30.9 C
Mumbai
June 8, 2026
Mumbai News Kannada
ಪ್ರಕಟಣೆ

ಎ. 11, ವಿದ್ಯಾದಾಯಿನಿ ಸಭಾ ಮುಂಬಯಿ ಮತ್ತು ತುಳು ಧಾರ್ಮಿಕ ಸಂಶೋಧನಾ ಕೇಂದ್ರ ಪೇರೂರು ಇದರ ಜಂಟಿ ಆಯೋಜಕತ್ವದಲ್ಲಿ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲಾ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ.





ಮುಂಬಯಿ, ಎ 2: ಪೇರೂರು ತುಳು ಧಾರ್ಮಿಕ ಸಂಶೋಧನಾ ಕೇಂದ್ರದ ವತಿಯಿಂದ ಪ್ರತೀ ವರ್ಷ (ದಿವಂಗತರಾದ ಪೇರೂರು ರುಕ್ಕು ಪೂಜಾರ್ದಿ, ಪೇರೂರು ಬಾಗಿ ಪೂಜಾರ್ದಿ, ಪೇರೂರು ಲೆಚ್ಚು ಪೂಜಾರ್ದಿ ಸ್ಮರಣಾರ್ಥ) ಕೊಡಮಾಡುವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರಧಾನ ಸಮಾರಂಭವು ಪ್ರಸ್ತುತ ವರ್ಷದಲ್ಲಿ ವಿದ್ಯಾದಾಯಿನಿ ಸಭಾ ಮುಂಬಯಿ ಇದರ ಜಂಟಿ ಆಯೋಜಕತ್ವದಲ್ಲಿ ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲಾ ವಠಾರದಲ್ಲಿ (ನಗರಪಾಲಿಕಾ ಶಾಲೆ ಮನೋಹರ್ ದಾಸ್ (ಮೋದಿ) ಸ್ಟ್ರೀಟ್, ಜಿ.ಪಿ.ಒ ಎದುರು, ಫೋರ್ಟ್ ಮುಂಬಯಿ) ಶನಿವಾರ ಎ 11ರಂದು ಸಾಯಂಕಾಲ ಗಂಟೆ 6.30ರಿಂದ ಜರಗಲಿದೆ. ಈ ಸಂದರ್ಭದಲ್ಲಿ ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲಾ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಲಾಗುವುದು.

​ಪ್ರಸ್ತುತ ವರ್ಷದ ಪ್ರಶಸ್ತಿಯನ್ನು ಮರಾಠಿ ಕವಯಿತ್ರಿ, ಮುನ್ಸಿಪಲ್ ಟೀಚರ್ಸ್ ಕೋಪರೇಟಿವ್ ಬ್ಯಾಂಕಿನ ನಿರ್ದೇಶಕಿ ಹಾಗೂ ನಗರಪಾಲಿಕಾ ಶಾಲಾ ಶಿಕ್ಷಕಿ ಶೋಭಾ ಪ್ರವೀಣ್ ಗಾಯಕ್ವಾಡ್ ಹಾಗೂ ಕನ್ನಡ ಭವನ ಹೈಸ್ಕೂಲ್ ಮತ್ತು ಜ್ಯೂನಿಯರ್ ಕಾಲೇಜು ಶಿಕ್ಷಕಿ ಚಿತ್ರಲೇಖಾ ಆರ್. ಮಾಲಿಯವರಿಗೆ ನೀಡಲಾಗುವುದು.

​ವಿದ್ಯಾದಾಯಿನಿ ಸಭಾದ ಅಧ್ಯಕ್ಷ ಪುರುಷೋತ್ತಮ ಎಸ್. ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಹೇಶ್ ಗ್ರೂಪ್ ಆಫ್ ಹೋಟೇಲ್ಸಿನ ಮುಖ್ಯ ಆಡಳಿತ ನಿರ್ದೇಶಕಿ ಶಾರದಾ ಸೂರು ಕರ್ಕೇರ, ಕರ್ನಾಟಕ ಮಲ್ಲ ದಿನಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ, ತುಳು ಧಾರ್ಮಿಕ ಸಂಶೋಧನಾ ಕೇಂದ್ರ ಪೇರೂರು ಇದರ ಅಧ್ಯಕ್ಷ ಪೇರೂರು ಜಾರು, ಚೆಂಬೂರು ಕರ್ನಾಟಕ ಹೈಸ್ಕೂಲ್ ಶಿಕ್ಷಕಿ ವಿಜೇತ ಮಹೇಶ್ ಸುವರ್ಣ ಆಗಮಿಸಲಿರುವರು.

​ಈ ಕಾರ್ಯಕ್ರಮದಲ್ಲಿ ವಿದ್ಯಾದಾಯಿನಿ ಸಭಾದ ಹಿತಚಿಂತಕರು, ಸದಸ್ಯರು, ರಾತ್ರಿ ಶಾಲಾ ಹಳೆ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಪ್ರಿಯರು ಉಪಸ್ಥಿತರಿರಬೇಕಾಗಿ ವಿದ್ಯಾದಾಯಿನಿ ಸಭಾದ ಗೌರವಾಧ್ಯಕ್ಷ ಜೆ. ಎಮ್. ಕೋಟ್ಯಾನ್, ಉಪಾಧ್ಯಕ್ಷ ಆರ್. ಕೆ. ಕೋಟ್ಯಾನ್, ಕಾರ್ಯದರ್ಶಿ ಹರೀಶ್ ಶಾಂತಿ, ಕೋಶಾಧಿಕಾರಿ ಗೋಪಾಲ್ ಪೂಜಾರಿ, ಜೊತೆ ಕಾರ್ಯದರ್ಶಿ ಶರತ್ ಪೂಜಾರಿ, ಜೊತೆ ಕೋಶಾಧಿಕಾರಿ ಶ್ರೀಧರ್ ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಆರ್. ಕೋಟ್ಯಾನ್, ಶಾಲಾ ಉಸ್ತುವಾರಿ ಡಾ. ಪ್ರಕಾಶ್ ಮೂಡಬಿದಿರೆ, ಶಾಲಾ ಮುಖ್ಯೋಪಾಧ್ಯಾಯ ಪ್ರಕಾಶ್ಚಂದ್ರ ಎಮ್. ಆರ್. ಬಂಗೇರ ಹಾಗೂ ತುಳು ಧಾರ್ಮಿಕ ಸಂಶೋಧನಾ ಕೇಂದ್ರದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ಜ. 04ರಂದು “ಕುಂಭಕಲಾವಳಿ ಕುಲಾಲ ಕಲಾ ಸೇವಾಂಜಲಿ” ಕಾರ್ಯಕ್ರಮ: ಡಾ.ಎಂ. ಅಣ್ಣಯ್ಯ ಕುಲಾಲ್ ಅವರು “ವೈದ್ಯ ಸಿಂಧೂರ” ಪ್ರಶಸ್ತಿ

Mumbai News Desk

ಸಾಂತಾಕ್ರೂಸ್ :  ಶ್ರೀ ಮಂತ್ರ ದೇವಿ ದೇವಸ್ಥಾನದಲ್ಲಿ ಅ 3 ರಿಂದ 11 ವರೆಗೆ ನವರಾತ್ರಿ ಉತ್ಸವ.

Mumbai News Desk

ಕನ್ನಡ ಸಂಘ ಸಾಂತಾಕ್ರೂಜ್ : ಫೆ. 10 ರಂದು 66ನೇ ವಾರ್ಷಿಕೋತ್ಸವ;ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ವಿತರಣಾ ಸಮಾರಂಭ

Mumbai News Desk

ಶ್ರೀ ಗಜಾನನ ಬಿಲ್ಲವರ ಸೇವಾ ಸಂಘ ಪಡುತೋನ್ಸೆ, ಹೂಡೆ : ಎ. 18,19ರಂದು ವಾರ್ಷಿಕ ಭಜನಾ ಮಂಗಲೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

Mumbai News Desk

ಅ. 25, ತುಳು ವಲ್ ಫೇರ್  ಎಸೋಸಿಯೇಶನ್ ಡೊಂಬಿವಲಿ 27 ನೇ ವಾರ್ಷಿಕೋತ್ಸವ

Mumbai News Desk

ಶ್ರೀ ಮೂಕಾಂಬಿಕಾ ಶಾಂತದುರ್ಗಾ ಸೇವಾ ಸಮಿತಿ ಭಾಯಂದರ್ ಪೂರ್ವ : ಎ. 12ರಂದು ವಾರ್ಷಿಕ ಶ್ರೀ ಮಹಾದೇವಿ ಮಹಾಪೂಜೆ

Mumbai News Desk