May 3, 2026
Mumbai News Kannada
ಮುಂಬಯಿ

ಸಾಫಲ್ಯ ಸೇವಾ ಸಂಘ ಮುಂಬಯಿ(ರಿ) *ತ್ರೈಮಾಸಿಕ ಸಾಫಲ್ಯ *ದ* ಬೆಳಿಹಬ್ಬ ಸಾಫಲ್ಯ ರಜತ ಲಹರಿ ಮತ್ತು ವಿಶ್ವ ಮಹಿಳಾ ದಿನಾಚರಣೆ





ಮುಂಬೈ: ಸಮಾಜಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಾಫಲ್ಯ ಸೇವಾ ಸಂಘ (ರಿ) ಮುಂಬಯಿ ಇದರ ಮುಖವಾಣಿ ‘ಸಾಫಲ್ಯ’ ತ್ರೈಮಾಸಿಕದ ಬೆಳ್ಳಿ ಹಬ್ಬದ ಅಂಗವಾಗಿ “ಸಾಫಲ್ಯ ರಜತ ಲಹರಿ” ವಿಶೇಷ ಕಾರ್ಯಕ್ರಮವು ಮಾರ್ಚ್ 8 ರಂದು ಥಾಣೆ ಪಶ್ಚಿಮದ ಶುಭಂ ಕರೋತಿ ಸಭಾಗೃಹದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಸಾಪಲ್ಯರು ಮಾತನಾಡುತ್ತಾ
“ಸಪಳಿಗ ಸೇವಾ ಸಂಘಕ್ಕೆ 79 ವರ್ಷಗಳಾದಾಗ ಅದರ 75ನೇ ವರ್ಷದ ಪ್ಲಾಟಿನಂ ಜುಬಿಲಿಯನ್ನು ಹಾಗೂ ‘ಸಾಫಲ್ಯ’ ಪತ್ರಿಕೆಗೆ 29 ವರ್ಷಗಳಾದಾಗ ಅದರ 25ನೇ ವರ್ಷದ ಬೆಳ್ಳಿಹಬ್ಬವನ್ನು ಆಚರಿಸುವ ಅಪರೂಪದ ಸೌಭಾಗ್ಯ ನನ್ನ ಪಾಲಿಗೆ ಬಂದಿದೆ. ಇದು ನನ್ನ ಜೀವನದ ಸಾರ್ಥಕ ಕ್ಷಣಗಳಲ್ಲಿ ಒಂದು. ಸಾಫಲ್ಯ ಪತ್ರಿಕೆಯು ಅತ್ಯಂತ ಸಮರ್ಥ ಹಾಗೂ ಉತ್ತಮವಾದ ಸಂಪಾದಕ ಮಂಡಳಿಯನ್ನು ಹೊಂದಿರುವುದು ನಮ್ಮ ಸಂಘಕ್ಕೆ ಹೆಮ್ಮೆಯ ವಿಷಯ. ಇಂದು ನಮ್ಮ ಗೌರವವನ್ನು ಸ್ವೀಕರಿಸಿದ ಪತ್ರಿಕೆಯ ಮಾಜಿ ಸಂಪಾದಕರಿಗೂ ಮತ್ತು ವಿವಿಧ ಸಂಘ-ಸಂಸ್ಥೆಗಳ ಮುಖವಾಣಿಗಳ ಸಂಪಾದಕರಿಗೂ ನಮ್ಮ ನಮನಗಳು ಸಲ್ಲುತ್ತವೆ. ಒಂದು ಪತ್ರಿಕೆಯನ್ನು ಹೊರತರುವಲ್ಲಿ ಸಂಪಾದಕರ ಶ್ರಮ ಅಪಾರವಾದುದು. ಅವರ ಜವಾಬ್ದಾರಿ ಮತ್ತು ನಿರಂತರ ಪರಿಶ್ರಮವನ್ನು ಯಾವುದೇ ಅಳತೆಗೋಲಿನಿಂದ ಅಳೆಯಲು ಸಾಧ್ಯವಿಲ್ಲ. ಅದು ಅಷ್ಟು ಅಮೂಲ್ಯವಾದುದು. ಗಡಿಯಲ್ಲಿರುವ ಯೋಧನ ಪತ್ರಕ್ಕಾಗಿ ಆತನ ಕುಟುಂಬದವರು ಹೇಗೆ ಕಾತರದಿಂದ ಕಾಯುತ್ತಾರೋ, ಹಾಗೆಯೇ ಸಮಾಜದ ಬಾಂಧವರು ನಮ್ಮ ‘ಸಾಫಲ್ಯ’ ಪತ್ರಿಕೆಗಾಗಿ ಎದುರು ನೋಡುತ್ತಿರುತ್ತಾರೆ. ವಿಶೇಷವಾಗಿ ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಯೋಜನೆಗಳ ಬಗ್ಗೆ ತಿಳಿಯಲು ಜನರು ತೋರುವ ಆಸಕ್ತಿ ನಮಗೆ ಪ್ರೇರಣೆ ನೀಡುತ್ತದೆ.
29 ವರ್ಷಗಳ ಹಿಂದೆ ಡಾ. ವಾಮನ್ ಎಸ್.ಎಸ್. ಮತ್ತು ಅವರ ತಂಡ ಹಾಕಿಕೊಟ್ಟ ಭದ್ರಬುನಾದಿಯಿಂದಾಗಿ ಇಂದು ‘ಸಾಫಲ್ಯ’ ಮುಖವಾಣಿಯು ಹೆಮ್ಮರವಾಗಿ ಬೆಳೆದು ನಿಂತಿದೆ. ಈ ಪ್ರಗತಿಯನ್ನು ನೋಡಲು ತುಂಬ ಸಂತೋಷವಾಗುತ್ತಿದೆ.” ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉದಯವಾಣಿ ಮುಂಬಯಿ ಆವೃತ್ತಿಯ ಡೆಪ್ಯುಟಿ ಚೀಫ್ ಸಬ್ ಎಡಿಟರ್ ಡಾ. ದಿನೇಶ್ ಶೆಟ್ಟಿ ರೆಂಜಾಳ ಅವರು ಮಾತನಾಡಿ, ‘ವ್ಯಕ್ತಿ ಮತ್ತು ವ್ಯಕ್ತಿತ್ವ ಸಾಮಾಜಿಕ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಸಾಫಲ್ಯ ಸೇವಾ ಸಂಘದ ಅಧ್ಯಕ್ಷರಾಗಿರುವ
ಶ್ರೀನಿವಾಸ ಸಾಪಲ್ಯರ ವ್ಯಕ್ತಿತ್ವ ಆಕರ್ಷಣೀಯವಾದುದು. ವ್ಯಕ್ತಿಯಾಗಿ ಅವರು ಜ್ಞಾನವಂತರು, ಎಲ್ಲರಿಗೂ ಬೇಕಾದವರು. ಈ ಕಾರಣದಿಂದಲೇ ಅವರು ಪುತ್ತೂರಿನಲ್ಲಿ ಜರುಗಿದ ಗಾಣಿಗ ಸಂಭ್ರಮದಲ್ಲಿ ಪ್ರಧಾನ ಪಾತ್ರವನ್ನು ವಹಿಸುವಂತಾಯಿತು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಕಳೆದ ಹಲವು ವರ್ಷಗಳಿಂದ ‘ಸಾಫಲ್ಯ’ ತ್ರೈಮಾಸಿಕವು ಸಮಾಜಮುಖಿ ಲೇಖನಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸಮುದಾಯವನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ, ಈ ಸಂಸ್ಥೆಯ ಪ್ರಗತಿಯನ್ನು ಹಲವು ವರ್ಷಗಳಿಂದ ಬಲ್ಲವನಾಗಿದ್ದೇನೆ.
ಶ್ರೀನಿವಾಸ ಸಾಪಲ್ಯ ಅವರ ನಾಯಕತ್ವದಲ್ಲಿ ಸಂಘವು ಉನ್ನತೋನ್ನತ ಅಭಿವೃದ್ಧಿಯನ್ನು ಪಡೆದಿದೆ ‘ಎಂದು
ಅತಿಥಿಗಳಾಗಿ ಭಾಗವಹಿಸಿದ್ದ ‘ಮೊಗವೀರ’ ಕನ್ನಡ ಮಾಸಪತ್ರಿಕೆಯ ಸಂಪಾದಕರಾದ ಅಶೋಕ್ ಸುವರ್ಣ ಶ್ಲಾಘಿಸಿದರು. ‘ಸಂಗಮ’ ಕನ್ನಡ ತ್ರೈಮಾಸಿಕದ ಸಂಪಾದಕಿ ಲಲಿತಾ ಪ್ರಭು ಅಂಗಡಿ ಅವರು ‘ಸಾಫಲ್ಯ’ ಪತ್ರಿಕೆಯ ಸಾಧನೆಗಳನ್ನು ಕೊಂಡಾಡಿದರು.

ಈ ಸಂದರ್ಭದಲ್ಲಿ ‘ಸಾಫಲ್ಯ’ ಪತ್ರಿಕೆಯ ಸಂಸ್ಥಾಪಕರಾದ ಡಾ. ವಾಮನ್ ಎಸ್. ಪರವಾಗಿ ಅವರ ಧರ್ಮಪತ್ನಿ ಗೀತಾ ವಾಮನ್ ಸಪಳಿಗ ಅವರನ್ನು ಗೌರವಿಸಲಾಯಿತು.ಮಾಜಿ ಸಂಪಾದಕರಾದ ಶಿವರಾಮ್ ಸಾಲ್ಯಾನ್ ಅವರನ್ನು ಹಾಗೂ ನಗರದ ವಿವಿಧ ಕನ್ನಡ ಸಂಘ ಸಂಸ್ಥೆಗಳ ಮುಖವಾಣಿಯ ಸಂಪಾದಕರಾದ
ಡಾ ಈಶ್ವರ್ ಅಲೆವೂರು, ಶ್ರೀನಿವಾಸ ಜೋಕಟ್ಟೆಯವರ ಪರವಾಗಿ ಪ್ರೇಮಾ ರಾವ್, ,ಡಾ.ಶೈಲಜಾ ಹೆಗಡೆ, ಡಾ.ಜ್ಯೋತಿ ಸತೀಶ್, ಆನಂದ್ ಬಿ . ಮೂಲ್ಯ, ಸುಭಾಷ್ ಶಿರಿಯಾ, ಅಶೋಕ್ ಸುವರ್ಣ, ಲಲಿತಾ ಪ್ರಭು ಅಂಗಡಿ ಇವರುಗಳನ್ನು ರಜತಲಹರಿ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ‘ಸಾಫಲ್ಯ’ ತ್ರೈಮಾಸಿಕ ಪತ್ರಿಕೆಯ ಸಂಪಾದಕಿ ಡಾ. ಜಿ.ಪಿ ಕುಸುಮಾ ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಸಂಘದ ಗೌ.ಪ್ರ. ಕಾರ್ಯದರ್ಶಿ ಭಾಸ್ಕರ್ ಸಪಲಿಗ ಅವರು ಪತ್ರಿಕೆ ನಡೆದು ಬಂದ ದಾರಿಯನ್ನು ವಿವರಿಸಿದರು. ಪತ್ರಿಕೆಯ ಬೆಳ್ಳಿ ಹಬ್ಬದ ಪ್ರಯುಕ್ತ ‘ಸಾಫಲ್ಯ’ ತ್ರೈಮಾಸಿಕ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಅತಿಥಿಗಣ್ಯರೊಡಗೂಡಿ ಶ್ರೀ ಶ್ರೀನಿವಾಸ ಸಪಲ್ಯ ಅವರು ಬಿಡುಗಡೆ ಮಾಡಿದರು.
ಉಷಾ ಸಪಳಿಗ ಕಾರ್ಯಕ್ರಮವನ್ನು ನಿರೂಪಿಸಿದರು.
ಉಪಾಧ್ಯಕ್ಷರಾದ ಕೃಷ್ಣಕುಮಾರ್ ಬಂಗೇರ, ಜೀವನ್ ಶ್ರೀಯಾನ್ ಮಹಿಳಾ ವಿಭಾಗದ ಅಧ್ಯಕ್ಷೆ ಲಕ್ಷ್ಮಿ ಮೆಂಡನ್ , ಕೋಶಾಧಿಕಾರಿ ಹೇಮಂತ್ ಸಪಳಿಗ ಯುವ ವಿಭಾಗದ ಅಧ್ಯಕ್ಷೆ ಸಂಧ್ಯಾ ಪುತ್ರನ್ ಉಪಸ್ಥಿತರಿದ್ದರು. ಶೋಭಾ ಬಂಗೇರ, ಅನುಸೂಯ ಸೋಮೇಶ್ವರ, ಲೋಲಾಕ್ಷಿ ಬಂಗೇರ,ಪ್ರತಿಭಾ ಸಪಳಿಗ, ಪದ್ಮಿನಿ ಬಂಗೇರ ಪ್ರಾರ್ಥನೆಗೈದರು.

ವಾಣಿ ರಘುನಾಥ್, ಕುಸುಮ ಪ್ರಮೋದ್,ಅನುಸೂಯ ಸೋಮೇಶ್ವರ, ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಕಲಾ ಬಂಗೇರ ಸನ್ಮಾನ ಪತ್ರ ವಾಚಿಸಿದರು.

ಕಾರ್ಯಕಾರಿ ಸಮಿತಿ ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಸದಸ್ಯರುಗಳ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.



Related posts

ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯಿಂದ ಕಮಲಾದೇವಿ ಪ್ರಸಾದ್ ಆಸ್ರಣ್ಣ ಮತ್ತು ಹರಿನಾರಾಯಣ ಅಸ್ರಣ್ಣರಿಗೆ ಗೌರವಾರ್ಪಣೆ

Mumbai News Desk

ಅಂಧೇರೀ ಪಶ್ಚಿಮದ ಶ್ರೀ ಲಕ್ಷ್ಮಿ ನಾರಾಯಣ ಮಂದಿರದಲ್ಲಿ ಗೋವಿಂದ ಪುತ್ರನ್ ಒಡೆಯರಬೆಟ್ಟು ಆಯೋಜನೆಯಲ್ಲಿ ಕುಳಿತು ಹಾಗೂ ಕುಣಿತ ಭಜನೆ ಸ್ಪರ್ಧೆ .

Mumbai News Desk

ಮುಂಬೈ ಮುಂದುವರಿದ ಮಳೆ : ಇಂದು ರೆಡ್ ಅಲರ್ಟ್ ಘೋಷಣೆ; ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳು, ಶಾಲೆಗಳು, ಕಾಲೇಜುಗಳು, ಖಾಸಗಿ ಕಚೇರಿಗಳಿಗೆ ರಜೆ, ಹಲವಾರು ವಿಮಾನಗಳು ವಿಳಂಬ, ಸ್ಥಳೀಯ ರೈಲು ಸೇವೆಗಳು ವ್ಯತ್ಯಯ

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ, ಮುಂಬಯಿ: ನೂತನ ಗೌರವಾಧ್ಯಕ್ಷರಾಗಿ ಮಂಜುನಾಥ್ ಎ. ಬಿಲ್ಲವ ಆಯ್ಕೆ

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ, ನೂತನ ಪದಾಧಿಕಾರಿಗಳ ಆಯ್ಕೆ. ಗೌ.ಅಧ್ಯಕ್ಷರಾಗಿ ಸುರೇಶ್ ಪೂಜಾರಿ, ಅಧ್ಯಕ್ಷರಾಗಿ ಸಿ.ಎ. ಪೂಜಾರಿ ಅಯ್ಕೆ

Mumbai News Desk

ಥಾಣೆ ಶ್ರೀ ಮಂತ್ರದೇವತೆ ಸನ್ನಿಧಿಯಲ್ಲಿ 4ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ,

Mumbai News Desk