July 23, 2026
Mumbai News Kannada
ಪ್ರಕಟಣೆ

ನ.16 ರಂದು ಕರ್ನಾಟಕ ಸಂಘ, ಕಲ್ಯಾಣ ಕರ್ನಾಟಕ ರಾಜ್ಯೋತ್ಸವ ಆಚರಣೆ








ಕರ್ನಾಟಕ ಸಂಘ ಕಲ್ಯಾಣ ಸಂಘ ಸ್ಥಾಪನೆಯಾಗಿ 21 ವರ್ಷಗಳಿಂದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಂಘದ ವಾರ್ಷಿಕ ಕಾರ್ಯಕ್ರಮವಾಗಿ ವಿಜ್ರಂಭಣೆಯಿಂದ ಆಚರಿಸುತ್ತಿದ್ದು ಈ ವರ್ಷ 16 ನವೆಂಬರ್ ದಂದು ಸಂಜೆ 5ರಿಂದ ಕಲ್ಯಾಣ ಪಶ್ಚಿಮದ ಗಿರಿಜಾ ಪಯ್ಯಾಡೆ ಸಭಾಗ್ರಹದಲ್ಲಿ ಆಚರಿಸಲಾಗುವುದು.ಆ ಪ್ರಯುಕ್ತ ಲಯನ್ ಕರ್ನಲ್.ಪ್ರಕಾಶ್ ಪಾಂಡುರಂಗಿಯವರು ಮುಖ್ಯ ಅತಿಥಿಗಳಾಗಿ ಹಾಗೂ ನವಿ ಮುಂಬಯಿ ಕನ್ನಡ ಸಂಘದ ಚೇರ್ಮನ್ ಶ್ರೀ ಬಿ.ಎಚ್.ಕಟ್ಟಿಯವರು ಗೌರವ ಅತಿಥಿಗಳಾಗಿ ಆಗಮಿಲಿದ್ದಾರೆ.ಈ ಸಂದರ್ಭದಲ್ಲಿ ಸಮಾಜ ಸೇವಕ ಇಂಜಿನಿಯರ್ ಶ್ರೀ ಸತೀಶ್ ಅಲಗೂರ್ ಹಾಗೂ ಉದ್ಯಮಿ ಶ್ರೀ ಹರೀಶ್ ಪ್ರಭುರವರನ್ನು ಸನ್ಮಾನಿಸಲಾಗುವುದು. ರಾಜ್ಯೋತ್ಸವ ಕಾರ್ಯಕ್ರಮದ ಪ್ರಯುಕ್ತ 10 ನವೆಂಬರ್ ದಂದು ಸಂಜೆ 3ರಿಂದ ವಿವಿಧ ಸ್ಪರ್ಧೆಗಳನ್ನು ಸಂಘದ ಕಾರ್ಯಲಯದಲ್ಲಿ ಏರ್ಪಡಿಸಲಾಯಿತು. ನವೆಂಬರ್ 16ರ ರಾಜ್ಯೋತ್ಸವ ಕಾರ್ಯಕ್ರಮವು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪ್ರಾರಂಭವಾಗಲಿದ್ದು ಸಭಾ ಕಾರ್ಯಕ್ರಮಗಳ ಜೊತೆಗೆ ಸಂಘದ “ಸ್ಮರಣ ಸಂಚಿಕೆ 2024″ಯನ್ನು ಬಿಡುಗಡೆ ಮಾಡಲಾಗುವುದು.ಕಲ್ಯಾಣ ಪರಿಸರದ ಹಾಗೂ ಎಲ್ಲಾ ಕನ್ನಡ ಅಭಿಮಾನಿಗಳು ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡಬೇಕೆಂದು ಕಾರ್ಯಕ್ರಮ ಕಮಿಟಿ ಚೇರ್ಮನ್, ಶ್ರೀ ಭಾಸ್ಕರ ಶೆಟ್ಟಿಯವರು ಹಾಗೂ ಸಂಘದ ಅಧ್ಯಕ್ಷ ಶ್ರೀ ಕೆ.ಎನ್.ಸತೀಶರು ವಿನಂತಿಸಿಕೊಂಡಿದ್ದಾರೆ.



Related posts

ಮೊಗವೀರ ಪ್ರೀಮಿಯರ್ ಲೀಗ್ (ಎಂಪಿಎಲ್) ಕ್ರಿಕೆಟ್ ಟೂರ್ನಮೆಂಟ್ – 2026ಕ್ಕೆ ಆಹ್ವಾನ

Mumbai News Desk

ಎ. 14 ರಂದು ಗೋರೆಗಾಂವ್ ಕರ್ನಾಟಕ ಸಂಘದ ತುಳು ಪರ್ಬ ದತ್ತಿ ನಿಧಿ ಕಾರ್ಯಕ್ರಮ  

Mumbai News Desk

ಶ್ರೀ ಶನೇಶ್ವರ ಚಾಮುಂಡೇಶ್ವರಿ ಅಯ್ಯಪ್ಪ ಭಕ್ತವೃಂದ ಫೌಂಡೇಶನ್ ಸಾಯನ್ – ಕೋಲಿವಾಡ, ಡಿ  25.ರಂದು 21ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಗುರುವಂದನೆ.

Mumbai News Desk

ಏ. 12 ರಿಂದ 21 ರ ವರಗೆ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ 62 ನೇ ವಾರ್ಷಿಕ ಮಹೋತ್ಸವ

Mumbai News Desk

ದಹಿಸರ್ ಪೂರ್ವ. ರಾವಲ್ಪಾಡ   ಶ್ರೀ ದುರ್ಗಾಪರಮೇಶ್ವರಿ -ಶನೀಶ್ವರ ದೇವಸ್ಥಾನ, ಜೂ 6 ರಂದು ಶ್ರೀ ಶನಿ ಜಯಂತಿ ಆಚರಣೆ.

Mumbai News Desk

ಮಕರ ಜ್ಯೋತಿ ಫೌಂಡೇಶನ್ ಸಾಯನ್ ಕೋಲಿವಾಡ : ಅಗಸ್ಟ್ 23 ರಂದು ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಮತ್ತು ಹಳದಿ ಕುಂಕುಮ

Mumbai News Desk