ಚಿನ್ನ, ವಜ್ರದ ಆಭರಣಗಳು, ವೈವಿಧ್ಯಮಯ ಸೀರೆಗಳು ಹಾಗೂ ಆಕರ್ಷಕ ಗೃಹೋಪಯೋಗಿ ವಸ್ತುಗಳ ಮಾರಾಟ.
ಮುಂಬಯಿ: ಕನ್ನಡ ಸಂಘ ಸಯನ್ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ TDFನ ಚಿನ್ನ ಮತ್ತು ವಜ್ರದ ಆಭರಣಗಳು ಹಾಗೂ ವಿವಿಧ ಬಗೆಯ ಸೀರೆಗಳ ಮಾರಾಟ ಮೇಳ ಮತ್ತು ಪ್ರದರ್ಶನವು ಅಕ್ಟೋಬರ್ 25ರಂದು ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಸ್ವಾಮಿ ನಿತ್ಯಾನಂದ ಹಾಲ್, ಪ್ಲಾಟ್ ನಂ. 6, ರಸ್ತೆ ನಂ. 24, ಸ್ವಾಮಿ ವಲ್ಲಭದಾಸ್ ರಸ್ತೆ, ಸಯನ್ ಇಲ್ಲಿ ನಡೆಯಲಿದೆ.
ಈ ಮೇಳದಲ್ಲಿ ಕಾಂಚೀವರಂ ಸೀರೆಗಳು, ದಕ್ಷಿಣ ಭಾರತದ ಕಾಟನ್ (ಹತ್ತಿ) ಸೀರೆಗಳು, ಪೈಠಣಿ ರೇಷ್ಮೆ ಸೀರೆಗಳು, ಬಾಂದಿನಿ ಸೀರೆಗಳು, ಕಾಟನ್ ಮತ್ತು ರೇಷ್ಮೆ ಸೀರೆಗಳು, ಕೈಮಗ್ಗದ ಸೀರೆಗಳು, ಕುರ್ತಿಗಳು, ಬೆಡ್ಶೀಟ್ಗಳು, ಟವೆಲ್ಗಳು, ಕೃತಕ ಆಭರಣಗಳು (ಆರ್ಟಿಫಿಶಿಯಲ್ ಜ್ಯುವೆಲ್ಲರಿ), ಉಡುಪುಗಳು, ಫ್ಯಾಷನ್ ಉತ್ಪನ್ನಗಳು, ಖಾದ್ಯ ಪದಾರ್ಥಗಳು, ಆಟಿಕೆಗಳು ಹಾಗೂ ಇನ್ನೂ ಅನೇಕ ವಸ್ತುಗಳು ಲಭ್ಯವಿರಲಿವೆ.
ಇದರೊಂದಿಗೆ TDFನ ಚಿನ್ನ ಮತ್ತು ವಜ್ರದ ಆಭರಣಗಳು,
ಆಗುಂಬೆಯ ಗಿಡಮೂಲಿಕೆಗಳು ಸ್ವಾಸ್ಥ್ಯ ಉತ್ಪನ್ನಗಳು ಔಷಧಿಗಳು
ಡಾ. ರಂಜನ್ ಶೇಣವ ನೀಡಲಿದ್ದಾರೆ. ಮಂಗಳೂರು ಸ್ಟೋರಿನ ಎಲ್ಲಾ ವಸ್ತುಗಳು ಮಾರಾಟಕ್ಕಿದೆ.
ಸ್ಥಳೀಯ ಪ್ರತಿಭೆಗಳು ಹಾಗೂ ಮನೆಯಲ್ಲಿ ತಯಾರಿಸಿದ ಉತ್ಪನ್ನಗಳ ಮಾರಾಟವೂ ನಡೆಯಲಿದೆ.
ದೀಪಾವಳಿ ಹಬ್ಬದ ಸಂಭ್ರಮಕ್ಕೆ ಮೆರುಗು ನೀಡುವ ಈ ಮಾರಾಟ ಮೇಳದಲ್ಲಿ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕಾರ ನೀಡಬೇಕೆಂದು ಸಂಘದ ಗೌರವ ಅಧ್ಯಕ್ಷ ಜಯರಾಮ್ ಶೆಟ್ಟಿ, ಅಧ್ಯಕ್ಷರಾದ ಡಾ. ಎಂ.ಜೆ. ಪ್ರವೀಣ್ ಭಟ್, ಸಂಸ್ಥಾಪಕರಾದ ಹ್ಯಾರಿ ಸಿಕ್ವೀರ, ಕಾರ್ಯದರ್ಶಿ ದಯಾನಂದ, ಇತರ ಪದಾಧಿಕಾರಿಗಳು ಹಾಗೂ ಮಹಿಳಾ ವಿಭಾಗದ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಹ್ಯಾರಿ ಸಿಕ್ವೀರ, 9820582580
ದಯಾನಂದ ಮೂಲ್ಯ – 8369487771
ಉಮೇಶ್ ಶೆಟ್ಟಿ – 9987965537



