September 6, 2026
Mumbai News Kannada
ಸುದ್ದಿ

ನವಂಬರ್ 28ರಂದು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಪ್ರಧಾನಿ ಮೋದಿ ಭೇಟಿ.





ಪ್ರಧಾನಿ ನರೇಂದ್ರ ಮೋದಿ 16 ವರ್ಷಗಳ ಬಳಿ ಉಡುಪಿ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಲಿದ್ದಾರೆ. ನವೆಂಬರ್ 28 ರಂದು ಉಡುಪಿ ಶ್ರೀಕೃಷ್ಣ ದರ್ಶನ ಪಡೆದು, ಸಭಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.
ನವೆಂಬರ್‌ 28ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದು, ಅಷ್ಟಮಠಗಳಲ್ಲಿ ಒಂದಾದ ಪರ್ಯಾಯ ಪುತ್ತಿಗೆ ಮಠಕ್ಕೂ ಭೇಟಿ ನೀಡಲಿದ್ದಾರೆ. ಅಂದು ಮಧ್ಯಾಹ್ನ 12 ಗಂಟೆಗೆ ಶ್ರೀಕೃಷ್ಣ ಮಠಕ್ಕೆ ಆಗಮಿಸಲಿದ್ದಾರೆ. ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರೊಂದಿಗೆ ಮಾತುಕತೆ ನಡೆಸಲಿದ್ದಾರೆ. ನಂತರ ಶ್ರೀಕೃಷ್ಣ ಮಠದಲ್ಲಿ ನಡೆಯಲಿರುವ ಲಕ್ಷ ಕಂಠ ಗೀತ ಪಾರಾಯಣ, ಗೀತೋತ್ಸವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.
ಅಲ್ಲದೇ ಮಠದ ವ್ಯಾಪ್ತಿಯಲ್ಲಿ ಉಡುಪಿ ಶ್ರೀಕೃಷ್ಣನ ದರ್ಶನ ಪಡೆಯಲಿದ್ದು, ಭಕ್ತರು, ಸಾರ್ವಜನಿಕರ ಸಮ್ಮುಖದಲ್ಲಿ ಸಭಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಲಿದ್ದಾರೆ.

16 ವರ್ಷಗಳ ಹಿಂದೆ ಪುತ್ತಿಗೆ ಪರ್ಯಾಯ ಸಂದರ್ಭ ಉಡುಪಿಗೆ ಭೇಟಿ ನೀಡಿದ್ದ ನರೇಂದ್ರ ಮೋದಿ, ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಮಠಕ್ಕೆ ಭೇಟಿ ಕೊಡ್ತಿದ್ದಾರೆ.
ಗೀತಾ ಜಯಂತಿಅಂಗವಾಗಿ ನಡೆಯಲಿರುವ ” ಲಕ್ಷ ಕಂಠ ಗೀತಾ ಪಾರಾಯಣ-ಬೃಹತ್ ಗೀತೋತ್ಸವ ” ಕಾರ್ಯಕ್ರಮದಲ್ಲಿಯೂ ಅವರು ಭಾಗವಹಿಸಲಿದ್ದಾರೆ. ಪ್ರಧಾನಮಂತ್ರಿ ಕಚೇರಿ ಈ ಭೇಟಿಯನ್ನು ಖಚಿತಪಡಿಸಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.

.

.

.



Related posts

ನೀಟ್ ಯುಜಿ 2026 ಪರೀಕ್ಷೆ ರದ್ದು: ಪೇಪರ್ ಸೋರಿಕೆ ಹಿನ್ನೆಲೆಯಲ್ಲಿ ಎನ್‌ಟಿಎ ಮಹತ್ವದ ನಿರ್ಧಾರ

Mumbai News Desk

ಇಂದಿನಿಂದ ರೈಲು ಪ್ರಯಾಣ ದರ ಏರಿಕೆ : ರೈಲ್ವೆಯಿಂದ ಪ್ರಯಾಣದರ ಏರಿಕೆ ಅಧಿಸೂಚನೆ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಧನ ಸಹಾಯ

Mumbai News Desk

ಯಕ್ಷಗಾನ ರಂಗದ ಅಮರ ಗಂಧರ್ವ ಕಾಳಿಂಗ ನಾವಡರ ಪುಣ್ಯಸ್ಮರಣೆ: ಕರಾವಳಿಯ ಕೋಗಿಲೆಗೆ ನುಡಿನಮನ

Mumbai News Desk

ಮೀರಾ ರೋಡ್: ಅಪ್ಪಿ ಸಂಜೀವ ಪಾಲನ್ ನಿಧನ

Mumbai News Desk

ಪತ್ರಕರ್ತ ಗೋಪಾಲ ಅಂಚನ್ ಚಿಕಿತ್ಸೆಗೆ ಒಮಾನ್ ಬಿಲ್ಲವಾಸ್ ಸಂಘಟನೆಯಿಂದ ಆರ್ಥಿಕ ನೆರವು..

Mumbai News Desk