28.4 C
Mumbai
March 7, 2026
Mumbai News Kannada
ಸುದ್ದಿ

ತೋಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ “ಅಮೃತ ವರ್ಷಿಣಿ ” ಉದ್ಘಾಟನೆ





ತೋಕೂರು: ತೋಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆಯನ್ನು ಮೇ 30 ರಂದು ದ.ಕ ಹಾಲು ಉತ್ಪಾದಕರ ಒಕ್ಕೂಟ ದ ಅಧ್ಯಕ್ಷ ರವಿರಾಜ್ ಹೆಗ್ಡೆ ಉದ್ಘಾಟಿಸಿದರು.
ಈ ವೇಳೆ ಒಕ್ಕೂಟದ ಬಗ್ಗೆ ಮಾತನಾಡುತ್ತಾ, “ಹುಟ್ಟಿದ ಕರುವಿನಿಂದ ಹಿಡಿದು ಹಸು ಮರಣ ಹೊಂದುವವರೆಗೆ ಹೈನುಗಾರರಿಗೆ ಒಕ್ಕೂಟವು ಸವಲತ್ತುಗಳನ್ನು ನೀಡುತ್ತಿದೆ” ಎಂದರು.
ವ್ಯವಸ್ಥಾಪಕ ನಿರ್ದೇಶಕರಾದ ಸುಚರಿತ ಶೆಟ್ಟಿ ದೀಪ ಗೋದಾಮನ್ನು ಉದ್ಘಾಟಿಸಿ ಮಾತನಾಡಿ, ಯುವ ಪೀಳಿಗೆಗೆ ಹೈನುಗಾರಿಕೆಯನ್ನು ಪರಿಚಯಿಸುವುದು ನಮ್ಮ ಕರ್ತವ್ಯ ಎಂದರು.

ಮುಲ್ಕಿ ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್ ಶಾಖೆಗೆ ಭೇಟಿ ನೀಡಿ, ಕಟ್ಟಡಕ್ಕೆ ಅನುದಾನ ನೀಡುವ ಭರವಸೆಯನ್ನು ನೀಡಿದರು. ದ.ಕ. ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಸುಧಾಕರ್ ರೈ ,ವ್ಯವಸ್ಥಾಪಕರಾದ ರವಿರಾಜ್ ಉಡುಪ ಸಂಘಕ್ಕೆ ಭೇಟಿ ನೀಡಿ ನಿರ್ವಹಣೆಯ ಬಗ್ಗೆ ಪ್ರಶಂಸಿಸಿದರು.

ವ್ಯವಸ್ಥಾಪಕ ನಿರ್ದೇಶಕರಾದ ಸವಿತಾ ಶೆಟ್ಟಿ , ನಂದರಾಮ್ , ಗುರುಪ್ರಸಾದ್ , ಹಾಗೂ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಅಧ್ಯಕ್ಷರಾದ ಗುರುರಾಜ್ ಎಸ್ ಪೂಜಾರಿ , ಪಂಚಾಯತ್ ಉಪಾಧ್ಯಕ್ಷರಾದ ಹೇಮನಾಥ ಅಮೀನ್ , ದೇವಪ್ರಸಾದ್ ಪುನರೂರು , ಧರ್ಮಸ್ಥಳ ಗ್ರಾಮಾಭಿೃದ್ಧಿ ಯೋಜನೆಯ ವತಿಯಿಂದ ಹಳೆಯಂಗಡಿ ವಲಯಾಧಿಕಾರಿ ನಿಶ್ಮಿತಾ, ಒಕ್ಕೂಟದ ಉಪ ವ್ಯವಸ್ಥಾಪಕರಾದ ಚಂದ್ರಶೇಖರ್ ಭಟ್, ವಿಸ್ತರಣಾಧಿಕಾರಿ ಸಂದೀಪ್, ಗ್ರಾಮದ ಗಣ್ಯರಾದ ಪದ್ಮನಾಭ್ ಆಚಾರ್ಯ, ವ್ಯವಸ್ಥಾಪನಾ ಸದಸ್ಯರಾದ ತೋಕೂರು ಗುತ್ತುಸಂಪತ್ ಶೆಟ್ಟಿ, ಸವಿತಾ ಬೆಳ್ಳಯಾರು, ಕುಸುಮ ಹರೀಶ್ , ಪಂಜ ನವೀನ್ ಶೆಟ್ಟಿ .,ಪ್ರಮೀಳಾ ಡಿ ಶೆಟ್ಟಿ ತೋಕೂರು ಯುವಕ ಸಂಘದ ಅಧ್ಯಕ್ಷರಾದ ರಮೇಶ್ ದೇವಾಡಿಗ ಉಪಸ್ಥಿತರಿದ್ದರು.

ಅಧ್ಯಕ್ಷರಾದ ಲತಾ ಡಿ ಭಟ್ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ನಡೆಯಿತು. ಅಧ್ಯಕ್ಷರು ಸ್ವಾಗತಿಸಿದರು. ಮುಖ್ಯ ನಿರ್ವಹಣಾಧಿಕಾರಿಯಾದ ಪದ್ಮಪ್ರಿಯಾ ವರದಿಯನ್ನು ವಾಚಿಸಿದರು. ನಿರೂಪಣೆಯನ್ನು ಗೀತ ಸದಾನಂದ್ ನೆರವೇರಿಸಿದರು. ಆಡಳಿತ ಮಂಡಳಿಯ ಸದಸ್ಯರುಗಳು ಉಪಸ್ಥಿತರಿದ್ದರು.



Related posts

ಮಾಜಿ ಪ್ರಧಾನಿ ಡಾ ಮನಮೋಹನ್‌ ಸಿಂಗ್‌ ನಿಧನ

Mumbai News Desk

ಶೋಲೆ ಚಿತ್ರದ ಐಕಾನಿಕ್ ಜೈಲರ್ ಅಸ್ರಾನಿ ನಿಧನ

Mumbai News Desk

ನಿಟ್ಟೆ ಶಿಕ್ಷಣ ಟ್ರಸ್ಟ್‌ನ ಸಂಸ್ಥಾಪಕ ಎನ್ ವಿನಯ ಹೆಗ್ಡೆ ನಿಧನ

Mumbai News Desk

ನಾಸಿಕ್ ತುಳು ಸೇವಾ ಸಂಘದ 36ನೇ ವಾರ್ಷಿಕೋತ್ಸವ:

Mumbai News Desk

ಮುಲ್ಕಿ: ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ಜನಾಕರ್ಷಣೆ ಪಡೆಯುತ್ತಿರುವ ಪುಂಗನೂರು ತಳಿಯ ಹಸು

Mumbai News Desk

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ   ‘ಸುವರ್ಣಯುಗ’ ಕೃತಿ ಬಿಡುಗಡೆ

Mumbai News Desk