
(ಸಮಾವೇಶ, ಹಿರಿಯ ಲೇಖಕರಿಗೆ ಪ್ರಶಸ್ತಿ, ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ )
ಮುಂಬಯಿಯ ತುಳು -ಕನ್ನಡಿಗರ ಹಿರಿಯ ಸಂಘಟನೆ, ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಮೊಗವೀರ ವ್ಯವಸ್ಥಾಪಕ ಮಂಡಳಿಯ ಮುಖವಾಣಿ, ಮೊಗವೀರ ಕನ್ನಡ ಮಾಸಿಕದ 85ನೇ ಸಂಭ್ರಮವು ಮಾರ್ಚ್ 9ರಂದು, ಆದಿತ್ಯವಾರ ಬೆಳಿಗ್ಗೆ 9.30ರಿಂದ, ಅಂಧೇರಿ ಪಶ್ಚಿಮ ವೀರ ದೇಸಾಯಿ ಮಾರ್ಗ, ಎಂವಿಎಂ ಶೈಕ್ಷಣಿಕ ಸಂಕುಲದ ಶಾಲಿನಿ ಜಿ ಶಂಕರ್ ಕನ್ವೆನ್ಷನ್ ಸೆಂಟರ್ ನಲ್ಲಿ ಜರಗಲಿದೆ.
ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷರಾದ ಎಚ್ ಅರುಣ್ ಕುಮಾರ್ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಿರುವರು.
ಮುಖ್ಯ ಅತಿಥಿಯಾಗಿ ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ! ಜಿ ಎನ್ ಉಪಾಧ್ಯ, ಉಡುಪಿಯ ಲೇಖಕಿ ಕುಮಾರಿ ಸೌಮ್ಯ ಪುತ್ರನ್ ವಿಶೇಷ ಆಮಂತ್ರಿಕರಾಗಿ ಉಪಸ್ಥಿತರಿರುವರು.
ಮೊಗವೀರ ಮಾಸಿಕದ ಸಂಪಾದಕ ಅಶೋಕ್ ಎಸ್ ಸುವರ್ಣ ಸ್ವಾಗತ ಮತ್ತು ಪ್ರಸ್ತಾವನೆ ಮಾಡಲಿರುವರು.
ಬಳಿಕ ಮುಂಬಯಿ ನಗರದ ಕನ್ನಡ ಸಂಘಗಳ ಸಮಾವೇಶ ಜರಗಲಿದೆ.
ಹಿರಿಯ ಪತ್ರಕರ್ತ ದಯಾಸಾಗರ್ ಚೌಟ ಅವರ ಅಧ್ಯಕ್ಷತೆಯಲ್ಲಿ ಜರಗಲಿರುವ ಸಮಾವೇಶದಲ್ಲಿ ಮೈಸೂರು ಅಸೋಸಿಯೇಷನ್ನ ವಿಶ್ವಸ್ತ ಡಾ. ಬಿ ಆರ್ ಮಂಜುನಾಥ್, ಬಿ ಎಸ್ ಕೆ ಬಿ ಎಸೋಸಿಯೇಷನ್ ನ ಅಧ್ಯಕ್ಷ ಡಾ. ಸುರೇಶ್ ರಾವ್ , ಬಿಲ್ಲವರ ಎಸೋಸಿಯೇಷನ್ ನ ಅಧ್ಯಕ್ಷ ಹರೀಶ್ ಅಮೀನ್, ಕರ್ನಾಟಕ ಸಂಘದ ಅಧ್ಯಕ್ಷ ಡಾ! ಭರತ್ ಕುಮಾರ್ ಪೊಲಿಪು, ಕನ್ನಡ ಕಲಾ ಕೇಂದ್ರ ಮುಂಬೈಯ ಅಧ್ಯಕ್ಷ ಮಧುಸೂದನ್ ಟಿ ಆರ್, ಸಾಪಲ್ಯ ಸೇವಾ ಸಂಘ ಮುಂಬೈಯ ಅಧ್ಯಕ್ಷ ಶ್ರೀನಿವಾಸ ಪಿ ಸಾಫಲ್ಯ, ಶ್ರೀಮದ್ಭಾರತ ಮಂಡಳಿ ಮುಂಬೈಯ ಅಧ್ಯಕ್ಷ ಜಗನ್ನಾಥ್ ಪಿ ಪುತ್ರನ್ ಭಾಗವಹಿಸಲಿರುವರು.
ಮೊಗವೀರ ಮಾಸಿಕದ ಕಾರ್ಯಧ್ಯಕ್ಷ ಪುರುಷೋತ್ತಮ್ ಏಲ್ ಕರ್ಕೇರ ಸ್ವಾಗತ , ಕವಿ, ಸಾಹಿತಿ ಗೋಪಾಲ್ ತ್ರಾಸಿ ಕಾರ್ಯಕ್ರಮದ ನಿರ್ವಹಣೆ ಮಾಡಲಿರುವರು.
ಸಮಾವೇಶದ ಬಳಿಕ ಗುರು ಆಶಾ ನಂಬಿಯಾರ್ ಅವರ ನಿರ್ದೇಶನದ, ವೈಷ್ಣವಿ ಕಲಾಕ್ಷೇತ್ರ ಇವರಿಂದ ‘ಸಪ್ತಸಿಂಧು’ ನೃತ್ಯ ವೈಭವ ಜರಗಲಿದೆ.
ಸಮಾರೋಪ ಸಮಾರಂಭ
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಸ್ಥಾಪಕರಾದ ನಾಡೋಜ ಡಾ!ಜಿ ಶಂಕರ್ ಮುಖ್ಯ ಅತಿಥಿಯಾಗಿರುವರು.
ದಿವ್ಯ ಶಿಪ್ಪಿಂಗ್ ಅಂಡ್ ಕ್ಲಿಯರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ವೇದ ಪ್ರಕಾಶ್ ಶ್ರೀಯಾನ್, ದಕ್ಷಿಣ ಕನ್ನಡ ಮೊಗವೀರ
ಮಹಾಜನ ಸಂಘ ಉಚ್ಚಿಲ, ಇದರ ಅಧ್ಯಕ್ಷ ಜಯ ಸಿ ಕೋಟ್ಯಾನ್, ಕಚ್ಚುರು ನಾಗೇಶ್ವರ ದೇವಸ್ಥಾನ ಬಾರ್ಕೂರು, ಇದರ ವ್ಯವಸ್ಥಾಪಕ ಟ್ರಸ್ಟಿ, ಕೆ ಸುರೇಶ್ ಭಂಡಾರಿ, ಬರೋಡಾದ ಸಮಾಜಸೇವಕ ದಯಾನಂದ ಬೋಂಟ್ರ, ಕರ್ನಾಟಕ ಮಲ್ಲ ದೈನಿಕದ ಮುಖ್ಯ ಸಂಪಾದಕ ಚಂದ್ರಶೇಖರ್ ಪಾಲೆತ್ತಾಡಿ ಗೌರವ ಅತಿಥಿಗಳಾಗಿ ಸಮಾರಂಭದಲ್ಲಿ ಉಪಸ್ಥಿತರಿರುವರು.
ಎಚ್ ಅರುಣ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು.
ಸ್ವಾಗತ ಅರವಿಂದ ಕಾಂಚನ್ (ಉಪಾಧ್ಯಕ್ಷರು ಮೊಗವೀರ ವ್ಯವಸ್ಥಾಪಕ ಮಂಡಳಿ ) ನಿರ್ವಹಣೆ : ಗೋಪಾಲ ತ್ರಾಸಿ /ಅಶೋಕ್ ಸುವರ್ಣ
ಮೊಗವೀರಕ್ಕೆ ಬರಹಗಳ ಮೂಲಕ ನಿರಂತರ ಕೊಡುಗೆ ನೀಡಿದ ಹಿರಿಯ ಲೇಖಕರಿಗೆ ಪ್ರಶಸ್ತಿ ಪ್ರದಾನ
ಈ ಶುಭಾವಸರದಲ್ಲಿ ದಿ.ರಮಾನಂದ ಅಮೀನ್ ಸ್ಮಾರಕ ಪ್ರಶಸ್ತಿ (‘ಮೊಗವೀರ’ದ ಸಂಪಾದಕರು – 1955-64)ಎಸ್. ಡಿ ಅಮೀನ್ ಅವರಿಗೆ , ದಿ. ಭಾಸ್ಕರ ಪಡುಬಿದ್ರಿ ಸ್ಮಾರಕ ಪ್ರಶಸ್ತಿ ‘ಮೊಗವೀರ’ ದ ಸಂಪಾದಕರು 1965-1972) ಡಾ! ವಿಶ್ವನಾಥ್ ಕಾರ್ನಾಡ್ ಅವರಿಗೆ ,ದಿ. ಸಂಜೀವ ಬಿ ಕುಂದರ್ ಸ್ಮಾರಕ ಪ್ರಶಸ್ತಿ (ಮೊಗವೀರದ ಸಂಪಾದಕರು 1972 – 1989 )ಡಾ! ಈಶ್ವರ್ ಅಲೆವೂರು ಅವರಿಗೆ, ದಿ. ಶಂಕರ ಹೊಸಬೆಟ್ಟು ಸ್ಮಾರಕ ಪ್ರಶಸ್ತಿ( ಮೊಗವೀರದ ಸಂಪಾದಕರು 2001 – 2004)ಎಸ್. ಕೆ ಉಚ್ಚಿಲ ಅವರಿಗೆ ಹಾಗೂ ಮುದ್ದು ಮೂಡುಬೆಳ್ಳೆ ಅವರಿಗೆ ‘ಮೊಗವೀರ ಸಾಹಿತ್ಯ ಪ್ರಶಸ್ತಿ – 2025’ ಪ್ರಧಾನಿಸಲಾಗುವುದು.
ಡಾ! ವಿ ಕೆ ಯಾದವ್ ಸಸಿಹಿತ್ಲು ( ಸಂಶೋಧಕರು – “ಮೊಗವೀರ ಸಮಾಜದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಬದುಕು ಒಂದು ಅಧ್ಯಯನ” – ತುಳು ಗ್ರಂಥ )ಇವರನ್ನು ಸನ್ಮಾನಿಸಲಾಗುವುದು
ಈ ಸಂಧರ್ಭ ಮೊಗವೀರ ಮಾಸಿಕದ ಮಾರ್ಚ್ ತಿಂಗಳ ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಗುವುದು.
ಕಾರ್ಯಕ್ರಮದ ಕೊನೆಯಲ್ಲಿ ಅಭಿನಯ ಮಂಟಪ ಮುಂಬಯಿಯ ಕಲಾವಿದರಿಂದ,ಕರುಣಾಕರ್ ಕಾಪು ಅವರ ನಿರ್ದೇಶನದಲ್ಲಿ “ಪಂಜುರ್ಲಿ ” ತುಳು ಜಾನಪದ ನಾಟಕ ಪ್ರದರ್ಶನಗೊಳ್ಳಲಿದೆ.
ಮೊಗವೀರ ಮಾಸಿಕದ 85ರ ಸಂಭ್ರಮದಲ್ಲಿ ಸಮಾಜ ಬಾಂಧವರು, ತುಳು -ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವಂತೆ ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಎಚ್ ಅರುಣ್ ಕುಮಾರ್, ಉಪಾಧ್ಯಕ್ಷರುಗಳಾದ, ಗೌರವ ಪ್ರಧಾನ ಕಾರ್ಯದರ್ಶಿ ದಿಲೀಪ್ ಕುಮಾರ್ ಮುಲ್ಕಿ, ಗೌರವ ಕೋಶಾಧಿಕಾರಿ ಪ್ರತಾಪ್ ಕುಮಾರ್ ಕರ್ಕೇರ, ಮೊಗವೀರ ಮಾಸಿಕ ಸಮಿತಿಯ ಕಾರ್ಯಧ್ಯಕ್ಷ ಪುರುಷೋತ್ತಮ ಎಲ್ ಕರ್ಕೇರ, ಸಂಪಾದಕರಾದ ಅಶೋಕ್ ಎಸ್ ಸುವರ್ಣ, ಪ್ರಭಂದಕ ಸುರೇಶ್ ಸಿ ಶ್ರೀಯಾನ್, ಮೊಗವೀರ ಮಾಸಿಕ ಸಮಿತಿಯ ಕಾರ್ಯದರ್ಶಿ ದಯಾವತಿ ಸುವರ್ಣ ಪ್ರಕಟಣೆ ಮೂಲಕ ತಿಳಿಸಿದ್ದಾರೆ.




