October 16, 2026
Mumbai News Kannada
ಸುದ್ದಿ

ಮೊಗವೀರ ವ್ಯವಸ್ಥಾಪಕ ಮಂಡಳಿ ಮಾಜಿ ಅಧ್ಯಕ್ಷ ಹೊಸಬೆಟ್ಟು ಕೆ.ಆರ್. ಪುತ್ರನ್ ಅವರಿಗೆ ನುಡಿನಮನ: ಅಂಧೇರಿಯಲ್ಲಿ ಸಂತಾಪ ಸಭೆ



ಮುಂಬಯಿ: ಮುಂಬಯಿಯ ಹಿರಿಯ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಸಂಘಟನೆಯಾದ ಮೊಗವೀರ ವ್ಯವಸ್ಥಾಪಕ ಮಂಡಳಿಯ ಮಾಜಿ ಅಧ್ಯಕ್ಷ ಹೊಸಬೆಟ್ಟು ಕೆ.ಆರ್. ಪುತ್ರನ್ ಅವರು ಜುಲೈ 3ರಂದು ನಿಧನರಾದ ಹಿನ್ನೆಲೆಯಲ್ಲಿ, ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಂತಾಪ ಸಭೆಯನ್ನು ಜುಲೈ 12ರಂದು ಅಂಧೇರಿಯ ಮೊಗವೀರ ಭವನದಲ್ಲಿ ಆಯೋಜಿಸಲಾಗಿತ್ತು. ಮಂಡಳಿಯ ಅಧ್ಯಕ್ಷ ಗಣೇಶ್ ಕೆ. ಕಾಂಚನ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
​ಸಭೆಯಲ್ಲಿ ಕೆ.ಆರ್. ಪುತ್ರನ್ ಅವರ ಪುತ್ರಿ ಡಾ. ಕಿರಣ್ ಹಾಗೂ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಮೊಗವೀರ ಪತ್ರಿಕೆಯ ಸಂಪಾದಕ ಅಶೋಕ ಸುವರ್ಣ ಅವರು ಸ್ವಾಗತಿಸಿ, ಕೆ.ಆರ್. ಪುತ್ರನ್ ಅವರ ಸಿದ್ಧಿ, ಸಾಧನೆ ಹಾಗೂ ಮೊಗವೀರ ಮಂಡಳಿಯ ಅಭಿವೃದ್ಧಿಗೆ ಅವರು ನೀಡಿದ ಅಮೋಘ ಸೇವೆಯನ್ನು ಸ್ಮರಿಸಿದರು. ಮಂಡಳಿಯ ಪ್ರಧಾನ ಕಾರ್ಯದರ್ಶಿ ದಿಲೀಪ್ ಮುಲ್ಕಿ ಮಾತನಾಡಿ, ಕೆ.ಆರ್. ಪುತ್ರನ್ ಅವರು ಅಧ್ಯಕ್ಷರಾಗಿ ಸಲ್ಲಿಸಿದ ಅವಿರತ ಸೇವೆಯಿಂದಾಗಿಯೇ ಮಂಡಳಿಯು ಇಂದು ಸಮರ್ಥವಾಗಿ ಬೆಳೆದು ನಿಂತಿದೆ ಎಂದರು.


​ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಅಜಿತ್ ಜಿ. ಸುವರ್ಣ, ಪಾರುಪತ್ಯಗಾರರಾದ ದೇವರಾಜ್ ಬಂಗೇರ, ಸಂಜೀವ ಕೆ. ಸಾಲ್ಯಾನ್, ಮಂಡಳಿಯ ಉಪಾಧ್ಯಕ್ಷ ಬಿ.ಕೆ. ಪ್ರಕಾಶ್, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೊಬಳಿ ಇದರ ಮಾಜಿ ಅಧ್ಯಕ್ಷ ಮಹಾಬಲ್ ಕುಂದರ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ದಿವಾಕರ್ ಪಿ. ಸಾಲ್ಯಾನ್, ಪುತ್ರನ್ ಮೂಲಸ್ಥಾನ ಮುಂಬಯಿ ಇದರ ಕಾರ್ಯದರ್ಶಿ ಡಿ.ಬಿ. ಪುತ್ರನ್, ಮೊಗವೀರ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಭಾಸ್ವರ ಸಾಲ್ಯಾನ್, ಲೇಖಕ-ಸಂಘಟಕ ಓಂದಾಸ್ ಕಣ್ಣಂಗಾರ್, ಮುಕ್ತಾನಂದ ಶಾಲೆಯ ಮಾಜಿ ಶಿಕ್ಷಕಿ ಶೀಲಾ ಮಲ್ಯ, ಚಾವ್ಹನ್, ವಿ.ಜಿ. ಕೋಟ್ಯಾನ್, ಹೊಸಬೆಟ್ಟು ಮೊಗವೀರ ಸಂಘದ ಉಪಾಧ್ಯಕ್ಷ ರಾಮಚಂದ್ರ ಕರ್ಕೇರ, ಲೇಖಕಿ ಹಾಗೂ ಸಂಶೋಧಕಿ ಡಾ. ಜಿ.ಪಿ. ಕುಸುಮಾ ಅವರು ಕೆ.ಆರ್. ಪುತ್ರನ್ ಅವರ ಗುಣಗಾನ ಮಾಡಿದರು.
​”ಕೆ.ಆರ್. ಪುತ್ರನ್ ಅವರ ಬದುಕು ಶಿಸ್ತು, ಸತ್ಯ, ಧರ್ಮ ಪರಿಪಾಲನೆ, ತ್ಯಾಗ, ಸಾಮಾಜಿಕ ಬದ್ಧತೆ ಹಾಗೂ ಕ್ರಿಯಾಶೀಲತೆಯಿಂದ ಕೂಡಿತ್ತು. ಸಮಾಜದ ಪ್ರಗತಿಯ ಬಗ್ಗೆ ಅವರಿಗಿದ್ದ ಕಾಳಜಿ ಅಪಾರ. ರಾತ್ರಿ ಶಾಲೆಯಲ್ಲಿ ಓದಿದರೂ ಸಹ ತಮ್ಮ ಧೈರ್ಯ ಮತ್ತು ಸಾಧನೆಯ ಮುಖಾಂತರ ಸಿಎ (CA) ಪದವೀಧರರಾಗಿ ಮಿಂಚಿದ್ದು ಒಂದು ಸಾಹಸವೇ ಸರಿ,” ಎಂದು ಗಣ್ಯರು ಬಣ್ಣಿಸಿದರು.
​ಅಧ್ಯಕ್ಷೀಯ ಭಾಷಣ ಮಾಡಿದ ಗಣೇಶ್ ಕೆ. ಕಾಂಚನ್ ಅವರು, “ಕೆ.ಆರ್. ಪುತ್ರನ್ ಅವರಂತಹ ನಿಸ್ವಾರ್ಥ ವ್ಯಕ್ತಿ ಮಂಡಳಿಗೆ ದೊರಕಿರುವುದು ನಮ್ಮ ಭಾಗ್ಯವೇ ಆಗಿದೆ” ಎಂದು ಹೇಳುತ್ತಾ ತೀವ್ರ ಸಂತಾಪ ವ್ಯಕ್ತಪಡಿಸಿದರು.
​ವೇದಿಕೆಯಲ್ಲಿ ಮಂಡಳಿಯ ಟ್ರಸ್ಟಿಗಳಾದ ಪುರುಷೋತ್ತಮ ಎಲ್. ಕರ್ಕೇರ ಮತ್ತು ಚಂದ್ರಶೇಖರ ಕರ್ಕೇರ ಹಾಗೂ ವಿವಿಧ ಗ್ರಾಮ ಸಭೆ ಮತ್ತು ಮೂಲಸ್ಥಾನ ಸಭೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ಅಗಲಿದ ಚೇತನದ ಆತ್ಮಕ್ಕೆ ಸದ್ಗತಿ ಕೋರಿ ಎರಡು ನಿಮಿಷಗಳ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.



Related posts

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳುನಾಡ ಸೇವಾ ಸಮಾಜ ಮೀರಾಭಾಯಂದರ್ ಜಂಟಿ ಆಯೋಜನೆಯಲ್ಲಿ ನಡೆಯಲಿರುವ ‘ತುಳು ಸಮ್ಮೇಳನ’ದ ಪೂರ್ವಭಾವಿ ಸಭೆ.

Mumbai News Desk

ಮೂಳೂರು: ಬಿಕ್ರಿಗುತ್ತು ಶಕುಂತಳಾ ಡಿ ಹೆಗ್ಡೆ ನಿಧನ

Mumbai News Desk

70ನೇ ಕನ್ನಡ ರಾಜ್ಯೋತ್ಸವ: ಕನ್ನಡಿಗರಿಗೆ ಕನ್ನಡದಲ್ಲೇ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

Mumbai News Desk

‘ನೆಲೆ ಫೌಂಡೇಶನ್ ‘ ಗೆ 11ನೇ ಮೂಲತ್ವ ವಿಶ್ವ ಪ್ರಶಸ್ತಿ 2025

Mumbai News Desk

ಯುಎಇ ಬಂಟ್ಸ್‌ನ 48ನೇ ವರ್ಷದ “ಭಾವೈಕ್ಯ” ಬಂಟರ ಮಹಾಸಮಾಗಮ

Mumbai News Desk

ಶ್ರೀ ನಿತ್ಯಾನಂದ ಸೇವಾ ಸಂಸ್ಥೆ, ಮೀರಾಭಾಯಂದರ್ ವತಿಯಿಂದ ಗಣೇಶ್ ಪುರಿ ಪಾದಯಾತ್ರೆ.

Mumbai News Desk