July 23, 2026
Mumbai News Kannada
ಮಹಾರಾಷ್ಟ್ರ

ಮುಂಬೈನಲ್ಲಿ ಟೋಲ್ ಇಲ್ಲ; ಮಹಾರಾಷ್ಟ್ರ ಸರ್ಕಾರದಿಂದ ಘೋಷಣೆ; ಲಕ್ಷಾಂತರ ವಾಹನ ಸವಾರರಿಗೆ ಅನುಕೂಲ







ಮಹಾರಾಷ್ಟ್ರದ ರಾಜಧಾನಿಯಾದ ವಾಣಿಜ್ಯ ನಗರಿ ಮುಂಬೈಗೆ ಹೋಗುವ ಕಾರುಗಳು ಇನ್ಮುಂದೆ ಟೋಲ್ ಕಟ್ಟಬೇಕಿಲ್ಲ. ಎಲ್ಲಾ ಹಗುರ ಮೋಟಾರು ವಾಹನಗಳಿಗೆ ಟೋಲ್​ನಿಂದ ವಿನಾಯಿತಿ ನೀಡಲಾಗುತ್ತಿದೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂದೆ ಘೋಷಿಸಿದ್ದಾರೆ. ರಾಜ್ಯ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಂದು ಮಧ್ಯ ರಾತ್ರಿಯಿಂದಲೇ ಈ ಕ್ರಮ ಜಾರಿಗೆ ಬರಲಿದೆ. ಮಹಾರಾಷ್ಟ್ರದಲ್ಲಿ ಮುಂದಿನ ತಿಂಗಳು ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಅದರ ಹೊಸ್ತಿಲಲ್ಲೇ ಸರ್ಕಾರ ತೆಗೆದುಕೊಂಡಿರುವ ಈ ಟೋಲ್ ವಿನಾಯಿತಿ ನಿರ್ಧಾರವನ್ನು ಎಲೆಕ್ಷನ್ ಗಿಮಿಕ್ ಎಂದು ವಿಪಕ್ಷಗಳು ಟೀಕಿಸಿವೆ.

ಮುಂಬೈ ನಗರವನ್ನು ಪ್ರವೇಶಿಸಲು ಇರುವ ಆರು ರಸ್ತೆಗಳಲ್ಲಿ ಟೋಲ್ ಬೂತ್​ಗಳಿವೆ. ದಹಿಸಾರ್, ಆನಂದ್ ನಗರ್, ವೈಶಾಲಿ, ಐರೋಲಿ ಮತ್ತು ಮುಲುಂದ್​ನಲ್ಲಿರುವ ಟೋಲ್​ಗಳಲ್ಲಿ ನಾಳೆಯಿಂದ ಲೈಟ್ ಮೋಟಾರು ವಾಹನಗಳು ಟೋಲ್ ಕಟ್ಟುವ ಅಗತ್ಯ ಇರುವುದಿಲ್ಲ. ಮುಕ್ತವಾಗಿ ಸಂಚರಿಸಬಹುದಾಗಿದೆ.

2002ರಿಂದಲೂ ಈ ಸ್ಥಳಗಳಲ್ಲಿರುವ ಟೋಲ್​ಗಳಲ್ಲಿ 45 ರೂನಿಂದ 75 ರೂವರೆಗೆ ಟೋಲ್ ವಸೂಲಿ ಮಾಡಲಾಗುತ್ತಿದೆ. 2026ರವರೆಗೂ ಈ ಟೋಲ್ ಜಾರಿಯಲ್ಲಿರುತ್ತದೆ. ಈಗ ಭಾರೀ ತೂಕದ ವಾಹನಗಳು ಮಾತ್ರವೇ ಟೋಲ್ ಕಟ್ಟಬೇಕಾಗುತ್ತದೆ. ಮುಂಬೈಗೆ ಸಾಗುವ ಈ ರಸ್ತೆಗಳಲ್ಲಿ ಒಟ್ಟು 3.5 ಲಕ್ಷ ವಾಹನಗಳು ಟೋಲ್ ಬಳಸುತ್ತವೆ. ಇವುಗಳಲ್ಲಿ 2.80 ಲಕ್ಷ ವಾಹನಗಳು ಎಲ್​ಎಂವಿಗಳಾಗಿವೆ.

ತಾಂತ್ರಿಕವಾಗಿ 3,500 ಕಿಲೋಗಿಂತ ಕಡಿಮೆ ತೂಕ ಇರುವ ವಾಹನಗಳನ್ನು ಹಗುರ ಮೋಟಾರು ವಾಹನಗಳೆಂದು ಪರಿಗಣಿಸಲಾಗುತ್ತದೆ. ಕಾರುಗಳಿಂದ ಹಿಡಿದು ಸಣ್ಣ ಟ್ರಕ್​ಗಳವರೆಗೆ ಎಲ್ಲಾ ರೀತಿಯ ವಾಹನಗಳು ಎಲ್​ಎಂವಿಗಳಾಗಿವೆ.

ಈ ಟೋಲ್ ಬೂತ್​ಗಳಲ್ಲಿ ವಾಹನಗಳು ಟೋಲ್ ಪಾವತಿಸಲು ಸರದಿಯಲ್ಲಿ ನಿಲ್ಲುತ್ತವೆ. ಕೆಲ ನಿಮಿಷಗಳ ವ್ಯಯವಾಗುತ್ತದೆ. ಈಗ ಟೋಲ್ ಅನ್ನೇ ರದ್ದು ಮಾಡಲಾಗಿರುವುದರಿಂದ ವಾಹನಗಳು ಅಡೆತಡೆಯಿಲ್ಲದೆ ಸಂಚರಿಸಬಹುದು.



Related posts

ಮಹಾರಾಷ್ಟ್ರ ಮತಾಂತರ ವಿರೋಧಿ ಕರಡು ಕಾನೂನು 2026ಕ್ಕೆ ಸಚಿವ ಸಂಪುಟದ ಅನುಮೋದನೆ: ತಪ್ಪಿತಸ್ಥರಿಗೆ 7 ವರ್ಷ ಜೈಲು ಮತ್ತು 5 ಲಕ್ಷ ರೂ. ದಂಡದ ಪ್ರಸ್ತಾಪ.

Mumbai News Desk

ಮಹಾರಾಷ್ಟ್ರದ 29 ಮಹಾನಗರ ಪಾಲಿಕೆಗಳ ಪೈಕಿ 25 ರಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟಕ್ಕೆ ಭರ್ಜರಿ ಗೆಲುವು

Mumbai News Desk

ಮಹಾರಾಷ್ಟ್ರ : ಹಲಾಲ್ ಪ್ರಾಮಾಣೀಕರಣವನ್ನು ನಿಷೇಧಿಸುವಂತೆ ಹಿಂದೂ ಜನಜಾಗೃತಿ ಸಮಿತಿಯ ಪ್ರಸ್ತಾವನೆ

Mumbai News Desk

ಶ್ರೀ ದುರ್ಗಾ ಕಾಳಿ ಮಂದಿರದಲ್ಲಿ ನವರಾತ್ರಿ ಉತ್ಸವ.

Chandrahas

ಮಹಾರಾಷ್ಟ್ರ : ವಿರಾರ್ ನಲ್ಲಿ ಕಟ್ಟಡ ಕುಸಿದು 5 ಸಾವು, 9 ಜನರಿಗೆ ಗಾಯ; ಬಿಲ್ಡರ್ ಬಂಧನ

Mumbai News Desk

ಮಹಾರಾಷ್ಟ್ರ : ನಗರ ಸಂಸ್ಥೆಗಳ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಮಹಾಯುತಿ

Mumbai News Desk