29 C
Mumbai
August 22, 2026
Mumbai News Kannada
ಪ್ರಕಟಣೆ

ಡೊಂಬಿವಲಿಯಲ್ಲಿ ಜುಲೈ 19ರಂದು ‘ಚಕ್ರವ್ಯೂಹ’ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ






​ಡೊಂಬಿವಲಿ: ಇಲ್ಲಿನ ಜಗಜ್ಯೋತಿ ಕಲಾವೃಂದ (ರಿ.) ಇದರ ಆಶ್ರಯದಲ್ಲಿ ಹಾಗೂ ಅಜೇಕಾರು ಕಲಾಭಿಮಾನಿ ಬಳಗ (ರಿ.) ದ ಸಂಯೋಜನೆಯಲ್ಲಿ ಬರುವ ಜುಲೈ 19ರಂದು ಭಾನುವಾರ ಅಪರಾಹ್ನ 4:00 ಗಂಟೆಗೆ ಡೊಂಬಿವಲಿ ಪಶ್ಚಿಮದ ಎಮ್. ಜಿ. ರೋಡ್‌ನಲ್ಲಿರುವ ರೈಲ್ವೆ ನಿಲ್ದಾಣದ ಬಳಿಯ ‘ಪ್ರೀತಿ ಬ್ಯಾಂಕ್ವೆಟ್ ಹಾಲ್’ನ (2ನೇ ಮಹಡಿ) ಸಭಾಂಗಣದಲ್ಲಿ ‘ಚಕ್ರವ್ಯೂಹ’ ಎಂಬ ಭವ್ಯ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.


​ಹಿಮ್ಮೇಳ ಮತ್ತು ಮುಮ್ಮೇಳದ ಪ್ರಸಿದ್ಧ ಕಲಾವಿದರು:
ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕರಾವಳಿಯ ಪ್ರಸಿದ್ಧ ಯಕ್ಷಗಾನ ಕಲಾವಿದರು ಭಾಗವಹಿಸಲಿದ್ದಾರೆ. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಚಿನ್ಮಯ ಭಟ್ ಕಲ್ಲಡ್ಕ, ಚಂಡೆಯಲ್ಲಿ ಶ್ರೀ ಪ್ರಶಾಂತ್‌ ಶೆಟ್ಟಿ ವಗೇನಾಡು ಹಾಗೂ ಮದ್ದಳೆಯಲ್ಲಿ ಶ್ರೀ ಕೌಶಲ್‌ ರಾವ್‌ ಪುತ್ತಿಗೆ ಅವರು ಸಹಕರಿಸಲಿದ್ದಾರೆ.
​ಇನ್ನು ಮುಮ್ಮೇಳದ ಅರ್ಥದಾರಿಗಳಾಗಿ ಪ್ರಸಿದ್ಧ ವಾಕ್ಪಟುಗಳಾದ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಹರೀಶ್ ಭಟ್ ಬಳಂತಿಮೊಗರು, ಅವಿನಾಶ್ ಶೆಟ್ಟಿ ಉಬರಡ್ಕ, ಪ್ರಸಾದ್ ಸವಣೂರು ಮತ್ತು ಸುನಿಲ್ ಹೊಲಾಡು ಅವರು ಭಾಗವಹಿಸಿ ಕಥಾ ಪ್ರಸಂಗವನ್ನು ರಂಜಿಸಲಿದ್ದಾರೆ.


​ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಜಗಜ್ಯೋತಿ ಕಲಾವೃಂದದ ಅಧ್ಯಕ್ಷರು, ಕಾರ್ಯಕಾರಿ ಸಮಿತಿ, ಸಲಹೆಗಾರರು ಹಾಗೂ ಸರ್ವಸದಸ್ಯರು ಪ್ರಕಟಣೆಯಲ್ಲಿ ಹಾರ್ದಿಕವಾಗಿ ಸ್ವಾಗತ ಕೋರಿದ್ದಾರೆ.



Related posts

ಶ್ರೀ ಮದ್ಭಾರತ ಮಂಡಳಿ ಮುಂಬೈ : ಜೂನ್ 20ರಿಂದ 149ನೇ ಪುಣ್ಯ ಗ್ರಂಥ ಪಾರಾಯಣ ಪ್ರಾರಂಭ

Mumbai News Desk

ಜೋಗೇಶ್ವರಿಯ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದಲ್ಲಿ ಆಗಸ್ಟ್ 17ರಂದು ನಾಗರಪಂಚಮಿ ಮಹೋತ್ಸವ

Mumbai News Desk

ಪೌರಾಣಿಕ ವಾಚಕ ಸಮಿತಿ ಮುಂಬಯಿ : ಫೆ. 28ಕ್ಕೆ 50ನೇ ವಾರ್ಷಿಕ ಶನಿ ಮಹಾಪೂಜೆ, ಮಾ.1ರಂದು ಸುವರ್ಣ ಮಹೋತ್ಸವ ಆಚರಣೆ

Mumbai News Desk

ಡಿ.24 ಕ್ಕೆ ಶ್ರೀ ಅಯ್ಯಪ್ಪ ಭಕ್ತ ಮಂಡಳಿ ಮೀರಾ ,ಭಾರತಿ ಪಾರ್ಕ್ ಮೀರಾರೋಡ್, 27ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ.

Mumbai News Desk

ಶ್ರೀ ಶಾಂತ ದುರ್ಗಾ ದೇವಿ ದೇವಸ್ಥಾನ ಗೋರೆಗಾಂವ್, ಬ್ರಹ್ಮಕಲಶೋತ್ಸವ. ಡಿ.10 ರಂದು  ನೂತನ ಬಿಂಬದ ವೈಭವೋಪೇತ ಮೆರವಣಿಗೆ.

Mumbai News Desk

ಕರ್ನಾಟಕ ಸಂಘ ಡೊಂಬಿವಲಿ ವತಿಯಿಂದ ನಾಡಹಬ್ಬ ಸಂಭ್ರಮಕ್ಕೆ ಅದ್ಧೂರಿ ಸಿದ್ಧತೆ: ನ. 9ರಂದು ಸಮೂಹ ಗಾಯನ, ನೃತ್ಯ ವೈಭವ ಮತ್ತು ಹಾಸ್ಯ ಕವಿಗೋಷ್ಠಿ

Mumbai News Desk