September 6, 2026
Mumbai News Kannada
ಮುಂಬಯಿ

ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿ, ಫೋರ್ಟ್, ಮುಂಬಯಿ : 81ನೇ ವಾರ್ಷಿಕ ಮಹಾಸಭೆ





ಮುಂಬಯಿ, ಸೆಪ್ಟೆಂಬರ್ 21:
ಕೋಟೆ, ಮುಂಬಯಿಯಲ್ಲಿರುವ ಶನಿ ಪೂಜೆಯಲ್ಲಿ ಪ್ರಸಿದ್ಧಿ ಪಡೆದಿರುವ ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿ, ಫೋರ್ಟ್ – ಮುಂಬಯಿ ಇದರ 81ನೇ ವಾರ್ಷಿಕ ಮಹಾಸಭೆ ಭಾನುವಾರ, ದಿನಾಂಕ 21.09.2025 ರಂದು ಬೆಳಿಗ್ಗೆ 10.30ಕ್ಕೆ ಸಮಿತಿಯ ದೇವಸ್ಥಾನದ ವಠಾರದಲ್ಲಿ, ಸಮಿತಿಯ ಅಧ್ಯಕ್ಷರಾದ ರವಿ ಎಲ್. ಬಂಗೇರ ಅವರ ಅಧ್ಯಕ್ಷತೆಯಲ್ಲಿ ಜರಗಿತು.

ಕಾರ್ಯಕ್ರಮವು ದೇವರ ಪ್ರಾರ್ಥನೆಯೊಂದಿಗೆ ಆರಂಭವಾಗಿ, ವರದಿ ವರ್ಷದಲ್ಲಿ ಅಗಲಿದ ಸಮಿತಿಯ ಗೌರವಾನ್ವಿತ ಸದಸ್ಯರ ಆತ್ಮಗಳಿಗೆ ಶಾಂತಿ ಕೋರಿ, 2 ನಿಮಿಷಗಳ ಮೌನ ಪ್ರಾರ್ಥನೆ ನೆರವೇರಿಸಲಾಯಿತು.

ಅನಂತರ ಕಾರ್ಯಕ್ರಮಕ್ರಮದಂತೆ, ಗತ ವಾರ್ಷಿಕ ಮಹಾಸಭೆಯ ವರದಿಯನ್ನು ಓದಿ, ಸಭೆಯು ಅದನ್ನು ಸರ್ವಾನುಮತದಿಂದ ಮಂಜೂರು ಮಾಡಿತು. ತದನಂತರ, 2024-2025ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಲಾಗಿದ್ದು, ಸಭೆಯು ಅವುಗಳನ್ನೂ ಸರ್ವಾನುಮತದಿಂದ ಅಂಗೀಕರಿಸಿತು.

ಮುಂದಿನ 2025-2026ನೇ ಸಾಲಿನ ಅವಧಿಗೆ, ಆಂತರಿಕ ಲೆಕ್ಕಪರಿಶೋಧಕರಾಗಿ ಭೋಜ್ ಎಸ್. ಪೂಜಾರಿ ಅವರನ್ನು, ಬಾಹ್ಯ ಲೆಕ್ಕಪರಿಶೋಧಕರಾಗಿ ಮೆ. ಅನಿಲ್ ಮಹಾಡಿಕ್ ಮತ್ತು ಅಸೋಸಿಯೇಟ್ಸ್ ಅವರನ್ನು ನೇಮಕ ಮಾಡುವ ನಿರ್ಧಾರ ಕೈಗೊಳ್ಳಲಾಯಿತು.

ಸಭೆಯಲ್ಲಿ ಇನ್ನಷ್ಟು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ವಿಶೇಷವಾಗಿ, 81ನೇ ವಾರ್ಷಿಕ ಮಹಾಪೂಜೆ ದಿನಾಂಕ 20.12.2025 ರಂದು ವಿಜೃಂಭಣೆಯಿಂದ ಜರಗಿಸಲು ತೀರ್ಮಾನಿಸಲಾಯಿತು.

ಸಭೆಯ ಚರ್ಚೆಯಲ್ಲಿ ಸದಸ್ಯರ ಪರವಾಗಿ ವಾಸು ಸಾಲಿಯಾನ್, ಶ್ರೀಮತಿ ಅನುಸೂಯ ಕೆಲ್ಲಪುತ್ತಿಗೆ, ಭೋಜ್ ಬಿ. ಕೋಟಿಯಾನ್, ರಾಜೇಶ್ ಸುವರ್ಣ, ಜಗದೀಶ್ ಕೋಟಿಯಾನ್, ವಿಶ್ವನಾಥ್ ಭಂಡಾರಿ, ಹರೀಶ್ ಶಾಂತಿ, ಸುದೇಶ್ ಪೂಜಾರಿ, ಭೋಜ್ ಎಸ್. ಪೂಜಾರಿ ಮೊದಲಾದ ಗಣ್ಯರು ಮಾತನಾಡಿ, 81ನೇ ವಾರ್ಷಿಕ ಮಹಾಪೂಜಾ ಉತ್ಸವವನ್ನು ಅತ್ಯುತ್ತಮ ಮಾದರಿಯಲ್ಲಿ, ಶ್ರದ್ಧಾಭಕ್ತಿಯಿಂದ ಆಯೋಜಿಸುವ ಕುರಿತು ಮಹತ್ವದ ಸಲಹೆಗಳನ್ನು ನೀಡಿದರು.

ಅಧ್ಯಕ್ಷರಾದ ರವಿ ಎಲ್. ಬಂಗೇರ ಅವರು ತಮ್ಮ ಸಂದೇಶದಲ್ಲಿ, “ಮಂದಿರದ ಪ್ರತಿಯೊಂದು ಚಟುವಟಿಕೆಯಲ್ಲಿ ಎಲ್ಲಾ ಸದಸ್ಯರು ಶ್ರದ್ಧಾಭಕ್ತಿಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮುಂದೆಯೂ ಇದೇ ಶ್ರದ್ಧಾಭಕ್ತಿಯ ಸೇವೆ ಮುಂದುವರಿಯುವಂತೆ ನಾನು ಅಪೇಕ್ಷಿಸುತ್ತೇನೆ. ನಾನೂ ಸಹ ಮಂದಿರದ ಅಭಿವೃದ್ದಿಗಾಗಿ ಶ್ರದ್ಧಾಭಕ್ತಿಯೊಡನೆ ಸದಾ ದುಡಿಯುವೆನು” ಎಂದು ಭರವಸೆ ನೀಡಿದರು.

ಕೊನೆಗೆ, ಸಮಿತಿಯ ಪ್ರಧಾನ ಕಾರ್ಯದರ್ಶಿ ಶರತ್ ಜಿ. ಪೂಜಾರಿ ಪಡುಬೆಳ್ಳೆ ಅವರು ಸಭೆಯಲ್ಲಿ ಭಾಗವಹಿಸಿದ ಎಲ್ಲ ಸದಸ್ಯರಿಗೆ ಧನ್ಯವಾದ ಅರ್ಪಿಸಿ, ಸಭೆಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದರು.



Related posts

ಶ್ರೀ ರಜಕ ಸಂಘ ಮುಂಬಯಿಯ ಮಹಿಳಾ ವಿಭಾಗದಿಂದ ವರಮಹಾಲಕ್ಷ್ಮಿ ಪೂಜೆ

Mumbai News Desk

ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ – ಮಹಿಳಾ ವಿಭಾಗದವತಿಯಿಂದ ಜರಗಿದ ಶ್ರಾವಣ ಸಂಭ್ರಮ

Mumbai News Desk

ಮಕ್ಕಳು ತಮ್ಮ ಮಾತ- ಪಿತರ ಬಗ್ಗೆ ಅಭಿಮಾನವಿಟ್ಟಲ್ಲಿ ಸಮಾಜ ಮತ್ತಷ್ಟು ಸುಧಾರಣೆ ಯಾಗಬಹುದು – ಧರ್ಮದರ್ಶಿ ಅಶೋಕ್ ಶೆಟ್ಟಿ

Mumbai News Desk

ಶ್ರೀ ಜೈ ಭವಾನಿ ಶನೀಶ್ವರ ಮಂದಿರದ ನೂತನ ಅಧ್ಯಕ್ಷರಾಗಿ ರವಿ ಎಂ ಸುವರ್ಣ ಆಯ್ಕೆ

Mumbai News Desk

ಕೊಂಕಣಿ ವೆಲ್ಫೇರ್ ಅಸೋಸಿಯೇಷನ್ ಸಯನ್ : ಕನ್ಯಾ ಮರಿಯಮ್ಮನವರ ಜನ್ಮದಿನೋತ್ಸವ ಮೋಂತಿ ಪೆಸ್ತ್

Mumbai News Desk

ಕರ್ನಾಟಕ ಸಂಘ, ಕಲ್ಯಾಣ : ವಿಶ್ವ ಮಹಿಳಾ ದಿನಾಚರಣೆ

Mumbai News Desk