32 C
Mumbai
April 24, 2026
Mumbai News Kannada
ತುಳುನಾಡು

ಮೂಲ್ಕಿ ಹೊಸ ಅಂಗಣ ಮಾಸಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮ : ಕುಬೇವೂರು ಶ್ರೀ ಜಾರಂದಾಯ ದೇವಸ್ಥಾನದ ಅರ್ಚಕ ಶೇಖರ್ ಪೂಜಾರಿ ಅವರಿಗೆ ಗೌರವ





ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ಸಾಧಕರನ್ನು ಗೌರವಿಸುವ ಕಾರ್ಯ ಶ್ರೇಷ್ಠ – ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು


ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆಗೈದು ಯುವ ಸಮಾಜಕ್ಕೆ ಮಾದರಿಯಾಗಿರುವ ವ್ಯಕ್ತಿಗಳನ್ನು ಗೌರವಿಸಿ ಸಮಾಜಕ್ಕೆ ಪರಿಚಯಿಸುವ ಕಾರ್ಯ ಅಭಿನಂದನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಹೇಳಿದರು.
ಮೂಲ್ಕಿಯಲ್ಲಿ ಗುರುವಾರ ಸಂಜೆ ಹೊಸ ಅಂಗಣದ ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ಸಮಾಜದ ಸಾಧಕರನ್ನು ಗೌರವಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಕೆನರಾ ಬ್ಯಾಂಕ್ ಮೂಲ್ಕಿ ಶಾಖಾಧಿಕಾರಿ ಅನಿಲ್ ಮೊರೆಯವರು ಅತಿಥಿಯಾಗಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಸಾಹಿತ್ಯದ ಬಗ್ಗೆ ನಾವು ಗೌರವಿಸಿ ಸಾಹಿತ್ಯಕ್ಕೆ ಆದಷ್ಟು ಪ್ರೋತ್ಸಾಹವನ್ನು ನೀಡುತ್ತಾ ಬರಬೇಕು ಹಾಗೂ ಸ್ಥಳೀಯ ಸಾಧಕರನ್ನು ಗೌರವಿಸುವ ಕಾರ್ಯಕ್ರಮ ಮಾಡುವುದು ಶ್ಲಾಘನೀಯ ಕೆಲಸ, ಮೂಲ್ಕಿಯ ಹೊಸ ಅಂಗಣ ಪತ್ರಿಕೆಗೆ ನಾವೆಲ್ಲರೂ ಪ್ರೋತ್ಸಾಹಿಸುವ ಎಂದರು.
ಸಾಧಕರ ನೆಲೆಯಲ್ಲಿ ಕುಬೇವೂರು ಶ್ರೀ ಜಾರಂದಾಯ ದೇವಸ್ಥಾನದ ಅರ್ಚಕ ಶೇಖರ್ ಪೂಜಾರಿ ಅವರನ್ನು ಗೌರವಿಸಲಾಯಿತು.
ಅತಿಥಿಗಳಾಗಿ ಕೇಶವಾನಂದ ಸ್ವಾಮೀ ಚಿತ್ರಾಪು, ಮೂಲ್ಕಿ ಬಿಲ್ಲವ ಸಮಾಜ ಸೇವ ಸಂಘದ ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಕುಬೇವೂರು, ಮಂಗಳೂರು ಶಾರದಾ ವಿದ್ಯಾಲಯದ ಪ್ರಾಂಶುಪಾಲೆ ಚಂದ್ರಿಕಾ ಭಂಡಾರಿ, ಉದ್ಯಮಿ ವೆಂಕಟೇಶ ಹೆಬ್ಬಾರ್, ಬಂಕಿ ನಾಯಕ, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ವೈ ಎನ್ ಸಾಲ್ಯಾನ್, ಮುಲ್ಕಿ ನ. ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷ ರಾಜ್ ಶೆಟ್ಟಿ, ಉದ್ಯಮಿ ಜೋನ್ ಕ್ವಾಡ್ರಸ್, ಸಂಘಟಕ ಡಾ. ಹರಿಶ್ಚಂದ್ರ ಪಿ ಸಾಲ್ಯಾನ್, ವಾಸು ಪೂಜಾರಿ ಚಿತ್ರಾಪು, ಜಯಪಾಲ್ ಶೆಟ್ಟಿ ಐಕಳ, ವಿಜಯಕುಮಾರ್ ಕುಬೇವೂರು, ಪುಷ್ಪರಾಜ ಚೌಟ, ವಕೀಲ ರವೀಶ್ ಕಾಮತ್, ದಿನೇಶ್ ಶೆಟ್ಟಿ, ಸಾಧು ಅಂಚನ್ ಮತ್ತು ಮತ್ತಿತರರು ಉಪಸಿತರಿದ್ದರು.
ಡಾ. ಹರಿಶ್ಚಂದ್ರ ಸಾಲ್ಯಾನ್ ಸ್ವಾಗತಿಸಿದರು, ದಿನೇಶ್ ಶೆಟ್ಟಿ ವಂದಿಸಿದರು. ವೈ ಏನ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.



Related posts

ಮಲ್ಪೆ- ಕಡಲ ಮಕ್ಕಳಿಂದ ಸಂಭ್ರಮದ ಸಮುದ್ರ ಪೂಜೆ.

Mumbai News Desk

ಮಂಗಳೂರು : ಮೂಲತ್ವ ಪೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ

Mumbai News Desk

ಬಿರುವೆರ್‌ ಕಾಪು ಸೇವಾ ಸಮಿತಿ ವತಿಯಿಂದ ಆಟಿ ಕಷಾಯ ವಿತರಣೆ

Mumbai News Desk

ಹೆಜಮಾಡಿ ಬಿರುವೆರ್ ಬ್ರದರ್ಸ್ ನ ನೂತನ ಅಧ್ಯಕ್ಷರಾಗಿ ಗುರುಪ್ರಸಾದ್ ಪೂಜಾರಿ ಆಯ್ಕೆ.

Mumbai News Desk

ಕಾಪು: ಜನ ಮೆಚ್ಚಿದ ತಹಶೀಲ್ದಾರ್ ಡಾ. ಪ್ರತಿಭಾ ಅವರಿಗೆ ಆತ್ಮೀಯ ಬೀಳ್ಕೊಡುಗೆ

Mumbai News Desk

ಕಲ್ಯಾಣಪುರ : ಸಂತೆಕಟ್ಟೆ ಬಿಲ್ಲವರ ಸೇವಾಸಂಘ (ರಿ ), ನಯಂಪಳ್ಳಿ – ಸಂತೆಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜನ್ಮದಿನಾಚರಣೆ

Mumbai News Desk