
——
ಸುಮಾರು ಒಂದೂವರೆ ಶತಮಾನದ ಹಿಂದೆ ಕರಾವಳಿಯ ತುಳು ಕನ್ನಡಿಗರು ಮುಂಬೈಗೆ ಉದ್ಯೋಗ ಮತ್ತು ಉನ್ನತ ಶಿಕ್ಷಣದ ಹಂಬಲದಿಂದ ಮುಂಬಯಿಗೆ ಆಗಮಿಸಿದರು. ಅವರಲ್ಲಿ ಕುಲಾಲ ಸಮಾಜದ ಬಾಂಧವರು ಸಹ ಪ್ರಮುಖ ಪಾತ್ರವಹಿಸಿದರು. ಅಂದು ಅಲ್ಪ ಪ್ರಮಾಣದ ಶಿಕ್ಷಣ ಹೊಂದಿದ್ದರೂ, ವಿದ್ಯಾಭ್ಯಾಸಕ್ಕಾಗಿ ಮುಂಬಯಿ ರಾತ್ರಿ ಶಾಲೆಗಳು ಮಹತ್ತರ ಪಾತ್ರ ವಹಿಸಿದ ಕಾರಣ ನಮ್ಮ ತುಳು ಬಾಂದವರು ಅಲ್ಲಿ ಕೆಲಸದೊಂದಿಗೆ ವಿದ್ಯಾಭ್ಯಾಸ ಪೋರೈಸಿ, ಹೋಟೆಲುಗಳು, ಕ್ಯಾಂಟೀನುಗಳು ಮತ್ತು ಮಿಲ್ಲುಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರು25 ನೆ ಸೆಪ್ಟೆಂಬರ್ 1929ರಲ್ಲಿ ಮುಂಬಯಿ ಕೋಟೆಯ ಕ್ವೀನ್ಸ್ ಮೆನ್ಷನ್ ನಲ್ಲಿ ನಮ್ಮ ಸಮಾಜ ಬಾಂಧವರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಲು ಯಶಸ್ವಿಯಾದರು.
ಕೆಲವು ವರ್ಷಗಳ ಪ್ರಯತ್ನದ ಬಳಿಕ, 22 ಜನವರಿ 1933 ರಂದು ಸಮಾಜ ಬಾಂದವರು ಒಂದೇ ವೇದಿಕೆಯಲ್ಲಿ ನಡೆದ ಮಹಾಸಭೆಯಲ್ಲಿ ಸಂಘಕ್ಕೆ “ದಿ ಕೆನರಾ ಕುಲಾಲರ ಸುಧಾರಕ ಸಂಘ” ಎಂಬ ಹೆಸರು ನೀಡಲಾಯಿತು. ಅದೇ ಸಂದರ್ಭದಲ್ಲಿ ಸಂಘದ ಮಾದರಿ ಘಟನೆಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಯಿತು. ನಂತರ 1939ರ ಸೆಪ್ಟೆಂಬರ್ 3ರಂದು, ಅಧ್ಯಕ್ಷ ಮಂಜಪ್ಪ ಎ. ಸಾಲ್ಯಾನ್ ಅವರ ನೇತೃತ್ವದಲ್ಲಿ “ದಿ ಕೆನರಾ ಕುಲಾಲರ ಸುಧಾರಕ ಸ್ಕೌಟ್ ಅಸೋಸಿಯೇಷನ್” ಎಂಬ ಸ್ವಯಂಸೇವಕ ದಳವನ್ನು ಸ್ಥಾಪಿಸಲಾಯಿತು. ಇದರ ಕಾರ್ಯನಿರ್ವಾಹಕ ಸದಸ್ಯರಾಗಿ ಯಸ್. ಪಾಂಚ ಗುಜರನ್, ಕೆ. ಚಂದಪ್ಪ ಬಂಗೇರ, ಲಿಂಗಪ್ಪ ಬಿ. ಗುಜರನ್, ಗುಡ್ಡ ಜೆ. ಸಾಲ್ಕಾನ್, ಜಾರಪ್ಪ ಕೆ. ಅಂಚನ್ ಮತ್ತು ಚಂದು ಡಿ. ಬಂಗೇರರನ್ನು ಆಯ್ಕೆ ಮಾಡಲಾಯಿತು.
ಸಂಘವು ಪ್ರಾರಂಭದಲ್ಲಿ ವಿ.ಟಿ. ಗುಜರನ್ ಅವರ ನಿವಾಸದಲ್ಲಿ ಕಾರ್ಯನಿರ್ವಹಿಸುತ್ತಿದ್ದು, 1942ರಲ್ಲಿ ಅಧಿಕೃತವಾಗಿ ನೋಂದಾಯಿಸಲ್ಪಟ್ಟಿತು. ಅಂದು ಮೋನಪ್ಪ ಕೆ. ಸಾಲ್ಯಾನ್ (ಅಧ್ಯಕ್ಷರು), ಲಕ್ಷ್ಮಣ ಟಿ.ಕೆ. ಬಂಗೇರ (ಉಪಾಧ್ಯಕ್ಷರು), ವೀರಪ್ಪ ಟಿ. ಗುಜರನ್ (ಪ್ರಧಾನ ಕಾರ್ಯದರ್ಶಿ), ಲಿಂಗಪ್ಪ ಎಂ. ಗುಜರನ್ ಮತ್ತು ಜಾರಪ್ಪ ಕೆ. ಅಂಚನ್ (ಗೌರವ ಕಾರ್ಯದರ್ಶಿಗಳು) ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಯಿತು — ವಿದ್ಯಾ ಸಮಿತಿ, ಸಹಾಯ ಸಮಿತಿ, ಆಲೋಚನಾ ಸಮಿತಿ, ವರ್ಗಣೆ ಮತ್ತು ವಸೂಲಿ ಮೇಲ್ವಿಚಾರಣಾ ಸಮಿತಿ, ಪ್ರಚಾರ ಸಮಿತಿ ಹಾಗೂ ವೈದ್ಯಕೀಯ ಸಮಿತಿ.
1943ರಲ್ಲಿ ಸಂಘದ ಹೆಸರನ್ನು “ದಿ ಕುಲಾಲ ಸುಧಾರಕ ಸಂಘ, ಮುಂಬಯಿ” ಎಂದು ಮರುನಾಮಕರಣ ಮಾಡಲಾಯಿತು. ದಿ. ಸುರತ್ಕಲ್ ಪಾಂಚಾ ಗುಜರನ್ ಅವರ ಸ್ಮರಣಾರ್ಥವಾಗಿ 1947ರಲ್ಲಿ ಎಸ್.ಪಿ. ಗುಜರನ್ ರೋಲಿಂಗ್ ಕಪ್ ಸ್ಥಾಪಿಸಲಾಯಿತು, ಇದು ಪ್ರತಿವರ್ಷ ಅತ್ಯುತ್ತಮ ಸಮಾಜಸೇವಕರಿಗೆ ಪ್ರದಾನವಾಗುತ್ತಿತ್ತು. 1950ರಲ್ಲಿ ಸಂಘದ ವತಿಯಿಂದ ಧರ್ಮಾರ್ಥ ವಾಚನಾಲಯ ಮತ್ತು ಪುಸ್ತಕ ಬಂಡಾರವನ್ನು ಪ್ರಾರಂಭಿಸಲಾಯಿತು.
ಸಂಘದ 25ನೇ ವರ್ಷದ ರಜತ ಮಹೋತ್ಸವವನ್ನು 1955ರ ಮಾರ್ಚ್ 13ರಂದು ಜಹಾಂಗೀರ್ ಸಭಾಭವನದಲ್ಲಿ ಡಿ.ಎಂ. ಕೋಡ್ಮಾಣ್ಕರ್ ಅವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ರೋಹಿಣಿ ದೇವಿ ಹಾಗೂ ಡಾ. ಎಚ್.ಎಂ. ಸುಬ್ಬಯ್ಯ ಉಪಸ್ಥಿತರಿದ್ದರು. ನಂತರ ಡಾ. ಎಚ್.ಎಂ. ಸುಬ್ಬಯ್ಯ ಅವರ ನೇತೃತ್ವದಲ್ಲಿ 1979ರ ಡಿಸೆಂಬರ್ 23ರಂದು ಸುಂದರ್ ಬಾಯ್ ಸಭಾಗೃಹದಲ್ಲಿ ಸುವರ್ಣ ಮಹೋತ್ಸವವನ್ನು ಜರಗಿಸಲಾಯಿತು. ಅದೇ ವರ್ಷ ಮಂಗಳೂರಿನ ಅತ್ತಾವರದಲ್ಲಿ 62 ಸೆನ್ಸ್ ಜಾಗವನ್ನು ಖರೀದಿಸಿ, ಸಮಾಜದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಸುಮಾರು ₹13 ಲಕ್ಷ ವೆಚ್ಚದಲ್ಲಿ ಕುಲಾಲ ಭವನ ಮತ್ತು ವಿದ್ಯಾರ್ಥಿ ನಿಲಯ ನಿರ್ಮಿಸಲಾಯಿತು. 1981ರಲ್ಲಿ ಜ್ಯೋತಿ ಕೋ ಆಫ್ ಕ್ರೆಡಿಟ್ ಸೊಸೈಟಿ ಸ್ಥಾಪಿಸಲಾಯಿತು. ನಂತರ 1989ರ ಡಿಸೆಂಬರ್ 24ರಂದು ಡಾ. ವಿ.ಆರ್. ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ಬಿರ್ಲಾ ಮಾತೋಶ್ರೀ ಸಭಾಗೃಹದಲ್ಲಿ ವಜ್ರಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಮಯದಲ್ಲಿ ಸಂಘದ ಹೆಸರನ್ನು ಪುನಃ ಬದಲಿಸಿ “ಕುಲಾಲ ಸಂಘ, ಮುಂಬಯಿ” ಎಂದು ನಾಮಕರಣ ಮಾಡಲಾಯಿತು.
1998ರಲ್ಲಿ ಸಂಘವು ತನ್ನ ಮುಂಬಯಿ ತುಳುನಾಡು ಹಾಗೂ ಬೇರೆ ಬೇರೆ ದೇಶದಲ್ಲಿ ನೆಲೆ ನಿಂತ ಜನರಿಗೆ ಪ್ರತಿಯೊಂದು ಸಮಾಚಾರ ತಲುಪಬೇಕೆಂಬ ಉದ್ಧೇಶದಿಂದ ಸ್ಥಾಪನೆಯಾದ ತ್ರೈಮಾಸಿಕ ಪತ್ರಿಕೆ “ಅಮೂಲ್ಯ” ಯನ್ನು ಪ್ರಕಟಿಸಲು ಪ್ರಾರಂಭಿಸಿತು. ಕನ್ನಡ ಸಾಹಿತ್ಯ ಸೇವೆಯಲ್ಲಿ ವಿಶಿಷ್ಟ ಕೊಡುಗೆ ನೀಡಿದ ಕೃಷ್ಣ ಬಿ. ಬಂಜನ್ ಸ್ಥಾಪಕ ಸಂಪಾದಕರಾಗಿದ್ದು, ನಂತರ ಕುಟ್ಟಿ ಕೆ. ಮೂಲ್ಯ, ಶಂಕರ್ ವೈ ಮೂಲ್ಯ ಸಂಪಾದಕದ ಸಮಯದಲ್ಲಿ ಬೆಳ್ಳಿ ಹಬ್ಬ ಬಹಳ ವಿಜೃಂಭಣೆಯಿಂದ ಜರಗಿತ್ತು.ಈಗ ಆನಂದ್ ಬಿ ಮೂಲ್ಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವರು.
2000ರ ಆಗಸ್ಟ್ 20ರಂದು ಸಂಘವು ತನ್ನ ನೂತನ ಕಚೇರಿಯನ್ನು ಮಲ್ಹೋತ್ರಾ ಚೇಂಬರ್ಸ್‌ಗೆ ಸ್ಥಳಾಂತರಿಸಿತು, ಅಲ್ಲಿ ಸಂಘ ಮತ್ತು ಜ್ಯೋತಿ ಕ್ರೆಡಿಟ್ ಸೊಸೈಟಿ ಎರಡೂ ಕಚೇರಿಗಳು ಕಾರ್ಯ ನಿರ್ವಹಿಸಲು ಆರಂಭಿಸಿದವು.
2001ರ ಆಗಸ್ಟ್ 27ರಂದು ಶ್ರೀ ಶ್ರೀ ಮಾಣಿಲ ಮೋಹನದಾಸ್ ಸ್ವಾಮೀಜಿಯವರ ಆಶೀರ್ವಚನದೊಂದಿಗೆ ಗುರುವಂದನಾ ಭಜನಾ ಮಂಡಳಿ ಸ್ಥಾಪನೆಯಾಗಿ, ಸಂಘವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ತನ್ನ ಸ್ಥಾನವನ್ನು ಬಲಪಡಿಸಿತು.
ಸಂಘವು ವಧೂವರರ ಅನ್ವೇಷಣಾ ಕಾರ್ಯಕ್ರಮ, ವಿದ್ಯಾರ್ಥಿವೇತನ ವಿತರಣೆ, ಅಸಹಾಯಕರಿಗೆ ನೆರವು, ವೈದ್ಯಕೀಯ ಸಹಾಯ, ಕೋವಿಡ್ ಕಾಲದ ಸೇವಾ ಚಟುವಟಿಕೆಗಳು ಹಾಗೂ ಯುವ ಪ್ರತಿಭೆಗಳಿಗೆ ಸಾಂಸ್ಕೃತಿಕ ವೇದಿಕೆ ಒದಗಿಸುವ ಮೂಲಕ 5 ಸ್ಥಳೀಯ ಸಮಿತಿಯವರಿಂದ ಹಾಗೂ ಮಹಿಳಾ ವಿಭಾಗದವರಿಂದ ಪ್ರತಿವರ್ಷ ಕ್ರೀಡೆ ಮತ್ತು ವಿವಿಧ ಕಾರ್ಯಕ್ರಮ ಮಾಡಿಸಿ, ಮಹಿಳಾ ವಿಭಾಗದವರು ಸಾಮಾಜಿಕ ಸೇವೆಯಲ್ಲಿ ಸಮನವಾಗಿ ನಿರಂತರವಾಗಿ ತೊಡಗಿಕೊಂಡಿದೆ.
2004ರ ಸೆಪ್ಟೆಂಬರ್ 26ರಂದು ವಡಾಲಾ ಎನ್.ಕೆ.ಇ.ಎಸ್. ಹೈಸ್ಕೂಲ್ ಮೈದಾನದಲ್ಲಿ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರ ಆಶೀರ್ವಾದದೊಂದಿಗೆ, ಅಂದಿನ ಅಧ್ಯಕ್ಷ ಪಿ.ಕೆ. ಸಾಲ್ಯಾನ್ ಅವರ ನೇತೃತ್ವದಲ್ಲಿ ಅಮೃತ ಮಹೋತ್ಸವ ವಿಜೃಂಭಣೆಯಿಂದ ಜರಗಿಸಲಾಯಿತ್ತು. ನಂತರ 2005ರ ಜನವರಿ 26ರಂದು ಷಣ್ಮುಖಾನಂದ ಸಭಾಗೃಹದಲ್ಲಿ ನಿಧಿ ಸಂಗ್ರಹ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಲಾಯಿತು.
ಪಿ.ಕೆ. ಸಾಲ್ಯಾನ್ ಅವರು ಸಂಘದ ದೀರ್ಘಕಾಲದ ಅಧ್ಯಕ್ಷರಾಗಿದ್ದ ಅವರ ಅವಧಿಯಲ್ಲಿ ಥಾಣೆಯ ಘೋಡ್‌ಬಂದರ್‌ನಲ್ಲಿ ವಿಶಾಲ ಜಾಗ ಖರೀದಿಸಿ ಸಮಾಜದ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮ ಕೈಗೊಂಡಿದ್ಧರು. ಅವರ ನಿಧನದ ನಂತರ , ಗಿರೀಶ್ ಬಾಬು ಸಾಲಿಯಾನ್ ಹಾಗೂ ದೇವದಾಸ್ ಕುಲಾಲ್ ಪ್ರಸ್ತುತ ರಘು ಮೂಲ್ಯ ಪಾದೆಬೆಟ್ಟು ಅವರು ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕುಲಾಲ ಸಂಘ, ಮುಂಬಯಿ – ನೂರು ವರ್ಷಗಳ ಸಂಯುಕ್ತ ಪ್ರಯತ್ನ, ತ್ಯಾಗ, ಸೇವೆ ಮತ್ತು ಸಾಂಸ್ಕೃತಿಕ ಏಕತೆಯ ಚಿರಸ್ಮರಣೀಯ ಪ್ರತೀಕವಾಗಿದೆ.
2025 ನವಂಬರ್ 23ರಂದು ಗಣ್ಯಾದಿ ಗಣ್ಯರ ಉಪಸ್ಥಿತಿಯಲ್ಲಿ ಕುಲಾಲ ಭವನ ಲೋಕಾರ್ಪಣೆ.
ಕುಲಾಲ ಸಂಘ ಮುಂಬಯಿ ಬಹು ಕೋಟಿ ವೆಚ್ಚದಲ್ಲಿ ಸಮಾಜ ಬಾಂಧವರ ಹಾಗೂ ದಾನಿಗಳ ಸಹಾಯದಿಂದ ನಿರ್ಮಿಸಿದ, ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡು, ಮಂಗಳೂರಿನ ಹೃದಯ ಭಾಗದಲ್ಲಿ, ಮಂಗಳಾದೇವಿ ದೇವಸ್ಥಾನದ ಸಮೀಪ ನಿರ್ಮಾಣಗೊಂಡ ಕುಲಾಲ ಭವನ ಉದ್ಘಾಟನಾ ಸಮಾರಂಭವು 2025ನವಂಬರ್ 23ರಂದು ಬಹಳ ಅದ್ದೂರಿಯಾಗಿ ಜರಗಲಿದೆ. ನಮ್ಮ ಅತ್ಯಮೂಲ್ಯ ಕೊಡುಗೈ ದಾನಿಯವರ ಸಹಾಯದಿಂದ ಇಂದು ಶ್ರೀಮತಿ ಸುಮಿತ್ರಾ ರಾಜು ಸಾಲಿಯನ್ ಸಭಾಂಗಣ, ಶ್ರೀಮತಿ ಯಶೋಧಾ ಬಾಬು ಸಾಲಿಯನ್ ಬಂಟ್ವಾಳ ವೇದಿಕೆ, ಶ್ರೀಮತಿ ಸರಸ್ವತಿ ವಿಶ್ವನಾಥ್ ಬಂಗೇರ ಕುಳಾಯಿ (ಬಾಲ್ಕನಿ), ಶ್ರೀಮತಿ ನಮ್ರತಾ ಜಗದೀಶ್ ಬಂಜನ್ ಬ್ಯಾಂಕ್ವೆಟ್ ಹಾಲ್, ಶ್ರೀಮತಿ ಸಾವಿತ್ರೀ ಪಿ. ಕೆ. ಸಾಲಿಯನ್ ವೇದಿಕೆ, ಶ್ರೀಮತಿ ವಸಂತಿ ಸದಾಶಿವ ಬಂಜನ್ ಆಡಳಿತ ಕಚೇರಿ , ಡಾ. ಸುರೇಖಾ ರತನ್ ಕುಲಾಲ್ ಕಚೇರಿಗಳನ್ನು ದಾನಿಗಳಾದ ಇವರ ಹೆಸರಿನೊಂದಿಗೆ ಒಂದು ಸಾವಿರ ಆಸನದೊಂದಿಗೆ ಆಡಿಟೋರಿಯಂ ಮತ್ತು ಟೆರೆಸ್ ಹಾಲ್ ಒಟ್ಟು 2000 ಜನರು ಏಕ ಕಾಲದಲ್ಲಿ ಸೇರಿ ಕಾರ್ಯಕ್ರಮ ಮಾಡುವಂತಹ ಭವ್ಯ ಭವನ .
ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ರಘು ಎ. ಮೂಲ್ಯ, ಇವರ ಅಧ್ಯಕ್ಷತೆಯಲ್ಲಿ 23 ನೇ ನವೆಂಬರ್ 2025 ರಂದು, ಬೆಳಿಗ್ಗೆ 9.30ರಿಂದ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಒಡಿಯೂರು ಕ್ಷೇತ್ರದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಮತ್ತು ಕರ್ಮಯೋಗಿ ಶ್ರೀ ಶ್ರೀ ಮೋಹನ್ ದಾಸ ಪರಮಹಂಸ ಸ್ವಾಮೀಜಿ, ಶ್ರೀ ಮಹಾಲಕ್ಷ್ಮೀ ಕ್ಷೇತ್ರ, ಶ್ರೀಧಾಮ ಮಾಣಿಲ, ಇವರು ಆಶೀರ್ವಚನದೊಂದಿಗೆ ಉದ್ದೀಪನ ಸಮಾರಂಭ ನಡೆಯಲಿರುವುದು.
ಮುಖ್ಯ ಅತಿಥಿಯಾಗಿ ಯು.ಟಿ. ಖಾದರ್, ಮಾನ್ಯ ಸ್ಪೀಕರ್, ಕರ್ನಾಟಕ ವಿಧಾನಸಭೆ, ಗೌರವಾನ್ವಿತ ಅತಿಥಿಗಳಾಗಿ ತಂಗಡಗಿ ಸಂಗಪ್ಪ ಶಿವರಾಜ, ಮಾನ್ಯ ಸಚಿವರು, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ, ದಿನೇಶ್ ಗುಂಡು ರಾವ್, ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರು, ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಲಿರುವರು.
ಗೌರವ ಅತಿಥಿತಿಗಳಾಗಿ ಡಾ. ರವಿ ಎನ್., ಧರ್ಮದರ್ಶಿ, ಶ್ರೀ ಉದ್ಭವ ರೌದ್ರನಾಥೇಶ್ವರ ದೇವಾಲಯ, ನಡುಬೆಟ್ಟು, ಮಡಂತ್ಯಾರ್, ಉಡುಪಿ ದೊಡ್ಡಣ ಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ರಮಾನಂದ ಗುರೂಜಿ.
ಅರುಣ್ ಕುಮಾರ್ ಐತಾಳ್ ಟ್ರಸ್ಟಿ, ಮಂಗಳಾದೇವಿ ದೇವಸ್ಥಾನ, ಮಂಗಳೂರು, ರೇವ್. ಫಾ. ಎರಿಕ್ ಕ್ರಾಸ್ಟಾ, ಪ್ಯಾರಿಷ್ ಪ್ರೀಸ್ಟ್, ಸೇಂಟ್ ರಿಟಾ ಚರ್ಚ್, ಕ್ಯಾಸಿಯಾ ಮೋರ್ಗನ್ಸ್ ಗೇಟ್, ಮಂಗಳೂರು, ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಂಸದರು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ, ಕೋಟ ಶ್ರೀನಿವಾಸ್ ಪೂಜಾರಿ, ಸಂಸದರು, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ, ಡಿ. ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ, ಡಾ. ವೈ. ಭರತ್ ಶೆಟ್ಟಿ, ಶಾಸಕರು, ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ, ವಿ. ಸುನಿಲ್ ಕುಮಾರ್, ಶಾಸಕರು, ಕಾರ್ಕಳ ವಿಧಾನಸಭಾ ಕ್ಷೇತ್ರ, ಉಮಾನಾಥ ಕೋಟ್ಯಾನ್, ಶಾಸಕರು, ಮೂಡಬಿದಿರೆ , ಗುರ್ಮೆ ಸುರೇಶ್ ಶೆಟ್ಟಿ, ಶಾಸಕರು, ಕಾಪು, ಯು. ರಾಜೇಶ್ ನಾಯಕ್, ಶಾಸಕರು, ಬಂಟ್ವಾಳ , ಹರೀಶ್ ಪೂಂಜ, ಶಾಸಕರು, ಬೆಳ್ತಂಗಡಿ, ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು, ಕು. ಭಗೀರಥಿ ಮುರುಳ್ಯ, ಶಾಸಕಿ, ಸುಳ್ಯ, ಐವನ್ ಡಿಸೋಜಾ, ವಿಧಾನ ಪರಿಷತ್ ಸದಸ್ಯರು, ಕರ್ನಾಟಕ, ಮಂಜುನಾಥ ಭಂಡಾರಿ, ವಿಧಾನ ಪರಿಷತ್ ಸದಸ್ಯರು, ಕರ್ನಾಟಕ, ಕೆ. ಹರೀಶ್ ಕುಮಾರ್, ಅಧ್ಯಕ್ಷರು, ಮೆಸ್ಕಾಂ, ಮಂಗಳೂರು, ಕಿಶೋರ್ ಕುಮಾರ್, ಎಂ. ಎಲ್. ಸಿ., ಕರ್ನಾಟಕ, ಬಿ. ರಮಾನಾಥ ರೈ, ಮಾಜಿ ಸಚಿವರು, ನಳಿನ್ ಕುಮಾರ್ ಕಟೀಲ್, ಮಾಜಿ ಸಂಸದರು, ಪ್ರೇಮಾನಂದ ಶೆಟ್ಟಿ, ಮಾಜಿ ಮೇಯರ್, ಮಂಗಳೂರು, ಮಿಥುನ್ ಎಂ. ರೈ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಇನಾಯತ್ ಅಲಿ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ದರ್ಶನ ಎಚ್.ವಿ., ಐ.ಎ.ಎಸ್., ಆಯುಕ್ತರು, ದಕ್ಷಿಣ ಕನ್ನಡ ಜಿಲ್ಲೆ, ರವಿಚಂದ್ರ ನಾಯಕ್ ಕೆ.ಎ.ಎಸ್., ಆಯುಕ್ತರು, ಮಂಗಳೂರು ನಗರ ಮಹಾನಗರ ಪಾಲಿಕೆ, ನಾಡೋಜ ಡಾ. ಜಿ. ಶಂಕರ್, ಟ್ರಸ್ಟಿ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಉಡುಪಿ, ಐಕಳ ಹರೀಶ್ ಶೆಟ್ಟಿ, ಅಧ್ಯಕ್ಷರು, ಫೆಡರೇಶನ್ ಆಫ್ ವರ್ಲ್ಡ್ ಬಂಟ್ಸ್ ಅಸೋಸಿಯೇಷನ್, ಪ್ರವೀಣ್ ಭೋಜ ಶೆಟ್ಟಿ, ಅಧ್ಯಕ್ಷರು, ಬಂಟ್ಸ್ ಸಂಘ, ಮುಂಬಯಿ, ಹರೀಶ್ ಜಿ. ಅಮೀನ್, ಅಧ್ಯಕ್ಷರು, ಬಿಲ್ಲವರ ಅಸೋಸಿಯೇಷನ್, ಮುಂಬಯಿ, ಕನ್ಯಾನ ಸದಾಶಿವ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರು, ಹೆರಾಂಬ ಇಂಡಸ್ಟ್ರೀಸ್ ಲಿಮಿಟೆಡ್. ಮುಂಬಯಿ, ಡಾ. ಎಂ ಎನ್ ರಾಜೇಂದ್ರ ಕುಮಾರ್, ಅಧ್ಯಕ್ಷರು, ಎಸ್‌ಸಿಡಿಸಿಸಿ ಬ್ಯಾಂಕ್. ಸೂರ್ಯಕಾಂತ ಜಯ ಸುವರ್ಣ, ಅಧ್ಯಕ್ಷರು, ಭಾರತ ಕೋ-ಆಪರೇಟಿವ್ ಬ್ಯಾಂಕ್. ಕೆ.ಡಿ. ಶೆಟ್ಟಿ, ಸಿಎಂಡಿ, ಭವಾನಿ ಶಿಪ್ಪಿಂಗ್ ಸರ್ವೀಸಸ್ (ಇಂಡಿಯಾ) ಪ್ರೈ. ಲಿ., ಮುಂಬಯಿ, ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಸಂಸ್ಥಾಪಕರು, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ, ಕಡಂದಲೆ ಸುರೇಶ್ ಭಂಡಾರಿ, ಟ್ರಸ್ಟಿ, ಶ್ರೀ ಕಚ್ಚೂರು ನಾಗೇಶ್ವರ ದೇವಸ್ಥಾನ, ಬಾರ್ಕೂರು, ಉಡುಪಿ. ಡಾ. ಕೆ. ಪ್ರಕಾಶ್ ಶೆಟ್ಟಿ, ಸಿಎಂಡಿ, ಎಂಆರ್‌ಜಿ ಗ್ರೂಪ್, ಬೆಂಗಳೂರು, ಅಜಿತ್ ಕುಮಾರ್ ರೈ ಮಾಲಾಡಿ, ಅಧ್ಯಕ್ಷರು, ದಕ್ಷಿಣ ಕನ್ನಡ ಬಂಟರ ಯಾನೆ ನಾಡವರ ಮಾತೃ ಸಂಘ, ಮಂಗಳೂರು, ಪದ್ಮರಾಜ್ ಆರ್., ಕೋಶಾಧಿಕಾರಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ, ಕುದ್ರೋಳಿ ಮತ್ತು ಕಾರ್ಯದರ್ಶಿ, ಕೆಪಿಸಿಸಿ, ರವಿ ಎಸ್. ಶೆಟ್ಟಿ, ಸಿಎಂಡಿ, ಸಾಯಿ ಪ್ಯಾಲೇಸ್ ಮುಂಬಯಿ ಮಹೇಶ್ ಶೆಟ್ಟಿ, ಉಪಾಧ್ಯಕ್ಷರು, ಬಂಟರ ಸಂಘ, ಮುಂಬಯಿ, ಶಶಿಧರ ಬಿ. ಶೆಟ್ಟಿ, ಸಿಎಂಡಿ, ಶಶಿ ಕ್ಯಾಟರಿಂಗ್ ಸರ್ವೀಸಸ್ ಪ್ರೈ. ಲಿ., ಬರೋಡಾ, ಸತೀಶ್ ಕುಂಪಳ, ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ, ವೇದಪ್ರಕಾಶ್ ಶ್ರೀಯಾನ್, ಸಿಎಂಡಿ, ದಿವ್ಯ ಶಿಪ್ಪಿಂಗ್ ಮತ್ತು ಕ್ಲಿಯರಿಂಗ್ ಸರ್ವೀಸಸ್ ಪ್ರೈ. ಲಿ., ಮುಂಬಯಿ. ಗಿರೀಶ್ ಶೆಟ್ಟಿ ತೆಳ್ಳಾರ್, ಜೊತೆ ಕಾರ್ಯದರ್ಶಿ, ಬಂಟರ ಸಂಘ, ಮುಂಬಯಿ. ಉದಯ ಶೆಟ್ಟಿ ಮುಣಿಯಾಳ, ಕಾರ್ಯದರ್ಶಿ, ಕೆಪಿಸಿಸಿ. ಸಂತೋಷ್ ಡಿ. ಶೆಟ್ಟಿ, ಅಧ್ಯಕ್ಷರು, ಶ್ರೀ ಶನೀಶ್ವರ ಮಂದಿರ, ನೆರುಲ್, ನವಿ ಮುಂಬಯಿ. ಸುರೇಶ್ ಆರ್. ಕಾಂಚನ್, ಗೌ. ಅಧ್ಯಕ್ಷರು, ಮೋಗವೀರ ಮಹಾಜನ ಸೇವಾ ಸಂಘ, ಭಾಗ್ವಾಡಿ ಹೊಬಳಿ. ಶಶಿಧರ ಶೆಟ್ಟಿ ಇನ್ನಂಜೆ, ಸಿಎಂಡಿ, ಸೃಷ್ಠಿ ರೆಸಿಡೆನ್ಸಿ ಕಾಪು .ಮಯೂರ ಉಳ್ಳಾಲ್, ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ, ಮಂಗಳೂರು, ಧರ್ಮಪಾಲ ಯು. ದೇವಡಿಗ, ಅಧ್ಯಕ್ಷರು, ವಿಶ್ವ ದೇವಾಡಿಗ ಮಹಾಮಂಡಲ, ಮುಂಬಯಿ, ಜಯ ಸಿ. ಕೋಟ್ಯಾನ್, ಅಧ್ಯಕ್ಷರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೋಗವೀರ ಮಹಾಜನ ಸಂಘ, ಉಚ್ಚಿಲ. ಸಂತೋಷ್ ಜಿ. ಶೆಟ್ಟಿ, ಮಾಜಿ ಕಾರ್ಪೋರೇಟರ್, ಪನ್ವೇಲ್ ಮಹಾನಗರ ಪಾಲಿಕೆ, ಸಂಜೀವ ಕೆ. ಬಂಗೇರ, ಮಾಲೀಕರು – ಹೋಟೆಲ್ ತಪಸ್ವಿ, ನಾಶಿಕ್, ರಮಾನಂದ ಬಂಗೇರ, ಮಾಲೀಕರು – ನಂದಾ ಟೆಕ್ಸ್ ಟೈಲ್ಸ್ ನಾಶಿಕ್, ಪೃಥ್ವಿರಾಜ್ ಎಡಪದವು, ಕೆಪಿಸಿಸಿ ಸದಸ್ಯರು, ಶ್ರೀಮತಿ ಕಸ್ತೂರಿ ಪಂಜ, ಮಾಜಿ ಉಪಾಧ್ಯಕ್ಷೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್. ವಿಶ್ವನಾಥ ಶೆಟ್ಟಿ ಮೂಡಶೆಡ್ಡೆ, ಪಾಲುದಾರರು, ಜಿ.ಕೆ. ರೆಸಿಡೆನ್ಸಿ, ಜೆಪ್ಪು, ಮಂಗಳೂರು ಉಪಸ್ಥಿತರುರುವರು,
ಕುಲಾಲ ಸಂಘ ಮುಂಬಯಿಯ ಗೌರವಾಧ್ಯಕ್ಷರಾದ ಪಿ. ದೇವದಾಸ್ ಎಲ್. ಕುಲಾಲ್, ದಿಕ್ಸೂಚಿ ಭಾಷಣ ಮಾಡಲಿರುವರು.
ಈ ಸಂದರ್ಭದಲ್ಲಿ ಮಹಾ ದಾನಿಗಳಾದ ಸುನಿಲ್ ರಾಜು ಸಾಲಿಯನ್ ಮತ್ತು ಪರಿವಾರ, ಜಗದೀಶ್ ಆರ್. ಬಂಜನ್ ಮತ್ತು ಪರಿವಾರ, ವಿಶ್ವನಾಥ ಬಂಗೇರ ಮತ್ತು ಪರಿವಾರ, ಗಿರೀಶ್ ಬಿ. ಸಾಲಿಯನ್ ಮತ್ತು ಪರಿವಾರ, ಎಸ್.ಆರ್. ಬಂಜನ್ ಮತ್ತು ಪರಿವಾರ, ಶ್ರೀಮತಿ ಸಾವಿತ್ರಿ ಪಿ.ಕೆ. ಸಾಲಿಯನ್ ಮತ್ತು ಪರಿವಾರ ಇವರನ್ನು ಸನ್ಮಾನಿಸಲಾಗುವುದು.
ಮಧ್ಯಾಹ್ನ 1:30 ರಿಂದ 2:30ರವರೆಗೆ ಮನರಂಜನಾ ಕಾರ್ಯಕ್ರಮ ನಡೆಯಲಿದೆ.
ಅಪರಾಹ್ನ 3 ರಿಂದ ದಾನಿಗಳಿಗೆ ಸನ್ಮಾನ ನಡೆಯಲಿದೆ.
ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ರಘು ಎ. ಮೂಲ್ಯ ಇವರ ಅದ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಅತಿಥಿ ಅಭ್ಯಾಗತರುಗಳಾಗಿ ಗಣೇಶ್ ಕಂಚನ್, ಅಧ್ಯಕ್ಷರು, ಮೊಗವೀರ ವ್ಯವಸ್ಥಾಪಕ ಮಂಡಳಿ, ಮುಂಬಯಿ, ರವಿ ದೇವಡಿಗ, ಅಧ್ಯಕ್ಷರು, ದೇವಡಿಗ ಸಂಘ ಮುಂಬಯಿ, ಡಾ. ಸುರೇಶ್ ರಾವ್, ಅಧ್ಯಕ್ಷರು, ಬಿ.ಎಸ್.ಕೆ.ಬಿ ಅಸೋಸಿಯೇಶನ್, ಮುಂಬಯಿ, ಡಾ. ಎಂ. ಅಣ್ಣಯ್ಯ ಕುಲಾಲ್ ಉಲ್ತೂರು, ಅಧ್ಯಕ್ಷರು, ಅಖಿಲ ಭಾರತ ಕುಂಭಾರರ ಮಹಾಸಂಘ, ಎನ್.ಟಿ. ಪೂಜಾರಿ, ಅಧ್ಯಕ್ಷರು, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ, ಮುಂಬಯಿ, ವಿಠಲ್ ಕುಲಾಲ್, ಮಾಲಕರು, ವಿ.ಕೆ. ಫರ್ನಿಚರ್ ಅಂಡ್ ಎಲೆಕ್ಟ್ರಾನಿಕ್ಸ್, ಮಂಗಳೂರು, ಸುಂದರ ಗೌಡ, ಮಾಲಕರು, ಗುಡ್‌ಲೈಫ್ ಫರ್ನಿಚರ್ ಅಂಡ್ ಮಾರ್ಕೆಟಿಂಗ್, ಮಂಗಳೂರು ಮಹೇಂದ್ರ ಚೌಹಾನ್, ವ್ಯವಸ್ಥಾಪಕ ನಿರ್ದೇಶಕರು, ವರ್ಧಮಾನ್ ಮೆಡಿಸೇಲ್ಸ್ ಪ್ರೈ. ಲಿ., ಬೆಂಗಳೂರು, ದಿವಾಕರ ಮೂಲ್ಯ, ಅಧ್ಯಕ್ಷರು, ಕುಲಾಲ ಸಂಘ ಬೆಂಗಳೂರು, ಶ್ರೀನಿವಾಸ್ ಸಾಫಲ್ಯ, ಸಾಫಲ್ಯ ಸೇವಾ ಸಂಘ, ಮುಂಬಯಿ, ಮನೋಜ್ ಹೆಗ್ಡೆ, ಅಧ್ಯಕ್ಷರು, ಹೆಗ್ಗಡೆ ಸೇವಾ ಸಂಘ, ಮುಂಬಯಿ, ಎಚ್. ಮೋಹನ್ ದಾಸ್, ಮಾಜಿ ಅಧ್ಯಕ್ಷರು, ದೇವಾಡಿಗ ಸಂಘ, ಮುಂಬಯಿ, ಸುಂದರ್ ಕುಲಾಲ್ ಶಕ್ತಿನಗರ, ಆಡಳಿತ ಟ್ರಷ್ಟಿ, ಶ್ರೀ ವೀರನಾರಾಯಣ ಸೇವಾ ಟ್ರಸ್ಟ್, ಕುಲಶೇಖರ, ಮಂಗಳೂರು, ಬಿ. ಸುರೇಶ್ ಕುಲಾಲ್, ಅಧ್ಯಕ್ಷರು, ಕುಲಾಲ ಪ್ರತಿಷ್ಠಾನ, ಮಂಗಳೂರು, ಎ.ದಾಮೋದರ ಅಧ್ಯಕ್ಷರು, ಶ್ರೀ ವೀರನಾರಾಯಣ ದೇವಸ್ಥಾನ ಜೀರ್ಣೋಧಾರ ಸಮಿತಿ, ಕುಲಶೇಖರ, ಮಂಗಳೂರು, ದೊಡ್ಡಣ್ಣ ಮೂಲ್ಯ, ಅಧ್ಯಕ್ಷರು, ಕುಲಾಲ ಸುಧಾರಕ ಸಂಘ, ಪುಣೆ, ಜನಾರ್ಧನ ಸಾಲ್ಯಾನ್, ಅಧ್ಯಕ್ಷರು, ಕುಲಾಲ ಒಕ್ಕೂಟ, ನಾಶಿಕ್, ಬಿ. ಪ್ರೇಮಾನಂದ ಕುಲಾಲ್, ಅಧ್ಯಕ್ಷರು, ಶ್ರೀ ವೀರನಾರಾಯಣ ಸೇವಾ ಟ್ರಸ್ಟ್, ಕುಲಶೇಖರ, ಮಂಗಳೂರು, ಚಂದ್ರಶೇಖರ ಪಾಲೆತ್ತಾಡಿ, ಮುಖ್ಯ ಸಂಪಾದಕರು, ಕರ್ನಾಟಕ ಮಲ್ಲ ಪತ್ರಿಕೆ, ಮುಂಬಯಿ, ಸಂಜೀವ ಎನ್. ಶೆಟ್ಟಿ, ಹೋಟೆಲ್ ಅಶ್ವಿತ್, ಸಿಬಿಡಿ ಬೆಲಾಪುರ, ನವಿ ಮುಂಬಯಿ,
ಭಾಸ್ಕರ ಕುತ್ತಾರ್, ಅಧ್ಯಕ್ಷರು, ಕುಲಾಲ ಸಂಘ ಕೊಲ್ಯ. ಎನ್.ಜಿ. ಮೂಲ್ಯ, ಮಾಜಿ ಅಧ್ಯಕ್ಷರು, ಜ್ಯೋತಿ ಕೋ ಆಫ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್, ಮುಂಬಯಿ, ಯಜ್ನೇಶ್ ಬರ್ಕೆ, ಸ್ಥಾಪಕ ಅಧ್ಯಕ್ಷರು, ಬರ್ಕೆ ಫ್ರೆಂಡ್ಸ್, ಮಂಗಳೂರು, ಗಿರೀಶ್ ಬಿ. ಸಾಲ್ಯಾನ್, ಸುನಿಲ್ ಆರ್. ಸಾಲ್ಯಾನ್, ಕೆ. ಗೋವಿಂದ ಬಂಗೇರ, ಪಿ. ಶೇಖರ್ ಮೂಲ್ಯ, ಆನಂದ ಬಿ. ಮೂಲ್ಯ, ನ್ಯಾ. ಉಮನಾಥ್ ಕೆ. ಮೂಲ್ಯ, ಎಲ್. ಆರ್. ಮೂಲ್ಯ, ಉಮೇಶ್ ಎಂ. ಬಂಗೇರ, ಆನಂದ ಕೆ. ಕುಲಾಲ್, ಸಂಜೀವ ಎನ್. ಬಂಗೇರ, ಸುಂದರ್ ಎನ್. ಮೂಲ್ಯ, ವೇಣುಗೋಪಾಲ ಡಿ. ಕರ್ಕೆರ, ಸುಚಿತ್ರಾ ಡಿ. ಬಂಜನ್, ಜೈರಾಜ್ ಪಿ. ಸಾಲ್ಯಾನ್, ರಘು ಆರ್. ಮೂಲ್ಯ, ಸುಕುಮಾರ ಎಸ್. ಸಾಲ್ಯಾನ್, ಹರಿಯಪ್ಪ ಕೆ. ಮೂಲ್ಯ, ಉಪಸ್ಥಿತರಿರುವರು.
ಕಟ್ಟಡ ಸಮಿತಿಯ ಅಧ್ಯಕ್ಷರಾದ ಗಿರೀಶ್ ಬಿ. ಸಾಲ್ಯಾನ್ ಬಂಟ್ವಾಳ, ಇವರು ದಿಕ್ಸೂಚಿ ಬಾಷಣ ಮಾಡಲಿರುವರು. ಪ್ರಾಯೋಜಕರು ಮತ್ತು ದಾನಿಗಳನ್ನು ಸನ್ಮಾನಿಸಲಾಗುವುದು.
ನವೆಂಬರ್, 21 ರಂದು ಸಂಜೆ 6 ರಿಂದ ವಾಸ್ತು ಪೂಜೆ, ಬಲಿ ಪೂಜೆ ಮತ್ತು ಸುಧರ್ಶನ ಹೋಮ ನಡೆಯಲಿದೆ.
ನವೆಂಬರ್, 22 ರಂದು ಶನಿವಾರ ಬೆಳಿಗ್ಗೆ 9:00 ಗಂಟೆಗೆ ಗಣ ಹೋಮ, ಬೆಳಿಗ್ಗೆ 11:30 ರಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ ಅನಂತರ ಮಹಾ ಪ್ರಸಾದ ನಡೆಯಲಿರುವುದು.
ನವೆಂಬರ್, 23 ರಂದು ಬೆಳಿಗ್ಗೆ 8:30 ಗಂಟೆ ಶೋಭಾಯಾತ್ರೆ ಮಂಗಳದೇವಿ ದೇವಾಲಯದಿಂದ
ಬೆಳಗ್ಗೆ 10:30 ಗಂಟೆಯಿಂದ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ನವೆಂಬರ್, 24 ರಂದು ಬೆಳಿಗ್ಗೆ 9:00 ರಿಂದ ಮುಂಬಯಿ ಕುಲಾಲರಿಗಾಗಿ ಸ್ನೇಹ ಸಮಿಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ನಂತರ ಮಧ್ಯಾಹ್ನ ಭೋಜನ, ಸ್ಥಳ ಕುಲಾಲ ಭವನ, ಮಂಗಳಾದೇವಿ ದೇವಾಲಯ ರಸ್ತೆ, ಜೆಪ್ಪು, ಮಂಗಳೂರು .
ಸಮಾಜ ಬಾಂಧವರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಾರಂಭವನ್ನು ಯಶಸ್ವಿಗೊಳಿಸಬೇಕಾಗಿ ಕುಲಾಲ ಸಂಘ ಮುಂಬಯಿ ಪರವಾಗಿ ಕುಲಾಲ ಸಂಘ ಮುಂಬಯಿಯ ಗೌರವಾಧ್ಯಕ್ಷರಾದ ಪಿ. ದೇವದಾಸ್ ಎಲ್. ಕುಲಾಲ್, ಅಧ್ಯಕ್ಷರಾದ ರಘು ಎ. ಮೂಲ್ಯ, ಉಪಾಧ್ಯಕ್ಷ ಡಿ. ಐ. ಮೂಲ್ಯ, ಗೌ. ಪ್ರಧಾನ ಕಾರ್ಯದರ್ಶಿ ಕರುಣಾಕರ ಬಿ. ಸಾಲ್ಯಾನ್ , ಗೌ. ಕೋಶಾಧಿಕಾರಿ ಜಯ ಎಸ್. ಅಂಚನ್, ಗೌ. ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮಣ್ ಸಿ. ಮೂಲ್ಯ, ಮತ್ತು ಸುನಿಲ್ ಕೆ. ಕುಲಾಲ್, ಜೊತೆ ಕೋಶಾಧಿಕಾರಿ ರೇಣುಕಾ ಎಸ್. ಸಾಲ್ಯಾನ್ ಕಾರ್ಯಕಾರಿ ಸಮಿತಿಯ ಸದಸ್ಯರುಗಳು, ಹಾಗೂ ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷರಾದ ಗಿರೀಶ್ ಬಿ. ಸಾಲ್ಯಾನ್ , ಉಪಕಾರ್ಯಾಧ್ಯಕ್ಷರುಗಳಾದ ಸುನಿಲ್ ಆರ್. ಸಾಲ್ಯಾನ್, ಜೈರಾಜ್ ಪಿ. ಸಾಲ್ಯಾನ್, ಮಮತಾ ಎಸ್. ಗುಜರಾನ್, ಕಾರ್ಯದರ್ಶಿ ಉಮೇಶ್ ಎಂ. ಬಂಗೇರ, ಕುಲಾಲ ಭವನ ಉದ್ಘಾಟನಾ ಸಮಿತಿಯ ಕಾರ್ಯಾಧ್ಯಕ್ಷರಾದ ಬಿ. ದಿನೇಶ್ ಕುಲಾಲ್, ಕುಲಾಲ ಸಂಘ ಮುಂಬಯಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತಾ ಡಿ. ಬಂಜನ್,
ಉಪಕಾರ್ಯಾಧ್ಯಕ್ಷೆ ಕವಿತಾ ಸಿ. ಹಂಡಾ, ಕಾರ್ಯದರ್ಶಿ ನಯನಾ ಎನ್. ಬಂಗೇರ, ಕೋಶಾಧಿಕಾರಿ ಲತಾ ಎಸ್. ಮೂಲ್ಯ, ಎಲ್ಲಾ ಸದಸ್ಯರುಗಳು, ಅಮೂಲ್ಯ ಸಂಪಾದಕರಾದ ಆನಂದ್ ಬಿ. ಮೂಲ್ಯ, ಉಪ ಸಂಪಾದಕ ಎಲ್. ಆರ್. ಮೂಲ್ಯ, ಉಪ ಸಮಿತಿಗಳು, ಸ್ಥಳೀಯ ಸಮಿತಿಗಳು , ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ, ಮಂಗಳೂರು ಪರವಾಗಿ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ವಿನಂತಿಸಿದ್ದಾರೆ.
——-
ಕುಲಾಲ ಸಂಘ ಕನಸು ಸಾಕಾರಗೊಂಡಿದೆ : ರಘು ಮೂಲ್ಯರ .
ನಮ್ಮ ತುಳುನಾಡಿನ ಜನತೆ ಕಷ್ಟದ ಸಮಯದಲ್ಲಿ ಕೆಲಸ ಮತ್ತು ವಿದ್ಯಾಭ್ಯಾಸದ ಆಶ್ರಯ ಪಡೆಯಲು ರಾತ್ರಿ ಶಾಲೆಗೆ ಮಾನ್ಯತೆ ಪಡೆದಂತಹ ಮುಂಬಯಿ ನಗರಕ್ಕೆ ಬಂದು ವಿದ್ಯಾಬ್ಯಾಸ ಮತ್ತು ಕೆಲಸವನ್ನು ಮುಂದುವರಿಸಿ ನಮ್ಮ ಕುಲಾಲರನ್ನು ಮುಂಬಯಿ ನಗರದಲ್ಲಿ ಪರಿಚಯಿಸುವ ಉದ್ಧೇಶವಿಟ್ಟು , ಅಷ್ಟು ಕಷ್ಟದ ಸಮಯದಲ್ಲಿಯು ಊರಿಗೆ ಸಹಾಯ ಹಾಗೂ ದೊಡ್ಡ ದೊಡ್ಡ ಸಾದನೆ ಮಾಡಿ ಸಮಾಜಕ್ಕೆ ಸಹಕಾರಿಯಾಗಬೇಕು ಎಂಬ ಉದ್ದೇಶವೇ ಹಿರಿಯರಿಂದ ಕುಲಾಲ್ ಸಂಘ ಸ್ಥಾಪನೆಯಾಯಿತ್ತು.
ದಿನವಿಡೀ ಕೆಲಸ ,ರಾತ್ರಿ ಶಾಲೆ , ಆದಿತ್ಯವಾರ ರಜೆಯ ದಿನ ಆಟೋಟ,ಹಾಗೂ ಸಂಘ ಸಂಸ್ಥೆಯ ಕೆಲಸ ವರ್ಷ ಪೂರ ಬಿಡುವಿಲ್ಲದೆ ಮಹಾಲಕ್ಷ್ಮೀ ದೇವಸ್ಥಾನ, ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಮ್ಮ ಸೇವಾದಳದ ಕಾರ್ಯಕರ್ತರು ತಟ್ಟೆ ಹಿಡಿದು ಜಮೆ ಆದ ಹಣದಲ್ಲಿ ಸಹಾಯ, ಸಂಘದ ಕೆಲಸ, ಶಿಕ್ಷಣೀಕ ನೆರವನ್ನು ಪಡೆದವರು ಅದೆಷ್ಟೋ ಜನ ಇದ್ದಾರೆ ಎಂಬುದನ್ನು ತಿಳಿಸಲು ಹೆಮ್ಮೆಯಾಗುತ್ತಿದೆ .
ಯಾವುದೇ ಆಶೆ ಆಕಾಂಕ್ಷೆ ಇಲ್ಲದೆ ,ಇಂದಿನ ಪೀಳಿಗೆಗೆ ಹಾಗೂ ಮುಂದಿನ ಪೀಳಿಗೆಗೆ ಸಹಕಾರಿಯಾಗಬೇಕು ಎಂಬ ಉದ್ದೇಶದಿಂದ ದಿ.ಪಿ ಕೆ ಸಾಲಿಯಾನ್ ರವರ ಅಧ್ಯಕ್ಷತೆಯಲ್ಲಿ 62 ಸೆನ್ಸ್ ಜಾಗ ತೆಗೆದುಕೊಂಡು ನಮ್ಮ ಹಿರಿಯರ ಅಪೇಕ್ಷೆಯಂತೆ , ಮುಂಬಯಿ ನಗರದಲ್ಲಿ ಯಾವುದೇ ಬೇದ ಭಾವವಿಲ್ಲದೆ ಒಂದೇ ವೇದಿಕೆಯಲ್ಲಿ ಎಲ್ಲಾ ಜಾತಿಬಾoಧವರು ಒಟ್ಟಾಗಿ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸುವವರು ನಮ್ಮ ತುಳು ಕನ್ನಡಿಗರು. ಅದೇ ಉದ್ಧೇಶದಿಂದ ನಮ್ಮ ಎಲ್ಲಾ ಬಂದು ಬಾಂಧವರು ಒಂದೇ ಕೂಡು ಕೂಟದಲ್ಲಿ ಸೇರಬೇಕು , ಎಲ್ಲರಿಗೂ ವೇದಿಕೆ ಸಿಗಬೇಕು ಎಂಬ ಉದ್ಧೇಶದಿಂದ 5 ಸ್ಥಳೀಯ ಸಮಿತಿಯು ಪಿ ಕೆಸಾಲಿಯಾನ್ ರವರ ಅಧ್ಯಕ್ಷತೆಯ ಸಮಯದಲ್ಲಿ ಸ್ಥಾಪನೆಯಾಯಿತು . ಇದೆ ನಮ್ಮ ಬಾಂಧವರ ಸಹಾಯದಿಂದ ಇಂದು ಬಹು ಕೋಟಿ ವೆಚ್ಚದಲ್ಲಿ ಭವ್ಯ ಭವನ ನಿರ್ಮಾಣದ ಕೊನೆಯ ಹಂತ ಲೋಕಾರ್ಪಣೆಯ ಅಂಚಿನಲ್ಲಿದೆ.
ಕುಲಾಲ ಸಂಘ ಮುಂಬಯಿ ಸಮಾಜದ ಅವಶ್ಯಕತೆ ಇದ್ದವರಿಗೆ ಆರ್ಥಿಕ , ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ದೃಷ್ಟಿಯಲ್ಲಿ ಸಮಾಜಕ್ಕೆ ,ಸಮಾಜದ ಒಳಿತಿಗಾಗಿ, ಸಮಾಜಕೋಸ್ಕರ ಸಹಕಾರ ವಾಗಬೇಕು ಎಂಬುದೇ ನಮ್ಮ ಮುಖ್ಯ ಧ್ಯೇಯ . ಇದಕ್ಕೆ ಎಷ್ಟೇ ಅಡೆ ತಡೆಗಳು ಬಂದರೂ ತುಳುನಾಡನ್ನು ಬಿಟ್ಟು ಮಹಾನಗರಕ್ಕೆ ಬಂದರೂ ನಮ್ಮ ತುಳುನಾಡಿನ ಆಶೆ ಹೋಗಿಲ್ಲ ಎಂಬುದು ಮಂಗಳ ದೇವಿಯ ಪ್ರಸಾದದಂತೆ ಮಂಗಳ ದೇವಸ್ಥಾನದ ಭವ್ಯ ಭವನ ಅಮ್ಮನ ಆಶೀರ್ವಾದದಂತೆ ತಾರೀಕು 23 ನವಂಬರ್ 2025 ಬಹಳ ವಿಜೃಂಭಣೆಯಿಂದ ಜರಗಲಿದೆ. ಇದಕ್ಕೆ ನಮ್ಮ ಎಲ್ಲಾ ನಮ್ಮ ಬಂದು ಬಾoದವರು ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸುವಲ್ಲಿ ನಿಮ್ಮ ಸಹಕಾರ ಸಿಗಬೇಕು .
—-
ಕುಲಾಲ ಭವನ ಮಂಗಳದೇವಿ
ಮಂಗಳೂರು ನಗರದಲ್ಲಿ ಆಧುನಿಕ ಸುಸಜ್ಜಿತ ಸೌಲಭ್ಯವನ್ನೊಳಗೊಂಡ ಎರಡನೇ ಸಭಾಗೃಹ ಇದಾಗಿದೆ. ಇದರ ತಳ ಮಹಡಿಯಲ್ಲಿ ವಾಹನ ನಿಲುಗಡೆಗೆ ಉತ್ತಮವಾದ ಸುಸಜ್ಜಿತವಾದ ಜಾಗ . ಎರಡು ಮತ್ತು ಮೂರನೇ ಮಹಡಿಯಲ್ಲಿ ದೀಪಗಳಿಂದ ಅಲಂಕೃತವಾದ ಹವಾ ನಿಯಂತ್ರಿತ 12000 ಚದರ ಅಡಿಯಷ್ಟು 1000 ಆಸನವುಲ್ಲ ವಿಶಾಲವಾದ ಅಲಂಕೃತವಾಗಿ ಕಾಣುವ ಆಡಿಟೋರಿಯಂ . ಮತ್ತು ಬಾಲ್ಕನಿ ಹಾಲ್ .4 ನೇ ಮಹಡಿಯಲ್ಲಿ ರೂ.1000 ಜನ ಕುಳಿತುಕೊಳ್ಳುವ ಭೋಜನ ಸಭಾಗ್ರಹ, ಬ್ಯಾಂಕ್ವೆಟ್ ಹಾಲ್ ನೊಂದಿಗೆ ಏಕ ಕಾಲದಲ್ಲಿ 2000 ಜನರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಮಾಡುವಂತಹ ಸುಸಜ್ಜಿತ ಆಡಿಟೋರಿಯಂ.
3 ದೊಡ್ಡ ಲಿಫ್ಟ್ ಗಳ ಸೌಕರ್ಯ ವಿದ್ಧು, ಅವಶ್ಯಕತೆಯಿದ್ದಾಗ 250 K .W ಜನರೇಟರ್ ಸೌಲಭ್ಯ ಪಡೆಯಬಹುದು.
ಅದರ ಒಟ್ಟಿಗೆ ಕುಲಾಲ ಭವನ ಕಚೇರಿ. ಹಾಗೂ ಸುಸಜ್ಜಿತವಾದ ಆಡಳಿತ ಕಚೇರಿ , ಮತ್ತು 4 ಗ್ರೀನ್ ರೂಮ್ ನೊಂದಿಗೆ , ಇಡೀ ಭವನದ ಕಣ್ಗಾವಳಿಗಾಗಿ ಕ್ಯಾಮರಾ ದೊಂದಿಗೆ ಸುರಕ್ಷಿತ ಮತ್ತು ಭವ್ಯವಾಗಿ ಕಾಣುತ್ತಿದೆ ಕುಲಾಲ ಭವನ.




