September 6, 2026
Mumbai News Kannada
ಮುಂಬಯಿ

ಭಾರತ್ ಬ್ಯಾಂಕ್ ಕಾಂದಿವಿಲಿ ಪೂರ್ವ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ





ಮುಂಬಯಿ, ಆ.26 : ಭಾರತ್ ಬ್ಯಾಂಕಿನ ಕಾಂದಿವಿಲಿ ಪೂರ್ವ, ಠಾಕೂರ್ ವಿಲೇಜ್‌ನಲ್ಲಿರುವ ಶಾಖೆಯಲ್ಲಿ 49ನೇ ಸಂಸ್ಥಾಪನಾ ದಿನಾಚರಣೆಯನ್ನು ಕೇಕ್ ಕತ್ತರಿಸಿ ಆಚರಿಸಲಾಯಿತು.

ಬ್ಯಾಂಕಿನ ನಿರ್ದೇಶಕರಾದ ಸಂತೋಷ್ ಕೆ. ಪೂಜಾರಿ, ಹಿರಿಯ ಗ್ರಾಹಕರಾದ ಅವೆನ್ಯೂ ಹೋಟೆಲ್‌ನ ರಘುರಾಮ ಶೆಟ್ಟಿ, ತಾರಾನಾಥ್ ಕಲ್ಯಾಣಪುರ, ಜಯಾ ಶೆಟ್ಟಿ, ಲಕ್ಷ್ಮಣ್ ಸಾಲಿಯಾನ್, ಹರೀಶ್ ಶೆಟ್ಟಿ, ಯೋಗೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು, ತಮ್ಮ ಅನುಭವಗಳನ್ನು ಹಂಚಿಕೊಂಡು ಶುಭಾಶಯಗಳನ್ನು ಕೋರಿದರು.

ಶಾಖೆಯ ಮುಖ್ಯ ಪ್ರಬಂಧಕರಾದ ವೀರೇಂದ್ರ ಕುಂದರ್ ಅವರು ಪ್ರಮುಖ ಗ್ರಾಹಕರಿಗೆ ಹೊದಿಕೆ ನೀಡಿ ಗೌರವ ಸಲ್ಲಿಸಿದರು.

ಉಪ ಪ್ರಬಂಧಕರಾದ ಜಯಲಕ್ಷ್ಮಿ ಅಮೀನ್ ಹಾಗೂ ಸಿಬ್ಬಂದಿಗಳಾದ ಕಾರ್ತಿಕ್ ಪೂಜಾರಿ, ಸೌಮ್ಯಾ ಬಂಗೇರ, ಮಹೇಶ್ ಕರ್ಕೇರ, ದೀಪಾ ಪಾಲನ್, ಅನಿಶಾ ಪೂಜಾರಿ, ಶ್ರುತಿ ಸುವರ್ಣ, ಸಿಂಚನಾ ಪೂಜಾರಿ, ಸುಧರ್ಶನ ಆಚಾರ್ಯ ಮತ್ತು ಆದಿತ್ಯ ಕುಬಲ್ ಉಪಸ್ಥಿತರಿದ್ದರು.



Related posts

ಗ್ರಾಹಕರ ವಿಶ್ವಾಸವೇ ಭಾರತ್ ಬ್ಯಾಂಕ್‌ನ ಶಕ್ತಿ: ಬಾಂದ್ರಾ ಪೂರ್ವ ಶಾಖೆಯಲ್ಲಿ 48ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮ

Mumbai News Desk

ಅಂಧೇರಿ: ಶ್ರೀ ಮದ್ಭಾರತ ಮಂಡಳಿಯ 149ನೇ ವರ್ಷದ ಧಾರ್ಮಿಕ ಪಾರಾಯಣಕ್ಕೆ ಚಾಲನೆ — ‘ಜೈಮಿನಿ ಭಾರತ’ ಗ್ರಂಥ ವಾಚನ ಪ್ರಾರಂಭ

Mumbai News Desk

ಚಿಣ್ಣರ ಬಿಂಬ: ನೈರುತ್ಯ ವಲಯದ ಮಕ್ಕಳ ಉತ್ಸವದ ಸಮಾರೋಪ ಸಮಾರಂಭ

Mumbai News Desk

ದುರಂತದಲ್ಲಿ ಮಡಿದ ಸಂಸ್ಕೃತಿ ಅಮೀನ್ ಅವರ ಮನೆಗೆ ಮಹೇಶ್ ಶೆಟ್ಟಿ ತೆಳ್ಳಾರ್, ಎರ್ಮಳ್ ಹರೀಶ್ ಶೆಟ್ಟಿ ಭೇಟಿ: ಕುಟುಂಬಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ

Mumbai News Desk

ತುಳು ಸಂಘ, ಬೋರಿವಲಿ16ನೇ ವಾರ್ಷಿಕೋತ್ಸವ,  ಸಾಂಸ್ಕೃತಿಕ ವೈಭವ, ತುಳು ನಾಟಕ ಪ್ರದರ್ಶನ

Mumbai News Desk

ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಕೋಪರಖೈರನೆ ಶಾಖೆಯಲ್ಲಿ ವಿಜೃಂಭಣೆಯಿಂದ ಜರಗಿದ 46ನೇ ಸಂಸ್ಥಾಪನಾ ದಿನಾಚರಣೆ

Mumbai News Desk