28 C
Mumbai
September 18, 2026
Mumbai News Kannada
ಸುದ್ದಿ

‌ಡಹಾಣೂ ರಾಜಾಪುರ ಸಾರಸ್ವತ ಸಮಾಜಸೇವಾ ಮಂಡಲ.27 ನೆಯ ವರ್ಷದ ಮಂಗಲಮೂರ್ತಿ ಉತ್ಸವ ಸಂಪನ್ನ





ಚಿತ್ರ ಮತ್ತು ವರದಿ : ಪಿ.ಆರ್.ರವಿಶಂಕರ್

ಡಹಾಣೂ : ಮಹಾರಾಷ್ಟ್ರದ ಪಶ್ಚಿಮ ಕರಾವಳಿ ತೀರದ ಹಾಗೂ ಗಡಿಪ್ರದೇಶದಲ್ಲಿನ ಊರಾದ ಡಹಾಣೂವಿನಲ್ಲಿರುವ ಮೂಲತಃ ಉಡುಪಿ ಜಿಲ್ಲೆಯವರಾದ ರಾಜಾಪುರ ಸಾರಸ್ವತರು 1999 ರಲ್ಲಿ ಆರಂಭಿಸಿದ ಶ್ರೀ ಗಣೇಶನ ಮಂಗಲ ಮೂರ್ತಿ ಉತವದ 27 ನೆಯ ವರ್ಷದ ಕಾರ್ಯಕ್ರಮವು ಇದೇ ತಾ.15ರಂದು ಸಂಪನ್ನ ಗೊಂಡಿತು.
ಸ್ಥಳೀಯ ದಶಶ್ರೀಮಳಿ ವಣಿಕ ಸಮಾಜದ ಸಭಾಂಗಣದಲ್ಲಿ ಜರಗಿದ 27 ನೆಯ ವರ್ಷದ ಮಂಗಲಮೂರ್ತಿ ಮಹೋತ್ಸವದ ಎರಡು ದಿನಗಳ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಸ್ಥಳೀಯ ತುಳು ಕನ್ನಡಿಗರ ಜೊತೆಗೆ ಮುಂಬೈ , ಗುಜರಾತ್ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತಾದಿಗಳು ಸೇವಾಕಾರ್ಯದಲ್ಲಿ ಭಾಗವಹಿಸಿದ್ದರು.
ಪ್ರತಿಷ್ಟಾಪನೆ , ಗಣಹೋಮ , ರಂಗಪೂಜೆ ಇನ್ನಿತರ ಧಾರ್ಮಿಕ ವಿಧಿ ವಿಧಾನಗಳನ್ನು ಪುರೋಹಿತ ವಸಂತ ಭಟ್ ನೆರವೇರಿಸಿದರು.
ಎರಡನೆಯ ದಿನದ ಉತ್ತರ ಪೂಜೆಯ ಬಳಿಕ ಡಹಾಣೂವಿನ ರಾಜಬೀದಿಯಲ್ಲಿ ಶ್ರೀ ಗಣೇಶನ ಪಲ್ಲಕ್ಕಿಯ ಶೋಭಾಯಾತ್ರೆಯು ಜರಗಿದ್ದು ಸ್ಥಳೀಯ ಕಂಕ್ರಾಡಿ ರೈಲ್ವೇ ಸೇತುವೆ ಬಳಿಯ ನಾಲೆಯಲ್ಲಿ ಗಣೇಶ ಮೂರ್ತಿಯನ್ನು ವಿದ್ಯುಕ್ತವಾಗಿ ವಿಸರ್ಜಿಸಲಾಯಿತು.

ಚಿತ್ರ ವರದಿ ಪಿ.ಆರ್.ರವಿಶಂಕರ್
8493980035



Related posts

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವದ  ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk

ಲೋಕಸಭಾ ಚುನಾವಣೆ : ಉಡುಪಿ ಗೆ ಕೋಟಾ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡಕ್ಕೆ ಕ್ಯಾ. ಬ್ರಿಜೇಶ್ ಚೌಟ.

Mumbai News Desk

ಕುಲಾಲ ಸಂಘ ಮುಂಬಯಿಯ ಮುಖವಾಣಿ “ಅಮೂಲ್ಯ” ದ ಬೆಳ್ಳಿ ಹಬ್ಬ ಸಮಾರೋಪ . ವಿಶೇಷ ಸಂಚಿಕೆ ಲೋಕಾರ್ಪಣೆ.

Mumbai News Desk

2023-24ರ ಎಚ್ ಎಸ್ ಸಿ ಪರೀಕ್ಷೆಯಲ್ಲಿ ವಸಯಿಯ ಮೋಹಿತ್ ಆನಂದ ಪೂಜಾರಿಗೆ ಶೇ 86.50%

Mumbai News Desk

ಥೈಲ್ಯಾಂಡ್ ನಲ್ಲಿ ಅಂತರಾಷ್ಟ್ರೀಯ ಎಂಡ್ಯೂರೆನ್ಸ್ ಸ್ಕೇಟಿಂಗ್ ಚಾಂಪಿಯನ್‌ಶಿಪ್: ದಿವಿನಾ ಸಿ. ಕಣ್ಣಂಗಾರ್ ಹ್ಯಾಟ್ರಿಕ್ ಚಿನ್ನದ ಪದಕ.

Mumbai News Desk

ದ ಕನ್ನಡ ಕುಲಾಲರ ಮಾತೃ ಸಂಘಚುನಾವಣೆ ಅಸಿಂಧು ಉ.ನಿಬಂಧಕರ ಆದೇಶ ರದ್ದು,

Mumbai News Desk