29 C
Mumbai
October 5, 2026
Mumbai News Kannada
ಸುದ್ದಿ

ವಿಜಯಾ ಕಾಲೇಜು ಮೂಲ್ಕಿ: 1982 ಬಿ.ಕಾಂ (ಬಿ) ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ



ಮೂಲ್ಕಿ: ಇಲ್ಲಿನ ವಿಜಯಾ ಕಾಲೇಜಿನಲ್ಲಿ 1982ನೇ ಇಸವಿಯಲ್ಲಿ ಬಿ.ಕಾಂ (ಬಿ) ವ್ಯಾಸಂಗ ಮುಗಿಸಿದ ಸಹಪಾಠಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಅ.19ರಂದು ಕಾಲೇಜು ಸಮೀಪದ ಸನ್‌ಶೈನ್ ರೆಸಾರ್ಟ್‌ನಲ್ಲಿ ಜರುಗಿತು.

ಆರಂಭದಲ್ಲಿ, ಸಹಪಾಠಿಗಳನ್ನು ಒಗ್ಗೂಡಿಸಲು ಮುತುವರ್ಜಿ ವಹಿಸಿ ಇತ್ತೀಚೆಗೆ ನಿಧನರಾದ ಸಹಪಾಠಿ ವಾಗ್ದೇವಿ ಕಾಂಚನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸುಮಾರು 20 ಮಂದಿ ಸಹಪಾಠಿಗಳು ವಾಗ್ದೇವಿ ಅವರೊಂದಿಗಿನ ನೆನಪುಗಳನ್ನು ಹಂಚಿಕೊಂಡು ಸಂತಾಪ ಸೂಚಿಸಿದರು. ಮುಂದಿನ ದಿನಗಳಲ್ಲಿ ವಾಗ್ದೇವಿ ಅವರ ನೆನಪಿಗಾಗಿ ಪ್ರತಿ ವರ್ಷ ಸ್ನೇಹ ಸಮ್ಮಿಲನ ಆಯೋಜಿಸಲು ಹಾಗೂ ಅವರ ಪುಣ್ಯತಿಥಿಯಂದು ಅನಾಥಾಶ್ರಮಕ್ಕೆ ಸೇವೆ ಸಲ್ಲಿಸಲು ನಿರ್ಧರಿಸಲಾಯಿತು.

ವಿವಿಧ ಮನರಂಜನಾ ಚಟುವಟಿಕೆಗಳು ಹಾಗೂ ಊಟೋಪಚಾರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.



Related posts

ಉಡುಪಿ : ಕೋಡಿಬೆಂಗ್ರೆ ಮಗುಚಿ ಬಿದ್ದ ಟೂರಿಸ್ಟ್ ಬೋಟ್, ಇಬ್ಬರು ಸಾವು

Mumbai News Desk

ಮುತ್ತೂಟ್ ಫೈನಾನ್ಸ್ ‘ವಿವಾಹ ಸಮ್ಮಾನ 2026’: ಮಂಗಳೂರಿನ 10 ಅರ್ಹ ಹೆಣ್ಣುಮಕ್ಕಳ ಮದುವೆಗೆ ಆರ್ಥಿಕ ಆಸರೆ

Mumbai News Desk

ದಿ. ದಾಮೋದರ್ ಸುವರ್ಣ ಜನ್ಮಶತಾಬ್ದಿ ಆಚರಣೆ : ಡಾ. ಮೋಹನ್ ಬಿ ಅವರಿಗೆ ಗಣ್ಯರ ಸಮ್ಮುಖದಲ್ಲಿ ಗೌರವ

Mumbai News Desk

ನವಿ ಮುಂಬೈ – ಪ್ರಮುಖ ಪೈಪ್ ಲೈನ್ ಕಾಮಗಾರಿಗಾಗಿ ಜುಲೈ 18 – 19ರಂದು 18 ಗಂಟೆಗಳ ಕಾಲ ನೀರು ಸರಬರಾಜು ಕಡಿತ

Mumbai News Desk

ಮುಂಬೈ: ಶಾಲಾ ಬಸ್ ಮೇಲೆ ಬೃಹತ್ ಮರ ಕುಸಿತ: ಒಬ್ಬ ವಿದ್ಯಾರ್ಥಿ ದುರ್ಮರಣ, 10 ಮಕ್ಕಳಿಗೆ ಗಾಯ

Mumbai News Desk

ಪಂಚರಾಜ್ಯ ವಿಧಾನಸಭಾ ಚುನಾವಣೆ 2026: ಐತಿಹಾಸಿಕ ಫಲಿತಾಂಶ ಮತ್ತು ರಾಜಕೀಯ ವಿಶ್ಲೇಷಣೆ

Mumbai News Desk