29 C
Mumbai
October 5, 2026
Mumbai News Kannada
ಮುಂಬಯಿ

ಮೆಹತಾ ಮಹಾವಿದ್ಯಾಲಯ ಐರೋಲಿ: ಸ್ವಾತಂತ್ರೋತ್ಸವದ ಸಂಭ್ರಮ, ವಿದ್ಯಾರ್ಥಿಗಳು ಭಾರತೀಯ ಪರಂಪರೆ ಅರಿಯಲು ವಿ. ಎನ್ ಹೆಗಡೆ ಕರೆ



ಮೆಹತಾ ಮಹಾವಿದ್ಯಾಲಯ ಐರೋಲಿ ಯಲ್ಲಿ 80ನೆಯ ಸ್ವಾತಂತ್ರೋತ್ಸವ ವನ್ನು ಸಂಭ್ರಮದಿಂದ ಆಚರಿಸಲಾಯಿತು. NSS ವಿದ್ಯಾರ್ಥಿಗಳ ಕವಾಯತು ,DLLE ವಿದ್ಯಾರ್ಥಿ ಗಳು ಮಾಡಿದ ಸೆಲ್ಫಿ ಪಾಯಿಂಟ್ ವಿಶೇಷ ಆಕರ್ಷಣೆ ಇಂದ ಎಲ್ಲರ ಗಮನ ಸೆಳೆದವು. ಧ್ವಜಾರೋಹಣ ವನ್ನು ಜ್ಞಾನ ವಿಕಾಸ ಮಂಡಳ ಮೆಹತಾ ಕಾಲೇಜಿನ ಅಧ್ಯಕ್ಷರಾದ ವಿ. ಏನ್ ಹೆಗಡೆ ಅವರು ನೆರವೇರಿಸಿದರು. ಸ್ವಾತಂತ್ರೋತ್ಸವದ ಅಂಗವಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ವಿ.ಎನ್.ಹೆಗಡೆ ಅವರು ವಿದ್ಯಾರ್ಥಿಗಳು ಭಾರತೀಯ ಪರಂಪರೆ ಅರಿತು ದೇಶಾಭಿಮಾನ ಹೊಂದಲು ಕರೆಯಿತ್ತರು.ಇತ್ತೀಚಿಗೆ ದೆಹಲಿಯ ಜಂತರ್ ಮಂತರ್ ದಲ್ಲಿ ಕೆಲವು ವ್ಯಕ್ತಿಗಳು ವಿದ್ಯಾರ್ಥಿಗಳ ವೇಷದಲ್ಲಿ ಮೋದಿಯವರ ಬಗ್ಗೆ ಕೀಳು ಭಾಷೆಯಲ್ಲಿ ಮಾತನಾಡಿದ್ದು ದೇಶದ ಅಸಂಖ್ಯಾತ ಪ್ರಜ್ಞಾವಂತ ಜನರ ಮನಸ್ಸಿಗೆ ನೋವಾಗಿದೆಯೆಂದು ಎಂದು ಹೇಳಿದರು. ದೇಶದ ಸಂಸ್ಕೃತಿ , ಅಭಿಮಾನ ಎಂದೆಂದಿಗೂ ಮರೆಯಬಾರದು ಎಂದು ತಿಳಿಸಿದರು. ಪಾಲಕರು ಸಾಮಾಜಿಕ ಹೊಣೆಗಾರಿಕೆ, ಸಂಸ್ಕೃತಿ , ಭಾರತೀಯತೆ ತಮ್ಮ ಮಕ್ಕಳಿಗೆ ತಿಳಿಹೇಳಿ ಸಂಸ್ಕೃತರನ್ನಾಗಿ ಮಾಡಬೇಕೆಂದು ಹೇಳಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಕಾರ್ಯಾಧ್ಯಕ್ಷ ಕೃಷ್ಣಾ ದೇಶಪಾಂಡೆ ಅವರು ಇಂದು ನಮ್ಮ ದೇಶದ ಅಭಿವೃದ್ಧಿ ಯುವಜನತೆಯ ಕೈಯಲ್ಲಿ ಇದೆಯೆಂದು ಹೇಳಿದರು, ವಿಶ್ವದಲ್ಲಿಯೇ ಹೆಚ್ಚಿನ ಯುವ ಜನತೆ ಭಾರತದಲ್ಲಿ ಇದೆ ದೇಶದ ಆರ್ಥಿಕ ವ್ಯವಸ್ಥೆ ಯುವಜನತೆಯ ಶ್ರಮದಮೇಲೆ ಆಧಾರವಾಗಿದೆಯೆಂದು ತಿಳಿಸುತ್ತಾ ನಮ್ಮ ದೇಶ ಭವಿಷ್ಯದಲ್ಲಿ ತೀವ್ರ ಅಭಿವೃದ್ಧಿ ಹೊಂದುವುದರಲ್ಲಿ ಮುನ್ನುಗುತ್ತಿದೆ ಎಂದು ಹೇಳಿದರು.
ಪ್ರಾರಂಭದಲ್ಲಿ ಪ್ರಾಚಾರ್ಯ ಡಾ. ಬಿ. ಆರ್.ದೇಶಪಾಂಡೆ ಅವರು ಜ್ಞಾನವಿಕಾಸ ಮಂಡಳದ ಎಲ್ಲ ಪದಾಧಿಕಾರಿ ಹಾಗು ಸದಸ್ಯರನ್ನು , ಸಿಬ್ಬಂದಿಯನ್ನು ಮತ್ತು ವಿದ್ಯಾರ್ಥಿಗಳನ್ನು ಸಮಾರಂಭಕ್ಕೆ ಸ್ವಾಗತಿಸಿದರು. ಸಮಾರಂಭದಲ್ಲಿ ಕಾಲೇಜಿನ ಮಾಸಿಕ ಆನಲೈನ್ ವರದಿ ” ವೈಭವ” ವನ್ನು ಬಿಡುಗಡೆ ಗೊಳಿಸಲಾಯಿತು. ಇದೆ ಸಂದರ್ಭದಲ್ಲಿ ಕಾಲೇಜಿನ ರಾಜತಮಹೋತ್ಸವದ ಪ್ರಯುಕ್ತ ಮಾಜಿ ವಿದ್ಯಾರ್ಥಿಗಳ ಸಂಘದ ವತಿಯಿಂದ ನೂರಾರು ಸಸಿಗಳನ್ನು ವಿತರಿಸಲಾಯಿತು. ಮಾಜಿ ವಿದ್ಯಾರ್ಥಿ ಸಂಘದ ಸಂಚಾಲಕ ಜಯೇಶ್ ಹೀರೆ ಪರಿಸರದ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಸಸಿಗಳನ್ನು ನೀಡಲು ಉದ್ದೇಶಿಸಲಾಯಿತು ಎಂದು ಹೇಳಿದರು. ಈ ಉದ್ದೇಶಗಳಿಗೆ ಮಹಾವಿದ್ಯಾಲಯ ಪ್ರೋತ್ಸಾಹಿಸುತ್ತಿದೆ ಎಂದು ಹೇಳಿ ಮೆಚ್ಚಿಗೆ ವ್ಯಕ್ತಪಡಿಸಿದರು. ಪ್ರಾಧ್ಯಾಪಕಿ ದಿವ್ಯಾ ಗೌತಮ, ಡಾ.ರಶ್ಮಿ ಲೆಂಗಾಡೆ, ಪ್ರಾಧ್ಯಾಪಕಿ ಏಕತಾ ಮಿಶ್ರಾ ಮತ್ತು ಕಾಲೇಜಿನ ಸಾಂಸ್ಕೃತಿಕ ಘಟಕದ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಜ್ಞಾನ ವಿಕಾಸ ಮಂಡಳದ ಪ್ರಧಾನ ಕಾರ್ಯದರ್ಶಿ ವಿ. ಬಿ.ಮುಗಳಿ, ಆಡಳಿತ ಮಂಡಳಿಯ ಸದಸ್ಯರಾದ ಆರ್. ವಿ. ಪಾಟೀಲ, ಆರ್. ಜಿ. ಪಾಟೀಲ, ಸತೀಶ್ ಖಿಲಾರಿ. ಸಮರ ಟಂಕಸಾಲಿ, ಅವಧೂತ ಅಕ್ಲೇಕರ, ಪಾಂಡುರಂಗ ಮಿರ್ಜಿ ಉಪ ಪ್ರಾಚಾರ್ಯ ಕೈಲಾಶ ಪಾಟೀಲ ಮತ್ತು ಸಂಘದ ಹಲವಾರು ಸದಸ್ಯರು, ಪ್ರಾಧ್ಯಾಪಕ ಮಿತ್ರರು, ಸಿಬ್ಬಂದಿ ವರ್ಗ, ಹಲವಾರು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.



Related posts

ಭಾರತ್ ಬ್ಯಾಂಕ್ ಬೊರಿವಲಿ ಪಶ್ಚಿಮ ಶಾಖೆಯಲ್ಲಿ 46ನೇ ಸಂಸ್ಥಾಪನಾ ದಿನಾಚರಣೆ.

Mumbai News Desk

ಬಂಟರ ಸಂಘ ಡೊಂಬಿವಲಿ ವತಿಯಿಂದ ನವರಾತ್ರಿ ಉತ್ಸವಕ್ಕೆ ಸಡಗರದ ‘ಹೊರೆ ಕಾಣಿಕೆ’ ಸಮರ್ಪಣೆ

Mumbai News Desk

ಥಾಣೆಯಲ್ಲಿ ಶ್ರೀಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಯವರಿಗೆ ಗುರುವಂದನೆ

Mumbai News Desk

ಸಾಂತಾಕ್ರೂಜ್ ಪೇಜಾವರ ಮಠದಲ್ಲಿ ಶ್ರೀ ಮಧ್ವ ನವಮೀ ಆಚರಣೆ 

Mumbai News Desk

ಮುಂಬೈನ ಕಲಾಚೌಕಿ ಗಣಪತಿ ಪಂಡಾಲ್ ಬಳಿ ವಿದ್ಯುತ್ ಆಘಾತ: ಬಾಲಕಿ ಸೇರಿದಂತೆ ಇಬ್ಬರು ಸಾವು, ನಾಲ್ವರಿಗೆ ಗಾಯ

Mumbai News Desk

ಮುಂಬೈ ಪ್ರವಾಹ ನಮ್ಮದೇ ಸೃಷ್ಟಿ, ನಾಗರಿಕ ಸಂಸ್ಥೆಯನ್ನು(ಬಿಎಂಸಿ )ದೂಷಿಸುವುದನ್ನು ನಿಲ್ಲಿಸಿ: ಬಾಂಬೆ ಹೈಕೋರ್ಟ್ ಆಕ್ರೋಶ

Mumbai News Desk