July 23, 2026
Mumbai News Kannada
ಸುದ್ದಿ

ಶ್ರೀಧರ ವೆಂಕಟೇಶ ಕುಲಕರ್ಣಿ ನಿಧನ








13/05/25,ಕಲ್ಯಾಣ (ಪ):ತಿಳಿಸುವುದೇನೆಂದರೆ ಸಂಘದ ಪ್ರಮುಖ ಕಾರ್ಯಕರ್ತ ಶ್ರೀ ಶ್ರೀಧರ ವೆಂಕಟೇಶ ಕುಲಕರ್ಣಿಯವರು ವಯಸ್ಸು 81,ಅಲ್ಪ ಕಾಲದ ಅನಾರೋಗ್ಯದ ನಂತರ 11/05/25ರಂದು ಮಧ್ಯಾಹ್ನ ತಮ್ಮ ಸ್ವಗ್ರಹದಲ್ಲಿ ದೈವಾಧೀನರಾಗಿದ್ದಾರೆ ಎಂದು ತಿಳಿಸುವುದಕ್ಕೆ ವಿಷಾದಿಸುತ್ತೇವೆ. ಬಾಗಲಕೋಟ, ಕರ್ನಾಟಕದಲ್ಲಿ 1944ರಲ್ಲಿ ಜನಿಸಿದ ಶ್ರೀಯುತರು ಉದ್ಯೋಗ ನಿಮಿತ್ತ 1967ರಲ್ಲಿ ಮುಂಬೈಗೆ ಆಗಮಿಸಿದ್ದು, ಮಹಾರಾಷ್ಟ್ರ ಸರಕಾರದಲ್ಲಿ ಎಕ್ಸಸೖಸ್(Excise) ವಿಭಾಗದಲ್ಲಿ ಅಧಿಕಾರಿಗಳಾಗಿ 38 ವರ್ಷ ಕಾರ್ಯ ನಿರ್ವಹಿಸಿ 2005ರಲ್ಲಿ ನಿವೃತ್ತರಾದರು. ತಮ್ಮ ಉದ್ಯೋಗ ಅವಧಿಯಲ್ಲಿ ಓರ್ವ ನಿಷ್ಟಾವಂತ ಪ್ರಾಮಾಣಿಕ ಅಧಿಕಾರಿಯಾಗಿ ಹೆಸರು ಗಳಿಸಿದ ಶ್ರೀಯುತರು ಸಂಘದ ಮಹಾ ಪೋಷಕರು ಹಾಗೂ ಸಂಪರ್ಕ ಅಧಿಕಾರಿಗಳಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದರು. ಹಲವಾರು ಅಖಿಲ ಭಾರತ ಹೊರನಾಡ ಕನ್ನಡಿಗರ ಸಮಾವೇಶಗಳಲ್ಲಿ ಸಂಘವನ್ನು ಪ್ರತಿನಿಧಿಸಿದ ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಕೂಡಾ ಆಗಿದ್ದರು. ಮೃತರ ಆತ್ಮಕ್ಕೆ ಸದ್ಗತಿ ಕೋರುತ್ತಾ, ಪತ್ನಿ, ಮಕ್ಕಳು, ಮೊಮ್ಮಕ್ಕಳು, ಸಮಸ್ತ ಹಿತ ಚಿಂತಕರು ಹಾಗೂ ಸಂಘದ ಸದಸ್ಯರಿಗೆ ಇವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.
ಅಧ್ಯಕ್ಷರು ಹಾಗೂ ಸಮಸ್ತ ಸದಸ್ಯರು
ಕರ್ನಾಟಕ ಸಂಘ, ಕಲ್ಯಾಣ



Related posts

ಮೊದಲು ಕನ್ನಡಿಗರ ಕ್ಷಮೆ ಕೇಳಿ : ಕಮಲ್ ಹಾಸನ್ ಗೆ ಹೈಕೋರ್ಟ್ ತರಾಟೆ

Mumbai News Desk

ಅಂತರರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಕಾರ್ಕಳದ ಪ್ರತಿಭೆ ಸಿಂಚನ್ ಎ. ಪೂಜಾರಿ ಆಯ್ಕೆ: ಕರ್ನಾಟಕಕ್ಕೆ ಹೆಮ್ಮೆಯ ಗೌರವ

Mumbai News Desk

ಆಶಾ ಭೋಸ್ಲೆ ಅವರ ಆರೋಗ್ಯದಲ್ಲಿ ಏರುಪೇರು: ಮುಂಬೈನ ಆಸ್ಪತ್ರೆಗೆ ದಾಖಲು

Mumbai News Desk

ಕಾಪು ಶ್ರೀ ಹೊಸಮಾರಿಗುಡಿ ವ್ಯವಸ್ಥಾಪನಾ ಸಮಿತಿಯಲ್ಲಿ ಮೊಗವೀರ ಸಮುದಾಯಕ್ಕೆ ಅವಕಾಶ ನೀಡಬೇಕು : ಕಾಪು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೈ. ಸುಕುಮಾರ್.

Mumbai News Desk

ನಿಶಾ ಪೂಜಾರಿ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ

Mumbai News Desk

ಜಾಗತಿಕ ಮಟ್ಟದಲ್ಲಿ ಕಾರ್ಕಳದ ಪ್ರತಿಭೆ: ಇಥಿಯೋಪಿಯದಲ್ಲಿ ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದ ನಿಟ್ಟೆಯ ವಿಶಾಲ್ ಪೂಜಾರಿ

Mumbai News Desk