October 12, 2026
Mumbai News Kannada
ಪ್ರಕಟಣೆ

ಆಗಸ್ಟ್ 30 : ಮುಂಬೈನಲ್ಲಿ “ಸನಾತನ ಸಮ್ಮೇಳನ”: ಧರ್ಮ, ಸಂಸ್ಕೃತಿ ಮತ್ತು ಮೌಲ್ಯಗಳ ಜಾಗೃತಿಗೆ ಆಹ್ವಾನ



ಮುಂಬೈನ ಅಂಧೇರಿ ಪಶ್ಚಿಮದಲ್ಲಿರುವ ಎಂವಿಎಂ ಶಾಲೆಯ ಸಮೀಪದ ಲಕ್ಷ್ಮೀನಾರಾಯಣ ಮಂದಿರದಲ್ಲಿ ಇದೇ ಆಗಸ್ಟ್ 30, 2026ರ ಭಾನುವಾರದಂದು “ಸನಾತನ ಸಮ್ಮೇಳನ” ಎಂಬ ವಿಶೇಷ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗಿದೆ. “ಧರ್ಮೋ ರಕ್ಷತಿ ರಕ್ಷಿತಃ” ಎಂಬ ಪವಿತ್ರ ತತ್ವದೊಂದಿಗೆ ಧರ್ಮ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳ ಪುನರುತ್ಥಾನವನ್ನು ಸಾರುವ ಈ ವೈಭವೋಪೇತ ಕಾರ್ಯಕ್ರಮವು ಬೆಳಿಗ್ಗೆ 10:00 ಗಂಟೆಗೆ ಪ್ರಾರಂಭವಾಗಿ ಮಧ್ಯಾಹ್ನ 12:30 ರವರೆಗೆ ನಡೆಯಲಿದೆ.


ಈ ಬೃಹತ್ ಸಮಾವೇಶದಲ್ಲಿ ಸಮಾಜದ ವಿವಿಧ ರಂಗಗಳ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿ: ಶ್ರೀನಿವಾಸ್ ಸಪಲ್ಯ (CA,MBA, ಅಧ್ಯಕ್ಷರು , ಮಲಾಡ್ ಶನೀಶ್ವರ ಮಂದಿರದ ಅಧ್ಯಕ್ಷರಾದ , )ಗೌರವಾನ್ವಿತ ಅತಿಥಿ: ಅಮೀತ್ ಸಟಮ್ (ಮುಂಬೈ ಬಿಜೆಪಿ ಅಧ್ಯಕ್ಷರು ಹಾಗೂ ಅಂಧೇರಿ ಪಶ್ಚಿಮ ಕ್ಷೇತ್ರದ ಶಾಸಕರು) ವಿಶೇಷ ಅತಿಥಿ:ರೂಪಾಲಿ ಗಂಗೂಲಿ ( ಖ್ಯಾತ ಅಭಿನೇತ್ರಿ , ಪ್ರಸಿದ್ಧ ‘ಅನುಪಮಾ’ ಧಾರಾವಾಹಿಯ ಮುಖ್ಯ ಪಾತ್ರಧಾರಿ) , ದಿಕ್ಸೂಚಿ ಭಾಷಣಕಾರರಾಗಿ ಡಾ. ಹರೀಶ್ ಶೆಟ್ಟಿ ( ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೌರವಾನ್ವಿತ ಸದಸ್ಯರು ಹಾಗೂ ಪ್ರಸಿದ್ಧ ಮನೋವೈದ್ಯರು ) ಭಾಗವಹಿಸಲಿರುವರು.


ಈ ಸಮ್ಮೇಳನವು ಧಾರ್ಮಿಕ ಚಿಂತನೆ, ಸಾಂಸ್ಕೃತಿಕ ಪರಂಪರೆಯ ಮಹತ್ವ ಹಾಗೂ ಆಧುನಿಕ ಜೀವನದಲ್ಲಿ ಸನಾತನ ಮೌಲ್ಯಗಳ ಅಗತ್ಯತೆಯ ಬಗ್ಗೆ ಬೆಳಕು ಚೆಲ್ಲಲಿದೆ. ಸಾರ್ವಜನಿಕರು ಹಾಗೂ ಧರ್ಮಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ವೈಚಾರಿಕ ಕ್ರಾಂತಿಗೆ ಸಾಕ್ಷಿಯಾಗಬೇಕಾಗಿ ಆಯೋಜಕರು ವಿನಂತಿಸಿದ್ದಾರೆ.

ಕಾರ್ಯಕ್ರಮಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳಿಗಾಗಿ ಮತ್ತು ಸಂಪರ್ಕಿಸಲು ಈ ಕೆಳಗಿನ ಮೊಬೈಲ್ ಸಂಖ್ಯೆಗಳನ್ನು ನೀಡಲಾಗಿದೆ: 9324874196 / 9920156243 / 9821779042



Related posts

ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿಗೆ ಯಕ್ಷಧ್ರುವ ಕಲಾ ಗೌರವ

Mumbai News Desk

ಆಗಸ್ಟ್ 2: ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ಹಾಗೂ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ 12ನೇ ಸರಣಿ ತಾಳಮದ್ದಳೆ ಪ್ರಸ್ತುತಿ, ಕಲಾವಿದರಿಗೆ ಸನ್ಮಾನ

Mumbai News Desk

ಕಾಪು ಹೊಸ ಮಾರಿಗುಡಿಯಲ್ಲಿ ಫೆ. 28ರಿಂದ ‘ಪ್ರತಿಷ್ಠಾ ವರ್ಧಂತಿ ಮಹೋತ್ಸವ’: ಶ್ರೀಚಕ್ರ ಯಂತ್ರ ದರ್ಶನಕ್ಕೆ ಅಪರೂಪದ ಅವಕಾಶ

Mumbai News Desk

ವಜ್ರ ಮಹೋತ್ಸವದ ಸಂಭ್ರಮದಲ್ಲಿ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ,

Mumbai News Desk

ಗಣೇಶಪುರಿ ಶ್ರೀ ನಿತ್ಯಾನಂದ ಬಾಬಾ ದರ್ಶನದಲ್ಲಿ ತಾತ್ಕಾಲಿಕ ಬದಲಾವಣೆ: ವಿಗ್ರಹ ನವೀಕರಣ ಹಿನ್ನೆಲೆ ಏಪ್ರಿಲ್ 27 ರಿಂದ ದರ್ಶನ ಸ್ಥಗಿತ

Mumbai News Desk

ಸಾಂತಾಕ್ರೂಜ್ ಶ್ರೀ ಪೇಜಾವರ ಮಠದಲ್ಲಿಸೆ. 18ರಂದು ಶೀರೂರು ಮಠಾಧಿಪತಿ, ಪೂಜ್ಯ ಶ್ರೀ ವೇದವರ್ಧನತೀರ್ಥ ಶ್ರೀಪಾದರಿಗೆ ಗುರುವಂದನೆ.

Mumbai News Desk