿ, ಕಳೆದ ಹಲವು ದಶಕಗಳಿಂದ ಮುಂಬೈ ಮಹಾನಗರದಲ್ಲಿ  ಯಕ್ಷಗಾನ ತಾಳಮದ್ದಲೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ  ಕೆ ಕೆ ಶೆಟ್ಟಿ ( ತಾಳಮದ್ದಳೆ ಅರ್ಥವಾದಿ ಸಂಘಟಕರು), ನಾರಾಯಣ ಪಿ ಬಂಗೇರ (ಹಿಮ್ಮೇಳ ವಾದಕರು) , ಸದಾನಂದ ಶೆಟ್ಟಿ  ಮಾನಾಡಿ (ಪ್ರಸಿದ್ಧ  ಯಕ್ಷಗಾನ  ಕಲಾವಿದರು ) , ರಮೇಶ  ಬಿರ್ತಿ  (ಕಲಾವಿದರು ಲೇಖಕರು) ಇವರನ್ನು  ದಂಪತಿ ಸಮೇತರಾಗಿ  ವೇ| ಮೂ| ಪೆರ್ಣಂಕಿಲ ಹರಿದಾಸ ಭಟ್ ಇವರ ಆಶಯದಂತೆ ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಗುವುದು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವೇ| ಮೂ| ಶ್ರೀ ಪೆರ್ಣಂಕಿಲ ಹರಿದಾಸ ಭಟ್ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀನಿವಾಸ ಉಡುಪರು( ಪ್ರದಾನ ಅರ್ಚಕರು  ಉಮಾ ಮಹೇಶ್ವರಿ  ದೇವಸ್ಥಾನ ಜರಿಮೆರಿ ) ಇವರು  ಆಗಮಿಸಲಿದ್ದಾರೆ. 
ಶ್ರೀ ಗಾಂವ್‌ದೇವಿ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನ, ವಿದ್ಯಾ ವಿಹಾರ ಇಲ್ಲಿಯ ಆಡಳಿತ ಮೊಕ್ತೇಸರರಾದ  ಹರಿದಾಸ ಗೋಪಾಲ ಶೆಟ್ಟಿ ಅವರ ಗೌರವ ಉಪಸ್ಥಿತಿಯಿರುವುದು. 
ಮುಂಬೈಯ ಖ್ಯಾತ ಭಾಗವತರುಗಳಾದ ನಾದಲೋಲ  ಪೊಲ್ಯ  ಲಕ್ಷ್ಮೀ  ನಾರಾಯಣ. ಶೆಟ್ಟಿ,    ಜಯಲಕ್ಷ್ಮಿ  ದೇವಾಡಿಗ ,ಮೋಹನದಾಸ ರೈ ಇವರುಗಳಿಂದ ಗಾನ ವೈಭವ ನಡೆಯಲಿರುವುದು .
 ಕಲಾಭಿಮಾನಿಗಳು, ಕಲಾಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕಲಾವಿದರೂ, ಕಲಾ ಸಂಘಟಕರಾದ ವಾಸು ಮಾರ್ನಾಡ್ ಮತ್ತು ಸುರೇಶ್ ನಂದ್ರೋಳ್ಳಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.



Related posts

ಸೆ. 6: ಮಲಾಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ವಿತರಣೆ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಸಾವರ್ಕರ್ ನಗರ್ -ಥಾಣೆ, ಆಗಸ್ಟ್ 16ರಂದು ಮಾಸಿಕ ಸಂಕ್ರಮಣ ಪೂಜೆ

Mumbai News Desk

ಮಲಾಡ್ ಶ್ರಿ ವರಮಹಾಲಕ್ಷ್ಮಿ ಪೂಜಾ ಸಮಿತಿ, ಜ. 26 ರಂದು ಮಹಿಳಾ ವಿಭಾಗದ ವತಿಯಿಂದ ಹಳದಿ ಕುಂಕುಮ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಥಾಣೆ: ಜು. 16ರಂದು ಮಾಸಿಕಸಂಕ್ರಮಣ ಪೂಜೆ

Mumbai News Desk

ಜೂ 29: , ಮೈಸೂರು ಅಸೋಸಿಯೇಶನ್  ಮುಂಬಯಿ, ಅಂತರಾಷ್ಟ್ರೀಯ ಕಲಾವಿದೆ ಸ್ಮಿತಾ ಬೆಳ್ಳೂರ್ ಸಂಗೀತ ಕಾರ್ಯಕ್ರಮ

Mumbai News Desk

ಶ್ರೀ ಮದ್ಭಾರತ ಮಂಡಳಿ ಮುಂಬೈ : ಜೂನ್ 20ರಿಂದ 149ನೇ ಪುಣ್ಯ ಗ್ರಂಥ ಪಾರಾಯಣ ಪ್ರಾರಂಭ

Mumbai News Desk