September 6, 2026
Mumbai News Kannada
ಮುಂಬಯಿ

ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ  ಶ್ರೀಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿ -ಮೊಸರು ಕುಡಿಕೆ ಸಂಭ್ರಮ, ಭಕ್ತಿ ಸಂಗೀತ ಕಾಠ್ಯಕ್ರಮ,





ಚಿತ್ರ ವರದಿ : ದಿನೇಶ್ ಕುಲಾಲ್ 

ಮುಂಬಯಿ, ఆ. 17- ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ  ಶ್ರೀ ಕೃಷ್ಣನ   ಜನೋತ್ಸವವನ್ನು    ಸಾಂತಾಕ್ರೂಜ್ ಪೂರ್ವದಲ್ಲಿನ   ಶ್ರೀ ಪೇಜಾವರ. ಮಠದಲ್ಲಿ  ವಿಟ್ಲಪಿಂಡಿ – ಮೊಸರು ಕುಡಿಕೆ, ಭಕ್ತಿ ಸಂಗೀತ ಕಾಠ್ಯಕ್ರಮ ಭಕ್ತಿ ಸಂಭ್ರಮದೊಂದಿಗೆ ನಡೆಯಿತು,

 ಆ15 ರಂದು ಶ್ರೀಕೃಷ್ಣನ ಸನ್ನಿಧಿಯಲ್ಲಿ  ಮಧ್ಯರಾತ್ರಿ ಶ್ರೀಕೃಷ್ಣ ದೇವರಿಗೆ ಮಹಾಪೂಜೆ, ಮಹಾ ಮಂಗಳರಾತಿ ಆರ್ಘ ಪ್ರಧಾನ ಬಳಿಕ  ಪ್ರಸಾದ ವಿತರಣೆ ನಡೆಯಿತು,

ಉಡುಪಿ ಶ್ರೀ ಪೇಜಾವರ ಮಠಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರ   ಮಾರ್ಗದರ್ಶನ ಗಳೊಂದಿಗೆ  ಮಠದ ಮುಂಬಯಿ ಪ್ರಬಂಧಕ ವಿದ್ವಾನ್ ಡಾ. ರಾಮದಾಸ  ಉಪಾಧ್ಯಾಯರು ಮಂದಿರದ  ಶ್ರೀಕೃಷ್ಣನ   ದೇವರಿಗೆ ಮಹಾಪೂಜೆ, ಮಹಾ ಮಂಗಳರಾತಿ  ನೆರವೇರಿಸಿದರು,

ಆ16 ರಂದು ಸಂಜೆ ಮಠದ ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ಮುದ್ದುಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ, ಡಾ. ರಾಮದಾಸ ಉಪಾಧ್ಯಾಯ,  ಶ್ರೀಹರಿ ಭಟ್ ಪುತ್ತಿಗೆ, ನಿರಂಜನ್ ಜೆಗೋಗ್ಲೆ ಸ್ಪರ್ಧಿಸಿದ ಮಕ್ಕಳನ್ನು  ಗೌರವಿಸಲಾಯಿತು, ಅಂದೇರಿ ಜರಿ ಮೇರಿಯ . ದಿನೇಶ್ ಕೋಟ್ಯಾನ್ ಬಳಗ ವಾದ್ಯಸಂಗೀತ, ಕು। ಶ್ರೀನಿಧಿ ಶ್ರೀಕರ ಭಟ್ ಬಳಗ ಸಂಗೀತ ಕಛೇರಿ ಹಾಗೂ ಬಿ.ಆರ್ ಹೊಟೇಲು ಸಮೂಹದ ಆಡಳಿತ ನಿರ್ದೇಶಕ ಬಿ.ಆರ್ ಶೆಟ್ಟಿ ಪ್ರಾಯೋಜಕತ್ವದಲ್ಲಿ ಶ್ರೀವಿದ್ಯಾ ಭೂಷಣ ತಂಡವು ಭಕ್ತಿ ಗಾಯನ, ಕುಂಜಾರುಗಿರಿ ಬಳಗ ಉಡುಪಿ ತಂಡದ ಹುಲಿವೇಷಗಳು, ಮೀರಾ ರೋಡ್ ನ ಸುರೇಶ್ ಭಟ್ ಕುಂಟಾಡಿ ಅವರು ಶ್ರೀ ಕೃಷ್ಣನ ಉತ್ಸವಮೂರ್ತಿಯೊಂದಿಗೆ  ಮೆರವಣಿಗೆ ನಡೆಯಿತು, 

  ಮಠದ ಪ್ರವೇಶದ್ವಾರದ  ಕಟ್ಟಿದ್ದ ದಹಿ-ಹಂಡಿ ಮಡಕೆಗಳನ್ನು ಒಡೆದು ಶ್ರೀಕೃಷ್ಣ ಲೀಲೋತ್ಸವ ಆಚರಿಸಿದರು.

ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಟ್ರಸ್ಟಿಗಳು, ಪದಾಧಿಕಾರಿಗಳು, ಸದಸ್ಯರು, ಮಠದ ಆರ್ಚಕರಾದ ವಿಷ್ಣುತೀರ್ಥ ಸಾಲಿ, ಮುಕುಂದ  ಮಂಗಳೂ‌ರ್, ಪವನಕುಮಾರ್ ಅಣ್ಣಿಗೇರಿ, ರಮೇಶ್ ಭಟ್, ರಾಧಾಕೃಷ್ಣ ಭಟ್, ಬೆಳ್ಳಿ ರಾಮಚಂದ್ರ ಸಾಮಗ, ವಾಸುದೇವ ರಾವ್,  ವಿದ್ವಾನ್ ಪ್ರಕಾಶ ಆಚಾರ್ಯ ರಾಮಕುಂಜ, ಸಮಾಜ ಸೇವಕ ಶೇಖರ್ ಜೆ.ಸಾಲ್ಯಾನ್ ಸಾಂತಕ್ರೂಜ್ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು, 

    ರಾತ್ರಿ ಶ್ರೀ ಕೃಷ್ಣನ ದೇವರಿಗೆ ರಾಘವೇಂದ್ರ ಭಟ್ ಉಂಡಾರು   ಪುಷ್ಪಾಲಂಕಾರ ನಡೆಸಿ ರಂಗಪೂಜೆ, ಮಹಾಪೂಜೆ ನೆರವೇರಿಸಿದರು.

.

——

 



Related posts

ಬಿಲ್ಲವರ ಅಸೋಸಿಯೇಷನ್ ಬೊರಿವಿಲಿ ದಹಿಸರ್ ಸ್ಥಳೀಯ ಕಚೇರಿ ತುಳು ಸಂಪ್ರದಾಯ ಕಾರ್ಯಕ್ರಮ ಆಟಿಡೊಂಜಿ ಕೂಟ

Mumbai News Desk

ಜಗಜ್ಯೋತಿ ಕಲಾ ವೃಂದ, ಡೊಂಬಿವಲಿ: 39ನೇ ವಾರ್ಷಿಕ ಮಹಾಸಭೆ

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ 59ನೇ ನವರಾತ್ರಿ ಉತ್ಸವ ಸಂಪನ್ನ

Mumbai News Desk

ಮುಂಬಯಿ : ರಸಿಕರಿಗೆ ರಸದೌತಣ ನೀಡಿದ ದಿ.ಲಕ್ಷ್ಮೀ ಸುಧೀಂದ್ರ ಸ್ಮಾರಕ ಸಂಗೀತ ಕಛೇರಿ

Mumbai News Desk

ಬಿಲ್ಲವರ ಎಸೋಶಿಯೇಶನ್ ಮುಂಬಯಿ, ಬೊರಿವಿಲಿ ದಹಿಸರ್ ಸ್ಥಳೀಯ ಕಚೇರಿ ಮಹಿಳಾ ಸದಸ್ಯರಿಂದ ಅರಸಿನಶಕುಂಕುಮ

Mumbai News Desk

ಇಲ್ಲಿ ಸ್ಥಳದ ಅಭಾವ ಇದೆ ಅದರೆ  ಶ್ರೀ ದುರ್ಗೆ ಯನ್ನು ಪೂಜಿಸಲು ಭಕ್ತರ  ಅಭಾವಿಲ್ಲ – ಪ್ರಭಾಕರ್ ಶೆಟ್ಟಿ

Mumbai News Desk