July 23, 2026
Mumbai News Kannada
ಸುದ್ದಿ

ಮೂಲತ್ವ ಫೌಂಡೇಶನ್ ಚಾರಿಟಬಲ್ ಟ್ರಸ್ಟ್ ಮಂಗಳೂರು ಇದರ ಆಶ್ರಯದಲ್ಲಿ ವೃತ್ತಿ ಮಾರ್ಗದರ್ಶನ ಶಿಬಿರ







ಮಂಗಳೂರು ಮೂಲತ್ವ ಫೌಂಡೇಶನ್ ಚಾರಿಟಬಲ್ ಟ್ರಸ್ಟ್ ವತಿಯಿಂದ 6 ನವೆಂಬರ್ 2024 ರಂದು ಮಣಿಪಾಲ್ ಶಾಲೆ, ಅತ್ತಾವರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಕೃತಕ ಬುದ್ಧಿಮತ್ತೆ (AI) ಉದ್ಯೋಗಾವಕಾಶಗಳ ಕುರಿತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಕ್ರತಕ ಬುದ್ದಿಮತ್ತೆ (AI ) ವೃತ್ತಿಯಲ್ಲಿ ಅಗತ್ಯವಿರುವ ಕೌಶಲ್ಯಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮೆಲುಕು ಹಾಕುವ ತಂತ್ರಗಳ ಕುರಿತು ಮಾಹಿತಿಯನ್ನು ನೀಡಲಾಯಿತು. ಇಂಟರಾಕ್ಟಿವ್ ಅಧಿವೇಶನಗಳ ಮೂಲಕ, ವಿದ್ಯಾರ್ಥಿಗಳು AI ಕ್ಷೇತ್ರದ ಅಭಿವೃದ್ಧಿ ಮತ್ತು ಅದರ ಉದ್ಯೋಗಾವಕಾಶಗಳ ಕುರಿತು ಅಮೂಲ್ಯ ಮಾರ್ಗದರ್ಶನವನ್ನು ಪಡೆದರು.

ಸಂಪನ್ಮೂಲ ವ್ಯಕ್ತಿಗಳಾಗಿ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಯಾದ ಅಕ್ಷತ ಕದ್ರಿ, ಲಕ್ಷ್ಮೀಶ ಪಿ ಕೋಟ್ಯಾನ್ ಮತ್ತು ಪ್ರಥಮ್ ರಾವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಪ್ರಾಂಶುಪಾಲರು, ಅಧ್ಯಾಪಕರು ಭಾಗಿಯಾಗಿದ್ದು, ಶಿಬಿರ ಯಶಸ್ವಿಯಾಗಿ ನಡೆಯಿತು ಎಂದು ಟ್ರಸ್ಟಿನ ಅಧ್ಯಕ್ಷರಾದ ಪ್ರಕಾಶ್ ಮೂಲತ್ವ ತಿಳಿಸಿದ್ದಾರೆ.



Related posts

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಸತೀಶ್ ಕುಂಪಲ ಆಯ್ಕೆ.

Mumbai News Desk

ಉಚಿತ ಗ್ಯಾರಂಟಿ ಸಂಸ್ಕೃತಿ ಮತ್ತು ದೇಶದ ಆರ್ಥಿಕತೆ: ಸುಪ್ರೀಂ ಕೋರ್ಟ್ ಎಚ್ಚರಿಕೆ

Mumbai News Desk

ಗಂಗಾಧರ್ ಜೆ ಪೂಜಾರಿಯವರ ಪಿತೃರಾದ ಜಾರಪ್ಪ ಪೂಜಾರಿಯವರಿಗೆ ಶ್ರದ್ಧಾಂಜಲಿ

Mumbai News Desk

ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ: ಮುಖ್ಯ ರೂವಾರಿ, ಪುಣೆಯ ರಸಾಯನಶಾಸ್ತ್ರ ಉಪನ್ಯಾಸಕ ಸಿಬಿಐ ವಶಕ್ಕೆ

Mumbai News Desk

ಸಂಘರ್ಷ ಪೀಡಿತ ಕೊಲ್ಲಿ ರಾಷ್ಟ್ರಗಳಲ್ಲಿನ ಭಾರತೀಯರ ಸುರಕ್ಷತೆಗೆ ಕ್ರಮ: ಸಚಿವ ಜೈಶಂಕರ್ ಭರವಸೆ

Mumbai News Desk

ಮುಂಬೈ : ಥಾಣೆಯಲ್ಲಿ ಪೈಪ್‌ಲೈನ್ ಸೋರಿಕೆ: ಏಪ್ರಿಲ್ 11 ರಿಂದ 24 ಗಂಟೆಗಳ ಕಾಲ ನೀರು ಸರಬರಾಜು ಸ್ಥಗಿತ

Mumbai News Desk