July 23, 2026
Mumbai News Kannada
ಸುದ್ದಿ

ಬೊಯಿಸರ್ : ಸದ್ಗುರು ಸ್ವಾಮಿ ನಿತ್ಯಾನಂದ ಮಂದಿರದಲ್ಲಿ  63 ನೇ ಪುಣ್ಯತಿಥಿ ಆಚರಣೆ.







   ಬೊಯಿಸರ್ : ತಾ.08 ಆಗಸ್ಟ್ 2024 ರಂದು ಬೊಯಿಸರ್ ಪಶ್ಚಿಮದಲ್ಲಿಯ ನಾವಾಪುರ ರೋಡ್ ನ    ಪ್ರಸಿದ್ಧ ಸದ್ಗುರು ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಅವಧೂತ ಶ್ರೀ ನಿತ್ಯಾನಂದ ಸ್ವಾಮೀಜಿಯವರ 63ನೇ ಪುಣ್ಯತಿಥಿಯನ್ನು ಆಚರಿಸಲಾಯಿತು.

ಪ್ರಾತಃಕಾಲ 6 ಗಂಟೆಗೆ ಗಣಹೋಮವನ್ನು ಶ್ರೀಮತಿ ಪದ್ಮಾವತೀ ಮತ್ತು ಸತ್ಯಾ ಕೋಟ್ಯಾನ್ ನೆರವೇರಿಸಿದರು. ಬಳಿಕ 7 ಕ್ಕೆ ಪಂಚಾಮೃತ ಕಲಶ ಅಭಿಷೇಕ   ಹಾಗೂ  ಭಕ್ತಾಭಿಮಾನಿಗಳಿಂದ ಸೀಯಾಳಾಭಿಷೇಕ ಕಾರ್ಯಕ್ರಮ ಜರಗಿತು.

           9.30 ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯು ಜರಗಿತು. ಮಂದಿರದ ವಿಶ್ವಸ್ಥ ಮಂಡಳಿಯ ಶ್ರೀನಿವಾಸ್ ಕೋಟ್ಯಾನ್ ” 13 ವರ್ಷಗಳ ಹಿಂದೆ ಸ್ಥಾಪನೆ ಆಗಿ ಲೋಕಾರ್ಪಣೆಗೊಂಡ ಬಳಿಕ ಶೃದ್ಧಾಳು ಭಕ್ತಾದಿಗಳ ಸತತ ಧಾರ್ಮಿಕ ಚಟುವಟಿಕೆಗಳಿಂದ ಈ ಮಂದಿರದ ಸ್ಥಳಕ್ಕೊಂದು ಪವಿತ್ರ ಕ್ಷೇತ್ರದ ಕಳೆ ಬಂದಿದೆ. ಪರಮಪೂಜ್ಯ ಸ್ವಾಮಿ  ನಿತ್ಯಾನಂದರ 63 ನೆಯ ಪುಣ್ಯತಿಥಿಯ ಸಂದರ್ಭದಲ್ಲಿ ಮಂದಿರದ ಸರ್ವತೋಮುಖ ಅಭಿವೃದ್ಧಿ ಹಾಗೂ ಸರ್ವಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಪವಿತ್ರ ಶ್ರಾವಣ ಮಾಸದಲ್ಲಿ ಜರಗಿದ ಈ ಸಾಮೂಹಿಕ ಸತ್ಯನಾರಾಯಣ ಮಹಾಪೂಜೆಯು ಸರ್ವಮಂಗಳವನ್ನುಂಟು ಮಾಡಲಿ ” ಎಂದು ನುಡಿದು ಭಕ್ತಾಭಿಮಾನಿಗಳ ಪರವಾಗಿ ಪ್ರಾರ್ಥನೆ ಸಲ್ಲಿಸಿದರು. ಧಾರ್ಮಿಕ    ವಿಧಿ ವಿಧಾನಗಳನ್ನು ಹರೀಶ್ ಶಾಂತಿ ಹೆಜಮಾಡಿ ಮತ್ತು ರಾಜೇಶ್ ಶಾಂತಿ ಇವರು ಜರಗಿಸಿದರು. 

  ಈ ಕಾರ್ಯಕ್ರಮದಲ್ಲಿ ವಿಶ್ವಸ್ಥ ಮಂಡಳಿಯ ಸದಸ್ಯರು , ಸ್ಥಳೀಯ ಹಾಗೂ ವಿವಿಧ ಊರುಗಳಿಂದ ಆಗಮಿಸಿದ ಉದ್ಯಮಿಗಳು , ವಿವಿಧ ಸಂಸ್ಥೆಯ ಪದಾಧಿಕಾರಿಗಳು , ಸದ್ಗುರು ನಿತ್ಯಾನಂದ ಭಜನಾ ಮಂಡಳಿ ಮತ್ತು ಶ್ರೀ ಸ್ವಾಮಿ ನಿತ್ಯಾನಂದ ಭಕ್ತ ಮಂಡಳಿಯ ಸದಸ್ಯರು ಹಾಗೂ ತುಳು ಕನ್ನಡಿಗ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಉಸ್ತುವಾರಿಯಲ್ಲಿ ರಮಾನಂದ ಪೂಜಾರಿ ಮತ್ತು ಸೇವಾ ಬಳಗದ ಸದಸ್ಯರು ಸಹಕರಿಸಿದರು.

ಮದ್ಯಾಹ್ನದ ಮಹಾ ಮಂಗಳಾರತಿಯ ಬಳಿಕ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆಯು ಜರಗಿತು.

ಚಿತ್ರ ಹಾಗೂ ವರದಿ : ಪಿ.ಆರ್.ರವಿಶಂಕರ್ ಡಹಾಣೂ ರೋಡ್

8483980035



Related posts

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ,  ಡಿ.1 – ವಿಶ್ವನಾಥ ಯು. ಮಾಡಾ ನಿಧನಕ್ಕೆ ಶ್ರದ್ದಾಂಜಲಿ ಸಭೆ

Mumbai News Desk

ಶ್ರೀನಿವಾಸ ಜೋಕಟ್ಟೆ ಅವರಿಗೆ ‘ಎಡನೀರು ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ’ ಪ್ರದಾನ

Mumbai News Desk

ಮಹಾರಾಷ್ಟ್ರ ಬಂದ್! ತೆರಿಗೆ ಹೆಚ್ಚಳ ಖಂಡಿಸಿ ಜುಲೈ 14 ರಂದು ಭಾರತೀಯ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಸಂಘ (AHAR) ಮುಷ್ಕರಕ್ಕೆ ಕರೆ.

Mumbai News Desk

ಸನಾತನ ಧರ್ಮ ಬಲಿಷ್ಠಗೊಳಿಸೋಣ: ಹರಿನಾರಾಯಣದಾಸ ಅಸ್ರಣ್ಣ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ.ಮಹಾ ನಿರ್ದೇಶಕರಾಗಿ  ಉದ್ಯಮಿ, ಮೀರಾ ಭಯಂಧರ್ ನ್ ಮಾಜಿ ನಗರ ಸೇವಕ ಅರವಿಂದ್ ಆನಂದ್ ಶೆಟ್ಟಿ ಆಯ್ಕೆ,

Mumbai News Desk

ಮುಲ್ಕಿ ಬಪ್ಪನಾಡು ದುರ್ಗಾಪರಮೇಶ್ವರಿಯ ಸನ್ನಿಧಾನದಲ್ಲಿ ಮುಂಬಯಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರಿಗೆ ಮಾತೃ ಶ್ರೀ ಗೆ ನುಡಿ ನಮನ,

Mumbai News Desk