32 C
Mumbai
March 7, 2026
Mumbai News Kannada
ಪ್ರಕಟಣೆ

ಸೆ.5 ರಂದು ಅಂಧೇರಿ ಶ್ರೀ ಲಕ್ಷ್ಮೀ ನಾರಾಯಣ ಮಂದಿರದಲ್ಲಿ ತುಳು ಹರಿಕಥೆಯ ನಾದ ಲಹರಿ





ಮುಂಬಯಿ: ನಗರದ ಪ್ರಸಿದ್ಧ ಧಾರ್ಮಿಕ ಮುಖಂಡರೂ, ಪರಮಪೂಜ್ಯ ಪೇಜಾವರ ಶ್ರೀ ವಿಶ್ವೇಶ ತೀರ್ಥರಿಂದ ‘ವಿಶ್ವೇಶ ದಾಸ’ ಎಂಬ ಬಿರುದು ಪಡೆದವರೂ ಆದ ಹರಿಕಥಾ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ಅವರು, ಸೆಪ್ಟೆಂಬರ್ 5, ಶುಕ್ರವಾರದಂದು ಸಂಜೆ 4 ಗಂಟೆಗೆ ‘ಸತಿ ಸಾವಿತ್ರಿ’ ಎಂಬ ವಿಷಯದ ಕುರಿತು ತುಳು ಭಕ್ತಿ ಸಂಗೀತಮಯ ಹರಿಕಥಾ ಸಂಕೀರ್ತನೆಯನ್ನು ನಡೆಸಿಕೊಡಲಿದ್ದಾರೆ.

​ಈ ಪವಿತ್ರ ಸತ್ಸಂಗ ಕಾರ್ಯಕ್ರಮವು ಅಂಧೇರಿ ಪಶ್ಚಿಮದ ವಿರದೇಸಾಯಿ ರಸ್ತೆಯಲ್ಲಿರುವ ಮಹಾಲಕ್ಷ್ಮಿ ಕಾಲೊನಿಯ ಶ್ರೀ ಲಕ್ಷ್ಮೀ ನಾರಾಯಣ ಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಶ್ರೀಮತಿ ವಸಂತಿ ಜಗನ್ನಾಥ್ ಪುತ್ರನ್ ಮತ್ತು ಶ್ರೀಮತಿ ಸುನೀತಾ ಜಗನ್ನಾಥ್ ಕಾಂಚನ್ ಅವರು ಪ್ರಾಯೋಜಿಸಿದ್ದಾರೆ.

​ಸಂಗೀತ ಕಾರ್ಯಕ್ರಮಕ್ಕೆ ಹಾರ್ಮೋನಿಯಂನಲ್ಲಿ ಶೇಖರ್ ಸಸಿಹಿತ್ಲು, ತಬಲಾದಲ್ಲಿ ಜನಾರ್ಧನ ಸಾಲಿಯಾನ್ ಹಾಗೂ ತಾಳದಲ್ಲಿ ಪ್ರಶಾಂತ್ ಜತ್ತನ್ ಅವರು ಸಹಕಾರ ನೀಡಲಿದ್ದಾರೆ. ಶ್ರೀ ಲಕ್ಷ್ಮೀ ನಾರಾಯಣ ಮಂದಿರವು ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದೆ.

​ಎಲ್ಲ ಹರಿಕಥಾಭಿಮಾನಿಗಳು ಸಕುಟುಂಬ ಸಮೇತರಾಗಿ ಆಗಮಿಸಿ, ಹರಿಕಥೆಯನ್ನು ಆಲಿಸಿ, ಶ್ರೀ ಲಕ್ಷ್ಮೀ ನಾರಾಯಣ ದೇವರ ಕೃಪೆಗೆ ಪಾತ್ರರಾಗಬೇಕೆಂದು ಆಯೋಜಕರು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.



Related posts

ವಸಾಯಿ ಕರ್ನಾಟಕ ಸಂಘ : ಜ.26 ರಂದು 38ನೇ ವಾರ್ಷಿಕ ಮಹಾಸಭೆ,

Mumbai News Desk

ಜುಲೈ 12-ರಂದು ಅಂಧೇರಿ ಮೊಗವೀರ ಭವನದಲ್ಲಿ “ಚಂದ್ರಾವಳಿ ವಿಲಾಸ’ ‘ಗದಾಯುದ್ಧ’ ಪೌರಾಣಿಕ ಯಕ್ಷಗಾನ

Mumbai News Desk

ಆಮ್ಮೀ ರಂಗಕರ್ಮಿ, ಮುಂಬೈ ತಂಡದ- ಅ. 15, 17 ಮತ್ತು 18  ರಂದು ಬೆಂಗಳೂರು ಹಾಗೂ ಮೈಸೂರಿನಲ್ಲಿ ಕೊಂಕಣಿ ನಾಟಕ ಪ್ರದರ್ಶನ.

Mumbai News Desk

ಮಹತೋಭಾರ ಶನೀಶ್ವರ ದೇವಸ್ಥಾನ ಮಲಾಡ್ ಪೂರ್ವ. ಮೇ27:- ಶನಿ ಜಯಂತಿ ಉತ್ಸವ .ತಿಲದೀಪೋತ್ಸವ.

Mumbai News Desk

ಶ್ರೀ ಶನೀಶ್ವರ ಮಂದಿರ ಭಟ್ಟಿಪಾಡ ಭಾಂಡುಪ್ : ಜ. 30ರಿಂದ, ಫೆ. 1ರ ತನಕ 41ನೇ ವಾರ್ಷಿಕ ಮಹಾಪೂಜೆ.

Mumbai News Desk

ಕರ್ನಾಟಕ ಸಂಘ, ಕಲ್ಯಾಣ: ಮಾ.8 ರಂದು ಮಹಿಳಾ ದಿನಾಚರಣೆ

Mumbai News Desk