September 17, 2026
Mumbai News Kannada
ಪ್ರಕಟಣೆ

ಮೊಗವೀರ ವ್ಯವಸ್ಥಾಪಕ ಮಂಡಳಿ, ಮುಂಬಯಿ ವತಿಯಿಂದ ಸಣ್ಣ ಕಥಾ ಸ್ಪರ್ಧೆ – 2026





ಮುಂಬಯಿಯ ಮೊಗವೀರ ವ್ಯವಸ್ಥಾಪಕ ಮಂಡಳಿಯ 125ರ ಸಂಭ್ರಮ ಹಾಗೂ “ಮೊಗವೀರ” ಕನ್ನಡ ಮಾಸಿಕದ 87ನೇ ವಾರ್ಷಿಕೋತ್ಸವದ ಪ್ರಯುಕ್ತ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಣ್ಣ ಕಥಾ ಸ್ಪರ್ಧೆಯನ್ನು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಆಯೋಜಿಸಲಾಗಿದೆ. ಮೊಗವೀರ ಸಮುದಾಯದ ಮಕ್ಕಳು ಮತ್ತು ಯುವಕರಲ್ಲಿ ಕಥೆ ಬರೆಯುವ ಆಸಕ್ತಿ ಮೂಡಿಸುವುದು ಹಾಗೂ ಬರಹಗಾರರನ್ನು ಪ್ರೋತ್ಸಾಹಿಸುವುದು ಈ ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ. ಸ್ಪರ್ಧೆಗೆ ಸಲ್ಲಿಸುವ ಕಥೆಗಳು 3 ಪುಟಗಳನ್ನು ಮೀರದಿರಬೇಕು ಮತ್ತು ಸ್ವಂತ ಹಸ್ತಬರಹದಲ್ಲಿ ಅಥವಾ ಡಿಟಿಪಿಯಲ್ಲಿ ಇರಬೇಕು. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಗುವುದು.
ಶ್ರೀ ಕ್ಷೇತ್ರ ಉಚ್ಚಿಲದಲ್ಲಿ ನಡೆಯುವ ವೈಭವದ ಪ್ರಸಿದ್ಧ ದಸರಾ ಸಂಭ್ರಮದ ಭಾಗವಾಗಿ, ದಿನಾಂಕ 18/10/2026 ರಂದು ಬೆಳಿಗ್ಗೆ 11:00 ಗಂಟೆಗೆ ಉಡುಪಿಯ ಮೊಗವೀರ ಭವನದಲ್ಲಿ ಏರ್ಪಡಿಸಲಾಗುವ “ಕವಿಗೋಷ್ಠಿ”ಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಬಹುಮಾನಗಳನ್ನು ವಿತರಿಸಲಾಗುವುದು. ಆಸಕ್ತರು ತಮ್ಮ ಕಥೆಗಳನ್ನು ಅಕ್ಟೋಬರ್ 16 ಅಥವಾ 17, 2026 ರಂದು ಬೆಳಿಗ್ಗೆ 10:00 ರಿಂದ ಸಾಯಂಕಾಲ 5:00 ಗಂಟೆಯೊಳಗೆ ಉಚ್ಚಿಲ ದಸರಾ ಪ್ರಯುಕ್ತ ನಡೆಯುವ ‘ವಸ್ತು ಪ್ರದರ್ಶನ’ ಅಂಗಳದಲ್ಲಿರುವ ಮೊಗವೀರ ಮಂಡಳಿಯ ಮಳಿಗೆಯಲ್ಲಿ ಸಲ್ಲಿಸಬಹುದು. ಆಯ್ಕೆಯಾದ ಅತ್ಯುತ್ತಮ ಕಥೆಗಳನ್ನು “ಮೊಗವೀರ” ಕನ್ನಡ ಮಾಸಿಕದಲ್ಲಿ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗೆ ಸಂಪಾದಕರಾದ ಅಶೋಕ ಸುವರ್ಣ (ಸಂಪರ್ಕ ಸಂಖ್ಯೆ: 9769333860) ಅವರನ್ನು ಸಂಪರ್ಕಿಸಬಹುದು.



Related posts

ಸೆ.22 ರಿಂದ ಅ. 2 ರ ವರೆಗೆ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯಲ್ಲಿ ನವರಾತ್ರೋತ್ಸವ.

Mumbai News Desk

ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘ : ನ. 17 ಮತ್ತು 18ಕ್ಕೆ ಶತಮಾನೋತ್ತರ ಬೆಳ್ಳಿ ಹಬ್ಬ ಆಚರಣೆ.

Mumbai News Desk

ಕುಲಾಲ ಸಂಘ ಮುಂಬಯಿ, ಸಿ.ಎಸ್.ಟಿ. – ಮುಲುಂಡ್ – ಮಾನ್ ಖುರ್ಡ್ ಸಮಿತಿ, ಡಿ. 1 ರಂದು ವಾರ್ಷಿಕ ಸ್ನೇಹ ಸಮ್ಮಿಲನ, ಕಿರು ನಾಟಕ ಸಾಧಕರಿಗೆ ಸನ್ಮಾನ,

Mumbai News Desk

ಡೊಂಬಿವಲಿ, ಠಾಕೂರ್ಲಿ, ಕೋಪರ್ ಪರಿಸರದ ತುಳು-ಕನ್ನಡಿಗರ ಸ್ನೇಹ ಸಮ್ಮಿಲನ.

Mumbai News Desk

ಶ್ರೀ ಅಯ್ಯಪ್ಪ ಸೇವಾ ಚಾರಿಟೇಬಲ್ ಟ್ರಸ್ಟ್ ಫೋರ್ಟ್ ಮುಂಬಯಿ: ಕುಣಿತ ಭಜನಾ ಸ್ಪರ್ಧೆಗೆ ತಂಡಗಳ ಆಹ್ವಾನ

Mumbai News Desk

ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ ಕೋಟೆ; ನಾಲಾಸೋಪಾರ ಮೇ 27. ಶ್ರೀ ಶನಿ ಜಯಂತಿ ಉತ್ಸವ.

Mumbai News Desk