28 C
Mumbai
September 12, 2026
Mumbai News Kannada
ಪ್ರಕಟಣೆ

ಕಲ್ವಾದಲ್ಲಿ ಸೆ. 13ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಆಚರಣೆ





ಕಲ್ವಾ: ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ಕಲ್ವಾ ಸ್ಥಳೀಯ ಕಚೇರಿಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತ್ಯುತ್ಸವವನ್ನು ಸೆಪ್ಟೆಂಬರ್ 13ರ ಭಾನುವಾರ ಕಲ್ವಾ ಪಶ್ಚಿಮದ ಖಾರೇಗಾಂವ್, ಎಂ.ಪಿ. ರೋಡ್, ರೇತಿ ಬಂದರ್ ನಾಕಾ ಸಮೀಪದ ಪಾರ್ಸಿಕ್ ನಗರದಲ್ಲಿರುವ ‘ಹೋಟೆಲ್ ಅಮಿತ್ ಗಾರ್ಡನ್’ನಲ್ಲಿ ವಿಜೃಂಭಣೆಯಿಂದ ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ 9:00ರಿಂದ 11:00ರ ವರೆಗೆ ಗಣಪತಿ ಪೂಜೆ, ಗುರು ಸ್ತೋತ್ರ ಹಾಗೂ ಭಜನಾ ಕಾರ್ಯಕ್ರಮ, 11:00ರಿಂದ 12:00ರ ತನಕ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಲಿದೆ. ಮಧ್ಯಾಹ್ನ 12:00ರಿಂದ 12:30ರ ವರೆಗೆ ಮಹಾಮಂಗಳಾರತಿ, ಬಳಿಕ ತೀರ್ಥ ಪ್ರಸಾದ ವಿತರಣೆ ನಡೆಯಲಿದ್ದು, ಮಧ್ಯಾಹ್ನ 12:30ರಿಂದ 2:00ರ ವರೆಗೆ ಕಲ್ವಾ ಹೋಟೆಲ್ ಸಾಯಿಬಾ ಮಾಲೀಕರಾದ ಉಮೇಶ್ ಟಿ. ಕರ್ಕೇರ ಮತ್ತು ಪರಿವಾರದವರ ಸೇವಾ ರೂಪದಲ್ಲಿ ಮಹಾ ಅನ್ನಸಂತರ್ಪಣೆ ನೆರವೇರಲಿದೆ. ಕಾರ್ಯಕ್ರಮದಲ್ಲಿ ಅರ್ಚಕರಾಗಿ ಕರುಣಾಕರ್ ಸಿ. ಬಂಗೇರ ಹಾಗೂ ಸಂತೋಷ್ ಎಸ್. ಸುವರ್ಣ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು, ಗುರು ಭಕ್ತರು ಮತ್ತು ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರುಕೃಪೆಗೆ ಪಾತ್ರರಾಗುವಂತೆ ಬಿಲ್ಲವರ ಅಸೋಸಿಯೇಷನ್ ಮುಂಬಯಿಯ ಗೌರವಾಧ್ಯಕ್ಷ ಎಲ್. ವಿ. ಅಮೀನ್, ಅಧ್ಯಕ್ಷ ಹರೀಶ್ ಜಿ. ಅಮೀನ್, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ. ಸಾಲಿಯಾನ್, ಗೌರವ ಪ್ರಧಾನ ಕೋಶಾಧಿಕಾರಿ ಹಾಗೂ ಕೇಂದ್ರ ಕಚೇರಿ ಪ್ರತಿನಿಧಿ ರವಿ ಎಸ್. ಸನಿಲ್, ಉಪಾಧ್ಯಕ್ಷ ಮತ್ತು ಕೇಂದ್ರ ಕಚೇರಿ ಉಸ್ತುವಾರಿ ಪುರುಷೋತ್ತಮ ಎಸ್. ಕೋಟ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಲಾ ಕೆ. ಕೋಟ್ಯಾನ್, ಸಾಮಾಜಿಕ ಮತ್ತು ಧಾರ್ಮಿಕ ಉಪ ಸಮಿತಿಯ ಕಾರ್ಯಾಧ್ಯಕ್ಷ ಧರ್ಮಪಾಲ್ ಜಿ. ಅಂಚನ್, ಗೌರವ ಕಾರ್ಯದರ್ಶಿ ಸದಾಶಿವ ವೈ. ಕೋಟ್ಯಾನ್ ಮನವಿ ಮಾಡಿದ್ದಾರೆ.

ಹಾಗೆಯೇ ಕಲ್ವಾ ಸ್ಥಳೀಯ ಕಚೇರಿ ಸಮಿತಿಯ ಗೌರವ ಕಾರ್ಯಾಧ್ಯಕ್ಷರಾದ ಬಿ. ಸಿ. ಅಮೀನ್, ಆರ್. ಕೆ. ಅಮೀನ್, ಕಾರ್ಯಾಧ್ಯಕ್ಷ ಹರೀಶ್ ಡಿ. ಸಾಲಿಯಾನ್ ಬಜಗೋಳಿ, ಉಪಕಾರ್ಯಾಧ್ಯಕ್ಷ ಉಮೇಶ್ ಟಿ. ಕರ್ಕೇರ, ಗೌರವ ಕಾರ್ಯದರ್ಶಿ ಮಮತಾ ಎಂ. ಅಮೀನ್, ಗೌರವ ಕೋಶಾಧಿಕಾರಿ ಆನಂದ್ ಎಸ್. ಬಂಗೇರ, ಜೊತೆ ಕಾರ್ಯದರ್ಶಿ ಪ್ರಕಾಶ್ ಜಿ. ಪೂಜಾರಿ, ಜೊತೆ ಕೋಶಾಧಿಕಾರಿ ಸುಕನ್ಯಾ ಸಿ. ಪೂಜಾರಿ ಹಾಗೂ ಸರ್ವ ಸಮಿತಿ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ ಮತ್ತು ವಿಶೇಷ ಆಮಂತ್ರಿತರು ಪ್ರಕಟಣೆಯಲ್ಲಿ ಕೋರಿದ್ದಾರೆ.



Related posts

ಶ್ರೀ ಮಂತ್ರ ದೇವಿ ಚಾರಿಟೇಬಲ್ ಟ್ರಸ್ಟ್: ಡಿ.16ರಂದು ವಾರ್ಷಿಕ ಮಹಾಪೂಜೆ

Mumbai News Desk

ಕರ್ನಾಟಕ ಸಮಾಜ ಸೂರತ್ : ಜೂ29 ತುಳು ಪರ್ಬ”, ಸಾಧಕರಿಗೆ ಸನ್ಮಾನ, ನೃತ್ಯ‌, ತುಳು ನಾಟಕ.

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಡಿ 7ರಂದು “ಕುರ್ಲಾ ಬಂಟರ ಭವನದಲ್ಲಿ ” ವಿಶ್ವಬಂಟರ ಸಮಾಗಮ “ಜಾಗತಿಕ ಮಟ್ಟದ ಕಾರ್ಯಕ್ರಮದ ವಿಶೇಷ ಸಭೆ.

Mumbai News Desk

ಮಾ. 1: ಬೆಳ್ಮಣ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಮಾವೇಶ

Mumbai News Desk

ಕುಲಾಲ ಸಂಘ ಮುಂಬಯಿ: ಮಾರ್ಚ್ 28ರಂದು ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಸತ್ಯನಾರಾಯಣ ಪೂಜೆ ಮತ್ತು 150ನೇ ತಿಂಗಳ ಭಜನಾ ಸಂಕೀರ್ತನೆ

Mumbai News Desk

ದೊಡ್ಡಣ್ಣ ಗುಡ್ಡೆಯ ಶ್ರೀ ರಮಾನಂದ ಗುರೂಜಿ ಮುಂಬೈ ಭೇಟಿ

Mumbai News Desk