31 C
Mumbai
September 1, 2026
Mumbai News Kannada
ಪ್ರಕಟಣೆ

ಜುಲೈ 19: ಜಯ ಸಿ. ಸುವರ್ಣ ಅಭಿಮಾನಿ ಬಳಗದಿಂದ ‘ಮರಿಯಾಲದ ಮಿನದನ’ ಆಟಿ ಕಾರ್ಯಕ್ರಮ






​ಮುಂಬಯಿ: ಬಿಲ್ಲವ ಸಮಾಜದ ಹಿರಿಯ ಮುಖಂಡ ಹಾಗೂ ಮಾರ್ಗದರ್ಶಕರಾಗಿದ್ದ ದಿವಂಗತ ಜಯ ಸಿ. ಸುವರ್ಣ ಅವರ ಅನುಯಾಯಿಗಳು ಸ್ಥಾಪಿಸಿರುವ ‘ಜಯ ಸಿ. ಸುವರ್ಣ ಅಭಿಮಾನಿಗಳು’, ‘ಶ್ರೀ ನಾರಾಯಣ ಗುರು ಭಜನಾ ಮಂಡಳಿ (ರಿ.) ಮುಂಬಯಿ’ ಹಾಗೂ ‘ಜಯ ಸಿ. ಸುವರ್ಣ ಮಹಿಳಾ ಅಭಿಮಾನಿ ಬಳಗ’ದ ಜಂಟಿ ಆಶ್ರಯದಲ್ಲಿ ಜುಲೈ 19ರ ರವಿವಾರದಂದು ಆಟಿ ತಿಂಗಳ ವಿಶೇಷ “ಮರಿಯಾಲದ ಮಿನದನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
​ಗೊರೇಗಾಂವ್ ಪೂರ್ವದ ಜಯಲೀಲಾ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಂಜೆ 4 ಗಂಟೆಯಿಂದ ಈ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿವೆ.


ಕಾರ್ಯಕ್ರಮದ ವಿವರ:
​ಸಂಜೆ 4:00 ರಿಂದ 6:00: ಮಕ್ಕಳು ಮತ್ತು ಮಹಿಳಾ ಅಭಿಮಾನಿಗಳಿಂದ ಸಾಂಪ್ರದಾಯಿಕ ಜಾನಪದ ನೃತ್ಯ ಪ್ರದರ್ಶನ.
​ಸಂಜೆ 6:00 ರಿಂದ 7:00: ಸಭಾ ಕಾರ್ಯಕ್ರಮ.
​ಸಂಜೆ 7:00 ಕ್ಕೆ: ಸಾಂಪ್ರದಾಯಿಕ ಆಟಿಯ ತಿಂಡಿ-ತಿನಸುಗಳ ಪ್ರದರ್ಶನ.
​ರಾತ್ರಿ 8:00 ಕ್ಕೆ: ಪ್ರೀತಿ ಭೋಜನ ವ್ಯವಸ್ಥೆ.

​ಈ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ ಬ್ಯಾಂಕಿನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಅವರು ವಹಿಸಲಿದ್ದಾರೆ.
​ಮುಖ್ಯ ಅತಿಥಿಯಾಗಿ ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ ಅವರು ಪಾಲ್ಗೊಳ್ಳಲಿದ್ದಾರೆ. ಗೌರವ ಅತಿಥಿಗಳಾಗಿ ಸಮಾಜ ಸೇವಕಿಯರಾದ ಸುಜಾತಾ ಆರ್. ಸುವರ್ಣ, ರಶ್ಮಿ ನಿರಂಜನ್ ಪೂಜಾರಿ, ಸುಜಾತಾ ಶಂಕರ್ ಕೋಟ್ಯಾನ್, ಮೀನಾಕ್ಷಿ ಬಿ. ಕೋಟ್ಯಾನ್ (ಕಾಮೋಟೆ), ಭವಾನಿ ಜಿ. ಕೋಟ್ಯಾನ್ ಹಾಗೂ ಶಕುಂತಲಾ ಎಸ್. ಪೂಜಾರಿ ಅವರು ಉಪಸ್ಥಿತರಿರಲಿದ್ದಾರೆ.

​ಈ ಸಾಂಸ್ಕೃತಿಕ ಸೌರಭದ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹಾಗೂ ಮುಂಬಯಿಯ ಬಿಲ್ಲವರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಜಯ ಸಿ. ಸುವರ್ಣ ಅಭಿಮಾನಿಗಳ ಅಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ, ಶ್ರೀ ನಾರಾಯಣ ಗುರು ಭಜನಾ ಮಂಡಳಿಯ ಅಧ್ಯಕ್ಷರಾದ ಅಶೋಕ್ ಕೆ. ಕುಖ್ಯಾನ್, ಜಯ ಸಿ. ಸುವರ್ಣ ಮಹಿಳಾ ಅಭಿಮಾನಿ ಬಳಗದ ಕಾರ್ಯಾಧ್ಯಕ್ಷೆ ಸಬಿತಾ ಜಿ. ಪೂಜಾರಿ ಹಾಗೂ ಎಲ್ಲಾ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.



Related posts

ಕರ್ನಾಟಕ ಸಂಘ, ಕಲ್ಯಾಣ: 23 ರಂದು ಕರ್ನಾಟಕ ರಾಜ್ಯೋತ್ಸವ ಮತ್ತು 23ನೇ ವಾರ್ಷಿಕೋತ್ಸವ

Mumbai News Desk

ಮಲಾಡ್ ಕನ್ನಡ ಸಂಘ ತುಳು ಸಾಂಸ್ಕೃತಿಕ ಕಾರ್ಯಕ್ರಮ ಆಟಿಡೊಂಜಿ ದಿನ

Mumbai News Desk

ಭಾಯಂದರ್ ಶ್ರೀ ಅಯ್ಯಪ್ಪ ಆರಾಧನಾ ಭಕ್ತ ಮಂಡಲ.ಅ.17ರಂದು ಪೂಜಾ ದೇವರುಗಳ ರಜತ ಬಿಂಬ ಪ್ರತಿಷ್ಟಾಪನೆ, ಸತ್ಯನಾರಾಯಣ ಪೂಜೆ

Mumbai News Desk

ಶ್ರೀ ಹಟ್ಟಿಯಂಗಡಿ ಮೇಳದ ಹನ್ನೆರಡನೇ ವರ್ಷದ ಮುಂಬಯಿ ಪ್ರವಾಸ: ಜುಲೈ 10 ರಿಂದ 25 ರವರೆಗೆ ಯಕ್ಷಗಾನ ವೈಭವ

Mumbai News Desk

ರಾಜಲಕ್ಷ್ಮೀ ಕೋ – ಆಪರೇಟ್ ಕ್ರಿಡಿಟ್ ಸೊಸೈಟಿಯ 40ನೆಯ ವಾರ್ಷಿಕ ಸಭೆ

Mumbai News Desk

ಏ. 12 ರಿಂದ 21 ರ ವರಗೆ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ 62 ನೇ ವಾರ್ಷಿಕ ಮಹೋತ್ಸವ

Mumbai News Desk