September 6, 2026
Mumbai News Kannada
ತುಳುನಾಡು

ಮೂಲ್ಕಿ : ಹರಿಶ್ಚಂದ್ರ ಪಿ ಸಾಲ್ಯಾನ್ ಅವರ “ತುಳುನಾಡ್ದ ಎದುರುಕತೆಕುಲು” ಕ್ರತಿ ಬಿಡುಗಡೆ





ಗಾದೆ, ಎದುರುಕತೆಗಳು ಇತರರಿಗೆ ಆದರ್ಶವಾಗಲು ಪ್ರೇರಣೆ – ಶಾಸಕ ಉಮಾನಾಥ್ ಕೋಟ್ಯಾನ್

ಹೊಸ ಅಂಗಣ ಪ್ರಕಟಣಾಲಯದಿಂದ ಪ್ರಕಟಿತ, ಜಾನಪದ ಲೇಖಕ, ಸಂಘಟಕ, ಕೃತಿಕರ್ತ ಡಾ.ಹರಿಶ್ಚಂದ್ರ ಪಿ ಸಾಲ್ಯಾನ್ ಅವರ 21ನೇ ಕೃತಿ “ತುಳುನಾಡ್ದ ಎದುರು ಕತೆಕುಲು” ಕ್ರತಿ ಬಿಡುಗಡೆ ಸಮಾರಂಭವು ನವಂಬರ್ 6ರಂದು ಮೂಲ್ಕಿಯ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ನಡೆಯಿತು.


ಮೂಲ್ಕಿ – ಮೂಡುಬಿದ್ರೆ ಕ್ಷೇತ್ರದ ಜನಪ್ರಿಯ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಕೃತಿಯನ್ನು ಬಿಡುಗಡೆ ಗೊಳಿಸಿ ಮಾತನಾಡುತ್ತಾ ” ಹಿಂದಿನ ಕಾಲದ ಜನರು ಅವಿದ್ಯಾವಂತರಾದರೂ ಜಾಣವಂತರಾಗಿದ್ದಾರೆ, ಏಕೆಂದರೆ ಅವರು ಆಗಾಗ ತುಳುಗಾದೆ, ತುಳು ಎದುರು ಕಥೆಗಳನ್ನು ಮನೆಯಲ್ಲಿ, ಸಭೆ – ಸಮಾರಂಭಗಳಲ್ಲಿ ಹೇಳಿಕೊಂಡು ಬಂದಿದ್ದಾರೆ.ಇಂದಿನ ಯುವ ಜನತೆಗೆ ಇದರ ಬಗ್ಗೆ ತಿಳಿದುಕೊಳ್ಳುವ ವ್ಯವಧಾನ ಇರುವುದಿಲ್ಲ. ಹರಿಶ್ಚಂದ್ರ ಸಾಲ್ಯಾನ್ ಅವರ ಈ ಕೃತಿಯು ಬಹಳ ಅಮೂಲ್ಯವಾಗಿದ್ದು, ಇದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ಆದರ್ಶವಾಗಲು ಗಾದೆ, ಎದುರು ಕಥೆಗಳನ್ನು ಹೇಳುತ್ತಾ ಬಂದರೆ ಒಳ್ಳೆಯದು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಇದರ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ “ಹರಿಶ್ಚಂದ್ರ ಸಾಲ್ಯಾನ್ ಅವರು 21 ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ, ಅವರ ಎಲ್ಲ ಕೃತಿಗಳು ಜನಪ್ರಿಯವಾಗಿದ್ದು, ಇನ್ನೂ ಕೂಡ ಕೃತಿಗಳನ್ನು ಬರೆಯುವ ಶಕ್ತಿಯನ್ನು ಪರಮಾತ್ಮನು ಕೊಡಲೆಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ, ನಾರಾಯಣ ಗುರು ನರ್ಸಿಂಗ್ ಹೋಮ್ ಮುಲ್ಕಿಯ ಡಾ. ರಂಜನಾ, ಕಲ್ಲಟೆ ದೈವಸ್ಥಾನದ ಗುತ್ತಿನಾರ್ ವಿಶುಕುಮಾರ್ ಶೆಟ್ಟಿ ಬಾಳ, , ಶ್ರೀ ಧೂಮವತಿ ದೈವಸ್ಥಾನ ನಡಿಬೆಟ್ಟು, ಗುತ್ತಿನಾರ್ ಸುಧಾಕರ್ ಶೆಟ್ಟಿ ದೆಪ್ಪುಣಿಗುತ್ತು, ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್, ಮಂಗಳೂರು ಕಥಾ ಬಿಂದುವಿನ ಪ್ರಧೀಪ್ ಕುಮಾರ್, ಕೃತಿಕರ್ತ ಡಾ. ಹರಿಶ್ಚಂದ್ರ ಪಿ ಸಾಲ್ಯಾನ್, ವಾಸು ಪೂಜಾರಿ ಚಿತ್ರಾಪು, ಐಕಳ ಜಯಪಾಲ್ ಶೆಟ್ಟಿ ಉಪಸ್ಥಿತರಿದ್ದರು.
ವಿಜಯಕುಮಾರ್ ಕುಬೆವೂರು ಸ್ವಾಗತಿಸಿದರೆ, ದಿನೇಶ್ ಶೆಟ್ಟಿ ಧನ್ಯವಾದ ಅರ್ಪಿಸಿದರು.ವಕೀಲ ರವೀಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.



Related posts

ಧಾಖಲೆಯೊಂದಿಗೆ ತಿರುವೈಲು ಕಂಬಳ ಸಂಪನ್ನ: ಮುಂಬೈಯ ಪುರೋಹಿತರಾದ ಪ್ರವೀಣ್ ಭಟ್ ಅವರಿಗೆ ಸನ್ಮಾನ

Mumbai News Desk

ಹಿರಿಯ ಸಮಾಜ ಬಂಧುಗಳ ನಿಸ್ವಾರ್ಥ ಸೇವೆಯೇ ಸಂಘದ ಬೆಳವಣಿಗೆಗೆ ಅಡಿಪಾಯ – ಮೋಹನ್ ದಾಸ್ ಹೆಜ್ಮಾಡಿ

Mumbai News Desk

ಬಿರುವೆರ್‌ ಕಾಪು ಸೇವಾ ಸಮಿತಿಯಿಂದ ಆಟಿ ಕಷಾಯ, ಮೆಂತೆ ಗಂಜಿ ವಿತರಣೆ

Mumbai News Desk

ಫರಂಗಿಪೇಟೆ ಕುಲಾಲ ಸುಧಾರಕ ಸಂಘದ ವಾರ್ಷಿಕೋತ್ಸವ. ಸಾಧಕರಿಗೆ ಸನ್ಮಾನ.

Mumbai News Desk

ಜೇಸಿಐ ಕಾಪು ಘಟಕ : ಶಾಶ್ವತ ಯೋಜನೆಯಾಗಿ ಕಾಪು ಪೊಲೀಸ್ ಠಾಣೆಗೆ 2 ಬ್ಯಾರಿಕೇಡ್ ಹಸ್ತಾಂತರ

Mumbai News Desk

ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಕಾಪು ವಲಯ ಅಧ್ಯಕ್ಷರಾಗಿ ರಘುರಾಮ್ ಶೆಟ್ಟಿ ಕೊಪ್ಪಲಂಗಡಿ ಆಯ್ಕೆ

Mumbai News Desk