July 27, 2026
Mumbai News Kannada
ಪ್ರಕಟಣೆ

ಉಡುಪಿ ಶ್ರೀ ಭಗವಾನ್ ನಿತ್ಯಾನಂದ ಮಂದಿರ-ಮಠದಲ್ಲಿ ಜುಲೈ 29ರಂದು ವಿಜೃಂಭಣೆಯ “ಶ್ರೀ ಗುರು ಪೂರ್ಣಿಮಾ ಮಹೋತ್ಸವ”







ಉಡುಪಿ: ನಗರದ ಕೆ.ಎಂ. ಮಾರ್ಗದಲ್ಲಿರುವ ಶ್ರೀ ಭಗವಾನ್ ನಿತ್ಯಾನಂದ ಮಂದಿರ-ಮಠದಲ್ಲಿ ಮುಂಬರುವ ಜುಲೈ 29, 2026ರ ಬುಧವಾರದಂದು “ಶ್ರೀ ಗುರು ಪೂರ್ಣಿಮಾ ಮಹೋತ್ಸವ”ವನ್ನು ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ವಿಜೃಂಭಣೆಯಿಂದ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 5:00 ಗಂಟೆಯಿಂದ ರಾತ್ರಿ 8:00 ಗಂಟೆಯವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮಹೋತ್ಸವದ ಅಂಗವಾಗಿ ಬೆಳಿಗ್ಗೆ ಸಿಯಾಳ ಅಭಿಷೇಕ, ವಿಶೇಷ ಮಹಾಪೂಜೆ, ಭಜನಾ ಕಾರ್ಯಕ್ರಮಗಳು, ಅನ್ನಸಂತರ್ಪಣೆ ಹಾಗೂ ಪಲ್ಲಕ್ಕಿ ಉತ್ಸವಗಳು ನೆರವೇರಲಿವೆ.
ಗುರು ಸನ್ನಿಧಾನದಲ್ಲಿ ನಡೆಯುವ ಈ ಪವಿತ್ರ ಧಾರ್ಮಿಕ ಮತ್ತು ಸೇವಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ಗುರುಗಳ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕಾಗಿ ಭಗವಾನ್ ನಿತ್ಯಾನಂದ ಮಂದಿರ-ಮಠದ ಟ್ರಸ್ಟಿಗಳು, ಆಡಳಿತ ಮಂಡಳಿ ಹಾಗೂ ಸೇವಾ ಸಮಿತಿಯ ಸರ್ವ ಸದಸ್ಯರು ಪ್ರಕಟಣೆಯಲ್ಲಿ ಕೋರಿದ್ದಾರೆ.



Related posts

ಜಗಜ್ಯೋತಿ ಕಲಾವೃಂದದಿಂದ ಮಹಿಳೆಯರಿಗಾಗಿ ಅಖಿಲ ಭಾರತ ಮಟ್ಟದ ಕಥಾ ಮತ್ತು ಕವಿತಾ ಪ್ರಶಸ್ತಿ ಸ್ಪರ್ಧೆ ಆಹ್ವಾನ

Mumbai News Desk

ಸ್ವಾಮಿ ನಿತ್ಯಾನಂದ ಮಂದಿರ ಬೊಯಿಸರ್. ಡಿ.27 ರಂದು 14 ನೆಯ ವಾರ್ಷಿಕ ಪ್ರತಿಷ್ಟಾಪನೋತ್ಸವ.

Mumbai News Desk

ನ.21 ರಂದು ಬಿಲ್ಲವರ ಅಸೋಸಿಯೇಷನ್, ಮುಂಬಯಿ – ಕಲ್ವಾ ಸ್ಥಳೀಯ ಕಛೇರಿಯ ರಜತ ಮಹೋತ್ಸವದ ಸಂಭ್ರಮ

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳ ಡೊಂಬಿವಲಿ : ಅ. 3ರಿಂದ ವಜ್ರ ಮಹೋತ್ಸವ ಆಚರಣೆ

Mumbai News Desk

ಫೆಬ್ರವರಿ 1ರಂದು ಜಗಜ್ಯೋತಿ ಕಲಾವೃಂದದ 39ನೇ ವಾರ್ಷಿಕೋತ್ಸವ: ಸಾಮೂಹಿಕ ನೃತ್ಯ ಸ್ಪರ್ಧೆಗೆ ಆಹ್ವಾನ

Mumbai News Desk

ಜ.6 ರಂದು ಇನ್ನಂಜೆ ಚಂದ್ರಹಾಸ ಗುರುಸ್ವಾಮಿ ಅವರ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ಶಂಕರಪುರ ಇದರ 38ನೇ ವರ್ಷದ ವಾರ್ಷಿಕ ಮಹಾಪೂಜೆ

Mumbai News Desk