November 4, 2026
Mumbai News Kannada
ತುಳುನಾಡು

ಕಾಪು ಜೇಸಿಐಗೆ ವಲಯ ಮಟ್ಟದ ‘ಅತ್ಯುತ್ತಮ ಘಟಕ’ ಪ್ರಶಸ್ತಿ



ಕಾಪು: ಇಲ್ಲಿನ ಪರಿಸರದಲ್ಲಿ ನಿರಂತರ ಸಮಾಜಮುಖಿ ಹಾಗೂ ಸೇವಾ ಚಟುವಟಿಕೆಗಳ ಮೂಲಕ ಗಮನಸೆಳೆದಿರುವ ಕಾಪು ಜೇಸಿಐ ಸಂಸ್ಥೆಗೆ 2026ನೇ ಸಾಲಿನ ವಲಯ 15ರ ‘ಅತ್ಯುತ್ತಮ ಘಟಕ’ ಪ್ರಶಸ್ತಿ ಲಭಿಸಿದೆ.

ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ಅಕ್ಟೋಬರ್ 31 ಮತ್ತು ನವೆಂಬರ್ 1ರಂದು ಆಯೋಜಿಸಲಾಗಿದ್ದ ‘ಆರ್ಯ’ ವಲಯ ಸಮ್ಮೇಳನದಲ್ಲಿ, ವಲಯಾಧ್ಯಕ್ಷ ಸಂತೋಷ್‌ ಶೆಟ್ಟಿ ಅವರು ಕಾಪು ಜೇಸಿಐ ಘಟಕಕ್ಕೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

2026ನೇ ಸಾಲಿನ ಘಟಕಾಧ್ಯಕ್ಷ ವಿಕ್ಕಿ ಪೂಜಾರಿ ಮಡುಂಬು ಅವರ ನಾಯಕತ್ವದಲ್ಲಿ ವಲಯ ಹಾಗೂ ರಾಷ್ಟ್ರೀಯ ಮಟ್ಟದ ನಿರ್ದೇಶಿತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಇದರೊಂದಿಗೆ ನಿರಂತರ ಸಮಾಜಮುಖಿ ಸೇವಾ ಚಟುವಟಿಕೆಗಳು, ತರಬೇತಿ ಶಿಬಿರಗಳು ಮತ್ತು ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಸಂಘಟಿಸಿರುವುದನ್ನು ಗುರುತಿಸಿ ಈ ಗೌರವ ನೀಡಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಲಯ ಉಪಾಧ್ಯಕ್ಷ ಅರುಣ್ ಮಾಂಜ, ಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರು, ಪೂರ್ವ ವಲಯ ಉಪಾಧ್ಯಕ್ಷೆ ಸೌಮ್ಯ ರಾಕೇಶ್, ಕಾಪು ಜೇಸಿಐ ಘಟಕಾಧ್ಯಕ್ಷ ವಿಕ್ಕಿ ಪೂಜಾರಿ ಮಡುಂಬು, ಕಾರ್ಯದರ್ಶಿ ಶ್ರುತಿ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷೆ ಅನಿತಾ ಹೆಗ್ಡೆ, ಪೂರ್ವಾಧ್ಯಕ್ಷರಾದ ಸುಧಾಕರ್ ಸಾಲ್ಯಾನ್, ಜಗದೀಶ್ ಬಂಗೇರ, ರಮೇಶ್ ನಾಯ್ಕ್, ಸುಖಲಾಕ್ಷಿ ಬಂಗೇರ, ಜೇಸಿಐ ಉಡುಪಿ ಶಿವಳ್ಳಿ ಘಟಕದ ಅಧ್ಯಕ್ಷ ವಿನೋದ್‌ ಶೆಟ್ಟಿ ಹಾಗೂ ಘಟಕದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.



Related posts

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ

Mumbai News Desk

ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕ: 2027ರ ಫೆಬ್ರವರಿ 18 ರಿಂದ 28ರ ವರೆಗೆ ದಿನಾಂಕ ನಿಗದಿ; ಸಮಿತಿ ಕಚೇರಿ ಉದ್ಘಾಟನೆ

Mumbai News Desk

ಮುಲ್ಕಿ ವಿಜಯ ರೈತ ಸಂಘದ ಅಧ್ಯಕ್ಷರಾಗಿ ರಂಗನಾಥ ಶೆಟ್ಟಿ ಕಿಲ್ಪಾಡಿ ಬಂಡಸಲೆ ಆಯ್ಕೆ,

Mumbai News Desk

ಸಸಿಹಿತ್ಲು: ಶ್ರೀ ಭಗವತೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಧನ್ಯೋತ್ಸವ ಕಾರ್ಯಕ್ರಮ

Mumbai News Desk

ಮಂಡೇಡಿ ಶ್ರೀ ದೇವಿ ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿ  ಪ್ರಶಾಂತ್ ಶೆಟ್ಟಿ  ಮಂಡೇಡಿ ಆಯ್ಕೆ 

Mumbai News Desk

ಉಡುಪಿ : ಮನೆಯಲ್ಲಿ ಅಗ್ನಿ ಅವಘಡ, ಮನೆಯ ಯಜಮಾನ ಮೃತ್ಯು.

Mumbai News Desk