September 6, 2026
Mumbai News Kannada
ಪ್ರಕಟಣೆ

ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ: ಅ. 11 ಮತ್ತು 12ರಂದು 48ನೇ ವಾರ್ಷಿಕ ಏಕಾಹ ಭಜನಾ ಮಂಗಲೋತ್ಸವ





ಶ್ರೀ ಮುಂಬ್ರಾ ಮಿತ್ರ ಭಜನಾ ಮಂಡಳಿಯ ಸಂಚಾಲಕತ್ವದ ಶ್ರೀ ಮಹಾವಿಷ್ಣು ಮಂದಿರದ ಆಶ್ರಯದಲ್ಲಿ, ಮಂದಿರದ 48ನೇ ವರ್ಷದ ವಾರ್ಷಿಕ ಭಜನಾ ಮಂಗಲೋತ್ಸವ ಹಾಗೂ ಏಕಾಹ ಭಜನಾ ಕಾರ್ಯಕ್ರಮವು ಇದೇ ಬರುವ ಅಕ್ಟೋಬರ್ 11 ಮತ್ತು 12ರಂದು ವಿಜೃಂಭಣೆಯಿಂದ ಜರುಗಲಿದೆ.

ಏಕಾಹ ಭಜನಾ ಕಾರ್ಯಕ್ರಮವು ಅಕ್ಟೋಬರ್ 11ರ ಶನಿವಾರದಂದು ಬೆಳಿಗ್ಗೆ 6:30ಕ್ಕೆ ಆರಂಭಗೊಂಡು, ಅಕ್ಟೋಬರ್ 12ರ ರವಿವಾರದಂದು ಬೆಳಿಗ್ಗೆ 6:30ಕ್ಕೆ ಮಹಾ ಮಂಗಳಾರತಿಯೊಂದಿಗೆ ಸಂಪನ್ನಗೊಳ್ಳಲಿದೆ.

​ವಾರ್ಷಿಕ ಭಜನಾ ಮಂಗಲೋತ್ಸವ ಮತ್ತು ಏಕಾಹ ಭಜನಾ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಅತಿಥಿ ಗಣ್ಯರಾದ:

  • ಶ್ರೀ ರಮೇಶ್ ಶೆಟ್ಟಿ (ಅಧ್ಯಕ್ಷರು, ಜಗಜ್ಯೋತಿ ಕಲಾ ವೃಂದ, ಡೊಂಬಿವಲಿ)
  • ಶ್ರೀ ಶಿವರಾಂ ರೈ (ಸಮಾಜ ಸೇವಕರು)
  • ಶ್ರೀ ರಾಘವೇಂದ್ರ ಕಾಪು (ಸಮಾಜ ಸೇವಕರು)

​ಇವರ ದಿವ್ಯ ಹಸ್ತಗಳಿಂದ ನೆರವೇರಲಿದೆ.

​ಈ ಪುಣ್ಯ ಕಾರ್ಯಕ್ರಮದಲ್ಲಿ ಸ್ಥಳೀಯ ಮಂಡಳಿಯೊಂದಿಗೆ ವಿವಿಧ ಭಾಗಗಳ ಭಜನಾ ಮಂಡಳಿಗಳು ಪಾಲ್ಗೊಂಡು ಭಜನಾ ಸೇವೆಯನ್ನು ಅರ್ಪಿಸಲಿವೆ. ಅವುಗಳಲ್ಲಿ ಪ್ರಮುಖವಾಗಿ:

  • ​ಸಿರಿನಾಡ ವೆಲ್ಫೇರ್ ಅಸೋಸಿಯೇಷನ್ ಡೊಂಬಿವಲಿ
  • ​ಶ್ರೀ ಜಗದಂಬ ಮಂದಿರ ಡೊಂಬಿವಲಿ
  • ​ತುಳು ವೆಲ್ಫೇರ್ ಅಸೋಸಿಯೇಷನ್ ಸಂಚಾಲಕತ್ವದ ಶ್ರೀ ಲಕ್ಷ್ಮಿ ಭಜನಾ ಮಂಡಳಿ ಡೊಂಬಿವಲಿ
  • ​ಶ್ರೀ ಅಯ್ಯಪ್ಪ ಭಜನಾ ಮಂಡಳಿ ಅಜ್ಜೆಪಾಡ ಡೊಂಬಿವಲಿ
  • ​ಬಿಲ್ಲವರ ಅಸೋಸಿಯೇಷನ್ ಡೊಂಬಿವಲಿ ಸ್ಥಳೀಯ ಕಚೇರಿ
  • ​ಶ್ರೀ ವರದ ಸಿದ್ಧಿ ವಿನಾಯಕ ಭಜನಾ ಮಂಡಳಿ ಡೊಂಬಿವಲಿ ಪೂರ್ವ
  • ​ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಡೊಂಬಿವಲಿ
  • ​ಶ್ರೀ ಕಲ್ಕಿ ಭಜನಾ ಮಂಡಳಿ ಡೊಂಬಿವಲಿ
  • ​ಶ್ರೀ ಭ್ರಮರಾಂಬಿಕಾ ಭಜನಾ ಮಂಡಳಿ ಡೊಂಬಿವಲಿ
  • ​ಶ್ರೀ ರಾಧಾಕೃಷ್ಣ ಭಜನಾ ಮಂಡಳಿ ಡೊಂಬಿವಲಿ
  • ​ಯಶಸ್ವಿ ಭಜನಾ ಮಂಡಳಿ ಡೊಂಬಿವಲಿ
  • ​ಅಮೃತಾನಂದಮಯಿ ಭಜನಾ ಮಂಡಳಿ ಡೊಂಬಿವಲಿ
  • ​ಅಯ್ಯಪ್ಪ ಭಕ್ತ ಭಜನಾ ಮಂಡಳಿ ಡೊಂಬಿವಲಿ
  • ​ಶಬರಿ ಭಜನಾ ಮಂಡಳಿ ಡೊಂಬಿವಲಿ
  • ​ಕರ್ನಾಟಕ ಸಂಘ – ಡೊಂಬಿವಲಿ
  • ​ಜೈ ಭವಾನಿ ಶನೀಶ್ವರ ಮಂದಿರ ಡೊಂಬಿವಲಿ
  • ​ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳಿ ಅಂಧೇರಿ
  • ​ಶ್ರೀ ವಿಠ್ಠಲ ಭಜನಾ ಮಂಡಳಿ ಮೀರಾ ರೋಡ್
  • ​ಶ್ರೀ ದುರ್ಗಾಪರಮೇಶ್ವರಿ ಮಂಡಳಿ ನವಿ ಮುಂಬೈ
  • ​ಶ್ರೀ ಲಕ್ಷ್ಮೀ ನಾರಾಯಣ ಭಜನಾ ಸಮಿತಿ ಮೀರಾ ರೋಡ್
  • ​ಶ್ರೀ ಅಯ್ಯಪ್ಪ ಸೇವಾ ಸಮಿತಿ ಪೋರ್ಟ್
  • ​ಶ್ರೀ ಶನೀಶ್ವರ ದೇವಸ್ಥಾನ ನೆರೂಲ್
  • ​ಸದ್ಗುರು ಕೃಷ್ಣ ಭಜನಾ ಮಂಡಳಿ ವಿಲೇ ಪಾರ್ಲೆ
  • ​ನಿತ್ಯಾನಂದ ಚಾಮುಂಡೇಶ್ವರಿ ಭಜನಾ ಮಂಡಳಿ ಸಾಕಿನಾಕಾ
  • ​ಫ್ರೆಂಡ್ಸ್ ಸ್ವಾವಲಂಬನ ಭಜನಾ ಮಂಡಳಿ
  • ​ನವೋದಯ ಕನ್ನಡ ಸೇವಾ ಸಂಘ ಥಾಣೆ
  • ​ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿ ಪೋರ್ಟ್

​ಈ ವಾರ್ಷಿಕ ಭಜನಾ ಮಂಗಲೋತ್ಸವಕ್ಕೆ ಭಕ್ತಾದಿಗಳೆಲ್ಲರೂ ಕುಟುಂಬ ಸಮೇತ ಮತ್ತು ಮಿತ್ರರೊಡಗೂಡಿ ಆಗಮಿಸಿ, ತೀರ್ಥ ಪ್ರಸಾದ ಸ್ವೀಕರಿಸಿ, ತನು-ಮನ-ಧನದಿಂದ ಸಹಕರಿಸಬೇಕಾಗಿ ಮಂಡಳಿಯ ಗೌರವಾಧ್ಯಕ್ಷರಾದ ನಿತಿನ್ ಪ್ರಕಾಶ್ ಪುತ್ರನ್, ಅಧ್ಯಕ್ಷರಾದ ಇಂದುಶೇಖರ್ ಸುವರ್ಣ, ಕಾರ್ಯದರ್ಶಿ ಸಚಿನ್ ಪೂಜಾರಿ, ಕೋಶಾಧಿಕಾರಿ ಪ್ರವೀಣ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸವಿತಾ ಸಿ. ಸಾಲಿಯಾನ್, ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು, ಭೂವಾಜಿಗಳು, ಮಹಿಳಾ ವಿಭಾಗ, ಪೂಜಾ ಸಮಿತಿ, ಅರ್ಚಕರು ಮತ್ತು ಸಮಸ್ತ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.



Related posts

ಆ 26. ಕುಲಾಲ ಸಂಘ ಮುಂಬಯಿ: ಥಾಣೆ, ಕಸರ, ಖರ್ಜತ್, ಭಿವಂಡಿ ಸ್ಥಳೀಯ ಸಮಿತಿಯಿಂದ ಮಂಗಳೂರು ಕುಲಾಲ ಭವನ ಉದ್ಘಾಟನಾ ಆಮಂತ್ರಣ ಪತ್ರಿಕೆ ವಿತರಣೆ

Mumbai News Desk

ಭಜನೆ, ತಬಲಾ, ಹಾರ್ಮೋನಿಯಂ, ಚೆಂಡೆ ಕಲಿಕಾಸಕ್ತರಿಗೆ ಶೀಘ್ರದಲ್ಲಿ ತರಗತಿ ಆರಂಭ.

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಸಾವರ್ಕರ್ ನಗರ ಥಾಣೆ : ಆಗಸ್ಟ್ 10ರಂದು “ತುಳುನಾಡ ಬಲಿಯೇಂದ್ರ” ಯಕ್ಷಗಾನ ತಾಳಮದ್ದಳೆ

Mumbai News Desk

ಮೊಗವೀರ ಪ್ರೀಮಿಯರ್ ಲೀಗ್ (ಎಂಪಿಎಲ್) ಕ್ರಿಕೆಟ್ ಟೂರ್ನಮೆಂಟ್ – 2026ಕ್ಕೆ ಆಹ್ವಾನ

Mumbai News Desk

ಜ. 24/25/26 : ಬಿಲ್ಲವರ ಎಸೋಸಿಯೇಷನ್ ಮುಂಬಯಿ ಇದರ ಸಾಂಸ್ಕೃತಿಕ ಉಪ ಸಮಿತಿಯ ಆಶ್ರಯದಲ್ಲಿ ‘ ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆ ‘

Mumbai News Desk

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ, ಉಡುಪಿ : ಜುಲೈ 21ಕ್ಕೆ ಗುರುಪೂರ್ಣಿಮ ಮಹೋತ್ಸವ.

Mumbai News Desk