31 C
Mumbai
September 11, 2026
Mumbai News Kannada
ತುಳುನಾಡು

ವಿಶ್ವ ಬೆಳಕು ಸೌಹಾರ್ದ ಸಹಕಾರಿ ಸಂಘ ನಿಯಮಿತದ 11ನೇ ವಾರ್ಷಿಕ ಮಹಾಸಭೆ





ವಿಶ್ವ ಬೆಳಕು ಸೌಹಾರ್ದ ಸಹಕಾರಿ ಸಂಘ ನಿಯಮಿತದ 11ನೇ ವಾರ್ಷಿಕ ಮಹಾಸಭೆಯು ದಿನಾಂಕ 26/07/2026ರಂದು ಭಾನುವಾರ ಬೆಳಿಗ್ಗೆ 10.00 ಗಂಟೆಗೆ ಮಂಗಳೂರಿನ CODP ಮದರ್ ತೆರೆಸಾ ಹಾಲ್ನಲ್ಲಿ ಸಂಘದ ಅಧ್ಯಕ್ಷೆ ಶ್ರೀಮತಿ ಅಕ್ಷತಾ ಕದ್ರಿ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನೆರವೇರಿತು.

ಶ್ರೀಮತಿ ಗುಣಾವತಿ ಹಾಗೂ ಬಳಗದವರ ಪ್ರಾರ್ಥನೆಯೊಂದಿಗೆ ಸಭೆಯು ಆರಂಭಗೊಂಡಿತು. ಬಳಿಕ ಅಧ್ಯಕ್ಷೆ ಶ್ರೀಮತಿ ಅಕ್ಷತಾ ಕದ್ರಿ ಅವರು ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರು ಹಾಗೂ ಗಣ್ಯರನ್ನುj ಆತ್ಮೀಯವಾಗಿ ಸ್ವಾಗತಿಸಿದರು.

ಶ್ರೀಮತಿ ಜಯಶ್ರೀ ಅವರು ಕಳೆದ ಮಹಾಸಭೆಯ ವರದಿಯನ್ನು ಸಭೆಗೆ ಮಂಡಿಸಿದರು. ಸಭೆಯು ಅದನ್ನು ಸರ್ವಾನುಮತದಿಂದ ಅಂಗೀಕರಿಸಿತು. ನಂತರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಶೈನಿ ಅವರು 2025–2026ನೇ ಸಾಲಿನ ವಾರ್ಷಿಕ ಲೆಕ್ಕಪತ್ರವನ್ನು ಸಭೆಗೆ ಮಂಡಿಸಿದರು. ಸಭಿಕರು ಯಾವುದೇ ಆಕ್ಷೇಪಣೆ ಅಥವಾ ಲೋಪದೋಷಗಳಿಲ್ಲದೆ ಲೆಕ್ಕಪತ್ರವನ್ನು ಸರ್ವಾನುಮತದಿಂದ ಅಂಗೀಕರಿಸಿದರು.

ಸಭಿಕರ ಪರವಾಗಿ ಶ್ರೀ ಅನಿಲ್ ಕುಮಾರ್ ರಾವ್, ಶ್ರೀಮತಿ ಕಾಂಚನ್ ಜೆ. ನಾಯಕ್ ಹಾಗೂ ಅಕ್ಷಯ ಗ್ರೂಪ್ ಆಫ್ ಎಜುಕೇಶನ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜಯಂತ್ ನಡುಬೈಲು ಅವರು ಸಂಘದ ಅಭಿವೃದ್ಧಿಗೆ ಸಂಬಂಧಿಸಿದಂತೆ ತಮ್ಮ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷೆ ಶ್ರೀಮತಿ ಅಕ್ಷತಾ ಕದ್ರಿ, ಉಪಾಧ್ಯಕ್ಷರಾದ ಶ್ರೀ ಹರೀಶ್ ಕೆ. ಪೂಜಾರಿ, ನಿರ್ದೇಶಕರಾದ ಶ್ರೀ ಪ್ರಕಾಶ್ ಮೂಲತ್ವ , ಶ್ರೀ ಓಸ್ಮಾನ್ ಫೆರ್ನಾಂಡಿಸ್, ಶ್ರೀಮತಿ ಗುಣಾವತಿ, ಶ್ರೀಮತಿ ಜಯಶ್ರೀ, ಶ್ರೀ ನವೀನ್ ಕುಮಾರ್ ಗುಳಿಬೆಟ್ಟು ಹಾಗೂ ಶ್ರೀ ಜಯಕುಮಾರ್ ಉಪಸ್ಥಿತರಿದ್ದರು.

ಕೊನೆಯಲ್ಲಿ ನಿರ್ದೇಶಕರಾದ ಶ್ರೀ ಪ್ರಕಾಶ್ ಮೂಲತ್ವ ಅವರು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುವ ಮೂಲಕ ಸಭೆಯನ್ನು ಸಮಾಪ್ತಿಗೊಳಿಸಿದರು.



Related posts

ಮೂಲ್ಕಿ ಪುನರೂರು ಶ್ರೀದೇವರ ನೂತನ ಶಿಲಾಮಯ ಗರ್ಭಗುಡಿಯ ಶಿಲಾನ್ಯಾಸ

Mumbai News Desk

ಪಡುಮಾರ್ನಾಡು ಯುವಕ ಮಂಡಲದ ಅಧ್ಯಕ್ಷರಾಗಿ ತೀರ್ಥಂಗಡಿ ರಮೇಶ್ ಎಸ್. ಶೆಟ್ಟಿ, ಪ್ರಜ್ಞಾ ಯುವತಿ ಮಂಡಲದ ಅಧ್ಯಕ್ಷೆಯಾಗಿ ಅಮನೊಟ್ಟು ಸುನೀತಾ ಹೆಗ್ಡೆ ಆಯ್ಕೆ

Mumbai News Desk

ಪ್ರಪಂಚಾದ್ಯಂತ ನೆಲೆಸಿರುವ ಜನರು ಕಾಪು ಮಾರಿಗುಡಿಯನ್ನೊಮ್ಮೆ ನೋಡಬೇಕು : ಶಿರೂರು ಶ್ರೀ ಶ್ರೀ ವೇದವರ್ಧನ ಸ್ವಾಮೀಜಿ 

Mumbai News Desk

ಉಡುಪಿ ಶ್ರೀ ನಿತ್ಯಾನಂದ ಸ್ವಾಮಿ ಮಂದಿರದಲ್ಲಿ ಶ್ರದ್ಧಾ-ಭಕ್ತಿಯಿಂದ ಜರುಗಿದ ಶ್ರೀ ಗುರು ಪೂರ್ಣಿಮಾ ಮಹೋತ್ಸವ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಪಟ್ಲ ಸತೀಶ್ ಶೆಟ್ಟಿಯವರಿಗೆ  ಗೌರವ.

Mumbai News Desk

ಉಡುಪಿ : ಪರ್ಯಾಯ ಆಚರಣೆಯ ಅಂಗವಾಗಿ ನಡೆದ ಧಾನ್ಯ ಮುಹೂರ್ತ

Mumbai News Desk