30.9 C
Mumbai
June 8, 2026
Mumbai News Kannada
ಪ್ರಕಟಣೆ

ಕರ್ನಾಟಕ ಸಂಘ, ಕಲ್ಯಾಣ: ನ.23 ರಂದು ಕರ್ನಾಟಕ ರಾಜ್ಯೋತ್ಸವ ಮತ್ತು 23ನೇ ವಾರ್ಷಿಕೋತ್ಸವ





12/11/25,ಕಲ್ಯಾಣ (ಪ): ಕರ್ನಾಟಕ ಅಭಿಮಾನಿಗಳೇ, ಪ್ರತಿ ವರ್ಷದಂತೆ ಈ ವರ್ಷ ಕರ್ನಾಟಕ ರಾಜ್ಯೋತ್ಸವ ಹಾಗೂ ಸಂಘದ 23ನೇ ವಾರ್ಷಿಕೋತ್ಸವವನ್ನು 23ನೇ ನವೆಂಬರ್ 2025ರಂದು ಸಂಜೆ ಕಲ್ಯಾಣ(ಪ) ಪರಿಸರದ ಗಿರಿಜಾ ಪಯ್ಯಾಡೆ ಸಭಾಗ್ರಹದಲ್ಲಿ ಸಂಜೆ 5ರಿಂದ ಆಚರಿಸಲಾಗುವುದು. ಅದ್ದೂರಿಯಾಗಿ ಆಚರಿಸಲ್ಪಡುವ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂಟರ ಸಂಘ, ಮುಂಬಯಿಯ ಭೀವಂಡಿ – ಬದ್ಲಾಪುರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಸುಭೋದ ಭಂಡಾರಿ ಹಾಗೂ ಪ್ರತಿಷ್ಠಿತ ಡೊಂಬಿವಲಿ ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿಗಳಾದ ಪ್ರೊ. ಅಜಿತ್ ಉಮ್ರಾಣಿಯವರು ಗೌರವ ಅತಿಥಿಯಾಗಿ ಆಗಮಿಸಲಿದ್ದಾರೆ. ವಿವಿಧ ಮನೋರಂಜನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕೂಡಿದ ಈ ಕಾರ್ಯಕ್ರಮದಲ್ಲಿ ಹೋಟೆಲ್ ಉದ್ಯಮ ಕ್ಷೇತ್ರದಲ್ಲಿ ಹೋಟೆಲ್ ಡಾಲ್ಫಿನ್ ಮಾಲಿಕರಾದ ಶ್ರೀ ಸದಾನಂದ ಶೆಟ್ಟಿಯವರನ್ನು, ಕಲಾವಿದೆ ಪ್ರವೀಣಾ ಶೆಟ್ಟಿಯವರನ್ನು ಸಮಾಜ ಸೇವೆ ಕ್ಷೇತ್ರದಲ್ಲಿ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಎಲ್ಲರಿಗೂ ಪರಿಚಿತ ಉದಯವಾಣಿ ಪತ್ರಕರ್ತ ಶ್ರೀ ಗುರುರಾಜ ಪೊಟ್ನಿಸ್ ರವರನ್ನು ಸನ್ಮಾನಿಸಲಾಗುವುದು. ಜೊತೆಗೆ 16 ನವೆಂಬರ್ 25 ಸಂಜೆ 3 ರಿಂದ ಸಂಘದ ಕಾರ್ಯಾಲಯದಲ್ಲಿ ಸಂಘದ ಸದಸ್ಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸಂಘದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಎಲ್ಲಾ ಕರ್ನಾಟಕ ಬಾಂಧವರು ಆಗಮಿಸಿ ನಮ್ಮ ಆದರಾತಿಥ್ಯವನ್ನು ಸ್ವೀಕರಿಸಿ ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡಬೇಕಾಗಿ ಸಮಸ್ತ ಸಂಘದ ಸದಸ್ಯರ ಪರವಾಗಿ ಅಧ್ಯಕ್ಷ ಶ್ರೀ ಜಯಂತ ದೇಶಮುಖರವರು ವಿನಂತಿಸಿ ಕೊಂಡಿದ್ದಾರೆ.



Related posts

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ – ಸೆ. 29 ರಂದು 36ನೇ ವಾರ್ಷಿಕ ಮಹಾಸಭೆ

Mumbai News Desk

ಜೂ.1ರಂದು ಮುಂಬಯಿಯ ಉದ್ಯಮಿ ಸುರೇಶ್ ಕಾಂಚನ್ ನೇತೃತ್ವದಲ್ಲಿ ಹುಟ್ಟೂರು ಉಪ್ಪಿನಕುದ್ರು ಶಾಲೆಯಲ್ಲಿ ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ, ಆರ್ಥಿಕ ನೆರವು ಕಾರ್ಯಕ್ರಮ.

Mumbai News Desk

ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಸಸಿಹಿತ್ಲು(ರಿ)* ಪುನರ್ ನಿರ್ಮಾಣ, ಅ 15.:   ಗೋರೆಗಾಂವ್ ಪೂರ್ವದಲ್ಲಿ ನಂದಾದೀಪ ಆಡಿಟೋರಿಯಮ್ ನಲ್ಲಿ ಮನವಿಪತ್ರ ಬಿಡುಗಡೆ.

Mumbai News Desk

ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾಗೇಟ್ ಶಹಾಡ್ : ಎ. 12ರಿಂದ ಎ. 21ರ ತನಕ 63ನೇ ವಾರ್ಷಿಕೋತ್ಸವ, 10ನೇ ಪ್ರತಿಷ್ಠ ವರ್ಧಂತಿ ಉತ್ಸವ.

Mumbai News Desk

ಶ್ರೀ ನಾಗಬ್ರಹ್ಮ ಕ್ಷೇತ್ರ ಪುತ್ರನ್ ಆದಿ ಮೂಲಸ್ಥಾನ ಗೋಂಟು, ಮುಲ್ಕಿ : ಎ. 22ರಿಂದ ಎ. 26ರ ತನಕ ಬ್ರಹ್ಮ ಕಲಶೋತ್ಸವ ಮತ್ತು ವರ್ಧಂತ್ಯೋತ್ಸವ

Mumbai News Desk

ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ , ಮಹಿಳಾ ವಿಭಾಗ: ಜು 28ರಂದು ಆಶಾಡ ಹಬ್ಬ ಆಚರಣೆ,

Mumbai News Desk