July 23, 2026
Mumbai News Kannada
ಮುಂಬಯಿ

ಭಾರತ್ ಬ್ಯಾಂಕ್, ಬೊಯಿಸರ್ ಶಾಖೆಯಲ್ಲಿ 47ನೇ ಸಂಸ್ಥಾಪನಾ ದಿನಾಚರಣೆ ಉತ್ಸಾಹಭರಿತವಾಗಿ ಆಚರಣೆ







ಮುಂಬೈ : ಭಾರತದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನ ವಿಶೇಷ ಸ್ಥಾನವನ್ನು ಉಳಿಸಿಕೊಂಡಿರುವ ಭಾರತ್ ಬ್ಯಾಂಕ್ ತನ್ನ 47ನೇ ಸಂಸ್ಥಾಪನಾ ದಿನಾಚರಣೆಯನ್ನು ಬೊಯಿಸರ್ ಶಾಖೆಯಲ್ಲಿ ಭಾವಭರಿತವಾಗಿ ಹಾಗೂ ಉತ್ಸಾಹದಿಂದ ಆಚರಿಸಿತು.

ಈ ಸಂದರ್ಭದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳಾಗಿ ಶ್ರೀನಿವಾಸ್ ಕೋಟ್ಯಾನ್, ಪರಶುರಾಮ ಪಾಟೀಲ್, ಪ್ರಕಾಶ್ ಶೆಟ್ಟಿ, ಜಿನೇಂದ್ರ ಪೂಜಾರಿ ಮತ್ತು ಯೋಗೇಶ್ ಶೆಟ್ಟಿ ಉಪಸ್ಥಿತರಿದ್ದು ತಮ್ಮ ಶುಭಾಶಯಗಳನ್ನು ವ್ಯಕ್ತಪಡಿಸಿದರು.

ಶಾಖಾ ವ್ಯವಸ್ಥಾಪಕಿ ಜೆನಿಫರ್ ಸಿಕ್ವೈರಾ, ಸಹಾಯಕ ವ್ಯವಸ್ಥಾಪಕ ದಿನೇಶ್ ಎಸ್. ಪೂಜಾರಿ ಹಾಗೂ ಸಿಬ್ಬಂದಿಗಳಾದ ಸಮಿಕ್ಷಾ ರಾವೂತ್, ಶರಣ್ಯ ಶೆಟ್ಟಿ, ಕಿರಣ್ ಪಾಥಾರೆ ಮತ್ತು ಆಸಾವರಿ ಗುಪ್ತಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಅತಿಥಿಗಳು ತಮ್ಮ ಸಂದೇಶದಲ್ಲಿ ಭಾರತ್ ಬ್ಯಾಂಕ್ ಕಳೆದ ನಾಲ್ಕು ದಶಕಗಳಲ್ಲಿ ಸಾಧಿಸಿದ ಪ್ರಗತಿಯನ್ನು ಮೆಚ್ಚಿ, ಭವಿಷ್ಯದಲ್ಲಿ ಬ್ಯಾಂಕ್ ಇನ್ನಷ್ಟು ಶ್ರೇಯೋಭಿವೃದ್ಧಿ ಸಾಧಿಸಲಿ ಎಂಬ ಹಾರೈಕೆ ವ್ಯಕ್ತಪಡಿಸಿದರು. ಬ್ಯಾಂಕಿನ ಗ್ರಾಹಕರ ವಿಶ್ವಾಸ, ಸಿಬ್ಬಂದಿಗಳ ಸಮರ್ಪಿತ ಸೇವಾಭಾವನೆ ಮತ್ತು ನಿರಂತರ ನವೀಕರಣವೇ ಈ ಸಾಧನೆಯ ಪ್ರಮುಖ ಕಾರಣವೆಂದು ಅವರು ಒತ್ತಿಹೇಳಿದರು.

ಸಮಾರಂಭದಲ್ಲಿ ಸಿಬ್ಬಂದಿಗಳ ಉತ್ಸಾಹದ ಬಣ್ಣ ಹೆಚ್ಚಿಸಿತು. ಆತ್ಮೀಯ ವಾತಾವರಣದಲ್ಲಿ ನಡೆದ ಈ ಸಮಾರಂಭವು ಬ್ಯಾಂಕಿನ ನಂಬಿಕೆ, ನಿಷ್ಠೆ ಮತ್ತು ಗ್ರಾಹಕಸೇವೆ ಎಂಬ ಮೌಲ್ಯಗಳನ್ನು ಮತ್ತೊಮ್ಮೆ ಪ್ರತಿಬಿಂಬಿಸಿತು.



Related posts

ಬಿಲ್ಲವರ ಎಸೋಶಿಯೇಶನ್ ಮುಂಬಯಿ ಬೊರಿವಲಿ-ದಹಿಸರ್ ಸ್ಥಳೀಯ ಕಚೇರಿ 16ನೇ ವರ್ಧಂತಿ ಗುರುಮೂರ್ತಿ ಪ್ರತಿಷ್ಠಾಪನೆ.

Mumbai News Desk

ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ: ದತ್ತು ಸ್ವೀಕಾರ ಮತ್ತು ದೀಪಾವಳಿ ಆಚರಣೆ

Mumbai News Desk

ಶ್ರೀ ಉಮಾ ಮಹೇಶ್ವರಿ ದೇವಸ್ಥಾನ ಜರಿಮರಿಯಲ್ಲಿ ರಾಮ ನಾಮ ಜಪ ಯಜ್ಞ ಸಂಪನ್ನ.

Mumbai News Desk

ಬಂಟರ ಸಂಘ ಮುಂಬಯಿ ಮೀರಾ -ಭಾಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗ ಆಯೋಜಿಸಿದ ಆರೋಗ್ಯ ಉಪನ್ಯಾಸ.

Mumbai News Desk

ವಸಾಯಿ ಕರ್ನಾಟಕ ಸಂಘ  38ನೇ ವಾರ್ಷಿಕ ಮಹಾಸಭೆ,

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ   ಭೂಮಿಕಾ ಭಂಡಾರಿ  ಗೆ ಶೇ 93 ಅಂಕ.

Mumbai News Desk