July 23, 2026
Mumbai News Kannada
ಪ್ರಕಟಣೆ

ಬ್ರಹ್ಮ ಶೀ ನಾರಾಯಣ ಗುರುಗಳ ದಂತ [ದಿವ್ಯ ದಂತ] ಪ್ರದರ್ಶನ








“ಒಂದೇ ಜಾತಿ, ಒಂದೇ ಮತ ಮತ್ತು ಒಂದೇ ದೇವರು” ಎಂಬ ಸತ್ಯವಾಕ್ಯವನ್ನು ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾಧಿಯ ಬಳಿಕ ಅವರ ದಂತವನ್ನು [ದಿವ್ಯ ದಂತಮ್‌] ಜೋಪಾನವಾಗಿ ಇರಿಸಿಕೊಳ್ಳಲಾಗಿದ್ದು ಇದನ್ನು ಪ್ರತೀ ವರ್ಷ ಭಕ್ತರ ದರ್ಶನಕ್ಕಾಗಿ ಇರಿಸಲಾಗುತ್ತಿದೆ. ಈ ಬಾರಿ ರವಿವಾರ ಫೆಬ್ರವರಿ 2 ರಂದು ಬೆಳಗ್ಗೆ ಗಂಟೆ 8.30 ರಿಂದ ಸಾಯಂಕಾಲ ಗಂಟೆ 4-00 ರ ವರೆಗೆ ಇದನ್ನು ಭಕ್ತರ ವೀಕ್ಷಣೆಗಾಗಿ ನವಿ ಮುಂಬಯಿಯ ನೆರುಳ್‌ನ ಸೆಕ್ಟರ್‌ 20ರಲ್ಲಿರುವ ಗುರುದೇವಗಿರಿ ಮಂದಿರದ ಆವರಣದಲ್ಲಿ ಇರಿಸಲಾಗುತ್ತದೆ. ಶಿವಗಿರಿ ಆಶ್ರಮದ ಸ್ವಾಮಿಯವರ ನೇತೃತ್ವದಲ್ಲಿ ಇದರ ಆಯೋಜನೆ ಮಾಡಲಾಗಿದೆ. ಈ ದಂತವು ಅಮೇರಿಕಾದಲ್ಲಿರುವ ದಂತವೈದ್ಯರಾದ ಜಿ.ವೊ.ಪಾಲ್‌ ಇವರ ಬಳಿ ಇತ್ತು. ಅದನ್ನೀಗ ನೆರುಳ್‌ನ ಗುರುದೇವಗಿರಿ ಮಂದಿರದಲ್ಲಿ ಒಂದು ಪ್ರತ್ಯೇಕ ಕೊಣೆಯಲ್ಲಿ ಜೋಪಾನವಾಗಿ ಇರಿಸಲಾಗಿದೆ ಎಂದು ಮಂದಿರದ ಆಡಳಿತ ಮಂಡಳಿಯ ಸದಸ್ಯರೊಬ್ಬರು ನನಗೆ ತಿಳಿಸಿದರು. ಪ್ರದರ್ಶನದ ಜೊತೆಗೆ ಗರುದೇವಗಿರಿ ಮಂದಿರದಲ್ಲಿ ವಿವಿಧ ದಾರ್ಮಿಕ ಕಾರ್ಯಕ್ರಮಗಳೂ ಜರಗಲಿದ್ದು ಗುರುಭಕ್ತರು ಇದರ ಪ್ರಯೋಜನ ಪಡೆದು ಧನ್ಯರಾಗಬಹುದು.
-ಸೋಮನಾಥ ಎಸ್‌.ಕರ್ಕೇರ, 9819321186



Related posts

ಆ.16: ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯಲ್ಲಿ ವರಮಹಾಲಕ್ಷ್ಮೀ ಪೂಜೆ

Mumbai News Desk

ಮೊಗವೀರ ಮಹಾಜನ ಸೇವಾಸಂಘ ಬಗ್ವಾಡಿ ಹೋಬಳಿ ಡೊಂಬಿವಲಿ ಸ್ಥಳೀಯ ಸಮಿತಿ ಮತ್ತು ಮೊಗವೀರ ವ್ಯವಸ್ಥಾಪಕ ಮಂಡಳಿ ಡೊಂಬಿವಲಿ ಶಾಖೆ ಜಂಟಿ ಅಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಮಹಿಳೆಯರಿಗಾಗಿ (ಕರ್ಕರೋಗ)ಕ್ಯಾನ್ಸರ್ ತಪಾಸಣೆ :

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಉನ್ನತ ಶಿಕ್ಷಣ ಸಂಸ್ಥೆ,ಫೆ. 26. ವಾರ್ಷಿಕೋತ್ಸವ, ಪದವಿ ಪ್ರಧಾನ ಸಮಾರಂಭ

Mumbai News Desk

ಶ್ರೀ ಗುರು ನಾರಾಯಣ ಸೇವಾ ಸಮಿತಿ ವಸಯಿ,  ಮಾ. 9ರಂದು 29ನೇ ವಾರ್ಷಿಕ ಮೂರ್ತಿ ಪ್ರತಿಷ್ಠಾಪನ ದಿನಾಚರಣೆ

Mumbai News Desk

ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಕಾಪು : ಅ. 3ರಿಂದ ಶರನ್ನವತಾತ್ರಿ ಮಹೋತ್ಸವ.

Mumbai News Desk

ಜ.7ರಂದು ಶ್ರೀ ಅಯ್ಯಪ್ಪ ಭಕ್ತ ವೃಂದ, ಸಾಮಾಜಿಕ ಸಂಸ್ಥೆ, ನಾಲಾಸೋಪರ, ಇದರ ವಾರ್ಷಿಕ ಅಯ್ಯಪ್ಪ ಮಹಾಪೂಜೆ.

Mumbai News Desk