September 6, 2026
Mumbai News Kannada
ಪ್ರಕಟಣೆ

ಭಾಯಂದರ್ ಶ್ರೀ ಅಯ್ಯಪ್ಪ ಆರಾಧನಾ ಭಕ್ತ ಮಂಡಲ.ಅ.17ರಂದು ಪೂಜಾ ದೇವರುಗಳ ರಜತ ಬಿಂಬ ಪ್ರತಿಷ್ಟಾಪನೆ, ಸತ್ಯನಾರಾಯಣ ಪೂಜೆ





ಮುಂಬಯಿ.ಅ.16:ಭಾಯಂದರ್ ಪೂರ್ವ ನವಘರ್ ಪೋಲೀಸ್ ಸ್ಟೇಷನ್ ಬದಿಯ ನ್ಯೂ ಅಂಕಿತಾ ಅಪಾರ್ಟ್ಮೆಂಟ್ ನಲ್ಲಿರುವ ಅಯ್ಯಪ್ಪ ಆರಾಧನಾ ಭಕ್ತ ಮಂಡಲದಲ್ಲಿ ಆರಾಧ್ಯ ದೇವರುಗಳ ರಜತ ಬಿಂಬ ಪ್ರತಿಷ್ಠಾಪನಾ ಮಹೋತ್ಸವವು ಆದಿತ್ಯವಾರ ಅ.17ರಂದು ಕಾಶಿ ಗಾಂವ್ ಮಹಾಲಿಂಗೇಶ್ವರ ಮಂದಿರದ ಪ್ರಧಾನ ಅರ್ಚಕರಾದ ಸಾಣೂರು ಸಾಂತಿಂಜ ಜನಾರ್ಧನ ಭಟ್ ಅವರ ಪೌರೋಹಿತ್ಯದಲ್ಲಿ ನಡೆಯಲಿದೆ. ಬೆಳಿಗ್ಗೆ 6 ಗಂಟೆಗೆ ಗಣಹೋಮ ನಡೆದು ರಜತ ಬಿಂಬ ಪ್ರತಿಷ್ಟಾಪನೆ ನಡೆಯಲಿದೆ. 10.30 ಗಂಟೆಗೆ ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆಯಲಿದ್ದು ತದನಂತರ ಆರಾಧನಾ ಹಾಗೂ ಆಮಂತ್ರಿತ ಭಜನಾ ಮಂಡಳಿಗಳಿಂದ ಭಜನೆ, ಪ್ರಸಾದ ವಿತರಣೆ ನಡೆಯಲಿದೆ. ಸುದೇಶ್ ಶೆಟ್ಟಿ, ರಾಜೇಶ್ ಶೆಟ್ಟಿ ತೆಳ್ಳಾರು ಕಡಪುಲಾಜೆ ಪರಿವಾರದವರ ವತಿಯಿಂದ ಅನ್ನಸಂತರ್ಪಣೆ ನಡೆಯಲಿದ್ದು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಅಯ್ಯಪ್ಪ ಭಕ್ತರು ಭಾಗವಹಿಸಿ ಅಯ್ಯಪ್ಪ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಮಂಡಲದ ಗುರುಸ್ವಾಮಿ ಸುಧಾಕರ್ ಜಿ.ಪೂಜಾರಿ, ಗೌರವಾಧ್ಯಕ್ಷರುಗಳಾದ ಪ್ರಮೋದ್ ಕೆ.ಕೋಟ್ಯಾನ್, ರವಿಕಾಂತ್ ಶೆಟ್ಟಿ ಇನ್ನ, ಅಶೋಕ್ ಎನ್.ಶೆಟ್ಟಿ, ಅಧ್ಯಕ್ಷ ಸುಕೇಶ್ ಶೆಟ್ಟಿ, ಉಪಾಧ್ಯಕ್ಷ ಉದಯ ಹೆಗ್ಡೆ, ಕಾರ್ಯದರ್ಶಿ ನವೀನ್ ಕೆ.ಸುವರ್ಣ, ಜೊತೆ ಕಾರ್ಯದರ್ಶಿ ನಿತಿನ್ ಜಿ.ಶೆಟ್ಟಿ, ಕೋಶಾಧಿಕಾರಿ ನವೀನ್ ಶೆಟ್ಟಿ, ಜೊತೆ ಕೋಶಾಧಿಕಾರಿ ನಾರಾಯಣ ಸುವರ್ಣ, ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಉದಯ ಸುವರ್ಣ, ಆರಾಧನಾ ಫ್ರೆಂಡ್ಸ್ ನ ಕಾರ್ಯಾಧ್ಯಕ್ಷೆ ಪ್ರೇಮಾ ಮಾಧವ ಹೆಗ್ಡೆ ಹಾಗೂ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ



Related posts

ಜ. 31 ರಂದು ಗೋರೆಗಾಂವ್ ಕರ್ನಾಟಕ ಸಂಘ, ಮುಂಬೈ: ಗ್ರಂಥಾಯನ ವಿಭಾಗ’ದ ಆಶ್ರಯದಲ್ಲಿ ಎರಡು ಕೃತಿಗಳ ಬಿಡುಗಡೆ

Mumbai News Desk

ಡೊಂಬಿವಲಿ, ಠಾಕೂರ್ಲಿ, ಕೋಪರ್ ಪರಿಸರದ ತುಳು-ಕನ್ನಡಿಗರ ಸ್ನೇಹ ಸಮ್ಮಿಲನ.

Mumbai News Desk

ಡಿ. 3 : ಕುಲಾಲ ಸಂಘ ಮುಂಬಯಿ ಮೀರಾ ರೋಡ್ – ವಿರಾರ್ ಸ್ಥಳೀಯ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನ – ಸನ್ಮಾನ – ಯಕ್ಷಗಾನ-ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

‘AATIDONJI DINA 2025’ Festival is all set to light up Dubai on 14th September 2025,

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ (ಸಾವರ್ಕರ್ ನಗರ್ -ಥಾಣೆ)ಅ. 23ರಂದು ದೇವರ ನೂತನ ಪೀಠ ಮಂಟಪ ಹಾಗೂ ದ್ವಾರ ಪ್ರತಿಷ್ಠಾಪನೆ.

Mumbai News Desk

ವಸಾಯಿ ಶ್ರೀ ಮಣಿಕಂಠ ಸೇವಾ ಸಮಿತಿ: ಡಿ. 9 ರಂದು 24ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ

Mumbai News Desk