32 C
Mumbai
March 7, 2026
Mumbai News Kannada
ಮುಂಬಯಿ

ಶ್ರೀ ರಜಕ ಸಂಘ (ಮುಂಬಯಿ) ವಸಾಯಿ ಪ್ರಾದೇಶಿಕ ವಲಯದಿಂದ 14ನೇ ವರ್ಷದ ಶಾರದಾ ಪೂಜೆ ವೈಭವ





ವಸಾಯಿ: ಭಕ್ತಿ, ಸಂಭ್ರಮ ಮತ್ತು ಸಂಘಟನೆಯ ಸಾರವನ್ನು ಸಾರುವ ವಾತಾವರಣದಲ್ಲಿ, ಶ್ರೀ ರಜಕ ಸಂಘ (ಮುಂಬಯಿ) ಇದರ ವಸಾಯಿ ಪ್ರಾದೇಶಿಕ ವಲಯ ಘಟಕವು ತನ್ನ 14ನೆಯ ವರುಷದ ಶಾರದಾ ಪೂಜೆಯನ್ನು 28.09.2025ರ ರವಿವಾರದಂದು ವಿಜೃಂಭಣೆಯಿಂದ ನೆರವೇರಿಸಿತು. ಸಂಘದ ಕಚೇರಿಯ ವಠಾರದಲ್ಲಿ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 2:30ರ ತನಕ ನಡೆದ ಈ ಭವ್ಯ ಕಾರ್ಯಕ್ರಮಕ್ಕೆ ಗಣೇಶ್ ಗುಜರನ್ ಅವರು ಅಧ್ಯಕ್ಷತೆ ವಹಿಸಿದ್ದರು. ಮಳೆಗಾಳಿಯ ಸವಾಲುಗಳನ್ನೂ ಲೆಕ್ಕಿಸದೆ, ಸಮಾಜ ಬಾಂಧವರಲ್ಲದೆ ವಸಾಯಿ ಪರಿಸರದ ತುಳು-ಕನ್ನಡಿಗ ಭಕ್ತಾದಿಗಳು ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಜನರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.

​ಪೂಜಾ ಕಾರ್ಯಕ್ರಮಕ್ಕೆ ಮುನ್ನ, ಮಹಿಳಾ ವಿಭಾಗದ ಅಧ್ಯಕ್ಷೆ ಚಂದ್ರಾವತಿ ಕುಂದರ್ ಹಾಗೂ ಇತರೆ ಕಾರ್ಯಕಾರಿ ಮಹಿಳಾ ಸದಸ್ಯೆಯರು ಅತ್ಯಂತ ಶ್ರದ್ಧಾಭಕ್ತಿಯಿಂದ ಮಂಟಪದ ಅಲಂಕಾರಕ್ಕೆ ಹೂವು ಕಟ್ಟುವ ಕಾರ್ಯವನ್ನು ನಿರ್ವಹಿಸಿ ಸಹಕರಿಸಿದರು.

ಕಾರ್ಯಕಾರಿ ಸಮಿತಿಯ ಸದಸ್ಯರಾದ ಕಾರ್ಯದರ್ಶಿ ಶೇಖರ್ ಸಾಲ್ಯಾನ್, ಉಪಾಧ್ಯಕ್ಷರಾದ ರಮೇಶ್ ಕುಂದರ್ ಮತ್ತು ರವೀಂದ್ರ ಕುಂದರ್, ಮಾಜಿ ಅಧ್ಯಕ್ಷ ಮಾಯಿಲಾ ಬಂಗೇರ, ಪಾಂಡು ಮಡಿವಾಳ, ಹಾಗೂ ರಮೇಶ್ ಪಲಿಮಾರು ಅವರ ಅವಿರತ ಕಠಿಣ ಪರಿಶ್ರಮದಿಂದ ಸಮಾರಂಭವು ವ್ಯವಸ್ಥಿತವಾಗಿ ಮೂಡಿಬಂದಿತ್ತು.

​ಸಂಘದ ಸಕ್ರಿಯ ಕಾರ್ಯಕಾರಿ ಹಾಗೂ ಮಾಜಿ ಅಧ್ಯಕ್ಷೆ ಅನಿತಾ ದೇವೇಂದ್ರ ಬುನ್ನಾನ್ ಮತ್ತು ರವೀಂದ್ರ ಕುಂದರ್ ಅವರು ದೇವಿಯ ಪುಷ್ಪಾಲಂಕಾರದ ಮನೋಹರ ವೈಭವ ಹಾಗೂ ಭವ್ಯ ಮಂಟಪದ ಶೃಂಗಾರವನ್ನು ನಿರ್ವಹಿಸಿ, ಪೂಜಾ ಸ್ಥಳಕ್ಕೆ ದಿವ್ಯ ಸೌಂದರ್ಯ ತಂದಿದ್ದರು.

​ಬೆಳಕಿನ ಕಿರಣಗಳು ಹೊಳೆಯುವ ದೀಪಗಳಿಂದ ಶೃಂಗಾರವಾದ ಭವ್ಯ ಮಂಟಪದಲ್ಲಿ, ಮಧುರವಾದ ಚೆಂಡೆ ಮತ್ತು ಮದ್ದಳೆಯ ನಾದದ ಹಿನ್ನೆಲೆಯಲ್ಲಿ ಪೂಜಾ ವಿಧಿನಿಯಮಗಳು ಆರಂಭಗೊಂಡವು. ಸಂಘದ ಸಕ್ರಿಯ ಕಾರ್ಯಕರ್ತ ವಸಂತ ಬುನ್ನನ್ ಅವರು ಪೂಜಾ ಕ್ರಮಗಳನ್ನು ನೆರವೇರಿಸಿದರು. ನಗರದ ಧಾರ್ಮಿಕ ಕಾರ್ಯಕರ್ತರಾದ ಶ್ರೀಯುತ ರಮೇಶ್ ಪೂಜಾರಿ ಅವರು ಪೂಜಾ ವಿಧಿ ವಿಧಾನಗಳ ಬಗ್ಗೆ ಸಲಹೆ ನೀಡಿ ಸಹಕರಿಸಿದರು.

​ಬಳಿಕ, ಮಹಿಳಾ ವಿಭಾಗ ಹಾಗೂ ಇತರೆ ಸದಸ್ಯ ಬಾಂಧವರಿಂದ ಭಕ್ತಿಪೂರ್ವಕವಾದ ಭಜನೆ ಮತ್ತು ಕುಣಿತಾ ಭಜನೆಯ ಕಾರ್ಯಕ್ರಮಗಳು ನಡೆದು, ಭಕ್ತರನ್ನು ಭಾವಪರವಶಗೊಳಿಸಿದವು.

​ಈ ಧಾರ್ಮಿಕ ಕಾರ್ಯಕ್ರಮಕ್ಕೆ ಶ್ರೀ ರಜಕ ಸಂಘ ಮುಂಬಯಿ ಇದರ ಅಧ್ಯಕ್ಷರಾದ CA ವಿಜಯ್ ಕುಂದರ್, ಕಾರ್ಯದರ್ಶಿ ಶ್ರೀಮತಿ ಸುಮಿತ್ರಾ ಪಲಿಮಾರು, ಮಹಿಳಾ ವಿಭಾಗದ ಅಧ್ಯಕ್ಷೆ ಶುಭಾ ಗುಜರನ್, ಮಧ್ಯ ವಲಯ ಪ್ರಾದೇಶಿಕ ವಲಯದ ಅಧ್ಯಕ್ಷರಾದ ಶಂಕರ ಸಾಲಿಯಾನ್ ಅವರು ಆಗಮಿಸಿ ಶಾರದಾಂಬೆಯ ಕೃಪೆಗೆ ಪಾತ್ರರಾದರು.

​ಕಾರ್ಯಕಾರಿ ಸಮಿತಿಯ ಸಕ್ರಿಯ ಸದಸ್ಯರಾದ ಸುಂದರ್ H.M., ದಯಾನಂದ ಸಾಲಿಯಾನ್, ಸಂಘದ ಧಾರ್ಮಿಕ ಪೂಜಾ ಕಾರ್ಯಕ್ರಮದ ಸಕ್ರಿಯ ಕಾರ್ಯನಿರ್ವಾಹಕ ಹಾಗೂ ಛಾಯಾಗ್ರಾಹಕರಾದ ಶ್ರೀ ಗಣೇಶ ಸಾಲಿಯಾನ್, ಹಿರಿಯ ಸದಸ್ಯರಾದ ಆನಂದ ಕುಂದರ್, ಕುಟ್ಟಿ ಸಾಲಿಯಾನ್ ಸೇರಿದಂತೆ ಹಲವಾರು ಸದಸ್ಯರು ಉಪಸ್ಥಿತರಿದ್ದು, ತನು-ಮನ-ಧನಗಳಿಂದ ಸಹಕರಿಸಿದರು.

​ಈ ಸಂದರ್ಭದಲ್ಲಿ ವಿಶೇಷ ಅತಿಥಿಗಳಾಗಿ, ವಸಾಯಿ ಕರ್ನಾಟಕ ಸಂಘದ ಈಗಿನ ಅಧ್ಯಕ್ಷರೂ ಹಾಗೂ ರಜಕ ಸಂಘ ವಸಾಯಿ ವಲಯದ ಮಾಜಿ ಅಧ್ಯಕ್ಷರು, ಹೋಟೆಲ್ ಉದ್ಯಮಿಗಳು ಮತ್ತು ಉದಾರಿ ದಾನಿಗಳಾದ ದೇವೇಂದ್ರ ಭುನ್ನಾನ್, ಹಾಗೂ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರೂ ಮತ್ತು ವಸಾಯಿ ಪರಿಸರದ ಸಾಮಾಜಿಕ ಸಂಘಟನೆ ಕಾರ್ಯಕರ್ತರೂ ಆದ ಓ. ಪಿ. ಪೂಜಾರಿ ಅವರು ತಮ್ಮ ಧರ್ಮಪತ್ನಿಯವರೊಂದಿಗೆ ಮತ್ತು ಕರ್ನಾಟಕ ಸಂಘ ವಸಾಯಿ ಕಾರ್ಯಕಾರಿ ಸಮಿತಿಯ ಸದಸ್ಯರೊಂದಿಗೆ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

​ಸಂಜೆ, ಮಂಗಳಾರತಿಯೊಂದಿಗೆ ಪೂಜೆಯು ಪೂರ್ಣಗೊಂಡಿತು. ಪುರೋಹಿತರು ನೆರೆದ ಭಕ್ತರಿಗೆ ಶಾರದಾ ದೇವಿಯ ಪೂಜೆಯ ಮಹತ್ವವನ್ನು ವಿವರಿಸಿದರು. ನಂತರ ತೀರ್ಥ-ಪ್ರಸಾದ ವಿತರಣೆ ಮತ್ತು ಅನ್ನದಾನದೊಂದಿಗೆ ಈ ಧಾರ್ಮಿಕ ಕಾರ್ಯಕ್ರಮವು ಸಂಪನ್ನಗೊಂಡಿತು.

​ಕೊನೆಯಲ್ಲಿ, ಸಂಘದ ಸಕ್ರಿಯ ಕಾರ್ಯದರ್ಶಿ ಶೇಖರ್ ಸಾಲಿಯಾನ್ ಅವರು, ಈ ಧಾರ್ಮಿಕ ಪೂಜೆ ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ತನು-ಮನ-ಧನದಿಂದ ಸಹಕರಿಸಿದ ಸಮಸ್ತ ಭಕ್ತಾಭಿಮಾನಿಗಳಿಗೆ, ಪರಿಸರದ ತುಳು-ಕನ್ನಡಿಗರಿಗೆ ಹಾಗೂ ಎಲ್ಲಾ ಉದಾರ ದಾನಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿ, ಕಾರ್ಯಕ್ರಮಕ್ಕೆ ತೆರೆ ಎಳೆದರು. ಜಾತಿ-ಮತ ಭೇದವಿಲ್ಲದೆ ಎಲ್ಲರ ಸಹಕಾರದಿಂದ ನವರಾತ್ರಿಯ ಶಾರದಾ ಪೂಜೆಯು ವೈಭವಯುತವಾಗಿ ಜರುಗಿತು.



Related posts

ಶ್ರೀ ರಜಕ ಸಂಘ ಮುಂಬಯಿಯ 85ನೇ ವಾರ್ಷಿಕ ಮಹಾಸಭೆ

Mumbai News Desk

ಜೋಗೇಶ್ವರಿ : ಸಂಸ್ಕೃತಿ ಅಮೀನ್ ದುರ್ಮರಣ ಪ್ರಕರಣ – ಬಿಲ್ಡರ್ ನ ನಿರೀಕ್ಷಣಾ ಜಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

Mumbai News Desk

ನವಿ ಮುಂಬೈ ಪಾಲಿಕೆ ಚುನಾವಣೆ: ಸಾನ್ಪಾಡ ವಾರ್ಡ್ 19ರಲ್ಲಿ ನಗರಸೇವಕಿಯಾಗಿ ಶೈಲಾ ಜೆ. ಪಾಟೀಲ್ ಕುಲಾಲ್

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಮಹಿಳಾ ವಿಭಾಗದ ವತಿಯಿಂದ ಅಷ್ಟ ವಿನಾಯಕ ದರ್ಶನ ಪ್ರವಾಸ.

Mumbai News Desk

ಬಿ. ಎಸ್. ಕೆ. ಬಿ. ಎಸೋಸಿಯೇಶನ್, ಗೋಕುಲ, ಮಹಿಳಾ ದಿನಾಚರಣೆ

Mumbai News Desk

ಕುಲಾಲ ಸಂಘದ ಗುರುವಂದನಾ ಭಜನಾ ಮಂಡಳಿಯ ಗುರು ಪೂರ್ಣಿಮೆಯ ಆಚರಣೆ.

Mumbai News Desk