September 6, 2026
Mumbai News Kannada
ತುಳುನಾಡು

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಷ್ಟಮಂಗಳ ಪ್ರಶ್ನೆಗೆ ಚಾಲನೆ





ಮೂಲ್ಕಿ ಒಂಬತ್ತು ಮಾಗಣೆಯ ಅಧಿದೇವತೆ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಪರಮೇಶ್ವರಿ ದೇವಸ್ಥಾನದ ಜಾತ್ರಾ
ಬ್ರಹ್ಮ ರಥೋತ್ಸವದಂದು ನಡೆದ ಬ್ರಹ್ಮರಥದ ಅವಘಡದ ಹಿನ್ನೆಲೆ ಕ್ಷೇತ್ರದಲ್ಲಿ ದೈವಜ್ಞರಾದ ವಳಕ್ಕುಂಜ ಮುರಳಿಕೃಷ್ಣ ಶರ್ಮ ಅವರ ನೇತೃತ್ವದಲ್ಲಿ
ಅಷ್ಟಮಂಗಳ ಪ್ರಕ್ರಿಯೆಗೆ ಬುಧವಾರ ಮುಂಜಾನೆ ಚಾಲನೆ ನೀಡಲಾಯಿತು.
ಮುಂಜಾನೆ ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ, ಅತ್ತೂರು ಬೈಲು ವೆಂಕಟರಾಜ ಉಡುಪ, ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್ ಉಪಸ್ಥಿತಿಯಲ್ಲಿ ವಿಶೇಷ ಪ್ರಾರ್ಥನೆ ನಡೆದು ಕ್ಷೇತ್ರದ ಆನುವಂಶಿಕ
ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರ ನೇತೃತ್ವದಲ್ಲಿ ದೈವಜ್ಞ ಒಳಕುಂಜ ಮುರಳಿ ಕೃಷ್ಣಶರ್ಮ ಅವರನ್ನು ಸ್ವಾಗತಿಸಿ ದೇವಸ್ಥಾನಕ್ಕೆ ಕರೆತರಲಾಯಿತು.
ಬಳಿಕ ಮಂಡಲ ರಚಿಸಿ ಕನ್ನಿಕೆಯಿಂದ ರಾಶಿ ಪೂಜೆ ಹಾಗೂ ¸ ಸ್ವರ್ಣ ನಿಕ್ಷೇಪದ ಮೂಲಕ ಅಷ್ಟಮಂಗಳ
ಪ್ರಶ್ನೆಗೆ ಚಾಲನೆ ನೀಡಲಾಯಿತು.
ಪ್ರಶ್ನೆಯಲ್ಲಿ ಧನು ರಾಶಿಯಿಂದ ಆರಂಭ ಶುಭ ಸೂಚನೆ ಬಂದು ಪ್ರಥಮ ರಾಶಿಗೆ ಗುರು ಬಲ ಇರುವ ಕಾರಣ ಇದು
ಮುಂದಿನ ದಿನಗಳಲ್ಲಿ ದೇವಸ್ಥಾನದ ಸಮಗ್ರ ಅಭಿವೃದ್ಧಿಯಾಗುವ ಮೂಲ ಲಕ್ಷಣಗಳ ಬಗ್ಗೆ ಎಂದು ದೈವಜ್ಞರು ಮಾಹಿತಿ ನೀಡಿದರು.
ಜೂ. 23ರಂದು ಎರಡನೇ ಭಾಗವಾಗಿ ನಿರಂತರ ಅಷ್ಟಮಂಗಳ ಪ್ರಶ್ನಾ ಚಿಂತನೆ ನಡೆಯಲಿದೆ ಎಂದು ಕ್ಷೇತ್ರದ ಒಂಬತ್ತು ಮಾಗಣಿಯ ಭಕ್ತರಿಗೆ ತಿಳಿಸಲಾಯಿತು.
ವಾಸುದೇವ ಭಟ್ ಪಾವಂಜೆ, ವಾದಿರಾಜ ಉಪಾಧ್ಯಾಯ ಕೊಲಕಾಡಿ. ಧರ್ಮದರ್ಶಿ ಡಾ . ಹರಿಕೃಷ್ಣ ಪುನರೂರು,
ಶ್ರೀ ವೆಂಕಟರಮಣ ದೇವಾಲಯದ ಮೊಕ್ತೇಸರ ಆತುಲ್ ಕುಡ್ವ, ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಆರ್ಚಕ ಅಪ್ಪು ಯಾನೇ ಶ್ರೀನಿವಾಸ ಪೂಜಾರಿ, ಅಧ್ಯಕ್ಷ ವಾಮನ್ ಇಡ್ಯಾ, ಶಾಸಕರಾದ ಉಮಾನಾಥ ಕೋಟ್ಯಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಕೆ. ಭುವನಾಭಿರಾಮ ಉಡುಪ, ಉದ್ಯಮಿ ಅರವಿಂದ ಪೂಂಜ, ಕೋಲ್ನಾಡು ಗೊತ್ತು ರಾಮಚಂದ್ರ ನಾಯಕ್, ಶರತ್ ಎನ್. ಸಾಲಿಯಾನ್, ಕೊಡೆತ್ತೂರು ಗುತ್ತು ಗುತ್ತಿನಾರ್ ನಿತೀನ್ ಶೆಟ್ಟಿ,
ಚಂದ್ರಶೇಖರ್ ಕಾಸಪ್ಪಯ್ಯನವರ ಮನೆ, ಕೊಳಚಿಕಂಬಳ ಗುರಿಕಾರ ಹರಿಶ್ಚಂದ್ರ ಪಿ ಸಾಲಿಯಾನ್, ಸುನಿಲ್ ಆಳ್ವ, ಶೇಖರ್ ಶೆಟ್ಟಿ ಕಿಲ್ಪಾಡಿ, ಸುಕುಮಾರ್ ಶೆಟ್ಟಿ, , ಮೂಲ್ಕಿ ನಗರ ಪಂಚಾಯತತ್ ಅಧ್ಯಕ್ಷ ಸತೀಶ್ ಅಂಚನ್, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಮೂಲ್ಕಿ ಅರಮನೆಯ
ಗೌತಮ್ ಜೈನ್, ಕಾರ್ಯನಿರ್ವಹಣಾಧಿಕಾರಿ ಶ್ವೇತ ಪಳ್ಳಿ , ವಿದ್ವಾನ್ ನಾಗೇಶ್ ಬಪ್ಪನಾಡು, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಉದಯಕುಮಾರ್ ಶೆಟ್ಟಿ ಅಧಿಧನ್, ರಂಗನಾಥ್ ಶೆಟ್ಟಿ, ದಿನೇಶ್ ಹೆಗ್ಡೆ ಮಾನಂಪಾಡಿ, ಸತೀಶ್ ಭಂಡಾರಿ, ವಿನೋದ್ ಸಾಲಿಯನ್ ಪುರಂದರ ಸಾಲ್ಯಾನ್, ಶಿವಕುಮಾರ್ ವರ್ಮ ಉಪಸ್ಥಿತರಿದ್ದರು.



Related posts

ಕೋಸ್ಟಲ್ ಫಿಲ್ಮ್ ಅವಾರ್ಡ್ಸ್: “ಜೈ” ತುಳು ಚಿತ್ರದ ನಟನೆಗೆ ಅಕ್ಷರ್ ಜಗನ್ನಾಥ್ ಶೆಟ್ಟಿ ಬಾಳಗೆ ಅತ್ಯುತ್ತಮ ಬಾಲನಟ ಪ್ರಶಸ್ತಿ

Mumbai News Desk

ಬೆಳ್ತಂಗಡಿ : ಬಿಲ್ಲವ ಸಮಾಜಕ್ಕೆ ಅವಹೇಳನ ಆರೋಪ – ಅನಿತಾ ಕಾಸರಗೋಡು ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

Mumbai News Desk

ಮುಲ್ಕಿ ಬಪ್ಪನಾಡು ದೇವಸ್ಥಾನದಲ್ಲಿ ಭವ್ಯ ಸ್ವಾಗತ ಗೋಪುರ ನಿರ್ಮಾಣಕ್ಕೆ ಬಿಲ್ಲವ ಸಮಾಜದ ಸಿದ್ಧತೆ

Mumbai News Desk

ತುಳುವೆರೆ ‘ತುಡರ ಪರ್ಬ’: ಬಲಿ ಚಕ್ರವರ್ತಿ ಬೊಕ್ಕ ಬೆನ್ನಿ ಸಂಸ್ಕೃತಿದ ಸಂಗಮ

Mumbai News Desk

ಮೂಲ್ಕಿ : ಚಿತ್ರಾಪು ಶ್ರೀ ವಿಠೋಬ ಬಾಲಲೀಲಾ ಭಜನಾ ಮಂದಿರದಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ

Mumbai News Desk

ಶ್ರೀ ಬಪ್ಪನಾಡು ಸೌಹರ್ದ ಸಹಕಾರಿ ಸಂಘ(ನಿ)ಇದರ ವಾರ್ಷಿಕ ಮಹಾಸಭೆಯಲ್ಲಿ ಹರಿಶ್ಚಂದ್ರ ಪಿ. ಸಾಲಿಯಾನ್‌ರವರಿಗೆ ಸನ್ಮಾನ

Mumbai News Desk