July 23, 2026
Mumbai News Kannada
ಮುಂಬಯಿ

ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್, ಇದರ 16ನೇ ವರ್ಷದ ವಾರ್ಷಿಕ  ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ







ಕಾರ್ಯಕ್ರಮದ ಯಶಸ್ವಿಗೆ ಸದಸ್ಯರ ಸಹಕಾರ ಅಗತ್ಯ – ನ್ಯಾಯವಾದಿ ಜಗನ್ನಾಥ್ ಶೆಟ್ಟಿ

ಮಲಾಡ್  ಪೂರ್ವದ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ , ಇದರ 16ನೇ ವರ್ಷದ ವಾರ್ಷಿಕ  ಪೂಜೆಯು ಅಗಸ್ಟ್ ಹತ್ತರಂದು ಸ್ವಾಮಿನಾರಾಯಣ ಸಭಾಂಗಣದಲ್ಲಿ. ನಗರದ ಗಣ್ಯರ ಸಮ್ಮುಖದಲ್ಲಿ ಕಟೀಲ್ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಹರಿ ನಾರಾಯಣ ಆಸ್ರಣ್ಣ ಅವರ ಉಪಸ್ಥಿತಿಯಲ್ಲಿ,ವಿದ್ವಾನ್  ಕೈರಬೆಟ್ಟು ವಿಶ್ವನಾಥ್ ಭಟ್ಟ ಅವರು ಪೂಜೆಯನ್ನು ನಡೆಸಲಿದ್ದು,ಇದರ 
 ಆಮಂತ್ರಣ ಪತ್ರಿಕೆಯ ಬಿಡುಗಡೆ ,ಜುಲೈ 11 ರವಿವಾರದಂದು ಪೂಜಾ ಸಮಿತಿಯ ಅಧ್ಯಕ್ಷರಾದ ಜಗನ್ನಾಥ್ ಶೆಟ್ಟಿ ಪಣಿಯೂರು ಹಾಗೂ ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಕೆ ಆಚಾರ್ಯ ಮತ್ತಿತರ ಪದಾಧಿಕಾರಿಗಳ ಸಮ್ಮುಖದಲ್ಲಿ ಬಿಡುಗಡೆಗೊಂಡಿದೆ .
ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ್ ಶೆಟ್ಟಿ
ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ವೈಭವ ಪೂರಿತವಾಗಿ ಭಕ್ತಿ ಸಂಭ್ರಮದೊಂದಿಗೆ ಪೂಜೆಯನ್ನು ನಡೆಸುವ ಸಿದ್ಧತೆಯನ್ನು ನಡೆಸಿದ್ದೇವೆ. ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು., ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಸದಸ್ಯರು, ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯರಾಗಿ ಸೇವೆಯನ್ನು ಮಾಡಬೇಕು. ಆಗಮಿಸುವ ಭಕ್ತರಿಗೆ ಎಲ್ಲಾ ರೀತಿಯ ಅನುಕೂಲವಾಗುವ ರೀತಿಯಲ್ಲಿ ಸೇವೆ ನಡೆಯುವಂತಾಗಲು ಎಲ್ಲರ ಪರಿಶ್ರಮ ಅಗತ್ಯ ಎಂದು ನುಡಿದರು.
ಈ ಸಂದರ್ಭದಲ್ಲಿ ಪೂಜಾ ಸಮಿತಿಯ ಕಾರ್ಯದರ್ಶಿ ಸನತ್ ಪೂಜಾರಿ ಸದಸ್ಯರನ್ನುದ್ದೇಶಿಸಿ ಮಾತನಾಡಿದರು. ಪತ್ರಿಕೆಯ ಬಿಡುಗಡೆಯ ಸಂದರ್ಭದಲ್ಲಿ ಪೂಜಾ  ಸಮಿತಿಯ ಉಪ ಕಾರ್ಯಾಧ್ಯಕ್ಷರು ಕುಮಾರೇಶ್ ಆಚಾರ್ಯ, ಕೋಶಾಧಿಕಾರಿ ಸುರೇಂದ್ರಚಾರ್ಯ , ಮಹಿಳಾ ವಿಭಾಗದ ಸಲಹೆಗಾರ್ತಿಯರಾದ ಮೋಹಿನಿ ಜೆ ಶೆಟ್ಟಿ ಮತ್ತು ರತ್ನ ಡಿ ಕುಲಾಲ್ ಉಪಕಾರ್ಯಾಧ್ಯಕ್ಷೇ ಗೀತಾ ಜೆ ಮೆಂಡನ್,ಸಂಧ್ಯಾ ಪ್ರಭು ಜೊತೆ ಕಾರ್ಯದರ್ಶಿ ವಿದ್ಯಾ ಆಚಾರ್ಯ ,ಜೊತೆ ಕೋಶಾಧಿಕಾರಿಗಳಾದ ಶೋಭ ರಾವ್ ಹಾಗೂ ವಿದ್ಯಾ ನಾಯಕ್, ಯುವ ವಿಭಾಗದ ಕಾರ್ಯಧ್ಯಕ್ಷ ಸುದೀಪ್ ಪೂಜಾರಿ , ಸಂಚಾಲಕ ಡಾ. ಶಶಿನ್ ಆಚಾರ್ಯ. ಉಪ ಕಾರ್ಯಧ್ಯಕ್ಷೆ  ಪ್ರಣೀತ ವಿ.  ಶೆಟ್ಟಿ, ಪ್ರತೀಕ್ ಜೆ ಶೆಟ್ಟಿ, ರೇಷ್ಮಾ.ಶಶಿನ್. ಆಚಾರ್ಯ
ಉಪಸ್ಥಿತರಿದ್ದರು. 
    ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ ಶ್ರೀಮತಿ ಕೆ ಆಚಾರ್ಯ ಈ ವರ್ಷದ ವಾರ್ಷಿಕ ಪೂಜೆಯಲ್ಲಿ ಮಹಿಳಾ ವಿಭಾಗದ ಸದಸ್ಯರು ಪ್ರಥಮ ಬಾರಿಗೆ ತಾಳ ಮದ್ದಲೆ ನಡೆಸಲಿದ್ದಾರೆ. ಕಾರ್ಯಕ್ರಮದ ಯಶಸ್ವಿಗೆ ಮಹಿಳಾ ವಿಭಾಗದ ಸದಸ್ಯರು ಹೆಚ್ಚು ಜವಾಬ್ದಾರಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಸಮಿತಿಯ ಗೌರವ ಕೋಶಾಧಿಕಾರಿ  ಸುರೇಂದ್ರ ಆಚಾರ್ಯ ಧನ್ಯವಾದ ನೀಡಿದರು.

B. Dinesh Kulal

Mob.: 9821868674



Related posts

ಬೈಂದೂರು-ಕುಂದಾಪುರ ಬಿಲ್ಲವರು ಮುಂಬಯಿ ಸ್ನೇಹ ಸಮ್ಮಿಲನ, ಅರಸಿನ ಕುಂಕುಮ ಮತ್ತು ಮನೋರಂಜನಾ ಕಾರ್ಯಕ್ರಮ

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ತನಿಷ್ ಸಂತೋಷ್ ಪೂಜಾರಿಗೆ ಶೇ.92.60 ಅಂಕ

Mumbai News Desk

ಮುಂಬಯಿಯಲ್ಲಿ “ಕುಲಾಲ ಭವನ ಮಂಗಳೂರು” ಲೋಕಾರ್ಪಣೆ ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk

ನವರಾತ್ರಿ ವೈಭವ: ‘ಓಂ ಶಕ್ತಿ ಮಹಿಳಾ ಸಂಸ್ಥಾ’ದ ಗರ್ಬಾ ನೃತ್ಯೋತ್ಸವ – ಸೇವಾ ಪಥಕ್ಕೆ ದುರ್ಗೆಯ ಆಶೀರ್ವಾದ

Mumbai News Desk

ಮಲಾಡ್ ಪೂರ್ವದ ಶ್ರೀ ದೇವಿ ಮಹಮ್ಮಾಯಿ ದೇವಸ್ಥಾನದಲ್ಲಿ  ಅಯ್ಯಪ್ಪ ಸ್ವಾಮಿ ಗೆ ಅಪ್ಪ ಸೇವೆ.

Mumbai News Desk

ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ಅಂಧೇರಿ ಪಶ್ಚಿಮ –  35ನೇ ವಾರ್ಷಿಕ ಮಹಾಪೂಜೆ ಸಂಪನ್ನ, ಹಿರಿಯ ಸೇವಾ ಕರ್ತರಿಗೆ ಗೌರವ

Mumbai News Desk