30.9 C
Mumbai
June 8, 2026
Mumbai News Kannada
ತುಳುನಾಡು

ಹರಿಶ್ಚಂದ್ರ ಪಿ. ಸಾಲ್ಯಾನ್‌ ನುಡಿಮುತ್ತು ಕೃತಿ ಬಿಡುಗಡೆ ಸಮಾರಂಭ






ಮೂಲ್ಕಿ : ಲೇಖಕರಿಗೆ ಪ್ರೋತ್ಸಾಹ ಮತ್ತು ಸಹಕಾರ ನೀಡಿದರೆ ಮಾತ್ರ ಸಮಾಜದಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯ. ಸಾಹಿತಿಗಳು ಸರಸ್ವತಿ ಪುತ್ರರು. ಲಕ್ಷ್ಮೀಪುತ್ರರು ಕೊಂಡು ಓದಿ ಅವರನ್ನು ಬೆಳೆಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರು ಹೇಳಿದರು.
ಹೊಸ ಅಂಗಣದ ಸಂಪಾದಕ ಹರಿಶ್ಚಂದ್ರ ಪಿ. ಸಾಲಿಯಾನ್‌ರವರ “ನುಡಿಮುತ್ತು” ಕೃತಿಯನ್ನು ಮೂಲ್ಕಿ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರು ಕೃತಿ ಬಿಡುಗಡೆ ಮಾಡಿ ಮಾತನಾಡಿದರು.


ಯಕ್ಷಗಾನ ಅಕಾಡೆಮಿ ಅಧ್ಯಕ್ಷರು ಡಾ| ತಲ್ಲೂರು ಶಿವರಾಮ್ ಶೆಟ್ಟಿ ಮಾತನಾಡಿ ನುಡಿಮುತ್ತು ಕೃತಿಯು ಒಂದು ಅಮೂಲ್ಯ ಕೃತಿಯಾಗಿದೆ. ಮನುಷ್ಯನ ಜೀವನದಲ್ಲಿ ಹಾಗೂ ಹೋಗುಗಳ ಬಗ್ಗೆ ನಿಖರವಾಗಿ ಹೇಳಿ ಅವರನ್ನು ಸರಿದಾರಿಗೆ ಕೊಂಡು ಹೋಗುವ ನುಡಿಮುತ್ತು ಕೃತಿಯನ್ನು ಹರಿಶ್ಚಂದ್ರ ಪಿ. ಸಾಲ್ಯಾನ್‌ರವರು ಪ್ರಕಟ ಮಾಡಿ ಜನರಿಗೆ ನೀಡಿದ್ದಾರೆ. ಇದರ ಸದೋಪಯೋಗವನ್ನು ಪಡೆದು ಸಾಲ್ಯಾನ್‌ರವರಿಗೆ ಇನ್ನೂ ಹೆಚ್ಚಿನ ಕೃತಿಯನ್ನು ಬರೆಯಲು ನಾವೆಲ್ಲರೂ ಸಹಕಾರ ನೀಡುವ ಎಂದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಡಾ| ತಲ್ಲೂರು ಶಿವರಾಮ ಶೆಟ್ಟಿಯವರು ಹೇಳಿದರು.
ಮೂಲ್ಕಿಯ ಖ್ಯಾತ ವೈದ್ಯರಾದ ಡಾ| ಅರುಣ್ ಕುಡ್ಡ ಅವರು ಅತಿಥಿಯಾಗಿ ಮಾತನಾಡಿ ನನ್ನ ತಂದೆ ಡಾ| ಅಚ್ಚುತ್ ಕುಡ್ವರವರು ಸಾಹಿತ್ಯದ ಅಭಿಮಾನಿ, ಅವರಿಗೆ ಈ ಕೃತಿಯನ್ನು ಅರ್ಪಣೆ ಮಾಡಿದ ಹರಿಶ್ಚಂದ್ರ ಪಿ. ಸಾಲ್ಯಾನ್‌ರವರಿಗೆ ತನ್ನ ವಂದನೆಯನ್ನು ಹೇಳಿದರು. ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವಾಮನ ಕೋಟ್ಯಾನ್‌ರವರು ಅತಿಥಿಯಾಗಿ ಮಾತನಾಡಿ ಮೂಲ್ಕಿಯ ಏಕೈಕ ಪತ್ರಿಕೆ ಹೊಸ ಅಂಗಣದಲ್ಲಿ ಬಹಳಷ್ಟು ಒಳ್ಳೆಯ ಲೇಖನಗಳು ಬರುತ್ತಿದ್ದು ಸ್ಥಳೀಯ ಸುದ್ದಿಗಳು ಕೂಡ ಬಂದು ಜನರು ಮೆಚ್ಚುವಂತಾಗಿದೆ ಇದಕ್ಕೆ ನಾವು ಸಹಕರಿಸುವ ಎಂದು ಹೇಳಿದರು.
ಪತ್ರಕರ್ತರ ಸಂಘದ ಅಧ್ಯಕ್ಷರಾದ ನಿಶಾಂತ್ ಶೆಟ್ಟಿ ಕೀಲೆಂಜೂರು, ನುಡಿಮುತ್ತು ಕೃತಿಯಂತೆ ಇನ್ನೂ ಹಲವಾರು ಕೃತಿಯನ್ನು ಹರಿಶ್ಚಂದ್ರ ಪಿ ಸಾಲ್ಯಾನ್ ರವರು ಬರೆದು ಸಾಹಿತ್ಯಕ್ಕೆ ತನ್ನ ಕೊಡುಗೆಯನ್ನು ನೀಡಲಿ ಎಂದು ಹೇಳಿದರು.
ಇನೋರ್ವ ಮುಖ್ಯ ಅತಿಥಿ ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆಯ ಸಂಚಾಲಕ ಹರೀಂದ್ರ ಸುವರ್ಣರು ಮಾತನಾಡುತ್ತಾ ಹೊಸ ಅಂಗಣ ಪತ್ರಿಕೆ ಸಂಪಾದಕರು ಸಾಹಿತ್ಯದಲ್ಲಿ ಹಲವಾರು ಕೃತಿಗಳನ್ನು ಬರೆದಿದ್ದಾರೆ. ನನ್ನ ತಂದೆಯವರಾದ ದಿ| ಸೋಮಪ್ಪ ಸುವರ್ಣರ ಬಗ್ಗೆ ಅಭಿನಂದನಾ ಗ್ರಂಥವನ್ನು ಬಹಳ ಒಳ್ಳೆಯ ರೀತಿಯಿಂದ ಬರೆದುದನ್ನು ಸ್ಮರಿಸಿದರು. ಅದರಂತೆ ಮೂಲ್ಕಿಯ ಬೇರೆ ಬೇರೆ ಸಾಧಕರ ಬಗ್ಗೆ ಲೇಖನಗಳನ್ನು ಬರೆದು ಜನಪ್ರಿಯರಾಗಿದ್ದಾರೆ ಎಂದು ಹೇಳಿದರು.

ಇನೋರ್ವ ಮುಖ್ಯ ಅತಿಥಿಯಾಗಿ ಪಿ.ವಿ ಪ್ರದೀಪ್ ಕುಮಾರ್, ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಪೂಜಾರಿ ಚಿತ್ರಾಮ, ಕೇಶವಾನಂದ ಸ್ವಾಮೀಜಿ, ಬಂಕಿನಾಯಕರು, ಜಯಪಾಲ ಶೆಟ್ಟಿ ಐಕಳ ಮತ್ತಿತರರು ಉಪಸ್ಥಿತರಿದ್ದರು.
ದಿನೇಶ್ ಶೆಟ್ಟಿ ಸ್ವಾಗತಿಸಿದರು. ಸತೀಶ್ ಕಿಲ್ಪಾಡಿ ನಿರೂಪಿಸಿದರು ರವಿಚಂದ್ರ ಧನ್ಯವಾದ ಅರ್ಪಿಸಿದರು.



Related posts

ಕಾಪುವಿನ ಶ್ರೀ ಬಬ್ಬರ್ಯ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಜರಗಿದ ಕಾಲದಿ ನೇಮೋತ್ಸವ

Mumbai News Desk

ಉಡುಪಿ : ಅಕ್ಷತಾ ಪೂಜಾರಿ ಮೇಲೆ ಪೊಲೀಸರಿಂದ ಹಲ್ಲೆ ಪ್ರಕರಣ – ಇಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ತುರ್ತು ಸಭೆ

Mumbai News Desk

ಹೆಜಮಾಡಿ ಬಿರುವೆರ್ ಬ್ರದರ್ಸ್ ನ ನೂತನ ಅಧ್ಯಕ್ಷರಾಗಿ ಗುರುಪ್ರಸಾದ್ ಪೂಜಾರಿ ಆಯ್ಕೆ.

Mumbai News Desk

ಇತಿಹಾಸ ಪ್ರಸಿದ್ಧ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನಕ್ಕೆ ನೂತನ ಆಡಳಿತ ಮುಕ್ತೇಸರರಾಗಿ ಚಂದ್ರಶೇಖರ ಬೆಳ್ಚಡ ಆಯ್ಕೆ

Mumbai News Desk

ಪ್ರಪಂಚಾದ್ಯಂತ ನೆಲೆಸಿರುವ ಜನರು ಕಾಪು ಮಾರಿಗುಡಿಯನ್ನೊಮ್ಮೆ ನೋಡಬೇಕು : ಶಿರೂರು ಶ್ರೀ ಶ್ರೀ ವೇದವರ್ಧನ ಸ್ವಾಮೀಜಿ 

Mumbai News Desk

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ ದಲ್ಲಿ ಬ್ರಹ್ಮಕಲಶೋತ್ಸವ; ಶುಭಾರಂಭ

Mumbai News Desk