September 6, 2026
Mumbai News Kannada
ಸುದ್ದಿ

ಬೊಯಿಸರ್ ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಗುರುಪೂರ್ಣಿಮೆ.





 ಸಚಿತ್ರ ವರದಿ : ಪಿ.ಆರ್.ರವಿಶಂಕರ್

ಬೊಯಿಸರ್ : ತಾ.10 ಜುಲೈ 2025

       ನಿತ್ಯಾನಂದರ ಅಸೀಮ ಭಕ್ತರಾದ  ದಿ. ಶ್ರೀ ಕೋಡಿಕಲ್ ದಾಮೋದರ್ ನಾಯ್ಕ್ ರವರು ಸ್ಥಾಪಿಸಿ ಲೋಕಾರ್ಪಣೆ ಮಾಡಿದ ಮಹಾರಾಷ್ಟ್ರ ಕರಾವಳಿಯಲ್ಲಿನ   ಪಾಲ್ಘರ್ ಜಿಲ್ಲೆಯ ಬೊಯಿಸರ್ ಪಶ್ಚಿಮದಲ್ಲಿನ ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಆಷಾಡ ಪೂರ್ಣಿಮೆಯಂದು ಗುರುಪೂರ್ಣಿಮೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.  
ಪ್ರಾತಃಕಾಲದ ಕಲಶಪೂಜೆಯನ್ನು ಶ್ರೀಮತಿ ಪದ್ಮಾವತಿ ಹಾಗೂ ಸತ್ಯಾ ಕೋಟ್ಯಾನ್ ದಂಪತಿಗಳು ನೆರವೇರಿಸಿದರು. ಆನಂತರ ಶ್ರೀ ಗುರುದೇವರಿಗೆ ಪಂಚಾಮೃತ ಅಭಿಷೇಕದ ಬಳಿಕ ಜರಗಿದ  ಸಾರ್ವಜನಿಕ ಸೀಯಾಳ ಅಭಿಷೇಕದಲ್ಲಿ ಭಕ್ತಾಭಿಮಾನಿಗಳೆಲ್ಲರೂ ಭಾಗವಹಿಸಿದ್ದರು. 


     ಆನಂತರ ಸದ್ಗುರು ಭಜನಾ ಮಂಡಳಿಯ ವತಿಯಿಂದ ವಿವಿಧ ಭಕ್ತಿಗೀತೆ ಹಾಗೂ ಭಜನಾ ಕಾರ್ಯಕ್ರಮ ಜರಗಿತು. ಧಾರ್ಮಿಕ ವಿಧಿವಿಧಾನಗಳನ್ನು ಪುರೋಹಿತ ಹರೀಶ್ ಶಾಂತಿ ಮತ್ತು  ಪುರೋಹಿತ ರಾಜೇಶ್  ಶಾಂತಿ ಜರಗಿಸಿದರು . ವಿಶೇಷ ಗುರು ಪೂಜೆ ಹಾಗೂ ಮದ್ಯಾಹ್ನದ ಮಂಗಳ ಆರತಿಯ ಬಳಿಕ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
  ಈ ಕಾರ್ಯಕ್ರಮದಲ್ಲಿ ಪಾಲ್ಘರ್ ತಾಲೂಕು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ರಘುರಾಮ್ ಕೆ. ರೈ , ಡಹಾಣೂ ಹೋಟೆಲ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಎಸ್. ಶೆಟ್ಟಿ ,  ಮಂದಿರದ ವಿಶ್ವಸ್ಥ ಮಂಡಳಿಯ ಶ್ರೀನಿವಾಸ್ ಕೋಟ್ಯಾನ್ , ಸತ್ಯಾ ಕೋಟ್ಯನ್ , ಭಕ್ತ ವೃಂದದ ಸದಸ್ಯರು , ಸದ್ಗುರು ಭಜನಾ ಮಂಡಳಿಯ ಸದಸ್ಯರು , ಪಾಲ್ಘರ್ ಜಿಲ್ಲೆಯ   ವಿವಿಧ ಸಂಸ್ಥೆಯ ಪದಾಧಿಕಾರಿಗಳು  ಹಾಗೂ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 
ಕಾರ್ಯಕ್ರಮ ವ್ಯವಸ್ಥಾಪನೆಯ ಉಸ್ತುವಾರಿಯಲ್ಲಿ ರಮಾನಂದ ಪೂಜಾರಿ ಮತ್ತು ಸಂಗಡಿಗರು ಸಹಕರಿಸಿದರು.
   ಚಿತ್ರ ಹಾಗೂ ಸುದ್ದಿ : ಪಿ.ಆರ್.ರವಿಶಂಕರ್
                    8483980035



Related posts

ಚಿತ್ರರಂಗದ ಮಿನುಗು ತಾರೆ ರೀಟಾ ಆರ್. ಅಂಚನ್ ವಿಧಿವಶ

Mumbai News Desk

ಭಾರತ್ ಬ್ಯಾಂಕ್ ಗೆ ಅತ್ಯುತ್ತಮ ಮಾನವ ಸಂಪನ್ಮೂಲ ನಿರ್ವಹಣಾ ಪ್ರಶಸ್ತಿ ( Best HR Management Award )

Mumbai News Desk

ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ ಐಬಿಎ (IBA) ಪ್ರಶಸ್ತಿಗಳ ಗರಿ: ಡಿಜಿಟಲ್ ಸೇಲ್ಸ್ ಮತ್ತು ಐಟಿ ರಿಸ್ಕ್ ಮ್ಯಾನೇಜ್‌ಮೆಂಟ್‌ನಲ್ಲಿ ಅತ್ಯುತ್ತಮ ಸಾಧನೆ

Mumbai News Desk

ಯಕ್ಷಗಾನ ರಂಗದ ಅಮರ ಗಂಧರ್ವ ಕಾಳಿಂಗ ನಾವಡರ ಪುಣ್ಯಸ್ಮರಣೆ: ಕರಾವಳಿಯ ಕೋಗಿಲೆಗೆ ನುಡಿನಮನ

Mumbai News Desk

ಗೋವಾ ಮಂಗೇಶಿ ಕ್ಷೇತ್ರದಲ್ಲಿ ಸಾರಸ್ವತ ವೈದಿಕ ಸಮಾವೇಶ.

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ನ ಪ್ರಶಸ್ತಿ ಸ್ವೀಕರಿಸಿದ ಫೂಲ್‌ಬಸನ್ ಬಾಯಿ ಯಾದವ್ ಆಶಯ : ಅಹಂ, ಆಸೆಯಿಂದ ಕೇಡು; ಕರ್ಮ ಒಳಿತಿನ ಬೀಡು

Mumbai News Desk