September 6, 2026
Mumbai News Kannada
ತುಳುನಾಡು

ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ದಾರದ ನಿಮ್ಮಿತ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ





ದೈವೀ ಶಕ್ತಿಯಿಂದ ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯಲು ಸಾದ್ಯ- ಕನ್ಯಾನ ಸದಾಶಿವ ಶೆಟ್ಟಿ

ಒಂದು ಒಳ್ಳೇ ಮೂಹೂರ್ತದಲ್ಲಿ ಮುಷ್ಟಿ‌ಕಾಣಿಕೆ‌ ನಡೆದಿದೆ ಎಲ್ಲಾ ಸಮಾಜದವರು ಶ್ರೀ‌ಕ್ಷೇತ್ರಕ್ಕೆ ಸಹಕಾರ ನೀಡುತ್ತಾರೆ, ನಮ್ಮ ಧಾರ್ಮಿಕತೆ ಗೆ ಎಷ್ಟು ಶಕ್ತಿ ಇದೆ ಎಂದರೆ ಹೊರ ದೇಶದವರು ಕೂಡ ನಮ್ಮ ಭಗವತ್ ಗೀತೆ ಶ್ಲೋಕವನ್ನು ಕಂಠಪಾಠ ಮಾಡಿದ ಉದಾಹರಣೆ ಇದೆ, ಜೀರ್ಣೋದ್ದಾರಕ್ಕೆ ಎಲ್ಲರೂ ಕೈ ಜೋಡಿಸಿಸಬೇಕು, ಈ ಮೂಲಕ ಕಾರ್ಯಕ್ರಮ ಯಶಸ್ಸು ಗಳಿಸಲು ಸಾದ್ಯ ದೈವೀ ಶಕ್ತಿಯಿಂದ ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯಲು ಸಾದ್ಯ, ಎಂದು ಉದ್ಯಮಿ ಯಕ್ಷದ್ರುಪಟ್ಲ ಫೌಂಡೇಷನ್ ನ ಗೌರಾವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ಹೇಳಿದರು ಅವರು ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಜೀರ್ಣೋದ್ದಾರ ಮತ್ತು ಭ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಮುಷ್ಠಿಕಾಣಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜ್ಜಾಪನಾ ಪತ್ರ ಬಿಡುಗಡೆಗೊಳಿಸಿ ಮಾತನಾಡಿದರು, ಮುಂಬೈ ಸಮಿತಿ ಅಧ್ಯಕ್ಷ ವೇದಪ್ರಕಾಶ್ ಶ್ರೀಯಾನ್ ಮಾತನಾಡಿ ಸುಮಾರು 5 ಕೋಟಿ ಮುಂಬೈ ಸಮಿತಿಯಿಂದ ದೇಣಿಗೆ ಕೊಡುವ ಜವಾಬ್ದಾರಿ ಇದೆ, ಈಗಾಗಲೇ ನನ್ನ ವಯಕ್ತಿಕ ನೆಲೆಯಲ್ಲಿ 50 ಲಕ್ಷ ರೂಪಾಯಿ ಕೊಡುತ್ತಿದ್ದೇನೆ, ಇನ್ನಷ್ಟು ಭಕ್ತರು ಸಹಾಕಾರ ನೀಡುವ ಭರವಸೆ ನೀಡಿದ್ದಾರೆ ಎಂದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾತನಾಡಿ ಶ್ರೀಮಂತಿಕೆ ತುಂಭಾ ಜನರಲ್ಲಿ ಇದೆ ಆದರೆ ಹೃದಯ ಶ್ರೀಮಂತಿಕೆ ಇರುವವರು ಕೆಲವೇ ಕೆಲವು ಜನ ಮಾತ್ರ ಅಂತವರು ಇಂತಹ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಾರೆ, ನಾವು ನಿಮಿತ್ತ ಮಾತ್ರ, ಇಂತಹ ಕಾರ್ಯಕ್ಕೆ ಭಗವತಿ ಅವಳಿಗೆ ಬೇಕಾದ ಭಕ್ತರನ್ನು ಕರೆಸುತ್ತಾಳೆ, ಸಾವಿರಾರು ಜನ ಭಕ್ತರು ತಾಯಿಯ ಸೇವೆಗಾಗಿ ಕಾಯುತ್ತಿದ್ದಾರೆ. ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಯಶಸ್ಸಾಗುದರಲ್ಲಿ ಯಾವುದೇ ಸಂಶಯ ಇಲ್ಲ ಎಂದರು.


ದೇವಳದ ಮೊಕ್ತೇಸರ ಅಪ್ಪು ಯಾನೇ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು.


ಈ ಸಂದರ್ಭ ದೇವಳದ ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಳ್ಚಡ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ, ವಿಶ್ವನಾಥ್ ಆದಿ ಉಡುಪಿ,
ಸುದರ್ಶನ್ ಮೂಡಬಿದ್ರೆ, ಗಿರಿಧರ್ ಶೆಟ್ಟಿ, ಗೀತಾಂಜಲಿ ಸುವರ್ಣ, ಈಶ್ವರ್ ಕಟೀಲ್, ವಾಮನ್ ಇಡ್ಯ, ವೇದ ಪ್ರಕಾಶ್ ಶ್ರೀಯಾನ್, ಉಚ್ಚಿಲ ಮೊಗವೀರ ಸಭಾದ ಅಧ್ಯಕ್ಷ ಜಯ ಸಿ ಕೋಟ್ಯಾನ್, ದೇವಾಡಿಗ ಮಹಾಮಂಡಳಿ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಉದ್ಯಮಿ ಸುನೀಲ್ ಪಾಯಸ್ ಉಳ್ಳಾಲ ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರ ಸುರೇಶ್ ಭಟ್ ನಗರ, ಬಾಲಕೃಷ್ಣ ಕಾರ್ನವರು, ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ, ಸಸಿಹಿತ್ಲು ಸಾರಂತ್ತಾಯ ದೈವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಸಿ.ಬಿ.ಕರ್ಕೇರ, ಮಾಜಿ‌ ಮೇಯರ್ ಗಣೇಶ್ ಹೊಸಬೆಟ್ಟು, ಕಿರಣ್ ಕುಮಾರ್ ಶೆಟ್ಟಿ ಕೊಲ್ನಾಡುಗುತ್ತು, ಚಂದ್ರಶೇಖರ ನಾನಿಲ್, ದಿವಾಕರ ಸಾಮಾನಿ, ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ಎಕ್ಕಾರು, ಮುರ ಸದಾಶಿವ ಶೆಟ್ಟಿ, ಸುನೀಲ್ ಅಳ್ವ, ವಿನೋದ್ ಬೊಳ್ಳೂರು, ಕಸ್ತೂರಿ ಪಂಜ, ಗೀತಾ ಕೋಟ್ಯಾನ್, ದೇವದಾಸ್, ಪ್ರಸಾದ್ ಶೆಟ್ಟಿ ಮರಕಡ, ರಣದೀಪ್ ಕಾಂಚನ್, ರವಿ ಕಾಂಚನ್, ರವಿಚಂದ್ರ, ನವೀನ್ ಚಂದ್ರ ಪೂಜಾರಿ, ಕ್ಷೇತ್ರದ ಅಭಿವೃದ್ದಿ ಸಮಿತಿದ ಪ್ರಭಾಕರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.


ರಾಜೇಂದ್ರ ಪ್ರಸಾದ್ ಎಕ್ಕಾರು ನಿರೂಪಿಸಿದರು. ವಾಮನ್ ಇಡ್ಯ ಪ್ರಸ್ತಾವನೆಗೈದರು. ಈ ಸಂದರ್ಭ ವಿವಿಧ ಸಮಿತಿಗಳ ಘೋಷಣೆ ಮಾಡಲಾಯಿತು.

=====
ಮೂವತ್ತು ಲಕ್ಷ ವೆಚ್ಚದಲ್ಲಿ ಮುಂಭಾಗದಲ್ಲಿ ನಿರ್ಮಾಣವಾಗುತ್ತಿರುವ ದೇವಸ್ಥಾನದ ಮುಖ ಮಂಟಪವನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಶೇಖರ್ ಬೆಲ್ಚಡ ಹಾಗು ಆಡಳಿತ ಸಮಿತಿಯ ಉಪಾಧ್ಯಕ್ಷರಾದ ವಿಶ್ವನಾಥ್ ಪಂದುಬೆಟ್ಟು ಆದಿಉಡುಪಿ ಇವರು ನಿರ್ಮಿಸಿಕೊಡುತ್ತಿದ್ದು, ಅಷ್ಟೇ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಹಿಂಬದಿಯ ಪ್ರವೇಶ ದ್ವಾರವನ್ನು ನಿರ್ಮಿಸಿಕೊಡಲು ದಾನಿಯೊಬ್ಬರು ಮುಂದೆ ಬಂದಿದ್ದಾರೆ. ದೇವಸ್ಥಾನದ ಟ್ರಷ್ಟಿ ಶ್ರೀಮತಿ ಗೀತಾ. ಪಿ. ಕುಮಾರ್ 10 ಲಕ್ಷ ರೂಪಾಯಿ ದೇಣಿಗೆಯ ಘೋಷಣೆ ಮಾಡಿದ್ದು, ಕನ್ಯಾನ ಸದಾಶಿವ ಶೆಟ್ಟಿಯವರು ಮುಷ್ಟಿ ಕಾಣಿಕೆಯ ಮೂಲ ಕಾಣಿಕೆಯಾಗಿ 9 ಲಕ್ಷ ರೂಪಾಯಿ ನೀಡಿದ್ದು, ಮುಂದೆ ಇನ್ನಷ್ಟು ನೀಡುವ ಭರವಸೆ ನೀಡಿದರು.



Related posts

ಹೂಡೆ : ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಮೊಳಗಿದ ಅಮರ ವೀರ ಗೀತೆ; ವಿಜೇತರಿಗೆ ಪ್ರಶಸ್ತಿ ಪ್ರದಾನ

Mumbai News Desk

ನಾಗೇಶ ಎಲ್. ಕುಲಾಲ್ ಕುಳಾಯಿ ಅವರು ಸ್ವರ್ಣ ಕುಂಭ ಸಹಕಾರಿ ಸಂಘದ ಅಧ್ಯಕ್ಷರಾಗಿ ಪುನರಾಯ್ಕೆ

Mumbai News Desk

ಪಡುಬಿದ್ರಿ ಬ್ರಹ್ಮಸ್ಥಾನದಲ್ಲಿ ಅನಂದ ಶೆಟ್ಟಿ ಎಕ್ಕಾರ್ ಕುಟುಂಬಿಕರಿಂದ ಡಕ್ಕೆಬಲಿ ಸೇವೆ

Mumbai News Desk

ಬಂಟರ ಸಂಘ ಸುರತ್ಕಲ್ ನಿಂದ ಅಭಿನಂದನೆ, ಸಹಾಯ ಹಸ್ತ, ವಿದ್ಯಾರ್ಥಿ ವೇತನ ವಿತರಣೆ

Mumbai News Desk

Grand Thayankett Mahotsav, celebrated at Uppala Thurthi, Mahamalaraya Temple

Mumbai News Desk

ಕಾಪು: ಗಾಳಿ – ಮಳೆಗೆ ಮನೆಗೆ ಮರಬಿದ್ದು ಅಪಾರ ನಷ್ಟ.

Mumbai News Desk