September 6, 2026
Mumbai News Kannada
ಮುಂಬಯಿ

ಥಾಣೆಯಲ್ಲಿ ಶ್ರೀ ಕ್ಷೇತ್ರ ಒಡಿಯೂರಿನ  ಶ್ರೀ ಗುರುದೇವಾನಂದ ಸ್ವಾಮೀಜಿಯವರಿಗೆ ಗುರುವಂದನೆ –  ತನ್ನನ್ನು ತಾನು ಅರಿತುಕೊಳ್ಳುವುದೇಅಧ್ಯಾತ್ಮಿಕ :ಒಡಿಯೂರು ಶ್ರೀ 





ಚಿತ್ರ ವರದಿ : ದಿನೇಶ್ ಕುಲಾಲ್

ಬದುಕು ಎಚ್ಚರಿಕೆಯಿಂದ ಮುನ್ನಡೆಯಬೇಕು ತಾಂತ್ರಿಕ ಯುಗದಲ್ಲಿ ಮೊಬೈಲ್ ಎಂಬ ಅಸ್ತ್ರ ನಮಗೆ ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ಮಾಡುತ್ತದೆ, ಬಳಕೆ ಮಾಡುವಾಗ ಜಾಗರೂಕತೆ ವಹಿಸಬೇಕು. ಮಾನವನು ಮಾಧವನಾಗಬೇಕು ನಮ್ಮ ಬದುಕು ಭಗವಂತನಿಗೆ ಸಂಬಂಧವಾಗಿರಬೇಕು. ತನ್ನನ್ನು ತಾನು ಅರಿತುಕೊಳ್ಳುವುದೇ ಆಧ್ಯಾತ್ಮಿಕ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.

    ಶ್ರೀ ಗುರುದೇವ ಸೇವಾ ಬಳಗ ಥಾಣೆಯ ಸದಸ್ಯರ ಆಯೋಜನೆಯಲ್ಲಿ ಪರಮಪೂಜ್ಯ ಶ್ರೀಗುರುದೇವಾನಂದ ಸ್ವಾಮೀಜಿಯವರಿಗೆ ಗುರುವಂದನೆ ಮತ್ತು ಸತ್ಸಂಗ ಕಾರ್ಯಕ್ರಮ ಜು 22 ,  ಥಾಣ ಪಶ್ಚಿಮದ  ಎಲ್.ಬಿ.ಎಸ್. ಮಾರ್ಗ,ರಹೇಜಾ ಗಾರ್ಡನ್ ಎದುರುಗಡೆಯ ಉದಯ್ ಶೆಟ್ಟಿ ಅವರ ಮಾಲಕತ್ತದ ಹೊಟೇಲ್ ವುಡ್‌ಲ್ಯಾಂಡ್ ರಿಟ್ರೇಟ್ ಸಭಾಗೃಹದಲ್ಲಿ, ನಡೆಯಿತು., 

  ಪ್ರತಿಯೊಬ್ಬನು ಭಗವಂತನನ್ನು ಸಾಕ್ಷಾತ್ಕರಿಸುವುದಕ್ಕಾಗಿ ಭಜನೆಯನ್ನು ಮಾಡಬೇಕು ಅದರಿಂದ ಸಂತೋಷವೂ ಇದೆ ಮತ್ತು ಆತ್ಮಜ್ಞಾನ ಹಾಗೂ ಶಾರೀರಿಕ  ಹಸಿವು ನೀಗುತ್ತದೆ. ಈ ಪರಿಸರದಲ್ಲಿ ಬಹಳ ವರ್ಷಗಳಿಂದ ಗುರು ಭಕ್ತರು ಗುರುವಿಗಾಗಿ ಅಮೂಲ್ಯ ಸಮಯವನ್ನು ನೀಡುತ್ತಾರೆ ಅಲ್ಲದೆ ಮನೆ ಮನೆಯಲ್ಲಿ ಭಜನೆಯನ್ನು ಪ್ರಾರಂಭಿಸಿ ಸೇವಾ ಬಳಗದ ಸೇವೆಗಳನ್ನು ಜನಮಾನಸ್ಸದಲ್ಲಿ ಉಳಿಯುವಂತೆ ಸೇವೆ ಮಾಡುತ್ತಿದ್ದಾರೆ ಎಂದು ಒಡಿಯೂರು ಶ್ರೀ ಗಳು ನುಡಿದರು.

ಪ್ರಾರಂಭದಲ್ಲಿ ಉದಯ ಶೆಟ್ಟಿ ಮತ್ತು ಶುಭಲಕ್ಷ್ಮಿ ಉದಯ ಶೆಟ್ಟಿ ದಂಪತಿಗಳು ಪಾದಪೂಜೆಯನ್ನು ನಡೆಸಿದರು. ನವೋದಯ ಭಜನಾ ಮಂಡಳಿಯವರಿಂದ  ಭಜನೆ ನಡೆದರೆ ಶ್ರೀ ಒಡಿಯೂರು ಸಂಸ್ಥಾನದ ಸಾದ್ವಿ, ಮಾತಾನಂದಮಯಿ ಮಂತ್ರಪಟಿಸಿದರು.
ಕಾರ್ಯಕ್ರಮವನ್ನು ಸ್ವಾಮೀಜಿಯೊಂದಿಗೆ ಉದಯ ಶೆಟ್ಟಿ ದಂಪತಿ ಮತ್ತು ಶ್ರೀ ಗುರುದೇವ ಸೇವಾ ಬಳಗ ಮುಂಬೈ ಘಟಕದ ಅಧ್ಯಕ್ಷ ದಾಮೋದರ್ ಶೆಟ್ಟಿ, ಗೌರವ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪೇಟೆಮನೆ, ಉಪಾಧ್ಯಕ್ಷ ಮೋಹನ್ ಹೆಗ್ಡೆ,  ,  ಚಂದ್ರಾಹಾಸ್  ರೈ,. ಮನೋಜ್ ಹೆಗ್ಡೆ, ಮಹಿಳಾ ಸದಸ್ಯರು. ಭಜನಾ ತಂಡದವರು ಸೇರಿ
ದೀಪ ಬೆಳಗಿಸಿ ಉದ್ಘಾಟಿಸಿದರು

ಅಪಾರ ಸಂಖ್ಯೆಯಲ್ಲಿ ಗುರುಭಕ್ತರು ಪಾಲ್ಗೊಂಡಿದ್ದರು.
ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಮೀಜಿಯವರ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಸೇವಾಕಾರ್ಯಗಳನ್ನು ಭಕ್ತರಿಗೆ ತಿಳಿಸಿದರು.



Related posts

ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ  ಶ್ರೀಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿ -ಮೊಸರು ಕುಡಿಕೆ ಸಂಭ್ರಮ, ಭಕ್ತಿ ಸಂಗೀತ ಕಾಠ್ಯಕ್ರಮ,

Mumbai News Desk

ಭಾರತ್ ಬ್ಯಾಂಕ್ ಕಲೀನಾ ಶಾಖೆಯಲ್ಲಿ 48ನೇ ಸಂಸ್ಥಾಪನಾ ದಿನಾಚರಣೆ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಪ್ರೀಕ್ಷಾ ಪುಷ್ಪರಾಜ್ ಪೂಂಜಾ ಗೆ ಶೇ 93.20 ಅಂಕ.

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ವತಿಯಿಂದ ಮಲಾಡ್ ಪೂರ್ವದ ತುಳು  ಕನ್ನಡಿಗರ ಮನೆ ಮನೆಯಲ್ಲಿ ರಾಮ ನಾಮಸ್ಮರಣೆ

Mumbai News Desk

ಜಗಜ್ಯೋತಿ ಕಲಾ ವೃಂದ, ಡೊಂಬಿವಲಿ: 39ನೇ ವಾರ್ಷಿಕ ಮಹಾಸಭೆ

Mumbai News Desk

ಮೀರಾರೋಡಿನಲ್ಲಿ ಗೆಜ್ಜೆ ಗಿರಿ ಮೇಳದವರಿಂದ……ಎಡ್ಮೂರ ಮುಗೇರ ಸತ್ಯೊಲು…ಯಕ್ಷಗಾನ ಪ್ರದರ್ಶನ.

Mumbai News Desk