July 23, 2026
Mumbai News Kannada
Uncategorizedಸುದ್ದಿ

ಕುಕ್ಕಳ ಶ್ರೇಯಸ್ ಪೂಜಾರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ







ಬೆಳ್ತಂಗಡಿ: ಕುಕ್ಕಳ ಗ್ರಾಮ ವ್ಯಾಪ್ತಿಯ ಶ್ರೇಯಸ್ ಪೂಜಾರಿ ಕ್ರೀಡೆ, ಯಕ್ಷಗಾನ ಹಾಗೂ ಯೋಗ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಕಲಾಭೂಮಿ ಪ್ರತಿಷ್ಠಾನ (ರಿ.) ವತಿಯಿಂದ ಕೊಡಮಾಡುವ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದು, ನವಂಬರ್ 29ರಂದು ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನಿಸಲಾಯಿತು.

ಕುಕ್ಕಳ ಗ್ರಾಮದ ನಿವಾಸಿಯಾಗಿರುವ ಯೋಗಿಶ್ ಪೂಜಾರಿ ಮತ್ತು ಶಕುಂತಲಾ ದಂಪತಿಗಳ ಪುತ್ರನಾದ ಶ್ರೇಯಸ್ ತಮ್ಮ ಶಿಕ್ಷಣವನ್ನು ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ಕೆಪಿಎಸ್ ಪುಂಜಾಲ್ ಕಟ್ಟೆ ಶಾಲೆಯಲ್ಲಿ ಮಾಡಿರುತ್ತಾನೆ. ಪ್ರಸ್ತುತ ಮಚ್ಚಿನ ಮೊರಾರ್ಜಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದು ತನ್ನ ಎಲೆಯ ವಯಸ್ಸಿನಲ್ಲಿ ಕರಾಟೆ ಅಭ್ಯಾಸವನ್ನು ಮುಖ್ಯ ಶಿಕ್ಷಕ ಸೆನ್ಸಾಯಿ ವಸಂತಕೆ ಬಂಗೇರರ ಬಳಿ ಪಡೆಯುತ್ತಿದ್ದು ತನ್ನ ಹೆಸರಿನಂತೆಯೇ ಎಳೆಯ ಪ್ರಾಯದಲ್ಲಿ ತಾವು ಕರಾಟೆಯಲ್ಲಿ ಮಾಡಿದ ಸಾಧನೆಗೆ ಅಭಿನಂದನೆಗಳು ಪಠ್ಯ ಹಾಗೂ ಪಠ್ಯತರ ಚಟುವಟಿಕೆಗಳಲ್ಲಿ ಚುರುಕಾಗಿದ್ದು ಸಾಧನೆಯ ಮುಕುಟಕ್ಕೆ ಮತ್ತೊಂದು ಗರಿ.

ಕರಾಟೆ ಕೂಟಗಳಲ್ಲೂ ಸೇರಿದಂತೆ 10 ಚಿನ್ನದ ಪದಕ 9 ಬೆಳ್ಳಿಯ ಪದಕ ಎಂಟು ಕಂಚಿನ ಪದಕ ಹೀಗೆ ಒಂದಲ್ಲ ಒಂದು ಪದಕ ನಿರೀಕ್ಷೆ ಮಾಡುವಂತ ಗ್ರಾಮೀಣ ಪ್ರತಿಭೆ.ಕಬಡ್ಡಿ ಕೋಕೋ ಕ್ರಿಕೆಟ್ ಭಕ್ತಿಗೀತೆ ಸ್ಪರ್ಧೆ ಪ್ರತಿಭಾ ಕಾರಂಜಿ ಛದ್ಮವೇಷ ಇಂಥಹ ಹಲವಾರು ವಿಷಯಗಳಲ್ಲಿ ಪ್ರತಿಭಾವಂತನಾಗಿದ್ದು 2018 ರಲ್ಲಿ ಸ್ಟೇಟ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಿ ಒಂದು ಚಿನ್ನದ ಪದಕ ಒಂದು ಬೆಳ್ಳಿಯ ಪದಕ ಮತ್ತು 2018ರಲ್ಲಿ ನ್ಯಾಷನಲ್ ಲೆವೆಲ್ ಭಾಗವಹಿಸಿ ಚಿನ್ನದ ಪದಕವನ್ನು ಪಡೆದಿರುತ್ತಾನೆ.

2019 ರಲ್ಲಿ ಕಿನ್ನಿಗೋಳಿಯಲ್ಲಿ ನಡೆದಂತ ಸ್ಟೇಟ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ದ್ವಿತೀಯ ಸ್ಥಾನ ಮತ್ತು ಬೆಳ್ಳಿಯ ಪದಕವನ್ನು ಪಡೆದು 2019 ಸ್ಟೇಟ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಕಂಚಿನ ಪದಕವನ್ನು ಪಡೆದು 2019ರ ನಡೆದಂತ ಸ್ಟೇಟ್ ಲೆವೆಲ್ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಪ್ರಥಮ ಸ್ಥಾನ 2ಚಿನ್ನದ ಪದಕ ಪಡೆದಿರುತ್ತಾರೆ ಹಾಗೂ 12ನೇ ನ್ಯಾಷನಲ್ ಲೆವೆಲ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಕಂಚಿನ ಪದಕವನ್ನು ಪಡೆದಿರುತ್ತಾನೆ.

2020ರಲ್ಲಿ ನಡೆದಂತಹ ಅಂಬಲಪಾಡಿ ಟ್ರೋಪಿಯಲ್ಲಿ ಭಾಗವಹಿಸಿ ಎರಡು ಕಂಚಿನ ಪದಕ, ಒಂದನೇ ಕರ್ನಾಟಕ ರಾಜ್ಯಮಟ್ಟದ ಹಪಿಕಿಡೋ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆದಿರುತ್ತಾರೆ 2022 ರಲ್ಲಿ ನಡೆದ ಮೂರನೇ ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಪಡೆದಿರುತ್ತಾರೆ ಹಾಗೂ 2023ರಲ್ಲಿ ನಡೆದ ಫಸ್ಟ್ ಇಂಟರ್ನ್ಯಾಷನಲ್ ಲೆವೆಲ್ ಕರಾಟೆ ಓಪನ್ ಚಾಂಪಿಯನ್ ಶಿಪ್ ಹುಬ್ಬಳ್ಳಿಯಲ್ಲಿ ನಡೆದ ಪಂದ್ಯದಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಪಡೆದಿರುತ್ತಾರೆ ಹಾಗೂ 2023ರಲ್ಲಿ ನಡೆದ ಮೈಸೂರು ಓಪನ್ ನ್ಯಾಷನಲ್ ಲೆವೆಲ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಒಂದು ಚಿನ್ನದ ಪದಕ ಮತ್ತು ಒಂದು ಬೆಳ್ಳಿಯ ಪದಕವನ್ನು ಪಡೆದಿರುತ್ತಾರೆ ಹಾಗೂ ಮುದಾ ಸ್ಪೋರ್ಟ್ಸ್ ಗ್ರೌಂಡ್ ಮೈಸೂರಿನಲ್ಲಿ ನಡೆದ ನೊಬೆಲ್ ವರ್ಲ್ಡ್ ರೆಕಾರ್ಡ್ ಭಾಗವಹಿಸಿ ತಮ್ಮ ಹೆಸರನ್ನು ವರ್ಲ್ಡ್ ರೆಕಾರ್ಡ್ ಬುಕ್ಕಲ್ಲಿ ಹೆಸರಿನ ಚಾಪನ್ನು ಮೂಡಿಸಿದ್ದಾರೆ ತಮ್ಮ ಸಾಧನೆಯಿಂದ ಹಿಂದೆ ನಿಂತ ಪೋಷಕರು ಮತ್ತು ಗುರುಗಳ ಅತ್ಯುತ್ತಮ ಮಾರ್ಗದರ್ಶನದಿಂದ ತನ್ನೂರಿಗೆ ತಮ್ಮ ತಾಲೂಕಿಗೆ ತನ್ನ ಶಾಲೆಗೆ ಮತ್ತು ಹೆತ್ತವರಿಗೆ ಹೆಸರನ್ನು ತಂದು ಕೊಟ್ಟಿದ್ದಾರೆ.



Related posts

ಎ.21,ಅನಿರುದ್ಧ ಅಕೇಡಮೀ ಆಫ್ ಡಿಸಾಸ್ಟರ್ ಮೆನೇಜ್ಮೆಂಟ್ ವತಿಯಿಂದ ಬೃಹತ್ ರಕ್ತದಾನ ಶಿಬಿರ.

Mumbai News Desk

ಸುರತ್ಕಲ್ : 2 ತಂಡಗಳ ನಡುವೆ ಗಲಾಟೆ, ಇಬ್ಬರಿಗೆ ಚೂರಿ ಇರಿತ

Mumbai News Desk

Housing Finance Director, Mel Watt, Investigated for Sexual Harassment

admin

70ನೇ ಕನ್ನಡ ರಾಜ್ಯೋತ್ಸವ: ಕನ್ನಡಿಗರಿಗೆ ಕನ್ನಡದಲ್ಲೇ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

Mumbai News Desk

ಕಾಂದಿವಲಿ: ಯೂನಿಯನ್ ಬ್ಯಾಂಕ್ ನಿವೃತ್ತ ಅಧಿಕಾರಿ ಕುಸುಮಲತಾ ಸುವರ್ಣ ನಿಧನ

Mumbai News Desk

U.S. vs China Trade Wars: Qualcomm Scraps $44 Billion NXP Deal After China Inaction

admin