July 23, 2026
Mumbai News Kannada
ಮುಂಬಯಿ

ವಿಜಯ ಕಾಲೇಜು ಮೂಲ್ಕಿ ಜಾಗತಿಕ ಹಳೆವಿದ್ಯಾರ್ಥಿ ಸಂಘದ ಮಹಾಸಭೆ







ಹಳೆ ವಿದ್ಯಾರ್ಥಿಗಳು ಸ್ವಇಚ್ಛೆಯಿಂದ ಸದಸ್ಯರಾಗಬೇಕು: ವಾಸುದೇವ ಸಾಲಿಯಾನ್

ಮುಂಬಯಿ, ಅಕ್ಟೋಬರ್ 6: ವಿಜಯ ಕಾಲೇಜು ಮೂಲ್ಕಿ ಇದರ ಜಾಗತಿಕ ಹಳೆ ವಿದ್ಯಾರ್ಥಿ ಸಂಘ, ಮುಂಬಯಿ ಇದರ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ ೨೯ರಂದು ಗೊರೆಗಾಂವ್ ಪೂರ್ವದಲ್ಲಿರುವ ನೆಸ್ಕೋದಲ್ಲಿರುವ ಬೈರೌಟ್ ಹೋಟೆಲ್‌ನಲ್ಲಿ ನಡೆಯಿತು.

​ಸಭೆಯಲ್ಲಿ ಹಿಂದಿನ ವರ್ಷದ ವರದಿಯನ್ನು ಉಪಾಧ್ಯಕ್ಷರಾದ ಅಡ್ವೋಕೇಟ್ ಶೇಖರ್ ಭಂಡಾರಿ ಅವರು ಮಂಡಿಸಿ, ಅನುಮೋದನೆಯನ್ನು ಪಡೆಯಲಾಯಿತು.

​ಲೆಕ್ಕಪತ್ರವನ್ನು ಖಜಾಂಚಿ ಸಿ.ಎ. ರೋಹಿತಾಕ್ಷ ದೇವಾಡಿಗ ಅವರು ವಾಚಿಸಿದರು.

​ಸಂಘದ ಲೆಕ್ಕಪರಿಶೋಧಕರಾಗಿ, ೨೦೨೫-೨೬ನೇ ಸಾಲಿಗೆ ಮಹೇಶ್ ಖರಡ್ಕರ್ ಮತ್ತು ಕಂಪನಿ ಅವರನ್ನು ಪುನರಾಯ್ಕೆ ಮಾಡಲಾಯಿತು.

​ಅಧ್ಯಕ್ಷರಾದ ವಾಸುದೇವ ಸಾಲಿಯಾನ್ ಅವರು ಸಂಘದ ಚಟುವಟಿಕೆಗಳ ಕುರಿತು ಸದಸ್ಯರಿಗೆ ತಮ್ಮ ಅನಿಸಿಕೆಯನ್ನು ತಿಳಿಸಿದರು. ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ದೇಶವಿದೇಶಗಳಲ್ಲಿ ಉನ್ನತ ಸ್ಥಾನಮಾನದಲ್ಲಿದ್ದು, ತಾವು ಕಲಿತ ಕಾಲೇಜನ್ನು ಸದಾ ನೆನಪಿಡುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಿದೆ. ಕಾಲೇಜಿನ ಅಭಿವೃದ್ಧಿಗಾಗಿ ಮತ್ತು ಮುಂದಿನ ದಿನಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ಶ್ರಮಿಸುವ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಹಳೆ ವಿದ್ಯಾರ್ಥಿ ಸಂಘವು ಅಪಾರ ಸಹಕಾರ ನೀಡುತ್ತಿದೆ. ಎಲ್ಲ ಹಳೆ ವಿದ್ಯಾರ್ಥಿಗಳು ಸ್ವಇಚ್ಛೆಯಿಂದ ಸದಸ್ಯರಾಗಿ ಋಣಮುಕ್ತರಾಗಬೇಕು ಎಂದು ಅವರು ಕರೆ ನೀಡಿದರು.

​ವಂದನಾರ್ಪಣೆಯೊಂದಿಗೆ ಸಭೆಯ ಕಾರ್ಯಕ್ರಮ ಮುಕ್ತಾಯವಾಯಿತು.



Related posts

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಮೀರಾಗಾಂವ್ 33ನೇ ವಾರ್ಷಿಕ ಅಯ್ಯಪ್ಪ ಸ್ವಾಮಿ ಮಹಾಪೂಜೆ, ದೀಪೋತ್ಸವ, ಅನ್ನದಾನ

Mumbai News Desk

ವೈಭವದ ವಿಸರ್ಜನ ಮೆರವಣಿಗೆಯೊಂದಿಗೆ ಪಶ್ಚಿಮ ವಿಭಾಗದ ನವರಾತ್ರಿ ಉತ್ಸವ ಸಂಪನ್ನ.

Mumbai News Desk

ಬಂಟ್ಸ್ ಫೋರಮ್ ಮೀರಾ-ಭಾಯಂದರ್; ಭಕ್ತಿ ಸಡಗರದಿಂದ ಸಂಪನ್ನಗೊಂಡ ಭಜನಾ ಮಂಗಳೋತ್ಸವ.

Mumbai News Desk

ಕನ್ನಡ ಕಲಾ ಸಮಾಜ ಕೋಟೆ ಮುಂಬಯಿ : ವಾರ್ಷಿಕ ಸ್ನೇಹ ಸಮ್ಮಿಲನ ಒಕ್ಕೂಟ ಸಭೆ

Mumbai News Desk

ನವ ತರುಣ ಮಿತ್ರ ಮಂಡಳ (ರಿ.) ಮೀರಾ ಭಾಯಂದ‌ರ್ ಆಶ್ರಯದಲ್ಲಿ ಮೀರಾ ರೋಡ್ ನಲ್ಲಿ ಅಮ್ಮು.. ಆಮುಂಡರಾ..? ತುಳು ನಾಟಕ,

Mumbai News Desk

ತುಳು ಸಂಘ, ಬೋರಿವಲಿ16ನೇ ವಾರ್ಷಿಕೋತ್ಸವ,  ಸಾಂಸ್ಕೃತಿಕ ವೈಭವ, ತುಳು ನಾಟಕ ಪ್ರದರ್ಶನ

Mumbai News Desk