September 6, 2026
Mumbai News Kannada
ಸುದ್ದಿ

ಕರ್ನಾಟಕ ರಾಜ್ಯದ ದ್ವಿತೀಯ ಪಿಯುಸಿಯಲ್ಲಿ 14ನೇ ರ‍್ಯಾಂಕ್‌ ಗಳಿಸಿದ ರಶ್ಮಿತಾ ರಾಜು ಕುಲಾಲ್ ಅವರ ಉನ್ನತ ವ್ಯಾಸಂಗಕ್ಕೆ ಕುಲಾಲ ಪ್ರತಿಷ್ಠಾನದಿಂದ 25 ಸಾವಿರದ ನೆರವು.





ಮಂಗಳೂರು: ಕರ್ನಾಟಕ ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕರ್ನಾಟಕಕ್ಕೆ 14ನೇ ರ‍್ಯಾಂಕ್‌ ಮತ್ತು ಮಂಗಳೂರಿಗೆ 6ನೇ ರ‍್ಯಾಂಕ್‌ ಗಳಿಸಿರುವ ಕುಮಾರಿ ರಶ್ಮಿತಾ ರಾಜು ಕುಲಾಲ್ ಇವರ ಉನ್ನತ ವ್ಯಾಸಾಂಗಕ್ಕೆ ಕುಲಾಲ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಸುಮಾರು 25 ಸಾವಿರ ರೂಪಾಯಿ ನೆರವನ್ನು ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯ ಯಾನೆ ಕುಲಾಲರ ಮಾತೃ ಸಂಘದಲ್ಲಿ ನೀಡಲಾಯಿತು.
ಕುಲಾಲ ಪ್ರತಿಷ್ಠಾನ ಸಮಾಜ ಕಲ್ಯಾಣ ಆಶ್ರಯದಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಸೇವಾ ಕಾರ್ಯಗಳಿಗೆ ಸಹಕಾರವನ್ನು ನೀಡುವ ಉದ್ದೇಶದಿಂದ ನಿರಂತರ ಕುಲಾಲ ಸಮಾಜದ ಬಂಧುಗಳಿಗೆ ಸಹಕಾರವನ್ನು ನೀಡುತ್ತಾ ಬರುತ್ತಿದೆ.
ಜಿಲ್ಲಾ ಕುಲಾಲರ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ಅವರ ಉಪಸ್ಥಿತಿಯಲ್ಲಿ, ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಸುರೇಶ್ ಕುಲಾಲ್ ಮಂಗಳದೇವಿ,
ಟ್ರಸ್ಟಿಗಳಾದ ಪ್ರೇಮಾನಂದ ಕುಲಾಲ್, ದಿನೇಶ್ ಕುಲಾಲ್ ಇವರು ನೆರವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮುಂಡರಿಕ್ಷ ಕುಲಾಲ್, ನ್ಯಾಯವಾದಿ ಕುಶಲಪ್ಪ, ಶ್ರೀ ದೇವಿ ದೇವಸ್ಥಾನದ ಅಧ್ಯಕ್ಷರಾದ ಸದಾಶಿವ ಕುಲಾಲ್ ಅತ್ತಾವರ,
ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಸುಂದರ ಕುಲಾಲ್ ಶಕ್ತಿನಗರ, ದೇವಸ್ಥಾನದ ಟ್ರಸ್ಟ್ ಗಿರಿಧರ್ ಜೆ ಮೂಲ್ಯ, ಪ್ರತಿಷ್ಠಾನದ ಮಹಾದಾನಿ ಸುನಿಲ್ ಆರ್ ಸಾಲ್ಯಾನ್, ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ ಅವರು ರಶ್ಮಿತಾ ಕುಲಾಲ್ಅವರಿಗೆ ಶುಭ ಹಾರೈಸಿದರು.



Related posts

ಕಾಸರಗೋಡಿನಲ್ಲಿ ಕನ್ನಡ ಸಾಂಸ್ಕೃತಿಕ ಉತ್ಸವ ಸಂಪನ್ನ: ಮುಂಬಯಿ ಪತ್ರಕರ್ತ ಸುಭಾಷ್ ಶಿರಿಯ ಅವರಿಗೆ ಪ್ರತಿಷ್ಠಿತ ದತ್ತಿನಿಧಿ ಪ್ರಶಸ್ತಿ ಪ್ರದಾನ

Mumbai News Desk

ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಜು16 ರಿಂದು 27 ವರೆಗೆ ಮುಂಬಯಿ ನಗರದಲ್ಲಿ.

Mumbai News Desk

ಆನಂದ ಶೆಟ್ಟಿ ಎಕ್ಕಾರ್ ಬಂಟರ ಸಂಘ ಮುಂಬಯಿ ಇದರ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ಅಯ್ಕೆ

Mumbai News Desk

ಮುಂಬಯಿಯಲ್ಲಿ ನಡೆದ ಮಹಾವೀರ ಕಾಲೇಜು ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ: ಅಧ್ಯಕ್ಷರಾಗಿ ಮೋಹನ್ ದಾಸ್ ಶೆಟ್ಟಿ ಆಯ್ಕೆ

Mumbai News Desk

ಡಾ. ಭರತ್ ಕುಮಾರ್ ಪೊಲಿಪು ಅವರಿಗೆ ಮಾತೃ ವಿಯೋಗ.

Mumbai News Desk

ಬೆಂಗಳೂರಲ್ಲಿ ಮುಂಬಯಿಯ ನಿಶಿತ ಸೂರ್ಯಕಾಂತ್ ಸುವರ್ಣರ ಇಮೇಜ್ ಕನ್ಸಲ್ಟೆಂಟ್ ನ ಅದ್ದೂರಿಯ ಕರ್ನಾಟಕ ಸ್ಟೈಲ್ ಐಕಾನ್ 2023 ಕಾರ್ಯಕ್ರಮ

Mumbai News Desk